ಸಂತಸ ಅರಳಿದ ಸಮಯ..


~.ಜ್ಞಾನಾರ್ಪಣಮಸ್ತು.~


ಇಂದು ನಾನು ತುಂಬಾ ಉತ್ಸಾಹಿತನಾಗಿದ್ದೇನೆ...
ನಾ ಬರೆದ ಒಂದು ಲೇಖನ ಇಂದು ಉದಯವಾಣಿ ಪತ್ರಿಕೆಯ ಕ್ಯಾಂಪಸ್ ವಿಭಾಗದಲ್ಲಿ ಪ್ರಕಟ ಆಗಿದೆ..
ಸುಮಾರು ದಿನಗಳ ಹಿಂದೆ ಉದಯವಾಣಿ ಪತ್ರಿಕೆಯ 'ರಾಜೇಶ್ ಸರ್ ಅವರು ನನಗೆ ಫೋನಾಯಿಸಿ 'ಗುರು ಅವರೇ ನಿಮ್ಮ ಬ್ಲಾಗ್ ನೋಡ್ದೆ,ತುಂಬಾ ಚೆನ್ನಾಗಿದೆ' ಎಂದಾಗ ನನಗೆ ತುಂಬಾ ಸಂತೋಷವಾಗಿತ್ತು.. ಮತ್ತೆ ಅವರು ಗುರು ನಮ್ಮ ಪತ್ರಿಕೆಯಲ್ಲಿ ಕ್ಯಾಂಪಸ್ ವಿಭಾಗಕ್ಕೆ ನೀವು ಒಂದು ಲೇಖನ ಕೊಡ್ತೀರ..? ಎಂದಾಗ ನಿಜಕ್ಕೂ ನನಗೆ ಗೊಂದಲ ಉಂಟಾಗಿತ್ತು..
ನಾನು ಪತ್ರಿಕೆಗೆ ಲೇಖನ ಬರೆಯಬಲ್ಲನಾ? ಎಂಬ ಪ್ರಶ್ನೆ ಹುಟ್ಟಿಕೊಂಡಿತು..
ಆದರೂ ಆ ಕ್ಷಣಕ್ಕೆ 'ಆಗಲಿ ಸರ್ ಪ್ರಯತ್ನ ಮಾಡುತ್ತೇನೆ.. ನಾನು ಅಷ್ಟಾಗಿ ನಿಮ್ಮ ಪತ್ರಿಕೆ ನೋಡಿಲ್ಲ.. ನೋಡಿದ ನಂತರ ಯಾವ ರೀತಿ ಬರೆಯಬಹುದು ಎಂದು ತಿಳಿದು ನಂತರ ಹೇಳುತ್ತೇನೆ..'ಎಂದಿದ್ದೆ.
ಆ ವಿಷಯವಾಗಿ ನನ್ನ ಗುರು 'ಜ್ಞಾನಮೂರ್ತಿ' ಅವರ ಹತ್ತಿರ ಮಾತನಾಡಿದ್ದೆ..
ಜ್ಞಾನಮೂರ್ತಿಯವರು 'ಒಳ್ಳೆ ಅವಕಾಶ ಗುರು ಸದುಪಯೋಗ ಪಡೆದುಕೋ.. ನಿನ್ನ ಕೈಲಾದಷ್ಟು ಮಟ್ಟಿಗೆ ಪ್ರಯತ್ನ ಮಾಡಿ ಬರೆದು ಕಳಿಸು.. ನನ್ನ ಬರಹಕ್ಕೆ ಯೋಗ್ಯತೆ ಇದ್ದರೆ ಪ್ರಕಟಿಸಿ ಎಂದು ಹೇಳು.. ಬರೆಯದೆ ಇರಬೇಡ..' ಎಂದಿದ್ದರು..
ಬರೆಯಬೇಕೆಂದು ನನಗೂ ಆಸೆಯೇ. ಆದರೂ ನಾನು ಎಷ್ಟು ಪ್ರಯತ್ನಿಸಿದರೂ ಆಗಲಿಲ್ಲ..
ರಾಜೇಶ್ ಅವರು ಮತ್ತೆ ಮತ್ತೆ ಫೋನಾಯಿಸಿ ಕೇಳತೊಡಗಿದರು..
ಒಂದು ದಿನ ಹೇಗಾದರೂ ಬರೆಯಲೇಬೇಕೆಂದು ನಿರ್ಧರಿಸಿ ಕುಳಿತು ಒಂದು ಲೇಖನ ಬರೆದು ಕಳಿಸಿದೆ..
ಅದು ಆಯ್ಕೆ ಆಗಲ್ಲ ಎಂದು ತಿಳಿದಿದ್ದೆ..
ಅದನ್ನು ಕಳಿಸಿದ ಕೆಲವು ದಿನಗಳ ನಂತರ ನೆನ್ನೆ ರಾಜೇಶ್ ಅವರು ನನ್ನ ಲೇಖನ ಆಯ್ಕೆ ಆಗಿದೆ ಎಂದಾಗ ತುಂಬಾನೇ ಖುಷಿಪಟ್ಟೆ..
ನನಗೆ ಉತ್ಸಾಹ ತುಂಬಿ ಈ ಖುಷಿಗೆ ಕಾರಣವಾದ ಜ್ಞಾನಮೂರ್ತಿ ಅವರಿಗೆ ಹಾಗೂ ಉದಯವಾಣಿಯ ರಾಜೇಶ್ ಅವರಿಗೆ ಧನ್ಯವಾದಗಳು..


ನಾನು ರಾಜೇಶ್ ಅವರಿಗೆ ಕಳಿಸಿದ್ದು..:

ಒಬ್ಳು ಲವರ್(ಗರ್ಲ್ ಫ್ರೆಂಡ್) ಇದ್ರೆ ಲೈಫೇ ಕಲರ್ಫುಲ್ ಆಗಿರುತ್ತೆ ಅಂತ ಕೆಲವ್ರು ಹೇಳ್ತಿದ್ದಾಗ ಈ ಲವ್ವು-ಗಿವ್ವುಗಳ ಬಗ್ಗೆ ಯಾವ್ ಇಂಟರೆಸ್ಟ್ ಕೂಡ ಮನೋರಥನಿಗೆ ಬತ್ತಿರ್ಲಿಲ್ಲ..
ಆದ್ರೆ ಕಾಲ ಕಳೆದಂತೆ ಮನೋರಥನ ಮಾನಸಗುಹೆಯಲ್ಲೂ ಪ್ರೀತಿಯ ಪಿಸುಗಾಳಿ ತೇಲಿಬಂದಂತಾಗಿ ಆಸೆಯಲೆಗಳು ಎದ್ದಿದ್ದವು..
'ಪ್ರೀತಿ'ಎಂದು ಹೆಸರಿಟ್ಟುಕೊಂಡು ಜೊತೆಗಾರರು ಮಾಡುತ್ತಿದ್ದ ಅದ್ಯಾವುದೋ ವಿಭಿನ್ನ ಕೆಲಸ ಮನೋರಥನಿಗೂ ಇಷ್ಟವಾಗತೊಡಗಿತು..ಮನಸು ವಿಚಲಿತಗೊಂಡು ತಾ ಒಂಟಿ, ತನಗೊಂದು ಜೋಡಿ ಬೇಕೆಂದು ಹಂಬಲಿಸತೊಡಗಿತು..ತಾನು ಕೂಡ 'ಒಂಟಿಹಕ್ಕಿ' ಪಕ್ಷ ಬದಲಾಯಿಸಿ 'ಜೋಡಿಹಕ್ಕಿ' ಪಕ್ಷ ಸೇರಬೇಕೆಂಬ ತುಮುಲ ಆರಂಭವಾಯಿತು..ಪ್ರೀತಿಯ ಕೊಳದಲ್ಲಿ ತಾನು ಕೂಡ ಬೀಳಬೇಕು, ತನಗೂ ಒಬ್ಬಳು ಗೆಳತಿ ಬೇಕು ಮನ ತವಕಿಸತೊಡಗಿತು..
ಹೀಗೆ ಹಲವಾರು ಆಸೆ ಹೊತ್ತು ಮನೋರಥ್ ಕಣ್ಮುಚ್ಚಿ ಕನಸಿಗೆ ಜಾರಿದ...:
ಪ್ರತಿದಿನ ಕನ್ನಡಿಗೆ ಮೂತಿ ತೋರಿಸಿ ತನ್ನ ಮುಖವನ್ನು ಕನ್ನಡಿಯಲ್ಲಿ ಸರಿ ಮಾಡಿಕೊಂಡು ಯಾರಿಗಾದರೂ ಅಪ್ಪ್ಲಿಕೇಷನ್ ಹಾಕಬೇಕೆಂದು ಕಾಲೇಜ್ ಗೆ ಹೋಗ್ತೀನಂತ, ಹುಡುಗಿಯರು ಹೆಚ್ಚಾಗಿ ಸುಳಿದಾಡುವ ಬಸ್ ಸ್ಟ್ಯಾಂಡ್, ಕಾಲೇಜ್ ಗಳತ್ತ ಜೋಡಿ ಹುಡುಕಲು ಹೋಗೋದು..
ಯಾವ್ದಾದ್ರು ಹುಡುಗಿ ಇವನಿಗೆ ಇಷ್ಟವಾದ್ರೆ ಸಾಕು ಅವ್ಳಿಗೆ ಅಪ್ಪ್ಲಿಕೇಷನ್ ಕೂಡ ತೋರಿಸದೆ ತಾನೇ ಅದನ್ನ ಅಕ್ಸೆಪ್ಟ್ ಮಾಡ್ಕೊಂಡು ಅವಳು ಕೊಡೋ ಒಂದೇ ಒಂದು 'ಸ್ಮೈಲ್' ಗಾಗಿ ತನ್ನ ಎಲ್ಲ ಕೆಲ್ಸ ಬಿಟ್ಟು ಕಾಲೇಜ್ ಗೂ ಹೋಗದೆ ಅವಳ ಹಿಂದೇನೆ ಅಲೆಯೋದು.. ಅವಳ ಹೆಸರನ್ನು ಹೇಗೋ ತಿಳ್ಕೊಂಡು ಅವಳ ನಾಮಜಪ ಮಾಡೋದು..ಸಾದ್ಯವಾದರೆ ಆಕೆ ಹತ್ರ ಮೊಬೈಲ್ ಫೋನ್ ಇದ್ರೆ ಅದರನಂಬರನ್ನು ಕೂಡ ತಿಳ್ಕೊಂಡು ಅವ್ಳಿಗೆ ಹಾಯ್ ಗುಡ್ ಮಾರ್ನಿಂಗ್/ಗುಡ್ ನೈಟ್ ಸ್ವೀಟ್ ಹಾರ್ಟ್ ಅಂತ ಮೆಸೇಜ್ ಮಾಡಲು ಶುರುಮಾಡೋದು.. ಅವ್ಳು ಏನೇ ಮೆಸೇಜ್ ಮಾಡಿದ್ರು ರಿಪ್ಲೇ ಮಾಡದೆ ಇರೋದು..ತಮ್ಮ ಬತ್ತಳಿಕೆಯಲ್ಲಿರುವ ಎಲ್ಲ ರೀತಿಯ ಬಾಣ ಪ್ರಯೋಗ ಮಾಡಿ ಹೇಗೋ ಪರಿಚಯ ಮಾಡ್ಕಂಡು ಮಾತನಾಡ್ಸೋಕೆ ಶುರುಮಾಡೋದು..ಅವಳ ಮುಂದೆ ಡಿಫರೆಂಟ್ ಆಗಿ ಕಾನಿಸ್ಕೊಳೋದು ಇವರದೋ ಮಂಗನಾಟಕ್ಕೆ ಆಕೆ ನಕ್ಬಿಟ್ರೆ ಸಾಕು ಇನ್ನೂ ಚಿತ್ರವಿಚಿತ್ರವಾಗಿ ಕಾಣಿಸಿಕೊಳ್ಳೋಕೆ, ಮಾತಾಡೋಕೆ ಶುರು ಮಾಡಿ ಹೇಗೋ ಅವಳ ಸ್ನೇಹ ಗಿಟ್ಟಿಸಿಕೊಂಡು ನಂತರ ಅದ್ನ ಪ್ರೀತಿ ಮಾಡ್ಬಿಡೋದು..
ಆ ಲವ್ ಓಕೆ ಆದ್ರೆ ಸಾಕು ಲೈಫ್ ಅವತ್ನಿಂದ ಫುಲ್ಲೇ ಡಿಫರೆಂಟ್..
ತನಗೆ ಬಂದ ಎಲ್ಲ ಮೆಸೇಜನ್ನು ಅವಳಿಗೆ ಫಾರ್ವರ್ಡ್ ಮಾಡೋದು,ಮಿಸ್ ಮಾಡದೆ ಗುಡ್ ಮಾರ್ನಿಂಗ್/ಗುಡ್ ನೈಟ್ ಮೆಸೇಜ್ ಮಾಡೋದು.. ಸ್ಲೋ ಸಾಂಗ್ಸ್ ಕೇಳೋಕೆ ಶುರು ಮಾಡೋದು.
ತನಗೂ ಒಬ್ಳು ಲವರ್ ಇದಾಳೆ ಅಂತ ಗೆಳೆಯರ ಜೊತೆ ಹೇಳ್ಕೊಂಡ್ ಹೆಮ್ಮೆಯಿಂದ ಬೀಗೋದು..ಬೆಳಿಗ್ಗೆನೆ ಬೇಗ ಬಂದು ಅವ್ಳು ಬರೋದನ್ನೇ ಕಾಯ್ತಾ ಅವಳ್ ಜೊತೇನೆ ಅವಳ್ ಕಾಲೇಜ್ ವರ್ಗೂ ಹೋಗಿದ್ ಬಂದು ಅವಳ್ ಬರೋವರ್ಗೂ ತಾನು ಕಾಲೇಜ್ ಗೆ ಹೋಗದೇನೆ ಕಾದು ಅವಳನ ಮನೆಗ್ ಕಳ್ಸಿ ದಿನಾಪೂರ್ತಿ ಅವಳ್ ಜೊತೆ ಸಮಯ ಸಿಕ್ದಾಗೆಲ್ಲ ಚಾಟ್ ಮಾಡ್ತ ಕಾಲ ಕಳೆಯೋದು..
ಸಾಧ್ಯ ಆದ್ರೆ ಅವಳ್ ಜೊತೆ ಸಿನಿಮಾ, ಪಾರ್ಕು ಅಂತ ಸುತ್ತಾಡೋದು..
ಹೀಗೆ ಕನಸು ಕಾಣುತ್ತ ತೇಲುತ್ತಿದ್ದ ಮನೋರಥನ ಕನಸಿನ ಸ್ಟೋರಿ ಮುಗಿಯುವಷ್ಟರಲ್ಲಿ ಕಣ್ ತೆರೆದು ವಾಸ್ತವಕ್ಕೆ ಬಂದಿದ್ದ..
ಈಗ ಮನೋರಥ ತಾ ಕಂಡಿದ್ದ ಕನಸಿನ ಕಥೆಗೆ ಮುಕ್ತಾಯ ನೀಡಲು ಕ್ಲೈಮಾಕ್ಸ್ ಕುರಿತು ಯೋಚ್ನೆ ಮಾಡುತ್ತಿದ್ದಾಗ ಆತನಿಗೆ ಕ್ಲೈಮ್ಯಾಕ್ಸ್ ಸಿಕ್ಕಿದ್ದವು..
ಒಂದು ಕ್ಲೈಮ್ಯಾಕ್ಸ್ನಲ್ಲಿ ನಾಯಕ ನಾಯಕಿ ಮಿಸ್ ಕಾಲ್ ಕೊಟ್ಟಾಗೆಲ್ಲಾ ಕಾಲ್ ಮಾಡಿ,ಅವ್ಲ್ಗೊಸ್ಕರ ಸಾಲಗಾರನಾಗೋದು.. ಆಕೆಯೂ ಅವನನ್ನ ಚೆನ್ನಾಗಿ ಬಳಸಿಕೊಂಡು ಬುದ್ದಿ ಕಲ್ಸೋದು.. ಮಿಸ್ ಕಾಲ್ ಮಾಡ್ದಾಗ ಕಾಲ್ ಮಾಡದಿದ್ರೆ ಸಾಕು ಅವ್ರ ಸಂಬಂಧ ಕಟ್...
ಇನ್ನೊಂದು ಕ್ಲೈಮ್ಯಾಕ್ಸ್ನಲ್ಲಿ ಡೀಸೆಂಟಾಗಿ ಇಬ್ರೂ ಪ್ರೀತ್ಸಿ ಕೊನೇಲಿ ಒಂದಾಗೋಲ್ಲ ಅಂತ ಗೊತ್ತಾದ್ಮೇಲೆ ಫ್ರೆಂಡ್ಸ್ ಆಗಿ ಇರೋಣ ಅನ್ಕಂಡು ಇಬ್ರು ಸಮಾಧಾನ ಮಾಡ್ಕೊಂಡು ಅತ್ತುಬಿಡೋದು..
ಮತ್ತೊಂದು ಕ್ಲೈಮ್ಯಾಕ್ಸ್ನಲ್ಲಿ ವಯಸ್ಸಿನ ತನುವಾಸೆಗೆ ಪ್ರೀತಿಸಿ ಅವಶ್ಯಕತೆ ಪೂರೈಸಿಕೊಂಡು ಕಿಸಕ್ ಅಂತ ನಕ್ಕು ದೂರವಾಗೋದು..
ಮಗದೊಂದು ಕ್ಲೈಮ್ಯಾಕ್ಸ್ನಲ್ಲಿ ಇಬ್ರೂ ಒಂದಾಗಲೇಬೇಕು ಎಂದುಕೊಂಡರೂ ಮನೆಅಯವರ/ಸಮಾಜದ ಒಪ್ಪಿಗೆ ಸಿಗದಿದ್ದಾಗ ಹೇಡಿಗಳಂತೆ ಸಾಯೋದು ಅಥವಾ ಧೃತಿಗೆಡದೆ ಎಲ್ಲರನ್ನೂ ಎದುರುಹಾಕಿಕೊಂಡು ಬಾಳುವೆವು ಎಂದುಕೊಂಡು ಓಡಿಹೋಗಿ ಹೊಸಬಾಳು ಆರಂಭಿಸೋದು..
ಮನೋರಥನಿಗೆ ಹೊಳೆದ ಈ ಕ್ಲೈಮ್ಯಾಕ್ಸ್ಗಳು ಯಾವುವು ಸೂಕ್ತವಲ್ಲ ಎಂದೆನಿಸಿ ಇದೆಲ್ಲ ಗೋಜಿಗೆ ಸಿಕ್ಕಿಸುವ ಪ್ರೀತಿ,ಅದನ್ನ ನಂಬಿದರೆ ಹಾಳಾಗೋದೆ ಹೆಚ್ಚು,ಎಲ್ಲರಿಗೂ ದ್ರೋಹ ಮಾಡಬೇಕಾಗುತ್ತದೆ... ಎಂದು ಅವನ ಪ್ರೀತಿಯ ಆಸೆ ಕೈಬಿಟ್ಟು ಬೊಮ್ಮ ನಿರ್ಧರಿಸಿದ ಬಾಳಸಂಗಾತಿ ಬರುವವರೆಗೆ ಕಾದು ಅವಳನ್ನೇ ಪ್ರೀತಿ ಮಾಡೋಣ ಎಂದುಕೊಂಡು ತನ್ನ ಕೆಲಸದ ಕಡೆಗೆ ಗಮನಹರಿಸಿದ..

ಪ್ರಕಟವಾಗಿರುವುದರ ಸ್ಕ್ಯಾನ್ ಕಾಪಿ:

~.~





29 ಕಾಮೆಂಟ್‌ಗಳು:

ಪ್ರವರ ಕೊಟ್ಟೂರು ಹೇಳಿದರು...

nimma baraha munduvaresi.....

sunaath ಹೇಳಿದರು...

ಅಭಿನಂದನೆಗಳು!

ಚುಕ್ಕಿಚಿತ್ತಾರ ಹೇಳಿದರು...

ಅಭಿನಂದನೆಗಳು ಗುರುಪ್ರಸಾದ್ ಅವರೆ.ಮು೦ದುವರೆಸಿ

ಮನಸಿನಮನೆಯವನು ಹೇಳಿದರು...

ಪ್ರವರ.ಕೆ.ವಿ.,

ಮೊದಲ ಪ್ರತಿಕ್ರಿಯೆಗೆ ದನ್ಯವಾದಗಳು..

ಹೀಗೆಯೇ ಬರುತ್ತಿರಿ..

ಮನಸಿನಮನೆಯವನು ಹೇಳಿದರು...

sunaath.,

ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

ಚುಕ್ಕಿಚಿತ್ತಾರ.,

ಧನ್ಯವಾದಗಳು..

ಗಿರೀಶ್.ಎಸ್ ಹೇಳಿದರು...

Good that your article published in news paper...Congrtas...keep writng !!!

ಸಾಗರದಾಚೆಯ ಇಂಚರ ಹೇಳಿದರು...

Congrats sir barita iri

Subrahmanya ಹೇಳಿದರು...

ತುಂಬಾ ಸಂತೋಷವಾಯಿತು. ಅಭಿನಂದನೆಗಳು.

prabhamani nagaraja ಹೇಳಿದರು...

ನಿಮ್ಮ ಕಲ್ಪನಾ ಪ್ರೀತಿ ಹಾಗೂ ಅದರ್ ಸಾಧ್ಯತೆಗಳು ಚೆನ್ನಾಗಿ ಮೂಡಿಬ೦ದಿದೆ. ಅಭಿನ೦ದನೆಗಳು. ಹೀಗೇ ಇನ್ನೂ ಹೆಚ್ಚಿನ ಬರಹಗಳು ಪ್ರಕಟವಾಗಿ ನಿಮ್ಮ ಪ್ರತಿಭೆಗೆ ಪ್ರೋತ್ಸಾಹ ದೊರೆಯಲಿ ಎ೦ದು ಆಶಿಸುತ್ತೇನೆ.

V.R.BHAT ಹೇಳಿದರು...

ಹಲವು ಬ್ಲಾಗಿಗರನ್ನು ನೋಡಿದ್ದೇನೆ, ನನಗೆ ಏನೇನೋ ಬರೆದರೆ ಇಷ್ಟವಾಗುವುದಿಲ್ಲ, ಬರಹಕ್ಕೊಂದು ಕಾರಣಬೇಕು, ಬರೇ ಏನೇನೋ ಕವನ, ಬೇಡದ ಕಸರತ್ತು ಅವೆಲ್ಲಾ ನನಗೆ ಹಿಡ್ಸೋದಿಲ್ಲ, ನಿಮ್ಮ ಬರಹಗಳು ಉತ್ತಮರೀತಿಯಲ್ಲಿ ಹೊರಬರಲಿ, ಹುಣ್ಣಿಮೆಗೊಂದು ಅಮಾವಾಸ್ಯೆಗೊಂದು ಬರೆದರೂ ಪರವಾಗಿಲ್ಲ ಬರಹ ಅರ್ಥಪೂರ್ಣವಾಗಿದ್ದರೆ ಚೆನ್ನಾಗಿರುತ್ತದೆ. ಆ ದಾರಿಯಲ್ಲಿ ಮುನ್ನಡೆದು ನಿಮಗೆ ಯಶಸ್ಸು ಲಭಿಸಲಿ ಎಂದು ಹಾರೈಸುತ್ತೇನೆ. ವಯಸ್ಸಿನಲ್ಲಿ ಹಿರಿಯನಾಗಿ ನಾನು ಹೇಳಿದ ಮಾತುಗಳು ನಿಮಗೆಮೆಚ್ಚುಗೆಯಾಗದೇ ಇರಬಹುದು, ಆದರೂ ಸ್ವಲ್ಪ ಖಂಡಿತವಾದಿಯಾದ ನನಗೆ ಬ್ಲಾಗ್ ಓದಲೂ ಕೂಡ ಸಮಯ ಹಿಡಿಯುತ್ತದಲ್ಲವೇ ? ಉತ್ತಮವಾದುದನ್ನೇ ಆಯ್ಕೆಮಾಡಿಕೊಂಡು ಓದುವ ಹವ್ಯಾಸ ನನ್ನದು. ಎಷ್ಟು ಬರೆದೆವು ಎಂಬುದಕ್ಕಿಂತ ಏನನ್ನು ಹೇಗೆ ಬರೆದೆವು ಎಂಬುದು ಮುಖ್ಯ. ಬರವಣಿಗೆ ಮುಂದೆ ಸಾಗಲಿ. ನಿಮಗೆ ಶುಭಕೋರುತ್ತೇನೆ.

Ittigecement ಹೇಳಿದರು...

ಗುರುಪ್ರಸಾದ...

ನಾನು ಇದನ್ನು ಪತ್ರಿಕೆಯಲ್ಲೇ ಓದಿದ್ದೆ..
ನೀವು ಬರೆದದ್ದು ಅಂತ ಗೊತ್ತಿರಲಿಲ್ಲ..

ನಿಮ್ಮ ಬರವಣಿಗೆ ಚೆನ್ನಾಗಿದೆ... ಅಭಿನಂದನೆಗಳು..

ಇನ್ನಷ್ಟು ಬರೆಯಿರಿ...

ಜಲನಯನ ಹೇಳಿದರು...

ಅಭಿನಂದನೆಗಳು ಗುರು...ಹೋಜಾ ಶುರು ಅನ್ನೋದು ಬೇಕಾಗಿಲ್ಲ ಆಗ್ಲೆ ಶುರುಹಚ್ಕೊಂಡಾಗಿದೆ...ಚನ್ನಾಗಿದೆ..ವಿಭಿನ್ನ ಆಲೋಚನೆಯ ದಿಕ್ಕಿನತ್ತ...

krutthivaasapriya ಹೇಳಿದರು...

ಅಭಿನಂದನೆಗಳು ......ಹೀಗೆ ಮುಂದುವರೆಸಿ ....

Gubbachchi Sathish ಹೇಳಿದರು...

nice nice and congrats.

nenapina sanchy inda ಹೇಳಿದರು...

good da. all the best
:-)
malathi S

ಅನಂತ್ ರಾಜ್ ಹೇಳಿದರು...

ತು೦ಬಾ ಸ೦ಅತಸವಾಯಿತು...ಅಭಿನ೦ದನೆಗಳು ಸರ್.

ಅನ೦ತ್

ಮನಸಿನಮನೆಯವನು ಹೇಳಿದರು...

ಗಿರೀಶ್.ಎಸ್.,
ನನ್ನ 'ಮನಸಿನಮನೆ'ಗೆ ಸ್ವಾಗತ.
ಪ್ರತಿಕ್ರಿಯೆಗೆ ಧನ್ಯವಾದಗಳು.
ಹೀಗೆಯೇ ಬರುತ್ತಿರಿ.

ಮನಸಿನಮನೆಯವನು ಹೇಳಿದರು...

ಸಾಗರದಾಚೆಯ ಇಂಚರ,
ಧನ್ಯವಾದಗಳು ಸರ್ ಬರ್ತಾನೆ ಇರಿ.

ಮನಸಿನಮನೆಯವನು ಹೇಳಿದರು...

Subrahmanya,
ಧನ್ಯವಾದಗಳು.

ಮನಸಿನಮನೆಯವನು ಹೇಳಿದರು...

prabhamani nagaraja,
ಪ್ರತಿಕ್ರಿಯೆಗೆ ಧನ್ಯವಾದಗಳು.
ಪ್ರೋತ್ಸಾಹವಿದ್ದರೆ ಖಂಡಿತ ಅದು ಸಾಧ್ಯ.

ಮನಸಿನಮನೆಯವನು ಹೇಳಿದರು...

ವಿ.ಆರ್.ಭಟ್.,
ನಿಮ್ಮ ತಿಳುವಳಿಕೆಯ ಮಾತುಗಳಿಗೆ ಧನ್ಯವಾದಗಳು.
ನಾನು ಉತ್ತಮ ಲೇಖನಗಳನ್ನೇ ಬರೆಯುವ ನಿಟ್ಟಿನಲ್ಲಿ ಮುಂದುವರೆಯುತ್ತಿದ್ದೇನೆ ಆದರೆ ಕೆಲವೊಮ್ಮೆ ಸಿಲ್ಲಿ ಎನಿಸುವ ಲೇಖನಗಳು ಮೂಡಿಬರುತ್ತವೆ ಅವುಗಳನ್ನು ತಡೆಯಲು ಪ್ರಯತ್ನಿಸುತ್ತಿದ್ದೇನೆ.ನು ಉತ್ತಮ ಲೇಖನಗಳನ್ನೇ ಬರೆಯುವ ನಿಟ್ಟಿನಲ್ಲಿ ಮುಂದುವರೆಯುತ್ತಿದ್ದೇನೆ ಆದರೆ ಕೆಲವೊಮ್ಮೆ ಸಿಲ್ಲಿ ಎನಿಸುವ ಲೇಖನಗಳು ಮೂಡಿಬರುತ್ತವೆ ಅವುಗಳನ್ನು ತಡೆಯಲು ಪ್ರಯತ್ನಿಸುತ್ತಿದ್ದೇನೆ.

ಮನಸಿನಮನೆಯವನು ಹೇಳಿದರು...

ಸಿಮೆಂಟು ಮರಳಿನ ಮಧ್ಯೆ.,
ತುಂಬಾ ಸಂತೋಷ, ಧನ್ಯವಾದಗಳು.

ಮನಸಿನಮನೆಯವನು ಹೇಳಿದರು...

ಜಲನಯನ,
ವಿಭಿನ್ನ ಲೇಖನಗಳನ್ನೇ ಬರೆಯುವ ಹಂಬಲವಿದೆ, ಮಾರ್ಗದರ್ಶನ ಬೇಕಿದೆ.
ಧನ್ಯವಾದಗಳು.

ಮನಸಿನಮನೆಯವನು ಹೇಳಿದರು...

krutthivaasapriya,
ನನ್ನ 'ಮನಸಿನಮನೆ'ಗೆ ಸ್ವಾಗತ.
ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಸಿನಮನೆಯವನು ಹೇಳಿದರು...

ಗುಬ್ಬಚ್ಚಿ ಸತೀಶ್,
ನನ್ನ 'ಮನಸಿನಮನೆ'ಗೆ ಸ್ವಾಗತ.
ಪ್ರತಿಕ್ರಿಯೆಗೆ ಧನ್ಯವಾದಗಳು,
ಹೀಗೆಯೆ ಬರುತ್ತಿರಿ.

ಮನಸಿನಮನೆಯವನು ಹೇಳಿದರು...

ವಸಂತ್,
ಧನ್ಯವಾದಗಳು.

ಮನಸಿನಮನೆಯವನು ಹೇಳಿದರು...

nenapina sanchy inda,
ನನ್ನ 'ಮನಸಿನಮನೆ'ಗೆ ಸ್ವಾಗತ.
ಹೀಗೆಯೇ ಬರುತ್ತಿರಿ.

ಮನಸಿನಮನೆಯವನು ಹೇಳಿದರು...

ಅನಂತರಾಜ್,
ಧನ್ಯವಾದಗಳು.

Related Posts Plugin for WordPress, Blogger...