ಚಿಂತನಾ ಕೂಟ..

!!ಜ್ಞಾನಾರ್ಪಣಮಸ್ತು!!

[ಇದು ಒಂದು ದೊಡ್ಡ ಲೇಖನವೆನಿಸುತ್ತದೆ.. ಸಂಪೂರ್ಣ ಓದಲು ಸಮಯದ ಕೊರತೆ ಇದ್ದವರಿಗಾಗಿ ಮುಖ್ಯವಾದ ಸಾಲುಗಳಿಗೆ ಬಣ್ಣ ತುಂಬಿದ್ದೇನೆ..]
ಅಂದು ಪ್ರಜಾವಾಣಿ ದಿನ ಪತ್ರಿಕೆಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದ ವಾದಿರಾಜ್ ಅವರು ಮಂಡ್ಯದ ಕಮಲಮಂದಿರಕ್ಕೆ ಆರ್.ಎಸ್.ಎಸ್. ವಿದ್ಯಾರ್ಥಿಗಳೊಂದಿಗೆ ಚಿಂತನಾಕೂಟ ನಡೆಸಲು ಬಂದಿದ್ದರು..
ಒಂದು ಮಾತು ಹೇಳಲೇಬೇಕು.. ಅಂತ ಕೂಟಗಳ ವಿಚಾರಮಂಥನ ನಮ್ಮ(?) ಮನೋಭಾವಕ್ಕೆ ಒಪ್ಪುವಂತಹದಲ್ಲ..
ನಾನು ಆರ್.ಎಸ್.ಎಸ್. ವಿದ್ಯಾರ್ಥಿ ಅಲ್ಲದಿದ್ದರೂ ನನ್ನ ಲೇಖನ ಪತ್ರಿಕೆಯಲ್ಲಿ ಪ್ರಕಟವಾಗಿದ್ದನ್ನು ತಿಳಿದಿದ್ದ ನನ್ನ ಗೆಳೆಯ ಯೋಗೇಶ್ ನನಗೆ ಸಂಪಾದಕರೊಬ್ಬರನ್ನು ಅವರನ್ನು ಭೇಟಿ ಮಾಡಿಸುವುದಾಗಿ ಹೇಳಿ ಕರೆದುಕೊಂಡು ಬಂದಿದ್ದ.., ನನಗೂ ಉಪಯೋಗವಾಗಬಹುದೆಂದು ಬಂದಿದ್ದೆ.
ಸುಮಾರು ೪೦-೫೦ ವಿದ್ಯಾರ್ಥಿಗಳು(ಅಷ್ಟೆ ವಿದ್ಯಾರ್ಥಿಗಳು ಕುಳಿತುಕೊಳ್ಳುವ ಸ್ಥಳವದು) ಸೇರಿದ್ದರು.
ಅಲ್ಲಿದ್ದ ಒಂದು ಕುರ್ಚಿಯ ಮೇಲೆ ಬಂದು ವಾದಿರಾಜ್ ಅವರು ಆಸೀನರಾದರು, ಅವರ ಪರಿಚಯವನ್ನು ಗೆಳೆಯನೊಬ್ಬ ನಮಗೆಲ್ಲ ನೀಡಿದ.
ಕೂಟ ಆರಂಭಿಸಿದ ವಾದಿರಾಜ್ ಅವರು ಮೊದಲಿಗೆ ವಿದ್ಯಾರ್ಥಿಗಳನ್ನು ಕುರಿತು ಏನು ಓದುತ್ತಿದ್ದೀರಿ?,ಹಳ್ಳಿಯಿಂದ ಬರುವವರೆಷ್ಟು?,ನಗರದಲ್ಲೇ ಇರುವವರೆಷ್ಟು?,ಇಲ್ಲಿಗೆ ಓದು ಮುಗಿಸುವವರೆಷ್ಟು, ಮುಂದುವರಿಸುವವರೆಷ್ಟು? ಎಂದು ಕೇಳಿದರು.
ನಂತರ,
'ನಮ್ಮ ದೇಶಕ್ಕೆ ಸ್ವಾತಂತ್ರ ತಂದುಕೊಡಲು ಭಗತ್ ಸಿಂಗ್,ಸಾವರ್ಕರ್, ಹೀಗೆ ಲಕ್ಷ ಜನರು ಶ್ರಮಿಸಿದ್ದಾರೆ ಅವರ ಹೆಸರೆಲ್ಲ ನಿಮಗೆ ತಿಳಿದಿದೆಯೇ..? ಒಂದು ಹಾಳೆಯನ್ನು ನಿಮಗೆ ನೀಡಿ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಬರೆಯಿರಿ ಎಂದರೆ ನಿಮ್ಮಲ್ಲಿ ಯಾರಾದರೂ ಮತ್ತೊಂದು ಹೆಚ್ಚುವರಿ ಹಾಳೆ ಕೇಳುವಿರಾ?' ಎಂದರು, ನಾವೆಲ್ಲಾ ತಲೆತಗ್ಗಿಸಿ ಕೂತೆವು.
'ನಿಮಗೆ ಸ್ವಾತಂತ್ರ್ಯ ತಂದುಕೊಟ್ಟವರ ಹೆಸರೇ ನೆನಪಿಲ್ಲವಲ್ಲ. ಅದೇ ಸಿನಿತಾರೆಯರ ಹೆಸರನ್ನೋ,ಕ್ರಿಕೆಟಿಗರ ಹೆಸರನ್ನೋ ಬರೆಯಿರಿ ಎಂದರೆ ಹೆಚ್ಚುವರಿ ಹಾಳೆಗಳು ಅದೆಷ್ಟು ಬೇಕಾಗುತ್ತವೆಯೋ..?' ಎಂದರು. ನಿಜಕ್ಕೂ ಮಾತುಗಳು ಆತ್ಮಾವಲೋಕನ ಮಾಡುವಂತಿದ್ದವು.

ನಂತರ ಅವರು, 'ನಾವೀಗ ಎಲ್ಲಿದ್ದೇವೆ..?,'ಸ್ವಾತಂತ್ರ್ಯ ಭಾರತದಲ್ಲಿ.', ಹಾಗಾದರೆ ಮತ್ತೊಮ್ಮೆ ನಾವು ಸ್ವಾತಂತ್ರ್ಯ ತಂದುಕೊಡುವ ಅಗತ್ಯವಿಲ್ಲ,ಅದಾಗಲೇ ಬಂದಿದೆ.. ಹಾಗಾದ್ರೆ ನಾವು ದೇಶಭಕ್ತರೆಂದು ತೋರಲು ಏನು ಮಾಡಬೇಕು..?' ಎಂದರು..
ನಾವೆಲ್ಲಾ ಉತ್ತರ ತೋಚದೆ ಮೌನವಾದೆವು.. 'ಪ್ರಜ್ಞಾವಂತರಾಗಿ ಬಾಳಬೇಕು,ನಮಗೆ ಬಂದಿರುವ ಸ್ವಾತಂತ್ರ್ಯಕ್ಕೆ ಅರ್ಥ ತರುವಂತೆ ಬಾಳಬೇಕು,ನಮ್ಮ ಹಕ್ಕುಗಳಿಗೆ ಹೋರಾಡಬೇಕು,ಅದು ಮತ್ತೆ ಬೇರೊಬ್ಬರ ಪಾಲಾಗದಂತೆ ಕಾಪಾಡಬೇಕು..' ಎಂದು ಹೇಳಬೇಕೆಂದು ನನಗನಿಸಿದರೂ ನನ್ನಲ್ಲಿದ್ದ ಅಂಜಿಕೆಯಿಂದ ಸುಮ್ಮನೆ ಕುಳಿತಿದ್ದೆ., ಆಗ ಅಒಂದಿಬ್ಬರು ಸಮಂಜಸವಲ್ಲದ ಉತ್ತರ ನೀಡಿದರು.
ಆಗ ಅವರು,
'ನಿಮಗೇಕೆ ಯೋಧರಾಗಬೇಕು ಎಂದೆನಿಸಲಿಲ್ಲ.. ಎಂದು ಹೇಳಿ ಯೋಧರ ಕುರಿತು ಹೇಳಲು ಮುಂದಾದರು.
ಅಲ್ಲಿ ಅವರಿರುವುದರಿಂದಲೇ ನಾವಿಲ್ಲಿ ಸುರಕ್ಷಿತ., ಭಾರತದ ತುದಿಯಲ್ಲಿ ಸಿಯಾಚಿನ್ ಎಂಬ ಭಾರತದ್ದೆ ಭಾಗವಿದೆ ಕೇಳಿದ್ದೀರಾ.. ಅಲ್ಲಿ ಕಲ್ಪನೆ ಮಾಡಿಕೊಳ್ಳಲಾಗದಷ್ಟು ಚಳಿ ಇರುತ್ತದೆ. ಎಷ್ಟೆಂದರೆ ಮೂತ್ರ ಮಾಡಲು ಮುಂದಾದರೆ ಮೂತ್ರ ನೆಲವನ್ನು ಸಾಕುವ ಮೊದಲೇ ಮಂಜುಗಡ್ಡೆಯಾಗುವಷ್ಟು! ಅಂತಹ ಭಾಗಗಳೆಲ್ಲ ಅವರು ಹೊಂದಿಕೊಂಡು ಹೋಗುತ್ತಾರೆ..',
'ರವಿಬೆಳಗೆರೆಯವರ 'ಹಿಮಾಲಯನ್ ಬ್ಲೆನ್ಡರ್' ಎಂಬ ಪುಸ್ತಕ ಓದಿದ್ದೀರ.. ಓದಿರಿ, ಅದರ ಒಂದು ಭಾಗ ಹೇಳುತ್ತೇನೆ
'ಅದು ಭಾರತ-ಚೀನಾ ಯುದ್ಧ ನಡೆಯುವ ಸಮಯ.. ೭೦೦ ಜನರಿದ್ದ ಒಂದು ಸೇನಾ ತುಕಡಿಯ ಮುಖ್ಯಸ್ಥರಾಗಿದ್ದವರೊಬ್ಬರ ಅನುಭವವಿದು.. ಸೇನಾತುಕಡಿಯನ್ನು ಒಂದೊಂದು ಕಡೆಗೆ ಮತ್ತೆ ಮತ್ತೆ ಕಳುಹಿಸುವಂತೆಯೇ ಇವರ ತುಕಡಿಯನ್ನು ಬೇರೊಂದು ಕಡೆಗೆ ಒಮ್ಮೆ ಸ್ಥಳಾಂತರ ಮಾಡಲಾಯಿತು, ಹೊಸ ಪ್ರದೇಶಕ್ಕೆ ಸೇನೆ ಬಂದ ದಿನ ಸೈನಿಕರಿಗೆ ರೊಟ್ಟಿಯ ಬದಲಾಗಿ ಅನ್ನವನ್ನು ಮಾತ್ರ ನೀಡಲಾಗುತ್ತಿದ್ದುದನ್ನು ಕಂಡ ಮುಖ್ಯಸ್ಥರು 'ಸೈನಿಕರಿಗೆ ಅನ್ನ ಮಾತ್ರ ನೀಡಿದರೆ ಅನ್ನ ತಿಂದು ಯುದ್ಧ ಮಾಡಲಾಗುತ್ತದೆಯೇ.. ಎಂದು ಅಡುಗೆಯವರನ್ನು ಪ್ರಶ್ನಿಸಿದರು. ಆಗ ಒಬ್ಬರು 'ನೋಡಿ ಸ್ವಾಮಿ ೭೦೦ ಜನರಿಗೆ ರೊಟ್ಟಿ ಮಾಡುವುದು ಸುಲಭದ ಮಾತಲ್ಲ,ಹಳೆ ಜಾಗದಲ್ಲಿ ೭೦೦ ಜನರಿಗೆ ರೊಟ್ಟಿ ಬೇಯಿಸುತ್ತಿದ್ದ ನೂರಾರು ಕೆ.ಜಿ. ತೂಕದ ರೊಟ್ಟಿಕಲ್ಲುಗಳನ್ನು ಇಲ್ಲಿಗೆ ತಂದಿಲ್ಲ, ಕಲ್ಲನ್ನು ಹೊತ್ತು ತರುವ ಬದಲಾಗಿ ಅಷ್ಟೆ ತೂಕದ ಮದ್ದು-ಗುಂಡುಗಳನ್ನು ತಂದಿದ್ದೇವೆ.. ಊಟದಲ್ಲಿ ಕೊರತೆಯಾದರೆ ಹೇಗೋ ನಡೆಯುತ್ತದೆಅ ಆದರೆ ಮುಖ್ಯವಾಗಿ ಬೇಕಾದ್ದು ಮದ್ದು-ಗುಂಡಲ್ಲವೇ..!' ಎಂದು ಉತ್ತರಿಸಿದ್ದರು.'

ಈ ಕಥೆ ಹೇಳಿದ ವಾದಿರಾಜ್ ಅವರು 'ಅವರು ಅಲ್ಲಿ ಗಡಿ ಕಾಯ್ತಾರೆ, ನೀವು ದೇಶದೊಳಗೆ ಕಾಯಬೇಕು, ಈಗ ಭಾರತದ ಕೆಲವು ಭಾಗಗಳು ಭಾರತದ ಭಾಗದಂತೆ ಕಾಣುವುದೇ ಇಲ್ಲ.
ಭಾರತದೊಳಗೆ ಸಿಕ್ಕಸಿಕ್ಕಲ್ಲಿ ಹಲವಾರು ಚರ್ಚ್ ಗಳು,ಮಸೀದಿಗಳು ತಲೆಎತ್ತುತ್ತಾ ಮಿನಿ ಪಾಕಿಸ್ತಾನಗಳು,ಮಿನಿ ಇಂಗ್ಲೆಂಡ್ ಗಳು ಹುಟ್ಟಿಕೊಂಡಿವೆ..ಅದನ್ನು ತಡೆಯಬೇಕು ನಮ್ಮ ಜಾಗವನ್ನು ಬೇರೆಯವರು ಆಕ್ರಮಿಸಿಕೊಳ್ಳದಂತೆ ಕಾಪಾಡಬೇಕು. ಇಲ್ಲದಿದ್ದರೆ ಮತ್ತೆ ನಾವು ಬೇರೆಯವರ ಅಧೀನದಲ್ಲಿ ಇರಬೇಕಾಗುತ್ತದೆ.

ಹೀಗೆ ಹೇಳಿ ಭಗತ್ ಸಿಂಗ್ ವಿಷಯ ಎತ್ತಿಕೊಂಡರು.
'ಅಂದಿನ ಕಾಲದಲ್ಲಿ ಭಾರತದ ಶಕ್ತಿ ಎಷ್ಟಿದೆ ಎಂದು ತೋರಿಸಲು ಜನರಿಲ್ಲದ ಕಡೆ ಬಾಂಬುಗಳನ್ನು ಸಿಡಿಸುತ್ತ ಬ್ರಿಟಿಷರಿಗೆ ನಡುಕ ಹುಟ್ಟಿಸುತ್ತಿದ್ದರು, ಹಾಗೊಮ್ಮೆ ಭಗತ್ ಸಿಂಗ್ ಅವರನ್ನು ಬ್ರಿಟಿಷ್ ಸರ್ಕಾರ ಬಂಧಿಸಿ ನೇಣುಗೇರಿಸುವುದಾಗಿ(ನೂರಾರು ಜನರು ವಿರೋಧ ವ್ಯಕ್ತಪಡಿಸಿದರೂ) ಹೇಳಿತು. ಆಗ ಭಾರತೀಯರೆಲ್ಲ ನೇಣುಗೇರಿಸಿದ ನಂತರ ಶವವನ್ನು ಹೊತ್ತು ಲಕ್ಷಾಂತರ ಜನರ ಅಭಿಮುಖದಲ್ಲಿ ಮೆರವಣಿಗೆ ಮಾಡಿ ಅಂತ್ಯಕ್ರಿಯೆ ಮಾಡುವುದಾಗಿ ನಿರ್ಧರಿಸಿಕೊಂಡಿತು. ಇದನ್ನು ತಿಳಿದ ಸರ್ಕಾರದವರು ಮತ್ತೆ ಜನರೆಲ್ಲಾ ಕೂಡಿದರೆ ತಮಗೆ ತೊಂದರೆಯಾಗುತ್ತದೆ ಎಂಬುದನ್ನು ಅರಿತು ಗೊತ್ತು ಮಾಡಿದ್ದ(ಜನರಿಗೆ ತಿಳಿಸಿದ್ದ) ಹಿಂದಿನ ದಿನವೇ ನೇಣು ಹಾಕಲು ನಿರ್ಧರಿಸಿ ಭಗತ್ ಸಿಂಗರ ಕೊನೆ ಆಸೆ ಕೇಳಿದ್ದ ಭಗತ್ ಸಿಂಗರು 'ನನ್ನ ತಾಯಿ ಮಾಡಿದ ರೊಟ್ಟಿ ತಂದುಕೊಟ್ಟರೆ ಅದನ್ನು ತಿಂದು ನೆಮ್ಮದಿಯಿಂದ ಸಾಯುತ್ತೇನೆ ಎಂದರಂತೆ.. ಆಗ ನೇಣಿಗೇರಿಸುವವನು ಯೋಚಿಸಿ 'ಈಗ ೨೦೦ ಕಿಲೋಮೀಟರ್ ದೂರ ಹೋಗಿ ಇವನ ತಾಯಿಯಿಂದ ರೊಟ್ಟಿ ತರುವಷ್ಟರಲ್ಲಿ ಮರುದಿನವಾಗುತ್ತದೆ,ಆಗ ಜನ ಸೇರಿಬಿಡುತ್ತಾರೆ.. ಈಗೇನು ಮಾಡುವುದು..' ಎಂದು ಚಿಂತಿಸುತ್ತಿದ್ದಾಗ, ಭಗತ್ ಸಿಂಗ್ ' ನನ್ನ ತಾಯಿ ಮಾಡಿದ ರೊಟ್ಟಿ ಎಂದರೆ ನೀವು ಆಕೆ ಇರುವಲ್ಲಿಗೆ ಹೋಗಬೇಕಿಲ್ಲ.. ಜೈಲಿನ ಪಕ್ಕ ತೇಲೂರಾಮ( ಜೈಲಿನ ಚರಂಡಿ,ಮೋರಿ ಸುದ್ಧ ಮಾಡುವವನು..) ಮನೆಯಿಂದ ತಂದರೆ ಸಾಕು.. ಯಾಕೆಂದರೆ ಆತ ಮಾಡುವ ಕೆಲಸ ಮಾಡಲು ತಾಯಿಹೃದಯ ಬೇಕು.. ನಾವು ಚಿಕ್ಕವರಿದ್ದಾಗ ನಮ್ಮ ಹೊಲಸನ್ನು ತಾಯಿ ಹೇಸಿಗೆ ಪಟ್ಟುಕೊಳ್ಳದೆ ತೆಗೆಯುತ್ತಿದ್ದಳೋ, ಹಾಗೆ ಹೇಸಿಗೆ ತೆಗೆಯಲು ತಾಯಿ ಹೃದಯವಿದ್ದರೆ ಮಾತ್ರ ಸಾಧ್ಯ, ತೇಲೂರಾಮನಿಗೆ ಅದಿದೆ., ಹಾಗಾಗಿ ಅವನು ನನ್ನ ತಾಯಂತೆಯೇ,ಅವನಿಂದಲೇ ರೊಟ್ಟಿ ಮಾಡಿಸಿ ತನ್ನಿ..' ಎಂದು ಹೇಳಿ ತರಿಸಿಕೊಂಡು ತಿಂದು ನೇಣಿಗೇರಿದರಂತೆ.'

ಎಂದು ಹೇಳಿದ ವಾದಿರಾಜ್ ಅವರು ಒಗ್ಗಟ್ಟಾಗಿ ದೇಶ ಕಾಪಾಡಿ ಎಂದು ಹೇಳಿ ಕೂಟಕ್ಕೆ ತೆರೆ ಎಳೆದರು..
ಅವರು ಹೇಳಿದ ಮಾತುಗಳು ಆತ್ಮಸಾಕ್ಷಿಯನ್ನು ಬಡಿದೆಬ್ಬಿಸುವಂತಿದ್ದವು..

~.

22 ಕಾಮೆಂಟ್‌ಗಳು:

sunaath ಹೇಳಿದರು...

ಇದೊಂದು ಕಣ್ಣು ತೆರೆಯಿಸುವ ಲೇಖನವಾಗಿದೆ. ಧನ್ಯವಾದಗಳು.

Rteja ಹೇಳಿದರು...

Very good article. I am also participated in that 'CHINTANA KOOTA'

ashokkodlady ಹೇಳಿದರು...

ಉತ್ತಮ ಲೇಖನ , ಧನ್ಯವಾದಗಳು....

ಸೀತಾರಾಮ. ಕೆ. / SITARAM.K ಹೇಳಿದರು...

uttama lekhana

PARAANJAPE K.N. ಹೇಳಿದರು...

ಲೇಖನ ಚೆನ್ನಾಗಿದೆ, ಮುಂದುವರಿಸಿ...

ದಿನಕರ ಮೊಗೇರ ಹೇಳಿದರು...

uttama lekhana... munduvaresi.

Subrahmanya ಹೇಳಿದರು...

ಒಳ್ಳೆಯ ಅರ್ಥಪೂರ್ಣ ಲೇಖನ. ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಧೀರ ಮನೋಭಾವದ ಕಾರ್ಯಕರ್ತರಿದ್ದಾರೆ, ಅವರು ಬೆಳಕಿಗೆ ಬರುತ್ತಿಲ್ಲ ಅಷ್ಟೆ. ನಿಮ್ಮ ಲೇಖನ ತಿಳಿವಿನಿಂದ ಕೂಡಿದೆ.

prabhamani nagaraja ಹೇಳಿದರು...

ಚಿ೦ತನ ಯೋಗ್ಯ ಲೇಖನ. ನಮ್ಮೊಡನೆ ಹ೦ಚಿಕೊ೦ಡಿದ್ದಕ್ಕಾಗಿ ಧನ್ಯವಾದಗಳು.

ಚುಕ್ಕಿಚಿತ್ತಾರ ಹೇಳಿದರು...

ಉತ್ತಮ ಲೇಖನ...ನಮ್ಮೊಡನೆ ಹ೦ಚಿಕೊ೦ಡಿದ್ದಕ್ಕಾಗಿ ಧನ್ಯವಾದಗಳು.

ಅನಾಮಧೇಯ ಹೇಳಿದರು...

ಈ ಲೇಖನದಿಂದ ಕೆಲವನ್ನು ತಿಳಿದಂತಾಯ್ತು,ಈ ವಿಷಯ ತಿಳಿಸಿದ ವಾದಿರಾಜ್ ಅವರಿಗೂ ಹಾಗೂ ನಿಂಗೂ ಥ್ಯಾಂಕ್ಸ್
-ದಿವ್ಯಶ್ರೀ

ಗಿರೀಶ್.ಎಸ್ ಹೇಳಿದರು...

Guru Prasad,olleya lekhana barediddiri !!!

ವಿಚಲಿತ... ಹೇಳಿದರು...

sunaath ಅವ್ರೆ,
ನಿಮ್ಮ ಮೊದಲ ಪ್ರತಿಕ್ರಿಯೆಯಿಂದಲೇ ನನ್ನೀ ಲೇಖನ ಸಾರ್ಥಕವಾಯಿತು.
ಧನ್ಯವಾದಗಳು.ತು.
ಧನ್ಯವಾದಗಳು.

ವಿಚಲಿತ... ಹೇಳಿದರು...

Rteja ಅವ್ರೆ,
ನನ್ನ 'ಮನಸಿನಮನೆ'ಗೆ ಸುಸ್ವಾಗತ.
ಪ್ರತಿಕ್ರಿಯೆಗೆ
ಧನ್ಯವಾದಗಳು.
ಹೀಗೆ ಬರುತ್ತಿರಿ

ವಿಚಲಿತ... ಹೇಳಿದರು...

ashokkodlady ಅವ್ರೆ,
ಪ್ರತಿಕ್ರಿಯೆಗೆ
ಧನ್ಯವಾದಗಳು.

ವಿಚಲಿತ... ಹೇಳಿದರು...

ಸೀತಾರಾಮ.ಕೆ.,
ಧನ್ಯವಾದಗಳು.

ವಿಚಲಿತ... ಹೇಳಿದರು...

PARAANJAPE.K.N. ಅವ್ರೆ,
ಪ್ರತಿಕ್ರಿಯೆಗೆ
ಧನ್ಯವಾದಗಳು

ವಿಚಲಿತ... ಹೇಳಿದರು...

ದಿನಕರ ಮೊಗೇರ ಅವ್ರೆ,
ಪ್ರತಿಕ್ರಿಯೆಗೆ
ಧನ್ಯವಾದಗಳು.

ವಿಚಲಿತ... ಹೇಳಿದರು...

Subrahmanya ಅವ್ರೆ,
ವಾದಿರಾಜ್ ಅವರು ಹಾಲಿ NSS ಜಾಗೃತ ದಳದ ಪ್ರಚಾರಕರಾಗಿದ್ದಾರೆ,ಹೌದು ಉತ್ತಮ ಕಾರ್ಯಕರ್ತರೇ ಇದ್ದಾರೆ

ಪ್ರತಿಕ್ರಿಯೆಗೆ
ಧನ್ಯವಾದಗಳು.Subrahmanya ಅವ್ರೆ,
ವಾದಿರಾಜ್ ಅವರು ಹಾಲಿ NS

ವಿಚಲಿತ... ಹೇಳಿದರು...

prabhaamani ಅವ್ರೆ,
ಪ್ರತಿಕ್ರಿಯೆಗೆ
ಧನ್ಯವಾದಗಳು.

ವಿಚಲಿತ... ಹೇಳಿದರು...

ಚುಕ್ಕಿ ಚಿತ್ತಾರ ಅವ್ರೆ,
ಧನ್ಯವಾದಗಳು.

ವಿಚಲಿತ... ಹೇಳಿದರು...

ದಿವ್ಯಶ್ರೀ ಅವ್ರೆ,
ಪ್ರತಿಕ್ರಿಯೆಗೆ ಧನ್ಯವಾದಗಳು

ವಿಚಲಿತ... ಹೇಳಿದರು...

ಗಿರೀಶ್ ಅವ್ರೆ,
ಧನ್ಯವಾದಗಳು

Related Posts Plugin for WordPress, Blogger...