[ಯೌವ್ವನ ನರಕವಾಗುವ ಪರಿಯನ್ನು ನನಗೆ ತಿಳಿದಷ್ಟು ಶಬ್ಧಗಳಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದೇನೆ...]

ಕತ್ತಲೆಮನೆಯಾಗಿದೆ ಯೌವ್ವನದ ನಾಕ
ಆಸೆಪತಂಗಕಿದು ಬೆಲ್ಲದ ಬಿಸಿಪಾಕ..
ಮನಸು ಅಂದು ತಿಳಿ ತಿಳಿ ಹಾಲು
ಯೌವ್ವನದ ಹನಿ ಆ ಹಾಲಿಗಿಳಿಯಲು
ಆಸೆ ತರಂಗಗಳು ಹೊಮ್ಮುತಿರಲು
ಕಾಡಿವೆ ಅರಿಷಡ್ವರ್ಗಗಳ ಕವಲು..
ಏಕಾಂತವ ಪದೆಪದೆ ಬಯಸಲು
ತನುಮನಕೀಗ ಏಕಾಂತವೆ ಸ್ವರ್ಗವು..
ಕಾಡುತಿರಲು ವಿರಹವು
ಮೂಡುತಿರಲು ಸಿಹಿನೋವು
ಜೇನು ತುಂಬಿದ ಕುಸುಮಗಳ
ಕೆರಳಿಸಿ ಅರಳಿಸುವ ಆಸೆ..
ಆಸೆಪತಂಗಕೆ ಸಿಹಿಪಾಕಕಾದರೂ
ಅಂಟಿ ಕ್ಷಣಿಕ ಸುಖಿಯಾಗುವ ಆಸೆ
ಸುಡುವ ಬಿಸಿಜ್ವಾಲೆಯನೆ ಬಳಸಿ
ತಂಪುಗಾಳಿಯ ಬಿಸಿಯುಸಿರಾಗಿಸುವ ಆಸೆ..
ಸಾಗುತಿರಲು ಕಾಲಬ್ರಹ್ಮನು
ನೂಕುತಿರಲು ಜೀವನಚಕ್ರ
ನನ್ನ ಜೀವನದ ಹಾದಿಗಳು
ಮುಂದೆ ಹೆಜ್ಜೆ ಇಟ್ಟು ಸವೆಸಲಾಗಿ
ಕುಸಿದುಹೋಗಿ ಮರೆಯಾಗುತಿವೆ
ಮತ್ತೊಮ್ಮೆ ತಲುಪಲಾಗದಂತೆ ತಿರುಗಿ..
ನಾಗಾಲೋಟದಲ್ಲಿ ಓಡುತಿರುವ
ಹುಚ್ಚುಕುದುರೆಗಳ
ಮನೋರಥವ ನಿಯಂತ್ರಿಸಲು
ಸಾರಥಿಯಾಗಬೇಕಿದೆ ನಾ..
ಮದವೇರಿ ಮೈಮರೆಯದೆ..
ಮನಸಿನಮನೆಗೆ ತಂಗಲು ಬರುವ
ಮೋಹಕಮಾಯೆಗಳ
ಮುಚ್ಚಿ ಬಾಗಿಲ ಹಿಂದೆ ನಿಂತು
ಹೋಗೆನ್ನಬೇಕಿದೆ ನಾ..
ಎದೆಹಾಸಿ ಸ್ವಾಗತಿಸದೆ..
.~~-~~.~~-~~.~~-
~.~-~
33 ಕಾಮೆಂಟ್‌ಗಳು:
ಯೌವ್ವನ ಸ್ವರ್ಗ -ನರಕ ಅಂಥಾ ಹೇಳುತ್ತ ಒಳ್ಳೆ ಕವನ ಹೊಸೆದಿದ್ದಿರಾ..
ನಿಮ್ಮ ನಿರ್ಧಾರ ಇಷ್ಟವಾಯಿತು!
chennagide kavana..
ಗುರು ನಿಮ್ಮ ಕವಿತೆ ಚೆನ್ನಾಗಿದೆ.ಥ್ಯಾಂಕ್ಸ್.ಬನ್ನಿ ನನ್ನ ಪುಟಕ್ಕೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಬಳಿ ಇರುವ ಅದ್ಭತ ಲೋಕಕ್ಕೆ ಭೀಮನ ಕಿಂಡಿ ಬೆಟ್ಟಕ್ಕೆ !!
manasinamanege baruva mohaka mayegala muchhi hinde nintu hogennabekide... ede hasi swagatisade...
e salugalu nanage tumba ista agive.kavana antu tumba arta garbitavagide.idu olleya nirdhara.
ಸೀತಾರಾಮ. ಕೆ. / SITARAM.K.,
ಯೌವ್ವನ ನನಗೇಕೋ ನರಕ ಎಂದೆನಿಸಿತು ಸರ್.. ಅದಕ್ಕೆ ಬರೆದೆ..
ಪ್ರತಿಕ್ರಿಯೆಗೆ ಧನ್ಯವಾದಗಳು..
sunaath.,
ಹಾಗಾದ್ರೆ ಸಾರ್ಥಕವಾಯ್ತು ನನ್ನೀ ಕವನ..
ಧನ್ಯೋಸ್ಮಿ..
Shashi jois.,
ಧನ್ಯವಾದಗಳು..
nimmolagobba .,
ನೋಡಿದೆ ಸರ್..
ನಿಮ್ಮ ಬ್ಲಾಗಿನಲ್ಲೇ ಏಕೋ ಶೀರ್ಷಿಕೆ ಬಿಟ್ಟು ಪೋಸ್ಟ್ ಗಳು ಯಾವೂ ಪ್ರದರ್ಶನ ವಾಗುತ್ತಿಲ್ಲ..
ಪ್ರತಿಕ್ರಿಯೆಗೆ ಧನ್ಯವಾದಗಳು..
ದಿವ್ಯಶ್ರೀ...,
ನಾನು ಆ ಸಾಲುಗಳನ್ನು ಬಹಳ ಕಷ್ಟಪಟ್ಟು ಬರೆದಿದ್ದಕ್ಕೂ ಸಾರ್ಥಕವಾಯ್ತು....
ಎಲ್ಲೋ ಕೇಳಿದ ಸಾಲುಗಳ ಭಾವನೆ ಉಪಯೋಗಿಸಿ ಬರೆದೆ ಆ ಸಾಲುಗಳನ್ನು..
ಪ್ರತಿಕ್ರಿಯೆಗೆ ಧನ್ಯವಾದಗಳು..
ಚೆನ್ನಾಗಿದೆ ಕವನ.
ಕವನದ ಭಾವನೆಗಳು ಚೆನ್ನಾಗಿವೆ. ಯೌವನದಲ್ಲಿ ’ಅದೆಲ್ಲ’ವನ್ನೂ ಮೀರಿ ನಿಲ್ಲಬೇಕೆಂಬ ನಿಲುವು ಸಾಮಾನ್ಯವಾದುದಲ್ಲ !. ಒಳ್ಳೆಯ ಕವನ.
Tumbaa Chennagide, arthagarbhitavaagide, Dhanyavadagalu...
ಚೆನ್ನಾಗಿದೆ! ಅಂದವಾದ ಕವನ. ಯೌವ್ವನದ ಸೆಳೆತಗಳನ್ನು ಹಾಗು ಅವು ಮಾಡುವ ಹಾನಿಗಳನ್ನು ಚಿತ್ರಿಸಿದ್ದೀರಿ.. ಒಳ್ಳೆ ಪ್ರಯತ್ನ.. Keep writing..
Guruprasad avarE...
kavana thumba chennagi barediddeeri.... yellaroo yavvanadha e ghattavannu dhaatiyE bandiruttaaralla.... arthapoorNavaadha kavana... inthaha arthapoorNa kavanagaLu mattashtu barali... :)
ಮನಸಿನ ಮನೆಯವರೆ..
ಯವ್ವನದ ಆಸೆಗಳನ್ನು ಚೆನ್ನಾಗಿ ವರ್ಣಿಸಿದ್ದೀರ ಮತ್ತು ಅದನ್ನು ಮೆಟ್ಟಿ ನಿಲ್ಲುವ ನಿರ್ಧಾರವನ್ನೂ ಹೊ೦ದಿದ್ದೀರ.. ತು೦ಬಾ ಒಳ್ಳೆಯ ನಿರ್ಧಾರ
ಈ ಯವ್ವನ ಎನ್ನುವುದು ಸವಾರನಿಲ್ಲದ ಕುದುರೆಯ೦ತೆ..
ಹುಚ್ಚುಚ್ಚಾಗಿ ಓಟ ನಡೆಸುತ್ತದೆ.ಸ೦ಯಮ ಎನ್ನುವ ಹಗ್ಗ ಬಿಗಿದು ಗುರಿಯ ಕಡೆ ನಡೆಸಿದರೆ ಖ೦ಡಿತಾ ಬಾನಿನೆತ್ತರ ಬೆಳೆಯಲು ಸಾಧ್ಯ...ನಿಮಗೆ ಒಳ್ಳೆಯದಾಗಲಿ.
ಚೆನ್ನಾಗಿದೆ.
super ide kavana.... estondu artavide kavanada saalugaLalli
ನಾಗಾಲೋಟದಲ್ಲಿ ಓಡುತಿರುವ ಹುಚ್ಚುಕುದುರೆಗಳ ಮನೋರಥವ ನಿಯಂತ್ರಿಸಲು ಸಾರಥಿಯಾಗಬೇಕಿದೆ ನಾ.. e saalugalu ishtavaadavu.aatma nivedaneya kavana chennagide.namma pc samasyeyinda pratikriyisalaagiralilla. abhinandanegalu.
ಯವ್ವನದಲ್ಲಿ ಅನುಭವಿಸುವ ಸುಂದರ ವರ್ಣಮಯ ಸಾಲುಗಳನ್ನು ಲಿಲಾ ಜಾಲವಾಗಿ ಚಿತ್ರಿಸಿ ಹೇಳಿದ್ದಿರ ಕತ್ತಲೆಮನೆಯವರೇ ತುಂಬಾ ಧನ್ಯವಾದಗಳು...
Venkatakrishna.K.K. ,
ನನ್ನ 'ಮನಸಿನಮನೆ'ಗೆ ಸ್ವಾಗತ..
ಪ್ರತಿಕ್ರಿಯೆಗೆ ಧನ್ಯವಾದಗಳು..
ಹೀಗೆಯೇ ಬರುತ್ತಿರಿ..
Subrahmanya,
ಹೌದು..
ನಿಮ್ಮ ಮಾತು ನಿಜ.. ಯೌವ್ವನದಲ್ಲಿ ಎಲ್ಲವನೂ ಮೀರುವುದು ಸಾಮಾನ್ಯ ಅಲ್ಲ..
ಧನ್ಯವಾದಗಳು..
ವಸಂತ್ ,
ಧನ್ಯವಾದಗಳು..
ashokkodlady,
ಧನ್ಯವಾದಗಳು..
Pradeep Rao,
ನನ್ನ 'ಮನಸಿನಮನೆ'ಗೆ ಸ್ವಾಗತ..
ಪ್ರತಿಕ್ರಿಯೆಗೆ ಧನ್ಯವಾದಗಳು..
ಹೀಗೆಯೇ ಬರುತ್ತಿರಿ..
ಸುಧೇಶ್ ಶೆಟ್ಟಿ,
ಧನ್ಯವಾದಗಳು..
ಚುಕ್ಕಿಚಿತ್ತಾರ ,
ನಿಮ್ಮ ಮಾತುಗಳು ಅರ್ಥಪೂರ್ಣವಾದವು..
ಧನ್ಯವಾದಗಳು..
shivu.k.,
ಧನ್ಯವಾದಗಳು..
ಮನಸು ,
ಧನ್ಯವಾದಗಳು..
prabhamani nagaraja,
ಧನ್ಯವಾದಗಳು..
ಸತೀಶ್ ಗೌಡ ,
ಧನ್ಯವಾದಗಳು..
chandada kavana ... yavvana dallaguva agu hogugalanna sundaravaagi kavanadalli hidididdiri :)
Ranjita,
ನನ್ನ ಮನಸಿನಮನೆಗೆ ಸ್ವಾಗತ..
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..
ಹೀಗೆಯೇ ಬರುತ್ತಿರಿ..
ಕಾಮೆಂಟ್ ಪೋಸ್ಟ್ ಮಾಡಿ