ಈ ಒಂದು ವರ್ಷದಲ್ಲಿ..
~.ಇಂದು ನನ್ನ 'ಮನಸಿನಮನೆ'ಗೆ ಒಂದು ವರ್ಷ ತುಂಬಿದ ಸಂಭ್ರಮ..

ಮೊದಲನೆಯದಾಗಿ ಈ ಶುಭಸಂದರ್ಭದಲ್ಲಿ ನನ್ನ ಬ್ಲಾಗಿನ ಪಯಣಕ್ಕೆ ಕಾರಣಕರ್ತರಾದ'ಜ್ಞಾನಮೂರ್ತಿ.ಟಿ.' ಎಂಬ ಓರ್ವ ಭಾವಜೀವಿಗೆ ಮನತುಂಬಿ ನನ್ನ ಹೂನಮನಗಳನ್ನುಅರ್ಪಿಸುತ್ತೇನೆ..

ಅವರ ಮಾರ್ಗದರ್ಶನದಲ್ಲಿ ಮೊದಲಿಗೆ ನಾನು 'ಬಲಿಪಶು' ಎಂಬ ಒಂದು ಬ್ಲಾಗನ್ನು ರಚಿಸಿದ್ದೆ..

ಬ್ಲಾಗ್ ಪರಿಚಿತವಾಗಬೇಕೆಂಬ ಆಸೆ ಕೆಲವರಿಗಿರುವಂತೆ ನನಗೂ ಇತ್ತು..

ಸಮಯದ ಅಭಾವದಿಂದಲೂ,ಭಾವಬಂಧನದಲ್ಲಿ ಸಿಲುಕಿ ಕ್ರಿಯಾಶೀಲತೆ ಕಳೆದುಕೊಂಡಿದ್ದರಿಂದಲೂನನ್ನ 'ಬಲಿಪಶು' ಬ್ಲಾಗ್ ಸಾಗರದ ಅಭಿವೃದ್ಧಿ ಪಥದಲ್ಲಿ ಆಮೆನಡಿಗೆಯಲ್ಲಿಸಾಗುತ್ತಿತ್ತು..

ನನ್ನ 'ಬಲಿಪಶು'ವಿಗೆ ಮೊದಲಾಗಿ ಪರಿಚಿತವಾದ ಬ್ಲಾಗಿಗರು- ಶಿವಶಂಕರ ಯಳವತ್ತಿ..ಬ್ಲಾಗ್ ಕುರಿತಾಗಿ ಕೆಲವು ವಿಷಯಗಳನ್ನು ನನ್ನ ಅರಿವಿಗೆ ತಂದ ಅವರಿಗೆ ನನ್ನಧನ್ಯವಾದಗಳನ್ನು ಅರ್ಪಿಸುತ್ತೇನೆ..

ಆ ಸಮಯದಲ್ಲಿ ನನ್ನ ಜೀವನದಲ್ಲಿ ಬಿರುಗಾಳಿಯೆದ್ದು ಮೈಮನಗಳ ಸುಳಿಯಲ್ಲಿ ಸಿಲುಕಿ ಹಲವುತಿರುವಿನ ದಾರಿಗಳಲ್ಲಿ ನಾನು ಸೋಲುಂಡ ಕಾರಣ ನಾನು ಬ್ಲಾಗ್ ಕಡೆ ಗಮನ ಹರಿಸಲಿಲ್ಲ..[ಆಸ್ತಿಕನಾದ ನಾನು ನನ್ನ ಆ ದು(ಪರಿ)ಸ್ಥಿತಿಗೆ ನನಗಿದ್ದ 'ರಾಹುದೆಸೆ'ಯೇ ಕಾರಣವೆಂದುಹೇಳುತ್ತೇನೆ..(ಜಾತಕ ಆಧಾರದ ಮೇಲೆ)]

ಅಲ್ಲಿಗೆ ನನ್ನ 'ಬಲಿಪಶು'ವಿನ ಪಯಣ ಸಂಪೂರ್ಣವಾಗಿ ನೆಲಕಚ್ಚಿತು..


ಕಾಲಕ್ರಮೇಣ ನನಗೆ ಬ್ಲಾಗ್ ಬಗೆಗಿದ್ದ ಆಸಕ್ತಿ ಕಡಿಮೆಯಾಗದೇ ಇದ್ದ ಕಾರಣ ದೀರ್ಘಬಿಡುವಿನ ನಂತರ ('ಗುರುದೆಸೆ' ಆರಂಭವಾದ ಮೇಲೆ..) ಬ್ಲಾಗ್ ಕುರಿತು ಹಲವಾರುಮಹದಾಸೆಗಳನ್ನು ಹೊತ್ತು 'ಮನಸಿನಮನೆ'ಯನ್ನು ಆರಂಭಿಸಿದೆ..

ಬ್ಲಾಗ್ ಚಿರಪರಿಚಿತವಾಗಿಸಬೇಕೆಂಬ ಆಸೆ ನನ್ನನ್ನು ದಿನೇ ದಿನೇ ಆವರಿಸುತ್ತಿತ್ತು..

ಕಾರಣಾಂತರಗಳಿಂದ ಕೇವಲ ಹುಣ್ಣಿಮೆ-ಅಮಾವಾಸ್ಯೆಗಳಲ್ಲಿ ಮಾತ್ರ ನನ್ನ 'ಮನಸಿನಮನೆ'ಯನ್ನುನವೀಕರಿಸುತ್ತಿದ್ದೆ..

"ಯಾವ ಬ್ಲಾಗಿಗರೂ ತಾವಾಗಿಯೇ ನಿನ್ನ ಬ್ಲಾಗನ್ನು ಹುಡುಕಿಕೊಂಡು ಬರುವುದಿಲ್ಲ.. ಅವರಬ್ಲಾಗುಗಳಿಗೆ ನೀನು ಪುನಃ-ಪುನಃ ಭೇಟಿ ಕೊಡುತ್ತ ನಿನ್ನ ಹೆಜ್ಜೆಗುರುತುಗಳನ್ನು ಅಲ್ಲಿಉಳಿಸಿ ಬರುತ್ತಿರಬೇಕು..

ಅವರ ಬ್ಲಾಗಿನ ಹಿಂಬಾಲಕರ ಪಟ್ಟಿಯಲ್ಲಿ ನೀನು ಸೇರಿಕೊಳ್ಳಬೇಕು..

ಹೀಗಾದಲ್ಲಿ ಮಾತ್ರ ಅವರಿಗೆ ನಿನ್ನ ಅಸ್ತಿತ್ವದ ಅರಿವಾಗಿ ಅವರು ನಿನ್ನ ಬ್ಲಾಗಿನಕಡೆಗೆ ಬರುತ್ತಾರೆ..

ಆಗ ಮಾತ್ರ ನಿನ್ನ ಬ್ಲಾಗು ಪರಿಚಿತವಾಗಲು ಸಾಧ್ಯ''ಎಂದು ಗುರುಗಳು ಕಿವಿಮಾತು ಹೇಳಿದರು..

ಅಂತೆಯೇ ನಾನು ನೂರಾರು ಬ್ಲಾಗುಗಳನ್ನು ಜಾಲಾಡಿ ಅಲ್ಲಿ ನನ್ನ ಹೆಜ್ಜೆಗುರುತನುಳಿಸಿಬರಲು ಶುರುಮಾಡಿದೆ..

ನನ್ನ ಜಾಲಾಟದಲ್ಲಿ ಕಂಡ ಬ್ಲಾಗುಗಳಲ್ಲಿ ನಾನು ವಿಧವಿಧದ ಬಣ್ಣದಕ್ಷರಗಳನ್ನು ಕಂಡಿದ್ದೇನೆ..:

*ಸಮಾಜದ ಸ್ಥಿತಿ-ಗತಿಯನ್ನು ವಿಮರ್ಶಿಸಿ ಬರೆಯುವ ಉತ್ತಮ ಸಕಾಲಿಕ ಲೇಖನಗಳು..

*ಎಲ್ಲೋ ಅಡಗಿದ್ದ ನಮ್ಮ ಕಣ್ಣಿಗೇ ಬೀಳದ ಹಲವು ಅಮೂಲ್ಯ ಪುರಾಣೇತಿಹಾಸಗಳ ವಿಷಯವನ್ನುನಮ್ಮ ಜ್ಞಾನದರಿವಿಗೆ ತರುವ ಉತ್ತಮ ಲೇಖನಗಳು..

*ಪ್ರೇಮ-ಪ್ರೀತಿ-ವಿರಸ-ಗೆಳತಿ-ಗೆಳೆಯ-ಸನಿಹ ಈ ವಸ್ತುಗಳ ಸುತ್ತಲೇ ಸುತ್ತುತ್ತ ಬರೆದ(ಭಗ್ನ)ಕವಿತೆ(ವ್ಯಥೆ)ಗಳು..

*ಅವರವರ ಕಥೆಯನ್ನೇ ಬರೆದ ಕಥಾನಕಗಳು..

*ಅವರು ಕೈಗೊಂಡಿದ್ದ ಪ್ರವಾಸದ ಕುರಿತು ಬರೆದು ಪ್ರವಾಸೀಯ ತಾಣಗಳ ಪರಿಚಯಿಸುವ ಕಥನಗಳು..

*ನಾಲ್ಕಾರು ಸಾಲಿನಲ್ಲಿ ನಗು ತುಂಬಿಸಿ ಬರೆದ ಹನಿಕವನಗಳು..

*ವಿಶೇಷ ರೀತಿಯ ಕಾದಂಬರಿಗಳು..

*ಪ್ರಕೃತಿ ವರ್ಣಿಸಿ ಬರೆದ ಸೌಂದರ್ಯ(ಕವಿ)ತೆಗಳು..

*ರುಚಿರುಚಿ ತಿಂಡಿ ತುಂಬಿದ ಅಡುಗೆಮನೆಯ ಪರಿಚಯಿಸುವ ಒಂದೆರಡೇ ವಿಶೇಷ ಅಭಿರುಚಿ ಲೇಖನಗಳು..

*ಕರುನಾಡಲ್ಲಿ ಕೊಲೆಯಾಗುತ್ತಿರುವ ಕನ್ನಡದ ಚಿತ್ರವಿಚಿತ್ರಗಳು..

*ಅಚ್ಚರಿ ತರಿಸುವ ವಿಸ್ಮಯಕಾರಿಗಳು..

*ರಸಿಕ ಮಹಾಮಣಿಗಳ ರಸಿ-ಕತೆಗಳು..

(ನನ್ನ ಬ್ಲಾಗು ಈ ಮೇಲಿನ ಯಾವುದಾದರೂ ಗುಂಪಿಗೆ ಸೇರುವುದೇ..)

ಕೊನೆಗೂ ನನ್ನ ಜಾಲಾಟದ ಶ್ರಮ ವ್ಯರ್ಥವಾಗದೆ ಗುರುಗಳು ಹೇಳಿದ್ದಂತೆ ಅನೇಕ ಬ್ಲಾಗಿಗರುನನ್ನ 'ಮನಸಿನಮನೆ'ಗೆ ಬರಲು ಶುರುವಾದರು..

ಹಲವಾರುಬ್ಲಾಗಿಗರ ನೆಂಟಸ್ತಿಕೆ ನನ್ನ 'ಮನಸಿನಮನೆ'ಗೆ ಇರುವುದು ನನಗೆ ಖುಷಿ ತಂದಿದೆ..(ಹೆಸರು ನಮೂದಿಸಿಲ್ಲ..)

ಈ ಬ್ಲಾಗ್ ಆರಂಭಿಸಿದ ಮೇಲೂ ಕೆಲವೊಮ್ಮೆ ಕಾರಣಗಳಲ್ಲದ ಕಾರಣ ನೀಡಿ ಬ್ಲಾಗ್ ನವೀಕರಿಸದೆಖಾಲಿ ಬಿಟ್ಟಿದ್ದಕ್ಕೆ ಕ್ಷಮೆ ಇರಲಿ..

ಕೆಲವು ಬ್ಲಾಗಿಗರ 'ಮನೆ'ಗೆ ಎಷ್ಟು ಸಲ ಭೇಟಿ ಕೊಡುತ್ತಲಿದ್ದರೂ ಅವರು ನನ್ನ ಬ್ಲಾಗಿನಕಡೆ ತಿರುಗಿಯೂ ನೋಡದೆ ಇರುವುದು ತುಸು ಬೇಸರದ ಸಂಗತಿಯಾಗಿದೆ.. ಅದಕ್ಕೆ ಕಾರಣತಿಳಿದುಬರುತ್ತಿಲ್ಲ..

ನನಗೆ ಅವರ ಬ್ಲಾಗ್ ಕಾಣದೆ ನಾನು ಅವರ ಬ್ಲಾಗಿಗೆ ಭೇಟಿ ಕೊಡದಿದ್ದರೂ ಸ್ವತಃ ನನ್ನಬ್ಲಾಗಿಗೆ ಬಂದು ಪ್ರೋತ್ಸಾಹ ನೀಡುತ್ತಿರುವ ಹಲವಾರು ಮಿತ್ರವರ್ಯರಿಗೆ ವಿಶೇಷವಾಗಿಧನ್ಯವಾದಗಳು..


ಬ್ಲಾಗಿನ ಬಗ್ಗೆ ನನಗೆ ಇನ್ನೂ ಸಂಪೂರ್ಣವಾಗಿ ತಿಳುವಳಿಕೆ ಇಲ್ಲ..
ಅದಕ್ಕಾಗಿ ಕೆಲ ಮಿತ್ರ ಬ್ಲಾಗಿಗರಿಂದ ಮಾಹಿತಿ ಸಂಗ್ರಹ ಮಾಡಿಕೊಳ್ಳಬೇಕೆಂಬ ಹಂಬಲದಿಂದ,ನನಗೆ ಕೀಳಿರಿಮೆ ಉಂಟಾಗಬಹುದು ಎಂಬ ಕೊಂಕಿದ್ದರೂ,ಅವರಿಗೆ ನನ್ನ ಸಂಪರ್ಕಕೊಂಡಿ ನೀಡಿಅವರ ಸಂಪರ್ಕಕ್ಕಾಗಿ ಹಾತೊರೆದೆ..

ಇದರಿಂದ ಏನೂ ಪ್ರಯೋಜನವಾಗದೆ ನಾನು ಸೋತು ಸುಣ್ಣವಾದೆ..

ಇದರ ಕುರಿತು ಸ್ವಲ್ಪ ಬೇಸರವಿದೆ..

ಇಷ್ಟು ಮಾತ್ರ ಹೊರತುಪಡಿಸಿ ಈ ಒಂದುವರ್ಷದ ನನ್ನ ಬ್ಲಾಗಿನ ಪಯಣ ಸಂತೋಷ ತಂದಿದೆ..

ಈಸಂತೋಷಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರೋತ್ಸಾಹ ನೀಡಿದ ಎಲ್ಲರಿಗೂ ನನ್ನ ಅನಂತಅನಂತ ಧನ್ಯವಾದಗಳು..


ನಾನು ಇನ್ನೂ ಬ್ಲಾಗ್ ಬಗ್ಗೆ ತಿಳಿದುಕೊಳ್ಳುವುದು ಬೇಕಾದಷ್ಟಿದೆ.. ತಿಳಿದುಕೊಳ್ಳಲುನಿಮ್ಮ ಸಹಕಾರ ಬೇಕಿದೆ..

ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರಿ ಎಂದು ಮತ್ತೊಮ್ಮೆ ಎಲ್ಲರಿಗೂ ಮನತುಂಬಿ ವಂದಿಸುತ್ತಾ....~
~.~

38 ಕಾಮೆಂಟ್‌ಗಳು:

ಸೀತಾರಾಮ. ಕೆ. / SITARAM.K ಹೇಳಿದರು...

haardika shubhaashayagalu tamma manasinaramaneya huttuhabbakke. hunnime amavasyege minukuva tamma blog sadaa minukutirali.
jai ho!!!!

ಸಾಗರದಾಚೆಯ ಇಂಚರ ಹೇಳಿದರು...

ಮೊದಲನೇ ವರ್ಷದ ಸಂಭ್ರಮಕ್ಕೆ ಶುಭಾಶಯಗಳು
ಬರೆಯುವುದು ನಮ್ಮ ಧರ್ಮ,
ಓದುವುದು ಅವರಿಗೆ ಬಿಟ್ಟು ಬಿಡಿ
ಅವರು ಬರಲಿಲ್ಲ, ಇವರು ಬರುತ್ತಿಲ್ಲ ಎಂದು ಚಿಂತಿಸದೆ ನಿಮ್ಮ ಬರವಣಿಗೆ ಮುಂದುವರೆಸಿ
ನಾವಂತೂ ಸದಾ ನಿಮ್ಮೊಂದಿಗೆ ಇದ್ದೇವೆ
ಓದದೆ ಹೋದವರು ಏನನ್ನೂ ಓದುವುದಿಲ್ಲ ಬಿಡಿ
ಹಾರ್ದಿಕ ಅಭಿನಂದನೆಗಳು

ದಿವ್ಯಶ್ರೀ.. ಹೇಳಿದರು...

Modalaneyadagi modalane varshada shubhashayagalu.bereyavaru nan blog nodtilla anta besar madkobedi,eaga bartiro comments galige kushi padi,neevandkondavru cmnt kodtare nim prayatna neev madtiri.chennagide....

ಸಹನಾ. ಹೇಳಿದರು...

Nimma blog na modalane varshada janmadinake haardhika shubhassayagalu.

Subrahmanya ಹೇಳಿದರು...

ನಿಮ್ಮ ಬ್ಲಾಗು ನೀವು ಹೇಳಿರುವ ಎಲ್ಲಾ ಕೆಟಗರಿಗೂ ಸೇರಲಿ ಎಂದು ಹಾರೈಸುತ್ತೇನೆ. ಮನಸ್ಸು ವಿಚಲಿತವಾಗದೆ ನಿಮ್ಮ ಬರಹಗಳು ಹೊಳೆಯುತ್ತಿರಲಿ ಎಂದು ಆಶಿಸುತ್ತೇನೆ.

ಅರಕಲಗೂಡುಜಯಕುಮಾರ್ ಹೇಳಿದರು...

@ಗುರುಪ್ರಸಾದ, ನಿಮ್ಮ ಬ್ಲಾಗ್ ಒಂದು ವರ್ಷ ಪೂರೈಸಿದ್ದಕ್ಕೆ ಧನ್ಯವಾದಗಳು, ಬರವಣಿಗೆಯ ಭಾವಲಹರಿ ಆಗಾಗ ಬರುತ್ತಿರಲಿ, ಮಥನವಾದಾಗಲೇ ಪರಿಪೂರ್ಣತೆ ಸಿಗುತ್ತದಲ್ವೇ..?ನಿರಾಶೆ/ಹತಾಶೆಯನ್ನು ಮನಸ್ಸಿನಿಂದ ಓಡಿಸಿಬಿಡಿ ಓಕೆ?

ಮನಸು ಹೇಳಿದರು...

ಮೊದಲನೇ ವರ್ಷದ ಸಂಭ್ರಮಕ್ಕೆ ಶುಭಾಶಯಗಳು...ನಿಮ್ಮ ಬರಹಗಳು ಬರುತ್ತಿರಲಿ ಎಂದು ಆಶಿಸುತ್ತೇನೆ.

sunaath ಹೇಳಿದರು...

ಹುಟ್ಟುಹಬ್ಬದ ಶುಭಾಶಯಗಳು. Carry on!

ವಿ.ಆರ್.ಭಟ್ ಹೇಳಿದರು...

ಹಾರ್ದಿಕ ಶುಭಾಶಯಗಳು ದುರುಪ್ರಸಾದ್, ನಿಮ್ಮ ಬರಹಗಳು ಮತ್ತಷ್ಟು ಬರಲಿ.

prabhamani nagaraja ಹೇಳಿದರು...

`manasina mane'yu ondu varshada payana purysiddakkaagi abhinandanegaLu. nimma payana saathakavaagali, nirantaravaagirali.

ಶಿವಪ್ರಕಾಶ್ ಹೇಳಿದರು...

Happy Birthday to your blog..
keep writing..

comments bagge jaasti think madbedi.. :)

ದೀಪಸ್ಮಿತಾ ಹೇಳಿದರು...

ಒಂದು ವರ್ಷ ಪೂರೈಸಿದ್ದಕ್ಕೆ ಅಭಿನಂದನೆಗಳು. ಹೀಗೆ ಬರೆಯುತ್ತಿರಿ

Pradeep Rao ಹೇಳಿದರು...

ನಿಮ್ಮ ಬ್ಲಾಗ್‍ಗೆ ಒಂದು ವರ್ಷ ತುಂಬಿದಕ್ಕೆ ಶುಭಾಶಯಗಳು.. ಹೀಗೆ ಒಳ್ಳೆಯ ಲೇಖನಗಳನ್ನು ಪೋಸ್ಟ್ ಮಾಡುತ್ತಿರಿ

ಕಲರವ ಹೇಳಿದರು...

manasina maneyavare, nimma abhipraayave nanna abhipraayavu saha.nimma besarakke kaaranavaagiruva sangatigale namagu besaravaagide.maadodaadaru enu?pritiyinda protsaahisuvavaranne svaagatisona.enantira? " varsha tumbida nimma blog ge harshadaayaka shubhaashayagalu".

ಜಲನಯನ ಹೇಳಿದರು...

ಗುರು...ಅಭಿನಂದನೆಗಳು ನಿಮ್ಮ ಬ್ಲಾಗಿಗೆ ಒಂದು ವರ್ಷ ತುಂಬಿದ್ದಕ್ಕೆ...

ಸುಧೇಶ್ ಶೆಟ್ಟಿ ಹೇಳಿದರು...

ವರುಷ ಪೂರೈಸಿದ್ದಕ್ಕೆ ಕ೦ಗ್ರಾಟ್ಸ್.... ಸ್ವಲ್ಪ ಲೇಟಾಗಿ ವಿಶ್ ಮಾಡ್ತ ಇದ್ದೇನೆ :)

ಬ್ಲಾಗ್ ಪ್ರಾರ೦ಭಿಸಿದಾಗ ನನಗೂ ಹಲವು ಸ೦ಶಯಗಳಿದ್ದವು. ಆದರೆ ನಾನು ಅವರಿವರ ಬಳಿ ಕೇಳಿ ಅವನ್ನು ಬಗೆ ಹರಿಸಿಕೊ೦ಡಿದ್ದೇನೆ. ಅದರ ಬಗ್ಗೆ ಕೀಳರಿಮೆ ಬೇಡ. ನೀವು ನಿಮ್ಮ ಈ ಮೇಲ್ ಐ.ಡಿ. ಕೊಟ್ಟು ಅವರು ನಿಮ್ಮ ಕಾ೦ಟಾಕ್ಟ್ ಮಾಡಲಿ ಎ೦ದು ಕಾಯುವ ಬದಲು, ನೀವಾಗಿಯೇ ನಿಮ್ಮ ಪ್ರಶ್ನೆಗಳನ್ನು ಅವರಿಗೆ ತಿಳಿಸಿದರೆ ನಿಮಗೆ ಉತ್ತರ ದೊರೆಯುತ್ತದೆ ಅ೦ತ ನನ್ನ ಅಭಿಪ್ರಾಯ :)

ನಿಮಗೆ ಏನಾದರೂ ಸ೦ಶಯಗಳಿದ್ದಲ್ಲಿ ನನ್ನನ್ನು ಕೇಳಿ. ನನಗೆ ಗೊತ್ತಿದ್ದರೆ ಖ೦ಡಿತಾ ತಿಳಿಸುತ್ತೇನೆ.

ಹೀಗೆ ಬರೆಯುತ್ತಿರಿ... ಉತ್ತಮ ಬರಹಗಳು ನಿಮ್ಮ ಲೇಖನಿಯಿ೦ದ ಹರಿಯುತ್ತಿರಲಿ.

ಗುಡ್‍ಲಕ್ ಗುರು....d

Shashi jois ಹೇಳಿದರು...

ನಿಮ್ಮ ಬ್ಲಾಗ್ ಗೆ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ನನ್ನ ಶುಭಾಶಯಗಳು.
ಹೇಳುವವರು ಏನಾದರು ಹೇಳಲಿ ಅದಕ್ಕೆಲ್ಲ ತಲೆ ಕೆಡಿಸಿ ಕೊಳ್ಳದೇ ನಮ್ಮಪಥದಲ್ಲಿ ನಾವು ಚಲಿಸಿದರೆ ಒಳ್ಳೇದು ಅನ್ನೋದೇ ನನ್ನ ಭಾವನೆ..
ನಿಮ್ಮ ಬರವಣಿಗೆ ಹೀಗೆಯೇ ಮುಂದುವರೆಯಲಿ

ವಸಂತ್ ಹೇಳಿದರು...

ಮೊದಲನೇ ವರ್ಷದ ಸಂಭ್ರಮಕ್ಕೆ ಹಾರ್ದಿಕ ಶುಭಾಶಯಗಳು ಕೋರುತ್ತೇನೆ....

ವಿಚಲಿತ... ಹೇಳಿದರು...

ಸೀತಾರಾಮ. ಕೆ. / SITARAM.K.,

ಸದಾಕಾಲ ನಿಮ್ಮಂತಹವರ ಸಹಕಾರವಿದ್ದರೆ ಮಿನುಗುತ್ತಲೇ ಇರುತ್ತದೆ..
ಪ್ರತಿಕಿಯೆಗೆ ಧನ್ಯವಾದಗಳು..

ವಿಚಲಿತ... ಹೇಳಿದರು...

ಸಾಗರದಾಚೆಯ ಇಂಚರ.,

ನಿಮ್ಮಂತೆ ಚಿಂತಿಸಲು ಪ್ರಯತ್ನಿಸುತ್ತೇನೆ..
ಪ್ರತಿಕಿಯೆಗೆ ಧನ್ಯವಾದಗಳು..

ವಿಚಲಿತ... ಹೇಳಿದರು...

ದಿವ್ಯಶ್ರೀ...,

ನಿಮ್ಮ ಸಹಕಾರ ಹೀಗೆಯೇ ಇರಲಿ..
ಪ್ರತಿಕಿಯೆಗೆ ಧನ್ಯವಾದಗಳು..

ವಿಚಲಿತ... ಹೇಳಿದರು...

ಸಹನಾ..,
ಹೀಗೆಯೇ ಬಂದು ಪ್ರೋತ್ಸಾಹಿಸುತ್ತಿರಿ..
ಪ್ರತಿಕಿಯೆಗೆ ಧನ್ಯವಾದಗಳು..

ವಿಚಲಿತ... ಹೇಳಿದರು...

Subrahmanya.,

ನಿಮ್ಮ ಹಾರೈಕೆಗೆ ಚಿರಋಣಿ..
ಪ್ರತಿಕಿಯೆಗೆ ಧನ್ಯವಾದಗಳು..

ವಿಚಲಿತ... ಹೇಳಿದರು...

ಅರಕಲಗೂಡುಜಯಕುಮಾರ್ .,

ಎಷ್ಟೋ ದಿವಸಗಳ ನಂತರ ಇಲ್ಲಿಗೆ ಬಂದಿದ್ದೀರಿ.. ಸಂತೋಷ.
ನೀವು ಹೇಳಿದಂತೆ ಪ್ರಯತ್ನಿಸುತ್ತೇನೆ..
ಪ್ರತಿಕಿಯೆಗೆ ಧನ್ಯವಾದಗಳು..

ವಿಚಲಿತ... ಹೇಳಿದರು...

ಮನಸು.,

ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..
ಪ್ರತಿಕಿಯೆಗೆ ಧನ್ಯವಾದಗಳು..

ವಿಚಲಿತ... ಹೇಳಿದರು...

sunaath.,

ಹೀಗೆಯೇ ಪ್ರೋತ್ಸಾಹಿಸುತ್ತಿರಿ..
ಪ್ರತಿಕಿಯೆಗೆ ಧನ್ಯವಾದಗಳು..

ವಿಚಲಿತ... ಹೇಳಿದರು...

ವಿ.ಆರ್.ಭಟ್.,

ನಿಮ್ಮ ಪ್ರೋತ್ಸಾಹವಿರಲು ಬಂದೆ ಬರುತ್ತವೆ..
ಪ್ರತಿಕ್ರಿಯೆಗೆ ಧನ್ಯವಾದಗಳು..

ವಿಚಲಿತ... ಹೇಳಿದರು...

prabhamani nagaraja.,

ನನ್ನ ಪಯಣ ನಿರಂತರವಾಗಿರಲು ನಿಮ್ಮ ಸಹಕಾರವೂ ಬೇಕು..
ಪ್ರತಿಕ್ರಿಯೆಗೆ ಧನ್ಯವಾದಗಳು..

ವಿಚಲಿತ... ಹೇಳಿದರು...

ಶಿವಪ್ರಕಾಶ್.,

ನನ್ನ 'ಮನಸಿನಮನೆ'ಗೆ ಸ್ವಾಗತ.. ಹೀಗೆಯೇ ಬರುತ್ತಿರಿ..
ಪ್ರತಿಕ್ರಿಯೆಗೆ ಧನ್ಯವಾದಗಳು..

ವಿಚಲಿತ... ಹೇಳಿದರು...

ದೀಪಸ್ಮಿತಾ.,

ನೀವೂ ಕೂಡ ಹೀಗೆಯೇ ಬಂದು ಪ್ರೋತ್ಸಾಹಿಸುತ್ತಿರಿ..
ಪ್ರತಿಕ್ರಿಯೆಗೆ ಧನ್ಯವಾದಗಳು..

ವಿಚಲಿತ... ಹೇಳಿದರು...

Pradeep Rao.,

ಇನ್ನೂ ಹೆಚ್ಚಿನ ಪೋಸ್ಟ್ ಮಾಡಲು ಪ್ರಯತ್ನ ಮಾಡುತ್ತೇನೆ..
ಪ್ರತಿಕ್ರಿಯೆಗೆ ಧನ್ಯವಾದಗಳು..

ವಿಚಲಿತ... ಹೇಳಿದರು...

ಕಲರವ.,

ನಿಮ್ಮ ಮಾತಿನ ಸಮಾಧಾನ ಹಿಡಿಸಿತು..
ಪ್ರತಿಕ್ರಿಯೆಗೆ ಧನ್ಯವಾದಗಳು..

ವಿಚಲಿತ... ಹೇಳಿದರು...

ಜಲನಯನ.,

ಹೀಗೆಯೇ ಸಹಕಾರ ನೀಡುತ್ತಿರಿ..
ಪ್ರತಿಕ್ರಿಯೆಗೆ ಧನ್ಯವಾದಗಳು..

ವಿಚಲಿತ... ಹೇಳಿದರು...

ಸುಧೇಶ್ ಶೆಟ್ಟಿ.,

ತಡವಾದರೂ ಪರವಾಗಿಲ್ಲ ಬಂದಿರಲ್ಲ ಅದೆ ಸಂತೋಷ..
ನಾನು ನೀವು ಹೇಳಿದಂತೆ ನೇರವಾಗಿ ಅವರಿಗೆ ಪ್ರಶ್ನೆಯನ್ನೇ ತಿಳಿಸಿದ್ದೇನೆ.. ಆದರೂ ಪ್ರತಿಕ್ರಿಯೆ ಸಿಕ್ಕಿಲ್ಲ..
ಕೆಲವರ ಇ ಮೇಲ್ ವಿಳಾಸ ತಿಳಿಯದೆ ಇರುವುದರಿಂದ ಸ್ವಲ್ಪ ಕಷ್ಟವಾಗುತ್ತಿದೆ..
ಇನ್ಮುಂದೆ ನಿಮಗೆ ತಿಳಿಸುತ್ತೇನೆ.. ಪ್ರೋತ್ಸಾಹ ನೀಡುತ್ತಿರುವುದಕ್ಕೆ ಖುಷಿಯಾಯಿತು..
ಪ್ರತಿಕ್ರಿಯೆಗೆ ಧನ್ಯವಾದಗಳು..

ವಿಚಲಿತ... ಹೇಳಿದರು...

Shashi jois.,

ನಿಮ್ಮ ಭಾವನೆ ಒಪ್ಪಿಕೊಳ್ಳುವ ಮಾತೇ ಸರಿ..
ಪ್ರತಿಕ್ರಿಯೆಗೆ ಧನ್ಯವಾದಗಳು..

ವಿಚಲಿತ... ಹೇಳಿದರು...

ವಸಂತ್ .,

ನಿಮ್ಮ ಸಹಕಾರ ಹೀಗೆಯೇ ಇರಲಿ..
ಪ್ರತಿಕ್ರಿಯೆಗೆ ಧನ್ಯವಾದಗಳು..

ಮನಮುಕ್ತಾ ಹೇಳಿದರು...

ಮು೦ದೆಯು ಅನೇಕ ಚೆ೦ದದ ಬರಹಗಳ ಬರುತ್ತಿರಲಿ.
ಶುಭವಾಗಲಿ.

ವನಿತಾ / Vanitha ಹೇಳಿದರು...

ಶುಭಾಶಯಗಳು:)

Related Posts Plugin for WordPress, Blogger...