[ಎಂದೋ ಬರೆದಿದ್ದ ಈ ಮಳೆಹನಿಕವನವನ್ನು(ನನ್ನ ಪ್ರಕಾರ ಅಷ್ಟೇನೂ ಗಂಧವಿಲ್ಲದ...) ಇಂದು ನಿಮ್ಮ ಮುಂದಿಡುತ್ತಿದ್ದೇನೆ...]

ಬಿಸಿಲ ಝಳದಲಿ ನಿಂತು
ಬಿರಿದ ನೆಲದಲಿ ಕುಂತು
ಆಕಾಶವನ್ನೇ ದಿಟ್ಟಿಸುತ್ತಿದ್ದ
ಗುಳಿಹೋದ ಕಣ್ಣುಗಳೀಗ
ಛಾವಣಿಯ ನೆರಳಲಿ
ಬಲು ಸಂತಸದಿ
ಕಣ್ಮುಚ್ಚಿ ವಿಶ್ರಮಿಸುತ್ತಿವೆ..
ಕಾಡಿನಲ್ಲಿ ಕಾಲಿಡಲು
ಬಿರಿಬಿಸಿಲ ಬೇಗೆಯಲಿ
ಉದುರಿಹೋದ ಒಣ ಎಲೆಗಳು
ತೂರಿ ಹಾರಾಡುತ್ತಿದ್ದವು ಅಂದು
ಕಾಡಿನಲ್ಲಿ ನಡೆದಾಡಲು
ಬೀಸುವ ಸುಯ್ಯನೆ ಗಾಳಿಲಿ
ಚಿಗುರೆಲೆಗಳಲ್ಲಿ ಅಡಗಿರುವ ಹನಿಗಳು
ತಂಪನೆರಚುತ್ತಿವೆ ಇಂದು..
ಹಳ್ಳ-ತೊರೆಗಳು ತುಂಬಿ ಹರಿದು
ಮನದಲೂ ಕನಸ ಕೋಡಿ ಹೊಡೆದಿದೆ
ಹರುಷದ ಮಳೆ ಬಂದು..
ಬಿಸಿಲ ಬೇಡವೆಂದಿದ್ದ ಜೀವಗಳೆಲ್ಲ
ಮಳೆಯ ಚುಮುಚುಮುಚಳಿಗೆ
ಎಳೆಬಿಸಿಲು ಕಾಯಲು
ಹಾತೊರೆದು ಮೈಮುರಿದು ಕಾದಿವೆ..
ಒಣಭೂಮಿಗೆ ಬಾಯಾಕಿ
ಎಣಗುತ್ತಿದ್ದ ದನ-ಕರುಗಳು
ಚಿಗುರಿದ ಗರಿಕೆಲಿ ಕುಳಿತ
ಮಳೆಹನಿ ಸೋಕಲು
ಮುಸಿಮುಸಿ ನಕ್ಕು ಕುಣಿಯುತ್ತಿವೆ..
ಬಿರಿಬಿಸಿಲ ಲೆಕ್ಕಿಸದೆ ಓಡಾಡುತ್ತಿದ್ದ ಮಕ್ಕಳು
ಜಾರಿ ಬೀಳುವೆವೆಂಬ ಭಯದಿ
ಎಚ್ಚರಿಕೆಯ ಆಟವಾಡುತ್ತಿವೆ..
ಅಂತೂ ಇಂತೂ ಮಳೆ ಬಂದಿದೆ
ಮನ ತುಂಬಿ ಹರಿದಿದೆ..
~-~
32 ಕಾಮೆಂಟ್ಗಳು:
ಇಂತಹ ಚಂದದ ಕವನವನ್ನು ಪ್ರಕಟಿಸದೆ ಇಷ್ಟು ದಿನ ಬಿಟ್ಟಿದ್ದೇಕೆ?
ಹಾಯ್,
ನಿಮ್ಮ ಕವಿತೆ ಆಮಗುವಿನ ಮುದ್ದಾದ ನಗುವಿನಷ್ಟೇ
ಚೆಂದಾಗಿದೆ.
nijakku tumba tumba chennagide kavana.. :):)
ಕವನ ಚೆನ್ನಾಗಿದೆ. ಆದರೆ ಮಳೆಯಿಲ್ಲದ ಈ ಕಾಲದಲಿ ಪ್ರಕಟಿಸಿ ಹೊಟ್ಟೆ ಉರಿಸಿದ್ದೀರ :(
ಅಧ್ಬುತವಾದ ಕವನ. ತಮ್ಮ ಮಳೆಯ ಅಭಿವ್ಯಕ್ತಿ ಸಂಕೇತಗಳು ಮನವನ್ನು ಮುದಗೊಳಸಿದವು. ಚೆಂದದ ಕವನ.
ಸುಂದರ ಕವನ ..
ಅಂತೂ ಬಂತು ಮಳೆ .. ತಂಪಾದಳು ಇಳೆ.
ಉದ್ದಕ್ಕೆ ಹಾಗೆ ಓದಿಸಿಕೊ೦ಡು ಹೋಯಿತು ಕವನ... ತು೦ಬಾ ಚೆನ್ನಾಗಿ ಬರೆದಿದ್ದೀರ...ಇಷ್ಟ ಆಯಿತು
ಸುಂದರ ಕವನ
ಮಗುವಿನ ನಗೆಯನ್ನು ಮೀರಿಸುವಂತಿದೆ
e kavanada mukantara gottagutte eaga neevu tumba khushiyagiddira anta.yavaglu hege naguttiri.kavana antu tumba chennagide excellent.matte nimma jeevanadalli a baragalada baduku barade irli anta kelkotini.
ಬೇಸಿಗೆಯ ಮೊದಲ ಮಳೆಯ ವಿವಿಧ ರೂಪಾವತಾರದ ದರ್ಶನ..ಚನ್ನಾಗಿದೆ ನಿಮ್ಮ ಕವನದ ಮೂಲಕ ಹರಿದುಬಂದ ರೀತಿ...ಗುರು.
kavana sundaravaagi barediddeeri...
ಚೆನ್ನಾಗಿದೆಯಲ್ರೀ. ಗಂಧವಿಲ್ಲ ಅಂತ ಯಾಕೆ ಬೇಸರ?
ಮಳೆ ಬಂದರೆ ಹಾಗೆ ಮನಸ್ಸಿಗೂ ಏನೋ ಒಂದು ಖುಷಿ ಕೊಟ್ಟು ಹೋಗುತ್ತೆ ಅಲ್ವ..?
ನಿಮ್ಮವ,
ರಾಘು.
ಇಳೆಗೆ ಭರದಿ೦ದ ಬೀಳುತ್ತಿರುವ ಮಳೆ ಹೊರಗೆ..
ಬೆಳಗಿನಿ೦ದ ಮುಗಿಯದ ಕಛೇರಿಯ ಕೆಲಸ ಒಳಗೆ..
ಮನಸಿನ ಮನೆಯ ಬ್ಲಾಗ್ ತೆರೆದೆ ಕ೦ಪ್ಯೂಟರಿನೊಳಗೆ..
ಹರುಷದ ಹನಿಗಳು ಮುದದಿ೦ದ ಹರಿದವು ನನ್ನೆಡೆಗೆ..
ಶುಭಾಶಯಗಳು
ಅನ೦ತ್
ಸೊಗಸಾದ ಕವನ...ಮುದ್ದಾದ ಮಗುವಿನ ಚಿತ್ರ..ಹಿಡಿಸಿತು.
nimma kavana sundaravaagide..maleya varnane sigasaagide...dhanyavaadagalu...
sunaath,
ಎಲ್ಲದಕ್ಕೂ ಸಮಯ ಕೂಡಿಬರಬೇಕಲ್ವ.. ಅದಕ್ಕೆ ತಡವಾಯ್ತು.
ಕನಸು,
ಹೌದಾ..
ತುಂಬಾ ಧನ್ಯವಾದಗಳು..
Snow White,
ಧನ್ಯವಾದಗಳು..
ಭಾಶೇ,
ನಿಮಗೆ ಮಳೆ ಇರದೇ ಇಲ್ದೆ ಇರಬಹುದು.. ಇಲ್ಲಿ ಸುರಿತಾನೆ ಇದೆ.. ಅದಕ್ಕೆ ಪ್ರಕಟಿಸಿದೆ..
ಧನ್ಯವಾದಗಳು..
ಸೀತಾರಾಮ. ಕೆ. / SITARAM.K ,
ಧನ್ಯವಾದಗಳು..
shridhar,
ಹೌದಲ್ವ..
ಧನ್ಯವಾದಗಳು..
ಸುಧೇಶ್ ಶೆಟ್ಟಿ ,
ಧನ್ಯವಾದಗಳು..
ಸಾಗರದಾಚೆಯ ಇಂಚರ ,
ಧನ್ಯವಾದಗಳು..
ದಿವ್ಯಶ್ರೀ.. ,
ನಿಮ್ಮ ಮಾತಿಗೆ ಏನು ಹೇಳಬೇಕೋ ಗೊತ್ತಾಗ್ತಿಲ್ಲ..
ಯಾಕಂದ್ರೆ ನನ್ನ ಈ ಕವನದಲ್ಲಿ ಯಾವ ರೀತಿ ನೋಡಿದರೂ ನನ್ನ ಮನಸಿನ ಪರಿಸ್ಥಿತಿ ಅರ್ಥ ಆಗೋಲ್ಲ..ಅಂತಹದರಲ್ಲಿ ನೀವು ಹೇಗೆ ನಾನು ಸಂತೋಷವಾಗಿದೀನಿ ಅಂತೀರಾ?
ಹೋಗ್ಲಿ.. ಹೇಗೋ ಅಂದುಕೊಂಡಿರಿ.. ಆದ್ರೆ ಅದು ತಪ್ಪು.. ನಾನು ಮೊದಲಿಗಿಂತ ಹೆಚ್ಚು ನೋವಲ್ಲಿದೀನಿ..
ನಿಮಗೆ ಗೊತ್ತು ನನ್ನ ಸಂತೋಷ ಎಲ್ಲಿದೆ.. ಅಂತ??
ಒಂದಂತು ತಿಳಿದಿರಲಿ..
sick of crying
tired of trying
yeah i am smiling
but inside i am dying..
ಈ ಸಾಲುಗಳು ನಂಗೆ ತುಂಬಾ ಹೊಂದಾಣಿಕೆ ಆಗ್ತವೆ.
ಧನ್ಯವಾದಗಳು..
ಜಲನಯನ,
ಧನ್ಯವಾದಗಳು..
ಚುಕ್ಕಿಚಿತ್ತಾರ,
ಧನ್ಯವಾದಗಳು..
Deepasmitha,
ಅಷ್ಟೇನೂ ಸೊಗಸಾದ ಪದಪುಂಜ ಉಪಯೋಗಿಸಿಲ್ಲ ಅಂತ ಹಾಗನ್ಸಿತ್ತು..
ಧನ್ಯವಾದಗಳು..
Raghu,
ಹೌದು.. ಖಂಡಿತ.
ಧನ್ಯವಾದಗಳು..
ಅನಂತರಾಜ್,
ನನ್ನ 'ಮನಸಿನಮನೆ'ಗೆ ಸ್ವಾಗತ..
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು..
ಮನಮುಕ್ತಾ,
ಧನ್ಯವಾದಗಳು..
ashokkodlady,
ಧನ್ಯವಾದಗಳು..
ಕಾಮೆಂಟ್ ಪೋಸ್ಟ್ ಮಾಡಿ