ಕನ್ನಡಚಿತ್ರಗಳು v/s ಕನ್ನಡಚಿತ್ರರಂಗ


ಈ ಲೇಖನ ನೋಡಿ, "ಸಣ್ಣ ಬಾಯಲ್ಲಿ ದೊಡ್ಡ ಮಾತು","ದೊಡ್ಡೋರ ಇಚಾರ ಸಣ್ಣವರಿಗೆ ಯಾಕೆ.." ಅಂತ ಅನ್ಕೊತಿರೆನೋ..?
ಯಾಕಂದ್ರೆ ನಂಗೂ ಕೂಡ ಒಂದೊಂದ್ ಸಲ 'ನಾನು ಮುಚ್ಕಂಡು ನನ್ ಕೆಲಸ(ಓದೋದು) ಏನಾಯ್ತೋ ಅದ್ ಮಾಡ್ದೆ ಈ ವಿಚಾರಕ್ಕ್ಯಾಕ್ ಬಂದೆ' ಅಂತ ಅನ್ಸುತ್ತೆ..
ನಾನು ಈಗ ಕನ್ನಡ ಚಲಚಿತ್ರರಂಗದ(ಅಬ್ಬಾ!!) ಬಗ್ಗೆ ನಂಗ್ ತಿಳ್ದಷ್ಟು ವಿಷಯನ ಇಟ್ಕಂಡು ವಿಮರ್ಶೆ ಮಾಡ್ತೀನಿ.. ತಪ್ಪಿದ್ದರೆ ದಯವಿಟ್ಟು ಮನ್ನಿಸಿ..
"ಕನ್ನಡ ಚಿತ್ರರಂಗ 'ಗಂಧವಿಲ್ಲದ ಗಂಧದಮರ' ದಂತೆ ದೀನ ಸ್ಥಿತಿ ತಲುಪಿದೆ..
ಕೆಲವರು ರಾಜಕೀಯ ಹಾಗೂ ಚಿತ್ರರಂಗ ಎಂಬ ಎರಡೂ ದೋಣಿಗಳ ಮೇಲೂ ಕಾಲಿಟ್ಟು ಪಯಣಿಸುತ್ತಿದ್ದಾರೆ..
ನಟನೆಯನ್ನೇ ಉಸಿರಾಗಿಸಿಕೊಂಡಿದ್ದ ಕೆಲವು ಅಮೋಘ ನಟರು-ನಿರ್ದೇಶಕರು ಚಿತ್ರರಂಗವನ್ನು ಬಿಟ್ಟುಹೋಗಿರುವುದು ತುಂಬಲಾರದ ನಷ್ಟವಾಗಿದೆ..
ಇತ್ತೀಚಿಗೆ ದಿನಕ್ಕೊಬ್ಬರಂತೆ ನಟರು(ನಟನೆಯ ಗಂಧವೇ ಇಲ್ಲದವರು) ಉಧ್ಭವ ಆಗುವುದರ ಮೂಲಕ ಚಿತ್ರರಂಗವನ್ನು ಹಾಳುಗೆಡವುತ್ತಿದ್ದಾರೆ..
ಒಂದು ಕಾಲದಲ್ಲಿ ಅದ್ಭುತ ಚಿತ್ರಗಳನ್ನು ನೀಡಿದ್ದ ಕೆಲವು ಸೃಜನಾಶೀಲ ನಿರ್ದೇಶಕರು ಇಂದು ಪ್ರೇಕ್ಷಕನನ್ನು ೨.೩೦ ಗಂಟೆಗಳ ಕಾಲ ಚಿತ್ರಮಂದಿರದಲ್ಲಿ ಹಿಡಿದಿಡಲು ಎಣಗಾಟ ನಡೆಸುತ್ತಿದ್ದಾರೆ..
ಪ್ರತಿವಾರ ಚಿತ್ರಗಳು ತೆರೆ ಕಾಣುತ್ತಿದ್ದರೂ ಒಂದು ಚಿತ್ರವೂ ನೆಲೆನಿಲ್ಲದೆ ಬಂದಷ್ಟೇ ಬಿರುಸಾಗಿ ಹೋಗುತ್ತಿದೆ.. ಇತ್ಯಾದಿ..
ಹಲವಾರು ತಪ್ಪುಗಳನ್ನು ಪದೇ ಪದೇ ಮಾಡುತ್ತಾ ಕನ್ನಡ ಚಿತ್ರವೆಂದರೆ ಪ್ರೇಕ್ಷಕನಿಗೆ ಅಲರ್ಜಿ ಎನಿಸುವ ಮಟ್ಟಿಗೆ ಚಿತ್ರರಂಗ ಹೊಲಸಾಗಿ ಬೆಳೆದಿದೆ..ಇದು ಬಹುಶಃ ಎಲ್ಲರಿಗೂ ತಿಳಿದ ವಿಷಯವೇ."
ಇಂತಹ ಸಮಯದಲ್ಲಿ ಚಿತ್ರರಂಗದ ಕೀರ್ತಿಯನ್ನು ಸ್ವಲ್ಪವಾದರೂ ಹೆಚ್ಚಿಸಲು ಬರುತ್ತಿರುವ ಕೆಲವು ಚಿತ್ರಗಳು ''ಭೂಮಿಯಿಂದ ಮೊಳೆತು ಮೇಲೆದ್ದು ಸೂರ್ಯನಿಗೆ ಮುಖ ಮಾಡುವಷ್ಟರಲ್ಲೇ ಕತ್ತು ಮುರಿದು ಬಿದ್ದಂತೆ.." ಪ್ರೇಕ್ಷಕನಿಗೆ ತಲುಪುವಷ್ಟರಲ್ಲೇ ಮರೆಯಾಗುತ್ತಿವೆ.. ಅಂತಹ ಚಿತ್ರಗಳ ಬಗ್ಗೆ ಒಂದೆರಡು ಮಾತನಾಡಲು ಇಷ್ಟ ಪಡುತ್ತೇನೆ..;

"ದಿಲ್ದಾರ":

ಕೇವಲ ಮಚ್ಚು-ಲಾಂಗು,ರೌಡಿಸಂ,ಕಣ್ಣನ್ನು ಹುರಿಗೊಳಿಸುವ ವಿಚಿತ್ರ ಪ್ರೇಮ,ತಂಪೇ ಇಲ್ಲದ ಮಮತೆ-ವಾತ್ಸಲ್ಯ-ಸ್ನೇಹ-ಪ್ರೀತಿ,ಕೇವಲ ಅಂಗಾಂಗ ಪ್ರದರ್ಶನ,..ಹೀಗೆ ಅಸಹ್ಯ ವಿಷಯಗಳನ್ನೊಳಗೊಂಡ ಚಿತ್ರಗಳೇ ಇತ್ತೀಚಿಗೆ ಬರುತ್ತಿದ್ದ ಈ ಕಾಲದಲ್ಲಿ ಒಂದು ಸುಂದರ ಸೊಗಸಾದ(ಸ್ವಮೇಕ್) ಚಿತ್ರ :'ದಿಲ್ದಾರ' ಎಂಬ ತಲೆಬರಹದಲ್ಲಿ 'ನಾನಿನ್ನ ಹುಟ್ಸು ಅಂತ ಕೇಳಿದ್ನ..? ಆದ್ರು ಬೇಜಾರಿಲ್ಲ...!' ಎಂಬ ವಿಶೇಷ ತಲೆಬರಹದಡಿಯಲ್ಲಿ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿತ್ತು..
ನನ್ನ ಜೀವನದಲ್ಲಿ ನಾನು ಕಂಡ ಉತ್ತಮ,ಹೃದಯಸ್ಪರ್ಶಿ ಭಾವನಾತ್ಮಕ ಚಿತ್ರ ಇದು. ಹುಣ್ಣಿಮೆಯ ಚಂದ್ರನಂತಿದ್ದ ಈ ಚಿತ್ರದಲ್ಲಿ ಒಂದೆರಡು ಕಂಡೂ ಕಾಣದಂತ ಒಂದೆರಡು ಕಪ್ಪು ಚುಕ್ಕಿಗಳಿದ್ದವು..
'ತಂದೆಯ ಅಲ್ಲದ ತಂದೆಯ ವಿಶೇಷ ಪ್ರೀತಿ,ಮುದ್ದಾದ ಸೋದರಿ ವಾತ್ಸಲ್ಯ,ನಮ್ಮದೇ ಸಂಸ್ಕೃತಿಯಲ್ಲಿ ಕಾಣಿಸಿಕೊಂಡಿದ್ದ ಸುಸಂಸ್ಕೃತ ನಾಯಕಿಯ ಮೌನಮಾತು,ವಿಶೇಷವಾಗಿ ಕಾಣುವ ಅನಾಥನಾದರೂ ತಂದೆ ಪ್ರೀತಿ ಪಡೆದ ನಾಯಕ,ಭಾವುಕ ಸಂಭಾಷಣೆಗಳು,ತಂಪಾದ ದೃಶ್ಯಗಳು-ಹಾಡುಗಳು,ತುಸು ರಾಜಕಾರಣ(ಅವಶ್ಯಕವಿಲ್ಲ),ದುರಂತ ಮುಕ್ತಾಯ..' ಇಷ್ಟು ವಿಷಯಗಳನ್ನು ಹೊಂದಿದ್ದ ನವಿರಾದ ಈ ಚಿತ್ರಕ್ಕೆ ಪತ್ರಿಕೆಗಳಲ್ಲಿ ಉತ್ತಮ ವಿಮರ್ಶೆಯ ಬರಹಗಳು ಬಂದಿದ್ದೂ ಸಹ ಪ್ರೇಕ್ಷಕ ಚಿತ್ರತಂಡಕ್ಕೆ ಬೇಸರಗೊಳಿಸಿದ್ದ..
ಪರಿಣಿತರೆ ಒಳ್ಳೆ ಚಿತ್ರ ಕೊಡಲಾಗದ ಈ ಸಂದರ್ಭದಲ್ಲಿ ಹೊಸಮುಖಗಳ ಈ ಚಿತ್ರದ ಬಗ್ಗೆ ಪ್ರೇಕ್ಷಕನಿಗೆ ಅರಿವೇ ಇಲ್ಲವಾಯಿತೇನೋ./
ಎಲ್ಲೂ ಬಳಸಿರದ ದುಬಾರಿ ವಿಶೇಷ ಛಾಯಾಗ್ರಹಣವನ್ನು ಛಾಯಾಗ್ರಾಹಕ ಈ ಚಿತ್ರದಲ್ಲಿ ಬಳಸಿದ್ದುದು ಈ ಚಿತ್ರದ ಒಂದು ವಿಶೇಷ..
ಈ ಚಿತ್ರದ ವಿಷಯದಲ್ಲಿ ನನಗಂತೂ ತುಂಬಾ ಬೇಸರವಾಯಿತು..
ಆದರೂ ಆತ್ಮವಿಶ್ವಾಸ ಕಳೆದುಕೊಳ್ಳದ ನಿರ್ದೇಶಕ ಕೇವಲ ಪತ್ರಿಕೆ ವಿಮರ್ಶೆಗಳಿಗೆ ಖುಷಿಪಟ್ಟು ಇಂತಹುದೇ ಇನ್ನೊಂದಿಷ್ಟು ಕಥೆಗಳನ್ನು ಜೋಳಿಗೆಯಲ್ಲಿ ಇಟ್ಟುಕೊಂಡು ಪ್ರಯೋಗಕ್ಕೆ ಮುಂದಾಗುತ್ತಿದ್ದಾನೆ..
ನಂತರ ಬಂದ 'ನಾನು ನನ್ನ ಕನಸು' ಕೂಡ ಉತ್ತಮ ಚಿತ್ರವಾಗಿದ್ದರೂ ಅದು 'ರಿಮೇಕ್' ಚಿತ್ರವಾದ್ದರಿಂದ ನಾನು ಅದರ ಬಗ್ಗೆ ಮಾತನಾಡಲೂ ಇಷ್ಟ ಪಡುವುದಿಲ್ಲ..
ಸ್ವಲ್ಪ ಹಿಂದೆ ಹೋಗೋಣ...


~-~

13 ಕಾಮೆಂಟ್‌ಗಳು:

sunaath ಹೇಳಿದರು...

ಕೆಲವು ಚಿತ್ರಗಳ ಬಗೆಗೆ ಒಳ್ಳೆಯ ಮಾಹಿತಿ ನೀದಿದ ನಿಮಗೆ ಧನ್ಯವಾದಗಳು.

ಸುಧೇಶ್ ಶೆಟ್ಟಿ ಹೇಳಿದರು...

nimma abhipraaya thumba sariyaagide... kelavu cinemagaLu chennagiddaroo soluttiruvudu besarada sangathi :(

Subrahmanya ಹೇಳಿದರು...

ಚಲನಚಿತ್ರಗಳ ಮಾಹಿತಿಯ ಜೊತೆಗೆ ನಿಮ್ಮ ಅವಲೋಕನವನ್ನು ಓದಿ ಮತ್ತಷ್ಟು ತಿಳಿದುಕೊಂಡತಾಯಿತು. ಧನ್ಯವಾದಗಳು.

ಸೀತಾರಾಮ. ಕೆ. / SITARAM.K ಹೇಳಿದರು...

nice info1

ಭಾಶೇ ಹೇಳಿದರು...

ಎಷ್ಟು ಕಳಕಳಿ, ಕಾಳಜಿ ಇದ್ದರೇನು ನಮ್ಮ ನಿಮ್ಮಲ್ಲಿ?
ಹದಗೆಡುವುದು ಹದಗೆಡುತ್ತಲೇ ಇದೆ :(

ಭಾಶೇ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಸಾಗರದಾಚೆಯ ಇಂಚರ ಹೇಳಿದರು...

ಒಳ್ಳೆಯ ಮಾಹಿತಿ ನೀಡಿದ್ದಿರಿ

ಸಾಗರಿ.. ಹೇಳಿದರು...

ನಿಮ್ಮ ಮಾತು ನಿಜ,,ಕನ್ನಡ ಚಿತ್ರಗಳನ್ನು ನೋಡೋಕೆ ಮನಸ್ಸೇ ಬರ್ತಿಲ್ಲ, ಶಾಸ್ತ್ರಿ ಫಿಲ್ಮ್ ನೋಡಿದ ಮೇಲಿಂದ. ಪೊಳ್ಳು ಕತೆಗಳು ಇಲ್ಲಾ ಅನ್ಯ ಭಾಷೆಯಿಂದ ಸಾಲ ತಂದ ಕತೆಗಳು.

ಮನದಾಳದಿಂದ............ ಹೇಳಿದರು...

ರುಚಿಯೇ ಇಲ್ಲದ ಚಿತ್ರಗಳನ್ನು ನೋಡಿ ಬೇಸತ್ತ ಜನಗಳಿಗೆ ಒಳ್ಳೆಯ ಚಿತ್ರಗಳೂ ಸಪ್ಪೆಯಾಗಿ ಕಂಡಿರುವುದರಲ್ಲಿ ಆಶರ್ಯವಿಲ್ಲ!
ಒಳ್ಳೆಯ ಮಾಹಿತಿ.

!! ಜ್ಞಾನಾರ್ಪಣಾಮಸ್ತು !! ಹೇಳಿದರು...

sunaath,
ಸುಧೇಶ್ ಶೆಟ್ಟಿ,
Subrahmanya,
ಸೀತಾರಾಮ. ಕೆ. / SITARAM.K ,
ಸಾಗರದಾಚೆಯ ಇಂಚರ,
ಸಾಗರಿ..,
ಎಲ್ಲರಿಗೂ ಧನ್ಯವಾದಗಳು... ಹೀಗೆಯೇ ಬನ್ನಿ..

ಭಾಶೇ,
ಮನದಾಳದಿಂದ............,
ಅವರಿಗೆ ನನ್ನ 'ಮನಸಿನಮನೆ'ಗೆ ಸುಸ್ವಾಗತ..
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು..

ashokkodlady ಹೇಳಿದರು...

Kelavy chitragala maahitigala jothege nimma abhipraayavu chennagide..Nice one...Thanks..

- ಕತ್ತಲೆ ಮನೆ... ಹೇಳಿದರು...

ashokkodlady,

ಧನ್ಯವಾದಗಳು..

ಶ್ವೇತ ಹೇಳಿದರು...

nimma blog chennagide. neevu enguru blog odiddira gottilla alli chitragalannu ettangadi maduvudu parabhasha chitragalannu hakuvudakke ennuvudara bagge aneka lekhanagalu bandive nodi. enguru.blogspot.com

Related Posts Plugin for WordPress, Blogger...