ನಿಮ್ಮ ನಗುವ ನೆರಳಲಿ ನಾ..

!!ಜ್ಞಾನಾರ್ಪಣ ಮಸ್ತು!!


~.~

ಇಂದು ನನ್ನ ಬ್ಲಾಗ್ ಲೋಕದ ಪಯಣಕ್ಕೆ ಗುರುವಾದ ಜ್ಞಾನಮೂರ್ತಿ ಅವರ ಜನ್ಮದಿನ..
ಅವರಿಗೆ ಶುಭಾಷಯ ಹೇಳುತ್ತಾ ನನ್ನ ಮನಸಿನಮನೆಗೆ ಮತ್ತೆ ಬೆಳಕು ತೋರುತ್ತಿದ್ದೇನೆ..


ಆತುರವಸರದಲ್ಲಿ ಹುಟ್ಟಿದ ಸಾಲುಗಳು ಅವರಿಗಾಗಿ..

ನನ್ನ ಬಾಳಪಯಣದಲ್ಲಿ ಆಕಸ್ಮಿಕವಾಗಿ
ಪರಿಚಯವಾದವರು ನೀವು..
ಸಂತೆಯೊಳಗೆ ನಾ ದಿಕ್ಕು ತೋಚದೆ ಮರುಗಲಾಗಿ
ಸಂತನಂತೆ ಕಂಡವರು ನೀವು..

ಯಾರು ಅರ್ಥ ಮಾಡಿಕೊಳ್ಳದ
ನನ್ನ ಭಾವನೆಗಳಿಗೆ
ಜೀವ ತುಂಬಿದವರು ನೀವು..
ಸಂಬಂಧಿಗಳೇ ಪ್ರೀತಿಸಿದ
ಈ ಒಂಟಿಜೀವಕೆ
ತುಸು ಪ್ರೀತಿ ತಂದವರು ನೀವು..

ಆಸರೆಯಿಲ್ಲದೆ ಜಾರಿ ಚೂರಾಗುತ್ತಿದ್ದ
ನನ್ನ ಕನಸುಗಳ ಕೈಹಿಡಿದು
ಕಾಪಾಡಿದವರು ನೀವು..
ನನ್ನೊಳಗೆ ಮತ್ತೆ
ಉತ್ಸಾಹ ಚಿಗುರೊಡೆಯಲು
ಕಾರಣರು ನೀವು..

ನಿಮ್ಮದೇ ಅದೆಷ್ಟೋ ಒತ್ತಡಗಳ ನಡುವೆಯೂ
ಬಿಡುವಾಗಿ ನನ್ನೊಡನೆ
ಭಾವನೆ ಹಂಚಿಕೊಂಡವರು ನೀವು..
ನನ್ನಲ್ಲಿ ಗುಪ್ತವಾಗಿದ್ದ ಬರವಣಿಗೆಯ
ಪ್ರತಿಭೆಗೆ ಜೀವತುಂಬಿ
ಲೇಖನಿ ಕೊಟ್ಟವರು ನೀವು..
ನನ್ನ ಪ್ರತಿಭೆ ಹೊರತರಲು
ಹೊಸದೊಂದು ಲೋಕ
ಪರಿಚಿಯಿಸಿದವರು ನೀವು..

ನಿಮ್ಮ ನಗುವ ನೆರಳಲಿ ನಾನಿರುವೆ..
ನೀವು ನೊಂದರೆ ನಾ ಬಾಡುವೆ...

ನಿಮ್ಮನ್ನು ಏನೆನ್ನಲಿ ನಾ..
ಈ ಪ್ರಶ್ನೆಗೆ ಹುಟ್ಟಲಾರದ ಉತ್ತರವೊಂದಿದೆ ಆತ್ಮೀಯರೇ..


ನಿಮಗೆ 'ಜನ್ಮದಿನದ ಹಾರ್ದಿಕ ಶುಭಾಷಯಗಳು..'
ನೀವು ನಗುನಗುತ ನೂರ್ಕಾಲ ಬಾಳಬೇಕು..
ದೈವವು ನಿಮಗೆ 'ಇಷ್ಟಾರ್ಥ ಸಿದ್ಧಿರಸ್ತು' ಎಂದು ಹರಸಲಿ..

ಕತ್ತಲಾಗಿರುವ ನಿಮ್ಮ 'ಬ್ಲಾಗು' ಬೆಳಗಲಿ ಎಂಬ ಆಸೆ..,
ಮಂಕಾಗಿರುವ ನಿಮ್ಮ ಆರ್ಕುಟ್,ಫೇಸ್ ಬುಕ್ ಗಳಲ್ಲಿ ನಗೆ ನೋಡಬೇಕೆಂಬ ಆಸೆ..


~.~

8 ಕಾಮೆಂಟ್‌ಗಳು:

sunaath ಹೇಳಿದರು...

ಬ್ಲಾಗ್ ಲೋಕಕ್ಕೆ ಬೇಗನೆ ಬನ್ನಿ. ನಿಮ್ಮನ್ನು ಕೈಹಿಡಿದು ನಡೆಯಿಸಿದ ಜ್ಞಾನಮೂರ್ತಿಗಳಿಗೆ ಶುಭಾಶಯಗಳು.

ಜಲನಯನ ಹೇಳಿದರು...

ಗುರು, ನಿಮ್ಮ ಲೇಖನ ಕೃಷಿ ಹೀಗೇ ಖುಷಿ ನೀಡುತ್ತಲಿರಲಿ ನಿಮಗೂ ಅದನು ಓದಿದ ನಮಗೂ...ಶುಭಂ.

prabhamani nagaraja ಹೇಳಿದರು...

ನಿಮಗೆ ದಾರಿ ದೀಪವಾದ ಜ್ಞಾನಮೂರ್ತಿಗಳಿಗೆ ಹುಟ್ಟಿದ ಹಬ್ಬದ ಶುಭಾಶಯಗಳು. ನಿಮ್ಮ ಮನದ ಭಾವಗಳನ್ನು ಚೆನ್ನಾಗಿ ಕವನಿಸಿದ್ದೀರಿ. ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಭೇಟಿ ಕೊಡಿ.

ವಿಚಲಿತ... ಹೇಳಿದರು...

Sunaath,
ಅಪರೂಪಕ್ಕೆ ಬರೆದಾಗಲೂ ಮರೆಯದೆ ಮೊದಲು ಬಂದು ಪ್ರತಿಕ್ರಿಯೆ ನೀಡಿದ್ದಕ್ಕೆ ಅನಂತ ಧನ್ಯವಾದಗಳು,ನಿಮ್ಮ ಸಹಕಾರ ಹೀಗೆ ಇರಲಿ.

ವಿಚಲಿತ... ಹೇಳಿದರು...

ಜಲನಯನ,
ಪ್ರತಿಕ್ರಿಯೆಗೆ ಧನ್ಯವಾದಗಳು,
ಎಲ್ಲರಿಗೂ ಶುಭವಾಗಲಿ

ವಿಚಲಿತ... ಹೇಳಿದರು...

ಪ್ರಭಾಮಣಿಯವರೇ,
ಪ್ರತಿಕ್ರಿಯೆಗೆ ಧನ್ಯವಾದಗಳು,
ಖಂಡಿತ ಆದಷ್ಟು ಬೇಗ ನಿಮ್ಮೆಲ್ಲರ ಬ್ಲಾಗುಗಳಿಗೆ ಬರುತ್ತೇನೆ

ashokkodlady ಹೇಳಿದರು...

ನಿಮ್ಮ ಗುರುವರ್ಯರಿಗೆ ಹುಟ್ಟುಹಬ್ಬದ ಶುಭಾಶಯಗಳು....ನಿಮ್ಮ ಕವನ ಚೆನ್ನಾಗಿದೆ.....ಇನ್ನು ಹೆಚ್ಚು ಹೆಚ್ಚು ಬರೀತಾ ಇರಿ....

ವಿಚಲಿತ... ಹೇಳಿದರು...

Ashokkodlady.,
ಪ್ರತಿಕ್ರಿಯೆಗೆ ಧನ್ಯವಾದಗಳು,

Related Posts Plugin for WordPress, Blogger...