ಕಾಡದಿರು ಪ್ರಭುವೆನ್ನ ನೊಂದಿರುವೆ ಸಾಕಷ್ಟು..

[ಬರೆಯಲೇನೂ ವಿಷಯವಿಲ್ಲದೆ ಬರೆದದ್ದು.. ]



ಈ ಲೇಖನ ಅವಶ್ಯಕವೋ ಅನಾವಶ್ಯಕವೋ ನನಗೆ ತಿಳಿದಿಲ್ಲ.. ಬರೀಬೇಕು ಅನಿಸಿತು ಬರೆಯುತ್ತಿದ್ದೇನೆ..
ನಾನು ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕಗಳನ್ನೇ ಪಡೆದೆನಾದರೂ ಯಾರ ಮಾತು ಕೇಳದೆ ಬಿ. ಎಸ್ಸಿ. ಆಯ್ಕೆ ಮಾಡಿಕೊಂಡದ್ದು ಎರಡನೇ ವಿಷಯ..
ಮೊದಲ ಸೆಮಿಸ್ಟರ್ ನಲ್ಲಿ ಯಾವುದೋ ಒಂದು ಕೆಲಸಕ್ಕೆ ಅರ್ಜಿ ಹಾಕಿದ್ದು ಆ ಕೆಲಸ ಸಿಕ್ಕೆ ಸಿಗುವುದೆಂಬ ಅಪೇಕ್ಷೆಯಿಂದ ಓದುವುದರ ಕಡೆ ಗಮನ ಬಿಟ್ಟಿದ್ದೆ.. ಆದರೆ ಕೆಲಸವೂ ಸಿಗಲಿಲ್ಲ.. ಓದುವುದರ ಕಡೆ ಗಮನ ಕೊಡದೆ ಇದ್ದುದರಿಂದ ಸುಮಾರಾಗಿ ಮಾತ್ರ ಅಂಕ ಗಳಿಸಲು (೬೦%) ಸಾಧ್ಯವಾಯ್ತು..
ಎರಡನೇ ಸೆಮಿಸ್ಟರ್ ನಲ್ಲಿ ಓದುವುದರ ಕಡೆ ಗಮನ ಹರಿಸಿದ್ದರೂ ವಯಸ್ಸಲ್ಲವೇ ಕೆಲವು ವಿಷಯಗಳು ಮನಸಿನ ಮೇಲೆ ದಾಳಿ ಮಾಡಿದ್ದವು.. ಆದರೂ ದೇವರ ಕೃಪೆಯಿಂದ ಮೊದಲ ಸೆಮಿಸ್ಟರ್ ಗಿಂತ ಹೆಚ್ಚು ಅಂಕ (೭೫%) ಗಳಿಸಲು ಸಾಧ್ಯವಾಯಿತು..
ಇನ್ಮುಂದೆ ಬೇರೆ ಕಡೆ ಗಮನ ಕೊಡದೆ ಓದುವುದರ ಕಡೆ ಹೆಚ್ಚು ಗಮನ ಕೊಡಬೇಕು ಎಂದುಕೊಂಡು ಮೂರನೇ ಸೆಮಿಸ್ಟರ್ ಆರಂಭ ಮಾಡಿದೆ.. ಅಂತೆಯೇ ಮೊದಮೊದಲು ಓದುವುದರ ಕಡೆ ಗಮನ ಹರಿಸಿ ಓದುತ್ತಲೇ ಇದ್ದೆ.. ನೂರೆಂಟು ಕನಸುಗಳನ್ನು ಕಟ್ಟಿದ್ದೆ..
ಕೆಲವು ದಿವಸಗಳ ನಂತರ ಇದ್ದಕ್ಕಿದ್ದಂತೆ ಓದುವುದರ ಕಡೆ ಗಮನ ಕಡಿಮೆಯಾಯಿತು.. ತರಗತಿಗಳಿಗೆ ಹೋಗಲು ಮನಸ್ಸು ಒಪ್ಪದಾಯಿತು.. ಓದು ಅಂತಲ್ಲ ಯಾವುದೇ ಬೇರೆ ವಿಷಯದ ಕಡೆಗೂ ಗಮನ ಇರದಾಯಿತು.. ನಿರುತ್ಸಾಹಿಯಾಗಿಬಿಟ್ಟೆ.. ಪ್ರತಿಯೊಂದಕ್ಕೂ ಕಾರಣ ಇರಲೇಬೇಕೆಂದು ಎಲ್ಲರಿಗೂ ಹೇಳುತ್ತಿದ್ದ ನನಗೇ ಈಗ ನನಗೆ ಉತ್ಸಾಹ ಕುಗ್ಗಿ ಹೋಗಲು ಕಾರಣ ತಿಳಿದುಬರುತ್ತಿಲ್ಲ..
ಮನಸ್ಸು ಏನೇನೋ ಹಳೆಯ ಕಹಿನೆನಪನ್ನು ಮೆಲುಕು ಹಾಕುತ್ತದೆ ಸದಾ..
ಈ ಹಿಂದೆ ನನ್ನ ಭವಿಷ್ಯದ ಬಗ್ಗೆ ನಾ ತೆಗೆದುಕೊಂಡ ಕೆಲವು ನಿರ್ಧಾರಗಳು ತಪ್ಪೆಂದು ಅರಿವಾಗುತ್ತಿವೆ..
ಹಳೆಯದೆಲ್ಲ ಕಹಿ ನೆನಪುಗಳು ಬೇಡ ಬೇಡವೆಂದರೂ ನನ್ನ ಮನದಂಗಳಕ್ಕೆ ಸತ್ತ ಭೂತಗಳನ್ನು ತಂದು ಬಿಸಾಡುತ್ತಿವೆ..
ನನ್ನ ಬದುಕೀಗ ಮುಳ್ಳಿನ ಹಾಸಿಗೆ ಮೇಲೆ ಮಲಗಿ ಶಾಂತಿಗಾಗಿ ಅತ್ತಿತ್ತ ಹೊರಳಾಡುತ್ತಿರುವಂತಾಗಿದೆ..
ಎಲ್ಲ ಸಂಬಂಧಗಳನ್ನು ಕಳಚಿಕೊಂಡು ಒಂಟಿಯಾಗಬೇಕು ಎನಿಸುತ್ತದೆ..
ಕೆಲವೊಮ್ಮೆ ದೇಹಕ್ಕೆ ಆತ್ಮದೊಂದಿಗಿರುವ ಬಂಧವನ್ನು ತೊರೆಯಬೇಕೆಂದು ಎನಿಸುತ್ತದೆ..
ಇಂಥ ಸಮಯದಲ್ಲಿ ಸಮಾಧಾನ ಹೇಳುವ ಜೀವಗಳೇ ಬಳಿ ಇಲ್ಲ.. ನಾನಿರುವುದು ಹಂಗಿಸುವ ಜೀವಗಳ ಎಡೆಯಲ್ಲಿ.. ಬಲಿಪಶು ಮಾಡುವವರ ಮಧ್ಯದಲ್ಲಿ.
ಹಲವಾರು ಉತ್ತರಗಳಿಲ್ಲದ ಪ್ರಶ್ನೆಗಳು ಪದೇ ಪದೇ ಕಾಡುತ್ತವೆ..
ಬ್ಲಾಗ್ ಕಡೆ ಬರಲು ಸಾಧ್ಯವಾಗುತ್ತಿಲ್ಲ..
ನನಗೇನಾಗಿದೆ ಅಂತ ಹೇಳೋಕೆ ನನಗೇ ಆಗುತ್ತಿಲ್ಲ..
ವಿದ್ಯಾಭ್ಯಾಸ ಮುಂದುವರೆಸಿ ಏನನ್ನಾದರೂ ಸಾಧಿಸುತ್ತೇನೆ ಎಂಬುದರ ಬಗ್ಗೆ ನಂಬಿಕೆಯೇ ಇಲ್ಲವಾಗಿದೆ.. ಓದುವುದರ ಬಗ್ಗೆ ಸಂಪೂರ್ಣ ಆಸಕ್ತಿ ಕುಗ್ಗಿಹೋಗಿದೆ..
ಇತ್ತೀಚೆಗಷ್ಟೇ ನಡೆದ ಪರೀಕ್ಷೆಯನ್ನು ಬಹಳ ಕೆಟ್ಟದಾಗಿ ಮಾಡಿದ್ದೇನೆ..
ಈ ಅಶಾಂತಿ ತುಂಬಿದ ಸಮಯದಲ್ಲಿ ಒಂದು ಹುದ್ದಗೆ ಅರ್ಜಿ ಆಹ್ವಾನ ಬಂದಿತ್ತು.
ಹೇಗಿದ್ದರೂ ಓದುವುದರ ಗಮನ ಕಡಿಮೆಯಿದೆ ಎಂದು ಈ ಕೆಲಸಕ್ಕೆ ಅರ್ಜಿ ಸಲ್ಲಿಸಿ ಸಿಕ್ಕೆ ಸಿಗುವುದೆಂಬ ನಂಬಿಕೆಯಿಂದಿದ್ದೇನೆ..
ಇದೇ ಡಿಸೆಂಬರ್ ೨ ರಿಂದ ಮೂರನೇ ಸೆಮಿಸ್ಟರ್ ಅಂತಿಮ ಪರೀಕ್ಷೆ ಇದ್ದು ನನ್ನ ತಯಾರಿ ಆರಂಭವಾಗೆ ಇಲ್ಲ..
ಒಟ್ಟಿನಲ್ಲಿ ಈ ವರ್ಷದ ಕೊನೆಯಲ್ಲಿ ನನ್ನ ಬದುಕು ಮಹಾತಿರುವು ಕಾಣಲಿದೆ.. ಹೊಸವರುಷಕ್ಕೆ ಹೊಸಬೆಳಕು ಬಾಳಿನಲ್ಲಿ ಮೂಡುವುದೋ ಇಲ್ಲವೋ ಕಾದು ನೋಡಬೇಕಾಗಿದೆ..
ಮತ್ತೆ ಉತ್ಸಾಹ ಮರುಕಳಿಸುವ ತನಕ ನಾನು ಇತ್ತ ಬರಲಾರೆನು ಕ್ಷಮಿಸಿ..
ಮರೆಯದಿರಿ..



-..-..-..-..-..-..-..-..-..-..-..-..-
ಪದೇ ಪದೇ ಕೇಳುವಂತೆ ನನ್ನ ಕಾಡುವ ಸಾಲುಗಳು :


ನಿನ್ನ ನೆರವಿಲ್ಲದೆಯೇ
ತೊಳಲಿರುವೆ ನೆಲದಲ್ಲಿ
ಚೇತನವನುದ್ಘರಿಸೋ ದೇವ ದೇವ
ಹಗಲಿರುಳು ನಿನ್ನೊಂದು
ಕೃಪೆಗಾಗಿ ಕಾದಿರುವೆ
ನಿನ್ನ ಕಂದನ ಸಲಹೋ ದೇವ ದೇವ
ನಿನ್ನ ನೆರವಿಲ್ಲದೆಯೇ
ತೊಳಲಿರುವೆ ನೆಲದಲ್ಲಿ

ಎನರ ಹಾ...ದಿಯ ನಂಬಿ
ನಾವೇ ತಾನುಲಿವಂತೆ
ಎನರ ಹಾ...ದಿಯ ನಂಬಿ
ನಾವೇ ತಾನುಲಿವಂತೆ
ಗುರಿಯಿಲ್ಲದಲೆದಿರುವೆ ನೆಲೆಯನರಸೀ..
ದಿವ್ಯಅಂಬಿಗ ನೀನು
ಬಂದೆನ್ನ ಪೊರೆಯ...ಯ್ಯ
ದಿವ್ಯಅಂಬಿಗ ನೀನು
ಬಂದೆನ್ನ ಪೊರೆಯ...ಯ್ಯ
ದೂರತೀರದ ಬಳಿಗೆ ನನ್ನ ನಡೆಸೀ..
ನಿನ್ನ ನೆರವಿಲ್ಲದೆಯೇ
ತೊಳಲಿರುವೆ ನೆಲದಲ್ಲಿ

ತೋರು ಶಾಂ..ತಿಯ ತಂದೆ
ನನ್ನ ಸೋ..ತಿರುವೆದೆಗೆ
ತೋರು ಶಾಂ..ತಿಯ ತಂದೆ
ನನ್ನ ಸೋ..ತಿರುವೆದೆಗೆ
ಭಕ್ತಿ-ಭಾವವ ಉಳಿದ ಶಕ್ತಿದೇವಾ..
ಕಾ...ಡದಿರು ಪ್ರಭುವೆನ್ನ
ನೊಂದಿರುವೆ ಸಾ...ಕಷ್ಟು
ಕಾ...ಡದಿರು ಪ್ರಭುವೆನ್ನ
ನೊಂದಿರುವೆ ಸಾ...ಕಷ್ಟು
ನಿನ್ನ ಅಭಯದ ಹಸ್ತ ನೀಡು ದೇವಾ..

ನಿನ್ನ ನೆರವಿಲ್ಲದೆಯೇ
ತೊಳಲಿರುವೆ ನೆಲದಲ್ಲಿ
ಚೇತನವನುದ್ಘರಿಸೋ ದೇವ ದೇವಾ..
ಹಗಲಿರುಳು ನಿನ್ನೊಂದು
ಕೃಪೆಗಾಗಿ ಕಾದಿರುವೆ
ನಿನ್ನ ಕಂದನ ಸಲಹೋ ದೇವ ದೇವಾ..
ನಿನ್ನ ನೆರವಿಲ್ಲದೆಯೇ..
~.~
ಒಂದೆರಡು ಸಾಲಿನಲ್ಲಿ:
'ಕಣ್ಣಿಗೇಳದೆ ನೋವು ನುಂಗುತ್ತ ಬಿಕ್ಕಳಿಸುವ ತುಟಿಗಳು..
ತುಟಿಗಳಿಗೆ ತಿಳಿಸದೇ ನೀರು ತುಂಬಿಕೊಳ್ಳುವ ಕಣ್ಣುಗಳು..
ಅವೆರಡರ ಗಮನಕ್ಕೂ ಕೊಡದೆ ಒಳಗೆ ನೋವು ನುಂಗಿ ಬಿರಿಯುತ್ತಿರುವ ಎದೆ..
ನನ್ನದೆ!!"
~.~
ಎ.ಕಾ.ಗುರುಪ್ರಸಾದಗೌಡ.

9 ಕಾಮೆಂಟ್‌ಗಳು:

ಸೀತಾರಾಮ. ಕೆ. / SITARAM.K ಹೇಳಿದರು...

khinnate madugattidde. adarinda horabanni. badukalli nava utsaaha ondi.

kaadidda nsaalugalante devana bedi hosa baanedege mukha maadi.

sunaath ಹೇಳಿದರು...

ಗುರುಪ್ರಸಾದರೆ,
ಖಿನ್ನತೆಯಿಂದ ನೀವು ಹೊರಗೆ ಬರಲೇ ಬೇಕು. ಓರ್ವ ಮನೋವಿಜ್ಞಾನಿಯಿಂದ ಸಲಹೆ ಪಡೆಯುವದು ಉತ್ತಮ ಕೆಲಸ. ನಾನೂ ಸಹ ಸಲಹೆ ಪಡೆದಿದ್ದೆ. It helped me.

Shashi jois ಹೇಳಿದರು...

ಗುರು ಖಿನ್ನತೆಯಿಂದ ಹೊರ ಬನ್ನಿ.,,ಓದಿನ ಕಡೆ ಗಮನ ಕೊಡಿ..ಮಾನವ ಮನಸ್ಸು ಮಾಡಿದರೆ ಸಾಧಿಸದೆ ಇರಲಾರ ..ನೀವು ಛಲ ತೊಟ್ಟು ಮುನ್ನುಗ್ಗಿ ಒಳ್ಳೆದಾಗುತ್ತೆ..

ಸಾಗರದಾಚೆಯ ಇಂಚರ ಹೇಳಿದರು...

ಇದೆಲ್ಲ ಬದುಕಿನಲ್ಲಿ ಇದ್ದದ್ದೇ
ಎಲ್ಲ ಮರೆತು ಬದುಕು ಸಾಗಲೇಬೇಕು
ಕಹಿ ನೆನಪುಗಳು ಬೇಕು ಬದುಕಿಗೆ
ಸಿಹಿ ನೆನಪುಗಳು ಇರಲಿ ಮನದ ಒಟ್ಟಿಗೆ

balasubramanya ಹೇಳಿದರು...

ನಿಮ್ಮ ಸಮಸ್ಯೆ ಸಮಸ್ಯೆಯೇ ಅಲ್ಲ . ಒಂದು ಅವಕಾಶ ಹೋದರೇನಂತೆ ನೂರು ಅವಕಾಶಗಳು ನಿಮಗಾಗಿ ಕಾದಿವೆ.ಮೊದಲು ಮನಸ್ಸಿನಲ್ಲಿರುವ ಕೀಳರಿಮೆ ಕಿತ್ತು ಹಾಕಿ .ಓದು ಜೀವನದಲ್ಲಿ ಬಹಳ ಮುಖ್ಯ ಯಾವುದೇ ಕಾರಣಕ್ಕೂ ಓದನ್ನು ಕೈಬಿಡಬೇಡಿ.ಇಂತಹ ಸನ್ನಿವೇಶಗಳು ಪ್ರತಿಯೊಬ್ಬರಿಗೂ ಬಂದಿವೆ ನಿಮಗೆ ಹೊಸದೇನಲ್ಲ , ಮೊದಲು ನಿಮ್ಮ ಸ್ನೇಹಿತರ ಗುಂಪನ್ನು ಅವಲೋಕಿಸಿಕೊಳ್ಳಿ ನಿಮ್ಮ ಮನಸಿಗಿಂತ ದೊಡ್ಡದು ಯಾವುದೂ ಇಲ್ಲ . ಬ್ಲಾಗಿನ ಎಲ್ಲಾ ಮಿತ್ರರ ಆಶಯವೂ ಇದೆ ಆಗಿದೆ.ನೀವು ಖಂಡಿತ ಸಾಧಿಸಿ ಒಳ್ಳೆಯ ಸಾಧನೆ ಮಾಡಿ ಸಮಾಜಕ್ಕೆ ಕೊಡುಗೆ ಯಾಗುತ್ತೀರಿ ಧೈರ್ಯವಾಗಿರಿ ನಿಮ್ಮ ಜೊತೆ ನಾವೆಲ್ಲಾ ಇದ್ದೇವೆ.

Pradeep Rao ಹೇಳಿದರು...

ನೀವು ಮಾಡಿರುವ ನಿರ್ಧಾರ ತುಂಬಾ ತಪ್ಪು.. ಜೀವನ ಬೆಳಗುವುದೋ ಅಥವ ಕುಗ್ಗುವುದೋ ಎಂಬುದು ಎಲ್ಲಾ ನಮ್ಮ ಮನಸ್ಸಿನ ಪ್ರಕಾರನಡೆಯುತ್ತದೆ.. ಜೀವನದಲ್ಲಿ ಯಾವುದು ಒಳ್ಳೆಯದು ಕೆಟ್ಟದು ಎಂಬ ವಸ್ತು ವಿಷಯಗಳಿಲ್ಲ.. ಎಲ್ಲ ನಾವು ಗ್ರಹಿಸಿದಂತೆ ಒಳ್ಳೆಯದಾಗುತ್ತದೆ ಇಲ್ಲವೆ ಕೆಟ್ಟದು ಎಂದು ಗ್ರಹಿಸಿದರೆ ಕೆಟ್ಟದಾಗುತ್ತದೆ.. ಧೈರ್ಯ ಬಿಡಬಾರದು..

ಸುಧೇಶ್ ಶೆಟ್ಟಿ ಹೇಳಿದರು...

ಗುರುಪ್ರಸಾದ್ ಅವರೇ...

ನಿಮ್ಮ ಸಮಸ್ಯೆಯ ಹಿನ್ನೆಲೆ ನನಗೆ ಗೊತ್ತಿಲ್ಲ....

ಆದರೆ ಬಿ.ಎಸ್.ಸಿ. ತಗೊ೦ಡು ತಪ್ಪು ಮಾಡಿದ್ದೇನೆ ಅನ್ನುವ ನಿಮ್ಮ ಆಲೋಚನೆಯನ್ನು ಬಿಟ್ಟು ಬಿಡಿ. ಓದು ತು೦ಬಾ ಅಗತ್ಯ ಮು೦ದೆ. ದಯವಿಟ್ಟು ಡಿಗ್ರಿಯನ್ನು ಅರ್ಧದಲ್ಲಿ ಕೈ ಬಿಡಬೇಡಿ. ಅದನ್ನು ಪೂರ್ಣಗೊಳಿಸಿ.

ನಾನು ಬಿ.ಎಸ್.ಸಿ ಮಾಡಿರುವುದು. ಉತ್ತಮ ಕೆಲಸವಿದೆ ನನಗೆ. ಬಹಳಷ್ಟು ಅವಕಾಶಗಳು ಸಿಗುತ್ತವೆ ನಿಮಗೆ.

ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿ. ಬೆಸ್ಟ್ ಆಫ್ ಲಕ್....

Unknown ಹೇಳಿದರು...

Dayavittu oduvudaralli ashakti kaledukollabedi adene agali,ondavakasha tappidarenayitu,innu tumba avakashagalu baralive,adastu bega nimma manadangalakke shanti barali.chenng madi exam.....

SATISH N GOWDA ಹೇಳಿದರು...

ಬಾಸ್ ನಿಮ್ಮ ಅನಿಸಿಕೆ ಬಗ್ಗೆ ನಾನು ಏನನ್ನು ಹೇಳಲಾರೆ .. ಭಯ ಪಡಬೇಡಿ ಇದಿನ ಕಡೆ ಗಮನ ಕೊಡಿ .

ಇನ್ನೊಂದು ವಿಷಯ ದೇವರವ್ನೆ ನಿನ್ ಓದಿ ಬಿಡಿ

Related Posts Plugin for WordPress, Blogger...