ಬಾ ನನ್ನೆದೆಯ ಅಂಗಳಕೆ..

ಮೊದಲನೆಯದಾಗಿ ಎಲ್ಲರಿಗೂ ನಲ್ಮೆಯ 'ನ್ನ ರಾಜ್ಯೋತ್ಸವ' ದ ಶುಭಾಶಯಗಳು..
ಹಾಗೂ
'ದೀಪಾವಳಿ ಹಬ್ಬ' ದ ಶುಭ ಹಾರೈಕೆಗಳು..

ಬಾ ನನ್ನೆದೆಯ ಅಂಗಳಕೆ
ನನ್ನ ಮನಸಿನಮನೆಗೆ
ಚೂರಾದ ಕನಸುಗಳ ಗುಡಿಸು ಬಾ..
ರಂಗೋಲಿ ಇಟ್ಟು ಬಲಗಾಲಿಟ್ಟು ಬಾ ..
ಕತ್ತಲ ಮನೆಗೆ ದೀವಿಗೆ ಹಿಡಿದು ಬಾ..
ಮನದಂಗಳಕೆ ಬೆಳದಿಂಗಳ ಬಾಲೆಯಾಗಿ ನೀ ಬಾ..
ನನ್ನೆದೆಯ ವೀಣೆ ನುಡಿಸಲು
ನನ್ನೊಂದಿಗೆ ಕೈ ಜೋಡಿಸು ಬಾ..
ಬಂಧ ತೊರೆದಿಹ ಜೀವಕ್ಕಿಲ್ಲಿ..
ಬಂಧುವಾಗಿ ನೀ ಬಾ..
ಎದೆಗೆ ನಾಟಿದ ಮುಳ್ಳುಗಳ
ಹೆಕ್ಕಿ ನೇವರಿಸು ಬಾ..
ನೊಂದ ಮನಸಿಗೆ ಸಾಂತ್ವನಿಸಲು
ನಗುವ ಹೂ ಹಿಡಿದು ಬಾ..
ನೋವನ್ನೆಲ್ಲ ತೋಡಿಕೊಳ್ಳಲು
ಮಡಿಲ ನೀಡು ಬಾ..
ಕಣ್ಣ ನೀರ ಒರೆಸಲು
ಸೆರಗ ನೀಡು ಬಾ..
ಹುಚ್ಚು ಮನಸಿಲ್ಲಿ ಬೆಚ್ಚಿ ಕುಳಿತಿಹುದಿಲ್ಲಿ..
ಅನಾಥಮಗುವಂತೆ ಅಳುತಿಹುದಿಲ್ಲಿ
ಮಗುವಿನಂತೆ ಮುದ್ದುಮಾಡಿ
ಕಣ್ಣೀರೊರೆಸಿ ಕೈ ಹಿಡಿವೆ ಬಾ..

.~-~.~-~.


ಎರಡು ಸಾಲಿನಲ್ಲಿ..:
ಅವಳು ಕೊಟ್ಟ ಖಾಲಿ ಪತ್ರವನ್ನೇ ಮತ್ತೆ ಮತ್ತೆ ಓದುತ್ತಾನಿವನು..!!~.~-~

9 ಕಾಮೆಂಟ್‌ಗಳು:

sunaath ಹೇಳಿದರು...

ಒಳ್ಳೆಯ ಕವನ.

Pradeep Rao ಹೇಳಿದರು...

Nice one.. Keep writing :)

ದಿವ್ಯಶ್ರೀ.. ಹೇಳಿದರು...

nimma kanasina hudugi nimage sigali,e kavanadally nevu hupayogisida padagalu thumba mana muttuvante ide.all the best for ur future life.............................

ಭಾಶೇ ಹೇಳಿದರು...

chennagide

ಸತೀಶ್ ಗೌಡ ಹೇಳಿದರು...

ಯಪ್ಪಾ,,,,! ಯಪ್ಪಾ,,,,! ಯಪ್ಪಾ,,! ಸೂಪರ್ ಕಣ್ರೀ ನಿಮ್ಮ ಈ ಕವಿತೆ ಒಮ್ಮೆ ಓದಿದ ಮನಸ್ಸು ಇನ್ನೊಮ್ಮೆ ಮಗದೊಮ್ಮೆ ಓದುವ ಹಾಗಾಗಿದೆ . ತುಂಬಾ ಸುಬ್ದರ ಕಲ್ಪನೆ , ಕಲ್ಪನೆಗೋ ಮೀರಿದ ಸಾಲುಗಳ ಅರ್ಥ , ಸುಂದರ ಮನಮೋಹಕ .. ಯೋಚಿಸ ಬೇಡಿ ಬಂದೇ ಬರುತ್ತಾಳೆ.....

4m SATISH N GOWDA
http://nannavalaloka.blogspot.com/

Shashi jois ಹೇಳಿದರು...

ಸೊಗಸಾದ ಕವನ ...

ಸೀತಾರಾಮ. ಕೆ. / SITARAM.K ಹೇಳಿದರು...

ಕವನ ಚೆನ್ನಾಗಿದೆ. ನೀರಿಕ್ಷಿತರು ಬೇಗ ಬರಲಿ :-))

Snow White ಹೇಳಿದರು...

wonderful lines :) tumba ista aitu ella saalugalu :)heegeye bareyutta iri :)

- ಕತ್ತಲೆ ಮನೆ... ಹೇಳಿದರು...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು..

Related Posts Plugin for WordPress, Blogger...