[ಕುಡುಕರ ಬಗ್ಗೆ ಒಂದು ಕವಿತೆ ಬರೆಯಬೇಕೆಂದು ನನ್ನ ಆಪ್ತ ಗೆಳೆಯರು ಹೇಳಿದ್ದರು.ಆದ್ದರಿಂದ ನಾನು ಸಾಧ್ಯವಾದಷ್ಟು ಪ್ರಯತ್ನಿಸಿ ಬರೆದ ಈ ಕವಿತೆ ಈಗ ನಿಮ್ಮಮುಂದೆ...]

ಕುಡುಕನಾದೆ ನಾ ಕುಡುಕನಾದೆ
ಪ್ರೀತಿ ಪ್ರೇಮ ನಂಬಿ
ಕುರುಡಾದ ದುಂಬಿ
ನಾ ಕುಡುಕನಾದೆ..
ಪ್ರೀತಿ ಪ್ರೇಮ ನಂಬಿ
ಕುರುಡಾದ ದುಂಬಿ
ನಾ ಕುಡುಕನಾದೆ..
ಬುದ್ಧಿ ಹೇಳಬೇಕಾದ ಜ್ಞಾನಿ
ಬುದ್ಧಿ ಹೇಳಿಸಿಕೊಳ್ಳುವಂತಾದ ಅಜ್ಞಾನಿ
ನಾ ಕುಡುಕನಾದೆ..
ಬುದ್ಧಿ ಹೇಳಿಸಿಕೊಳ್ಳುವಂತಾದ ಅಜ್ಞಾನಿ
ನಾ ಕುಡುಕನಾದೆ..
ಸೋದರರ ವಾತ್ಸಲ್ಯ ಉಂಡು
ತಂದೆ-ತಾಯ ಜಪಿಸುತ್ತಿದ್ದ ಜ್ಞಾನಿ
ತಪ್ಪು ಮಾಡಿ ಶಿಕ್ಷೆ ಉಂಡು
ಮೋಸಹೋಗಿ ಕೊರಗುತ್ತಿರುವ ಮೌನಿ
ಸ್ನೇಹಕ್ಕಾಗಿ ಜೀವಿಸಿದ ಹುಂಬತನದ
ಪ್ರೀತಿಗಾಗಿ ಸ್ನೇಹ ಮರೆಸೋ ಜಂಭತನದ
ನಾ ಕುಡುಕನಾದೆ..
ತಂದೆ-ತಾಯ ಜಪಿಸುತ್ತಿದ್ದ ಜ್ಞಾನಿ
ತಪ್ಪು ಮಾಡಿ ಶಿಕ್ಷೆ ಉಂಡು
ಮೋಸಹೋಗಿ ಕೊರಗುತ್ತಿರುವ ಮೌನಿ
ಸ್ನೇಹಕ್ಕಾಗಿ ಜೀವಿಸಿದ ಹುಂಬತನದ
ಪ್ರೀತಿಗಾಗಿ ಸ್ನೇಹ ಮರೆಸೋ ಜಂಭತನದ
ನಾ ಕುಡುಕನಾದೆ..
ಹೊಸಬೆಳಕು ಬರುವಾಗ
ಕಾರ್ಮೋಡ ಕವಿಸಿಕೊಂಡವ
ನಾ ಕುಡುಕನಾದೆ..
ಕಾರ್ಮೋಡ ಕವಿಸಿಕೊಂಡವ
ನಾ ಕುಡುಕನಾದೆ..
ಪ್ರೇಮದೆದೆಯ ಗೂಡದೀಪ
ಆರಿ ಹೋಗಿ ಕತ್ತಲಾಗಿ
ಒಡೆದ ಗಾಜಬಾಟಲಿಯಂತೆ
ಕನಸೆಲ್ಲ ಚೂರುಚೂರಾಗಿ
ಚುಚ್ಚುತ್ತಿರಲು ಮನವನೀಗ
ನಾ ಕುಡುಕನಾದೆ..
ಆರಿ ಹೋಗಿ ಕತ್ತಲಾಗಿ
ಒಡೆದ ಗಾಜಬಾಟಲಿಯಂತೆ
ಕನಸೆಲ್ಲ ಚೂರುಚೂರಾಗಿ
ಚುಚ್ಚುತ್ತಿರಲು ಮನವನೀಗ
ನಾ ಕುಡುಕನಾದೆ..
ಕಾಡುತಿರುವ ನೆನಪ ನೆರಳ
ಕತ್ತಲ ಕೋಣೆಲಿಡಲು
ಬೆಳಕ ಬಿಟ್ಟು ಕತ್ತಲಿಗೊರಗಿ
ನಾ ಕುಡುಕನಾದೆ..
ಕತ್ತಲ ಕೋಣೆಲಿಡಲು
ಬೆಳಕ ಬಿಟ್ಟು ಕತ್ತಲಿಗೊರಗಿ
ನಾ ಕುಡುಕನಾದೆ..
ನಂಬಬೇಡ ನಂಬಬೇಡ
ಪ್ರೀತಿ-ಪ್ರೇಮ ನೋವು ನೋಡ
ಮಾಡಬೇಡ ಪ್ರೇಮಕೆಡುಕ
ಆಗಬೇಡ ಬೀದಿ ಕುಡುಕ
ಪ್ರೀತಿ-ಪ್ರೇಮ ನೋವು ನೋಡ
ಮಾಡಬೇಡ ಪ್ರೇಮಕೆಡುಕ
ಆಗಬೇಡ ಬೀದಿ ಕುಡುಕ
~.~
22 ಕಾಮೆಂಟ್ಗಳು:
ಗುರು...ನಿಮ್ಮ ಕವನದ ಕುಡುಕನಾದೆಗೆ ನನ್ನ ಸಾಂತ್ವನ...ಬೇಡಪ್ಪಾ...ಈ ರೀತಿಯ ಋಣಾತ್ಮಕ ಭಾವ...ಚನ್ನಾಗಿವೆ ಸಾಲುಗಳು..ಅದ್ರಲ್ಲೂ .. ಈ ಕೆಳಗಿನ ಸಾಲುಗಳು.................
ಪ್ರೇಮದೆದೆಯ ಗೂಡದೀಪ
ಆರಿ ಹೋಗಿ ಕತ್ತಲಾಗಿ
ಒಡೆದ ಗಾಜಬಾಟಲಿಯಂತೆ
ಕನಸೆಲ್ಲ ಚೂರುಚೂರಾಗಿ
ಚುಚ್ಚುತ್ತಿರಲು ಮನವನೀಗ
ನಾ ಕುಡುಕನಾದೆ..
ಯಾರೂ ಕುಡುಕರಾಗುವುದು ಬೇಡ..!. ಆ ನಿಟ್ಟಿನಲ್ಲಿ ನೀವು ಬರೆದಿರುವುದು ಸರಿಯಾಗಿದೆ. ಚೆನ್ನಾಗಿದೆ.
ಕುಡುಕನಾಗದಿರಿ ಗುರುವೇ
ಚಿಂತೆ ಯಾರಿಗಿಲ್ಲ
ಮೆಟ್ಟಿ ನಿಲ್ಲಿ
ಒಳ್ಳೆಯ ಕವನ
ಚಿಂತೆ ಮಾಡಿಕೊಂಡರೆ ಚಿಂತೆ ಇರುತ್ತದೆ..
ಇಲ್ಲದಿದ್ದರೆ ಇಲ್ಲ...
ಅದು ಮನೋಭಾವ... ಅಲ್ಲವಾ ?
ನಿಮ್ಮ ಕವನ ಸೊಗಸಾಗಿದೆ...
"ನಶಾ ಬೋಥಲ್ ಮೇ ಹೋತೀ ತೋ ....
ನಾಚ್ ಥೀ .. ಥೀ.. ಯೇ.. ಬೋಥಲ್..!"
ಈ ಹಾಡು ಕೇಳಿದ್ದೀರಾ ?
ಅಭಿನಂದನೆಗಳು...
ಕವನ ಚೆನ್ನಾಗಿದೆರಿ. ಕುಡುಕರು ಓದಿದರೆ ನಾಚಿಕೆಪಟ್ಟು ಬಿಡಬೇಕು.
ಗುರು , ಚೆನ್ನಾಗಿದೆ ನಿಮ್ಮ ಕವನ.
" ಹೆಂಡ ಸರಾಯಿ ಸಹವಾಸ ಹೆಂಡತಿ ಮಕ್ಕಳ ಉಪವಾಸ " ಎಂದು ಚಿಕ್ಕವರಿದ್ದಾಗ ಟಿವಿಯಲ್ಲಿ ಬರುವ ಸ್ಲೊಗನ್ ಗಳನ್ನು ನೆನಪಿಸುವಂತೆ ಮಾಡಿತು ನಿಮ್ಮ ಕುಡಕ ಕವನ :)
ಚೆನ್ನಾಗಿದೆ ಕವನ. ಕುಡಿತ ಕ್ಷಣಿಕ ಸುಖ ಮಾತ್ರ ಕೊಡುತ್ತದೆ. ನಶೆ ಇಳಿದ ನಂತರ ಮತ್ತೆ ಮಾಮೂಲಿ
sakattagide... kudilikke nepa aste... manasinante mahadeva :)
ಗುರು,
ಕವನ ಚೆನ್ನಾಗಿದೆ . ಆದರೆ , ಇಂಥಾ ಋಣಾತ್ಮಕ ಯೋಚನೆ ಬೇಡಾ ಸ್ವಾಮೀ ! ಇದೇನಿದ್ದರೂ ಕವನಕ್ಕೆ ಸೀಮಿತವಾಗಿರಲಿ !
SuperB chennagide hege baritiri
'ಆಗಬೇಡ ಬೀದಿ ಕುಡುಕ'ಅಷ್ಟೇ ಅಲ್ಲ ಮನೆ ಅಥವಾ ಮನದಲ್ಲಿಯೂ ಕುಡುಕರಾಗುವುದು ಬೇಡ! ಕುಡುಕರಾಗುವುದಕ್ಕೆ ನೀವೇ ತಿಳಿಸಿದ೦ತೆ ಹಲವಾರು ಕಾರಣಗಳು. ಕುಡುಕರಾಗದೆ ಇರುವುದಕ್ಕೆ ಇರುವುದು ಒ೦ದೇ ಕಾರಣ!ನೀವೇನೂ ಕುಡುಕರಲ್ಲ ಬಿಡಿ. ಗೆಳೆಯರ ಒತ್ತಾಯಕ್ಕೆ ಬರೆದದ್ದಲ್ಲವೇ?
ಜಲನಯನ,
ಧನ್ಯವಾದಗಳು..
ಹೇಳಬೇಕೆಂದರೆ ಕವಿತೆ ರಚನೆಯಾದಾಗ ಆ ಸಾಲುಗಳು ಇರಲೇ ಇಲ್ಲ..
ಪೋಸ್ಟ್ ಮಾಡುತ್ತಿದ್ದಾಗ ತಕ್ಷಣ ಹೊಳೆದ ಸಾಲುಗಳು..
Subrahmanya,
ಧನ್ಯವಾದಗಳು..
ಸಾಗರದಾಚೆಯ ಇಂಚರ,
ಪ್ರಯತ್ನಿಸೋಣ..
ಸದ್ಯಕ್ಕೆ ಕುಡುಕನಲ್ಲ..
ಧನ್ಯವಾದಗಳು..
ಸಿಮೆಂಟು ಮರಳಿನ ಮಧ್ಯೆ,
ಚಿಂತೆ ಮಾಡಿಕೊಂಡರೆ ಮಾತ್ರ ಚಿಂತೆಯೇ..?..?!
ಸರಿ ಬಿಡಿ..
ಧನ್ಯವಾದಗಳು..
ಸೀತಾರಾಮ. ಕೆ.,
ಧನ್ಯವಾದಗಳು..
shridhar,
ಹೌದೆ.. ಸಂತೋಷ.
ಧನ್ಯವಾದಗಳು..
Deepasmitha,
ಹೌದೌದು..
ಆದರೆ ಕೆಲವರು ನಶೆ ಇಳಿಯಲು ಅವಕಾಶವನ್ನೇ ಕೊಡುವುದಿಲ್ಲವಲ್ಲ..
ಧನ್ಯವಾದಗಳು..
Manasa,
ನಿಮ್ಮ ಮಾತು ಸರಿಯಷ್ಟೇ..!
ಎಲ್ಲರಿಗೂ ಕುಡಿಯಲು ಕೇವಲ ನೆಪ ಅಲ್ಲ,ನೂರಾರು ನೋವಿರಬಹುದು ಎನಿಸುತ್ತೆ..
ಧನ್ಯವಾದಗಳು..
ಚಿತ್ರಾ,
ಸರಿ ಮೇಡಂ..
ಧನ್ಯವಾದಗಳು..
ದಿವ್ಯಶ್ರೀ..,
ಸಹಕಾರವಿದ್ದರೆ...!?
ಹೀಗೆ ಬರೆಯುತ್ತಿರುವೆ..
prabhamani nagaraja,
ಹೌದೌದು..
ಆದರೆ.. ಮುಂದಿನ ಪರಿಸ್ಥಿತಿ ಹೇಗೋ ಏನೋ.. ಗೊತ್ತಿಲ್ಲವಲ್ಲ..
ಧನ್ಯವಾದಗಳು..
ಕಾಮೆಂಟ್ ಪೋಸ್ಟ್ ಮಾಡಿ