ಶಿಕ್ಷೆಯೋ.. ಭಿಕ್ಷೆಯೋ..

[ ನಾನು ಈಗ ಪರೀಕ್ಷೆಯ ಒತ್ತಡದಲ್ಲಿದ್ದು, ಬ್ಲಾಗನ್ನು ಖಾಲಿ ಬಿಡಬಾರದೆಂದು ಹಿಂದೆ ಎಂದೋ ಬರೆದಿದ್ದ ಈ ಕವನವನ್ನು ನಿಮ್ಮ ಮುಂದಿಡುತ್ತಿದ್ದೇನೆ.. ]
ಹೆತ್ತ ತಂದೆ-ತಾಯಿಗಳು ತಾತ್ಸಾರ ಮಾಡುವುದು

ಒಡಹುಟ್ಟಿದ ಜೀವಗಳು ಪಿಂಡಕ್ಕೆ

ಕಾದ ಕಾಗೆಗಳಂತೆ ಆಗಿರುವುದು

ಒಡನಾಟ ಆಡಿದ ಸ್ನೇಹಿತರೆಲ್ಲ

ಮಿತ್ರದ್ರೋಹಿಗಳಾಗಿ(ದ್ದುದು)ರುವುದು

ನಾ ಏನೂ ತಪ್ಪು ಮಾಡದಿದ್ದರೂ

ಎಲ್ಲರೂ ನನ್ನೆಡೆಗೆ ಬೆರಳು ಮಾಡುವುದು

ಹೃದಯ ಕಲಕುವ ದೃಶ್ಯಗಳು

ಮತ್ತೆ ಮತ್ತೆ ಕಣ್ಣೆದುರಾಗುವುದು

ಒಬ್ಬನೇ ಏಕಾಂತವಾಗಿ ಕುಳಿತು

ಬಿಕ್ಕಿ ಬಿಕ್ಕಿ ಅಳುವಂತಾಗುವುದು

ಎಲ್ಲವನ್ನೂ ನೋಡಿ ದೇವರೇ

ನೀ ನಗುತ್ತಲಿಯೇ ಇರುವುದು

ಇದು ಶಿಕ್ಷೆಯೋ ....? ಇಲ್ಲಾ

ನೀನೆ ಕೊಟ್ಟ ಭಿಕ್ಷೆಯೋ?


ಪರಿಚಯವಿಲ್ಲದವರೆಲ್ಲರೂ

ಆತ್ಮೀಯರಂತಾಗಿರುವುದು

ಕೆಲವೊಮ್ಮೆ ಅಂದುಕೊಂಡಂತೆ ಆಗಿ

ಅದೃಷ್ಟ ಖುಲಾಯಿಸುವುದು

ಹಲವೊಮ್ಮೆ ನಿರೀಕ್ಷೆಗೆ ಮೀರಿದ

ಅನಿರೀಕ್ಷಿತ ಫಲ ನೀಡುವುದು

ಗುರುತು ಇಲ್ಲದವರಿಂದ

ಸೋದರವಾತ್ಸಲ್ಯ ಪಡೆಯುವುದು

ಎಂದೂ ನೋಡದವರೆಲ್ಲಾ...

ಮಮತೆ ವಾತ್ಸಲ್ಯ ತೋರುವುದು

ಒಮ್ಮೊಮ್ಮೆ ಏನೇನೂ ಆಗಿ

ನನ್ನೊಳಗೆ ನಾನೇ ತುಸು ನಾಚಿ

ನೀರಾಗುವ ಕ್ಷಣಗಳು ಬರುವುದು

ಮನಸ್ಸು ಇಚ್ಚೆಬಂದಂತೆ ಮಾಡುವ

ಮಹಾಮರ್ಕಟವಾಗಿರುವುದು

ಇದು ಭಿಕ್ಷೆಯೋ ...ಇಲ್ಲಾ

ನೀನೆ ಕೊಟ್ಟ ಶಿಕ್ಷೆಯೋ ?


~-~

22 ಕಾಮೆಂಟ್‌ಗಳು:

sunaath ಹೇಳಿದರು...

ಪ್ರಿಯ ಮಿತ್ರ,
ದೇವರು ಪ್ರತಿಯೊಬ್ಬ ಜೀವಿಗೂ ಒಂದೊಂದು ಸಂದರ್ಭದಲ್ಲಿ ಒಂದೊಂದು ಬಂಗಾರದ ನಾಣ್ಯವನ್ನು ಕೊಡುತ್ತಾನಂತೆ. ಕೆಲವದರ
ಮೇಲೆ ‘ಸುಖ’ ಎಂದು ಬರೆದಿದ್ದರೆ, ಕೆಲವದರ ಮೇಲೆ ‘ದುಃಖ’ ಎಂದು ಬರೆದಿರುತ್ತದೆ.
ನಮಗೆ ಸಿಕ್ಕ ನಾಣ್ಯವು ದೇವರೇ ಕೊಟ್ಟ ಬಂಗಾರದ ನಾಣ್ಯ. ಅದನ್ನು ಸರಿಯಾಗಿ ಬಳಸಿಕೊಳ್ಳೋಣ.

ಸೀತಾರಾಮ. ಕೆ. / SITARAM.K ಹೇಳಿದರು...

ದೇವರು ಕೊಟ್ಟದ್ದು ಪ೦ಚಾಮೃತವೇ!
ಅದಕ್ಕೆ ಪಾಲಿಗೆ ಬ೦ದದ್ದು ಪ೦ಚಾಮೃತ ವೆ೦ಬ ಹಿರಿಯರ ನಾಣ್ಣುಡಿ ಪ್ರಚಲಿತದಲ್ಲಿದೆ. ಕಷ್ಟ-ಸುಖ ಎಲ್ಲವೂ ನಿರ್ವಿಕಾರದಿ೦ ಸ್ವೀಕರಿಸೋಣ ಎಲ್ಲವೂ ಜ್ಞಾನಾರ್ಪಣಮಸ್ತು!!!
ಚೆನ್ನಾಗಿದೆ ಕವನ. ಹಳೆಯದೆ೦ದರೂ ಸರ್ವಕಾಲಿಕವಾಗಿದೆ.

ಸಾಗರದಾಚೆಯ ಇಂಚರ ಹೇಳಿದರು...

sakattagide kavana

ಮನದಾಳದಿಂದ............ ಹೇಳಿದರು...

ದೇವರೆನೋ ನಮಗೆ ವರ ಕೊಟ್ಟೆ ಕಳಿಸುತ್ತಾನೆ. ಆದರೆ ಆ ವರವನ್ನು ಉಪಯೋಗಿಸಿಕೊಳ್ಳುವುದು ನಮ್ಮ ಬುದ್ಧಿವಂತಿಕೆ.
ಚಂದದ ಕವನ.

Deepasmitha ಹೇಳಿದರು...

ಪರೀಕ್ಷೆ ಒತ್ತಡದಲ್ಲಿದ್ದರೂ ಬ್ಲಾಗಿಗೆ ಕವನ ಕಳಿಸಿದ್ದೀರಲ್ಲ, ಮೆಚ್ಚಬೇಕು. ಒತ್ತಡದಲ್ಲಿದ್ದಾಗ ಇಂಥಾ ಇತರ ಕೆಲಸ ಮಾಡಿದರೆ ಅದು stress reliever ಆಗುತ್ತದೆ. ಒಳ್ಳೆಯ ಕವನ

akshata ಹೇಳಿದರು...

ಅದ್ಭುತ ಕವನ, ಒಂದು ವಿಷಯ ನೆನಪಿರಲಿ, ಜೀವನದಲ್ಲಿ ನಮಗೆ ಬೇಕಾದ್ದು, ಬೇಕಾದಾಗ ಸಿಗುವುದಿಲ್ಲ, ಆಯಾ ಸಮಯಕ್ಕೆ ಹಾಗೂ ನಮ್ಮ ಹಣೇಬರಹದಲ್ಲಿದ್ದಷ್ಟೇ ಸಿಗುತ್ತದೆ. ಹೆಚ್ಚಿನದನ್ನು ಅಪೇಕ್ಷಿಸಬಾರದು ಕೂಡ.
ಅಕ್ಷತ.

ಜಲನಯನ ಹೇಳಿದರು...

ಜ್ಞಾನಾರ್ಪಣಾಮಸ್ತು...ಬಹಳ ಮಸ್ತು....ಹಹಹ...ಗುರು..ಪೋಣಿಸಿಬಿಟ್ಟಿರಲ್ಲಾ ಕವನಮಾಲೆಯನ್ನ..??!! ಅದರ್ಲ್ಲೂ ಪರೀಕ್ಷೆಯ ಒತ್ತಡದ ಮಧ್ಯೆ...ಶುಭವಾಗಲಿ ನಿಮ್ಮ ಪರೀಕ್ಷೆಗಳಲ್ಲಿ.

ashokkodlady ಹೇಳಿದರು...

devaru kotta varavannu sariyaagi upayogisikolluvudu buddivantara lakshana...kavana tumbaa chennagide....

ವಸಂತ್ ಹೇಳಿದರು...

>>"ಶಿಕ್ಷೆಯೋ.. ಭಿಕ್ಷೆಯೋ..<< ತಿಳಿಯದಿದ್ದರು. ಒಂದು ಬಾವನಾತ್ಮಕ ಕವನವನ್ನು ಓದಿದ ಅನುಭವ. ತುಂಬಾ ಉತ್ತಮವಾದ ಕವನವೆನ್ನಬಹುದು. ತನ್ನ ಅಂತರಾಳದ ಬಾವನಾತ್ಮಕ ಯೋಚನೆಗಳನ್ನು ವೆಕ್ತಪಡಿಸಿರುವ ಶೈಲಿಯಂತು ಅದ್ಭುತವಾಗಿ ಮೂಡಿಬಂದಿದೆ ಧನ್ಯವಾದಗಳು.

ವಸಂತ್

* ನಮನ * ಹೇಳಿದರು...

ತುಂಬಾ ಚೆನ್ನಾಗಿದೆ

Nisha ಹೇಳಿದರು...

NICE.

!! ಜ್ಞಾನಾರ್ಪಣಾಮಸ್ತು !! ಹೇಳಿದರು...

sunaath,

ನಿಮ್ಮ ತಿಳುವಳಿಕೆಯ ಮಾತುಗಳಿಗೆ ಧನ್ಯವಾದಗಳು..

!! ಜ್ಞಾನಾರ್ಪಣಾಮಸ್ತು !! ಹೇಳಿದರು...

ಸೀತಾರಾಮ. ಕೆ. / SITARAM.K,

ಪಾಲಿಗೆ ಬಂದದ್ದು ಪಂಚಾಮೃತವೆ ಸರಿ.. ಆದರೆ ಅದು ಒಮ್ಮೊಮ್ಮೆ ಬಹಳ ಕಹಿಯೆನಿಸುತ್ತದೆಯಲ್ಲವೇ..?
ಧನ್ಯವಾದಗಳು..

!! ಜ್ಞಾನಾರ್ಪಣಾಮಸ್ತು !! ಹೇಳಿದರು...

ಸಾಗರದಾಚೆಯ ಇಂಚರ,

ಧನ್ಯವಾದಗಳು..

!! ಜ್ಞಾನಾರ್ಪಣಾಮಸ್ತು !! ಹೇಳಿದರು...

ಮನದಾಳದಿಂದ............,

ನನ್ನ 'ಮನಸಿನಮನೆ'ಗೆ ಸ್ವಾಗತ..
ನೀವು ಹೇಳಿದಂತೆಯೇ ಆಗಲಿ..
ಉಪಯೋಗಿಸಿಕೊಳ್ಳಲು ಪ್ರಯತ್ನಿಸುವೆ..
ಧನ್ಯವಾದಗಳು..

!! ಜ್ಞಾನಾರ್ಪಣಾಮಸ್ತು !! ಹೇಳಿದರು...

Deepasmitha,

ಹೌದು..
ಆದರೂ ಒಂದು ಲೇಖನ ಮಿಸ್ ಆಯ್ತು.. ಕ್ಷಮಿಸಿ.
ಧನ್ಯವಾದಗಳು..

!! ಜ್ಞಾನಾರ್ಪಣಾಮಸ್ತು !! ಹೇಳಿದರು...

akshata,

ನಿಮ್ಮ ಮಾತು ಅಕ್ಷರಶಃ ಸತ್ಯ..
"ಹಣೆಬರಹ"ವನ್ನು ಧೃಢವಾಗಿ ನಂಬುವವನು ನಾನು.
"ವಿಧಿಯ ಬರವಣಿಗೆಯನ್ನು ಮೀರುವವರು ಯಾರು ?" ಅಲ್ಲವೇ?
ಧನ್ಯವಾದಗಳು..

!! ಜ್ಞಾನಾರ್ಪಣಾಮಸ್ತು !! ಹೇಳಿದರು...

ಜಲನಯನ,

ನಿಮ್ಮ ಶುಭ ಹಾರೈಕೆಗೆ ಧನ್ಯವಾದಗಳು..

!! ಜ್ಞಾನಾರ್ಪಣಾಮಸ್ತು !! ಹೇಳಿದರು...

ashokkodlady,

ಹಾಗಾದ್ರೆ ನಾನು ಬುದ್ದಿವಂತನಾಗಲು ಪ್ರಯತ್ನಿಸುವೆ..
ಧನ್ಯವಾದಗಳು..

!! ಜ್ಞಾನಾರ್ಪಣಾಮಸ್ತು !! ಹೇಳಿದರು...

ವಸಂತ್,

ನನ್ನ "ಮನಸಿನಮನೆ"ಗೆ ಸ್ವಾಗತ..
ನಿಮ್ಮ ಅನಿಸಿಕೆಗೆ ಧನ್ಯವಾದಗಳು..

!! ಜ್ಞಾನಾರ್ಪಣಾಮಸ್ತು !! ಹೇಳಿದರು...

* ನಮನ *,

ನೀವು ಬಂದು ತುಂಬಾ ದಿನವಾಗಿತ್ತಲ್ಲ?
ಧನ್ಯವಾದಗಳು..

!! ಜ್ಞಾನಾರ್ಪಣಾಮಸ್ತು !! ಹೇಳಿದರು...

Nisha,

ಸದ್ಯ ಮರೆತಿಲ್ವಲ್ಲ ನನ್ನ ಬ್ಲಾಗ್ನ..
ಧನ್ಯವಾದಗಳು..

Related Posts Plugin for WordPress, Blogger...