ಹೂ ಚೆಲ್ಲಿ ಕರೆದಿರುವೆ..


[ ನಾನು ತುಂಬಾ ಸಂಕಷ್ಟಕ್ಕೆ ಸಿಲುಕಿ ತುಂಬಾ ನೊಂದು ಏಕಾಂಗಿಯಂತೆ ಇದ್ದಾಗ ಬರೆದ ಕವಿತೆ ನಿಮ್ಮ ಮುಂದೆ.. ]


ಢಮರೆ ಢಮರೆ ಢಮ ಢಮಢಮ ಢಮಢಮ
ಢಮರೆ ಢಮರೆ ಢಮ ಢಮಢಮ ಢಮಢಮ
ಎದ್ದೇಳು ಎದ್ದೇಳು ನೀನು ಎದ್ದೇಳು
ಹರಶಿವನೆ ಪರಶಿವನೇ
ಏಳು ಏಳು ಎದ್ದೇಳು

ಏಕೆ ನೀನು ಅಲ್ಲಿರುವೆ
ನಾನು ಇಲ್ಲಿ ನೊಂದಿರುವೆ


ಬದುಕಲು ಬೇಕು ಗುರಿಯೆಂದೆ
ನೀ ಕೊಟ್ಟಿದ್ದು ಕೆಡಿಸೋ ಮನಸೊಂದೆ

ಹೆತ್ತವರೆಲ್ಲ ವೈರಿಗಳಾಗಿ
ಕಾಣುತಿಹರು ಕಣ್ಣೆದುರಲ್ಲಿ
ಸೋದರತ್ವವು ದ್ವೇಷವಾಗಿ
ಕಾಡುತಿಹುದು ನನ್ನನಿಲ್ಲಿ


ಸ್ನೇಹಿತರೆಲ್ಲ ಬಂಧುಗಳೆಲ್ಲ
ಎತ್ತ ಹೋದರೂ ನನಗಿಲ್ಲ


ಪ್ರೇಮದ ದೀವಿಗೆ ನೀ ಕೊಟ್ಟು
ಕಾಮದ ಬೆಂಕಿ ಹಚ್ಚಿರುವೆ
ಜ್ಞಾನದ ಬುತ್ತಿ ನೀ ಕೊಟ್ಟು
ಕನಸನ್ನು ಇನ್ನು ಉಳಿಸಿರುವೆ

ತಪ್ಪನು ಮಾಡಿಸಿ ನಗುತಿಹ ಶಿವನೇ
ಶಿಕ್ಷೆಯ ನೀಡಿ ಹೊರಟಿರೊ ಹರನೇ
ನಿನ್ನಯ ಮೇಲೆಯೇ ಎಲ್ಲ ಭಾರ
ಬಂದು ನೀಡೋ ಪರಿಹಾರ

ನಿನ್ನಯ ದಾರಿಯ ಕಾದಿರುವೆ
ಹೂ ಚೆಲ್ಲಿ ಕರೆದಿರುವೆ
ಏಕೆ ನೀನು ಅಲ್ಲಿರುವೆ
ನಾನು ಇಲ್ಲಿ ನೊಂದಿರುವೆ
~.~ ~.~ ~.~ ~.~ ~.~ ~.~ ~.~

36 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ಮನಸ್ಸು ನೊಂದರೂ ಆ ಭಾವನಗೆಳನ್ನು ಸುಂದರವಾಗಿ ಹೊರ ಹಾಕಿದ್ದೀರಿ
ಆ ಪರಶಿವನ ಬಳಿ ನಿಮ್ಮ ಅಳಲನ್ನು ತೋಡಿಕೊಂಡ ರೀತಿ ಇಷ್ಟವಾಯಿತು
ಸುಂದರ ಕವನ

Subrahmanya ಹೇಳಿದರು...

ಸಹೋದರತ್ವದ ಭಾವನೆಗಳನ್ನು ಹಂಚಲು ಹರನಲ್ಲಿ ಬೇಡಿದ್ದು ಚೆನ್ನಾಗಿದೆ.

Manasaare ಹೇಳಿದರು...

ಗುರುದೆಸೆ ಅವರೇ,
ನಮ್ಮ ರೌದ್ರ ಶಿವನ ಕರಿಯುವ ನಿಮ್ಮ ಪರಿ ಇಷ್ಟವಾಯಿತು . ನಿಮ್ಮ ಮನಸಿನ ನೋವುಗಳನ್ನ ಕವಿತೆ ಮೂಲಕ ಚೆನ್ನಾಗಿ ಹೇಳಿದ್ದಿರ . ಕೆಡಿಸೋ ಮನಸ್ಸಿಗೆ ಏನೆಲ್ಲಾ ಕೆಟ್ಟದಾಗಿ ಕಾಣುತ್ತೆ ಅಂತ ಕವನ ಹೇಳೋದರಲ್ಲಿ ಸಫಲವಾಗಿದೆ .

ಮನಸಾರೆ

ಮನಮುಕ್ತಾ ಹೇಳಿದರು...

ಗುರುದೆಸೆ,
ಕವನವನ್ನು ಸು೦ದರವಾಗಿ ಬರೆದಿದ್ದೀರಿ.
ನಿಮ್ಮ ಭಾವನೆ ಕವನದಲ್ಲಿ ಚೆನ್ನಾಗಿ ಅಭಿವ್ಯಕ್ತವಾಗಿದೆ.
ಶಿವನನ್ನು ಕರೆಯುವುವ ಪರಿ ಕೂಡ ಚೆನ್ನಾಗಿದೆ.

V.R.BHAT ಹೇಳಿದರು...

ನಿಮ್ಮ ಕರೆ ಮನ್ನಿಸಿ ಇಂದೇ ಬಂದಿದ್ದೇನೆ!ಕಷ್ಟಗಳು ಬರುವುದು ಸಹಜ, ಅದನ್ನು ಮೀರಿ ನಿಲ್ಲುವ ಮನೋಧರ್ಮ, ಮನೋದಾರ್ಷ್ಟ್ಯತೆ ಬೆಳೆಯಬೇಕು, ಅದು ನಿಮಗೆ ಬರಲಿ, ಕವನದಲ್ಲಿನ ಚಡಪಡಿಸುವಿಕೆ ಅರ್ಥವಾಯ್ತು.

ಮನಸಿನಮನೆಯವನು ಹೇಳಿದರು...

ಸಾಗರದಾಚೆಯ ಇಂಚರ-

ಧನ್ಯವಾದಗಳು..
ನಾನು ನನ್ನ ಭಾವನೆಗಳನ್ನು ನಿಮ್ಮ ಬಳಿ ಬಿಟ್ಟರೆ ಆ ಶಿವನ ಬಳಿ ಮಾತ್ರ ಹೇಳಿಕೊಳ್ಳಬೇಕಲ್ಲವೇ....

ಮನಸಿನಮನೆಯವನು ಹೇಳಿದರು...

Subrahmanya-

ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

Manasaare-

ಧನ್ಯವಾದಗಳು..
ಹೆಚ್ಚಾಗಿ ನಾನು ಈ ರೀತಿ ದುಃಖದ ಭಾವನೆಗಳ ಕವಿತೇನೆ ಜಾಸ್ತಿ ಬರೀತೀನಿ..

ಮನಸಿನಮನೆಯವನು ಹೇಳಿದರು...

ಮನಮುಕ್ತಾ,

ನಿಮ್ಮ ಮಾತಿಗೆ ಧನ್ಯವಾದಗಳು..
ಹೆಚ್ಚಾಗಿ ನಾನು ಈ ರೀತಿ ದುಃಖದ ಭಾವನೆಗಳ ಕವಿತೇನೆ ಜಾಸ್ತಿ ಬರೀತೀನಿ..

ಮನಸಿನಮನೆಯವನು ಹೇಳಿದರು...

ವಿ.ಆರ್.ಭಟ್,

ತುಂಬಾ ಸಂತೋಷ.. ನನ್ನ ಮನಸಿನಮನೆಗೆ ಸ್ವಾಗತ..
ನಿಮ್ಮ ಹಾರೈಕೆ ಫಲಿಸಲಿ..

shridhar ಹೇಳಿದರು...

ಗುರುದೆಸೆ,
ಕವನ ಚೆನ್ನಾಗಿದೆ. ನಿಮ್ಮ ಮನಸ್ಸಿನ ಚಡಪಡಿಕೆಗಳನ್ನು ಹರನಲ್ಲಿ ಚೆನ್ನಾಗಿ ಹೇಳಿಕೊಂಡಿದ್ದೀರಾ.
ಇನ್ನಷ್ಟು ಒಳ್ಳೆಯ ಕವನಗಳು ಬರಲಿ.

akshata ಹೇಳಿದರು...

ನನಗನಿಸುತ್ತೆ ಮನಸ್ಸಿನಲ್ಲಿ ದುಖಃದ ಕಟ್ಟೆಯೊಡೆದಾಗಲೇ ಕವಿತೆ ಹೊರಹೊಮ್ಮುತ್ತೆ, ತುಂಬ ಚನ್ನಾಗಿದೆ.
ಅಕ್ಷತ.

ವನಿತಾ / Vanitha ಹೇಳಿದರು...

ಸುಂದರ ಕವನ:)

ಸಾಗರಿ.. ಹೇಳಿದರು...

ತುಂಬ ಚೆನ್ನಾಗಿದೆ ಕವನ..

ಮನಸಿನಮನೆಯವನು ಹೇಳಿದರು...

shridhar,

ನನ್ನ ಮನಸಿನಮನೆ'ಗೆ ಸ್ವಾಗತ..

ಧನ್ಯವಾದಗಳು..
ನಿಮ್ಮ ಸಹಕಾರ ಹೀಗೆ ಇರಲಿ..

ಮನಸಿನಮನೆಯವನು ಹೇಳಿದರು...

akshata,

ನನ್ನ ಮನಸಿನಮನೆ'ಗೆ ಸ್ವಾಗತ..

ನಿಮ್ಮ ಅನಿಸಿಕೆ ನಿಜ..
ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

ವನಿತಾ / Vanitha,

ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

ಸಾಗರಿ..,

ಧನ್ಯವಾದಗಳು..

jaya shetty ಹೇಳಿದರು...

Nice na...........

ಹರೀಶ ಮಾಂಬಾಡಿ ಹೇಳಿದರು...

ಕವಿತೆಯೂ ಚೆನ್ನಾಗಿದೆ.. ಚಿತ್ರವೂ ಹೋಂದಿಕೆಯಾಗುತ್ತದೆ

Shweta ಹೇಳಿದರು...

Good.
ಡಿವಿಜೀ ಗೊತ್ತಲ್ಲ,ಅವರ ಮಗ ಬಿ ಜಿ ಎಲ್ ಸ್ವಾಮಿ ಅಂತ ಅವರು ಸಸ್ಯಶಾಸ್ತ್ರ ವಿಜ್ಞಾನಿ ... ಕನ್ನಡದಲ್ಲಿ ಒಳ್ಳೆಯ ಪುಸ್ತಕ ಬರ್ದಿದಾರೆ ಓದಿ,ನೀವು ಬಿ ಎಸ್ಸಿ ಓದ್ತಾ ಇರೋದಕ್ಕೆ ಈ ಸಲಹೆ ಕೊಡ್ತಾ ಇದೀನಿ ..ಒಳ್ಳೆಯ ಪುಸ್ತಕಗಳನ್ನ ಓದಿ ,ಮತ್ತೆ ಬರೆಯರಿ....ಓದು ನಿಮ್ಮ ಯೋಚನೆಗಳನ್ನ ಬದಲಾಯಿಸುತ್ತೆ..ಒಳ್ಳೆಯದಾಗಲಿ ..

ಮನಸಿನಮನೆಯವನು ಹೇಳಿದರು...

jaya shetty,

'ಮನಸಿನಮನೆ'ಗೆ ಸ್ವಾಗತ..
ಧನ್ಯವಾದಗಳು...
ಹೀಗೆ ಬರುತ್ತಿರಿ..

ಮನಸಿನಮನೆಯವನು ಹೇಳಿದರು...

'ಹರೀಶ ಮಾಂಬಾಡಿ,

ಧನ್ಯವಾದಗಳು..
ನನ್ನ "ಮನಸಿನಮನೆ'ಗೆ ಸ್ವಾಗತ..
ಹೀಗೆ ಬರುತ್ತಿರಿ..

ಮನಸಿನಮನೆಯವನು ಹೇಳಿದರು...

Shweta,

ನನ್ನ "ಮನಸಿನಮನೆ'ಗೆ ಸ್ವಾಗತ..

ಹೌದು ಬಿ.ಜಿ.ಎಲ್.ಸ್ವಾಮಿ ಬಗ್ಗೆ ಪಿ.ಯು.ನಲ್ಲಿದ್ದಾಗ ನಮ್ಮ ಸರ್ ಹೇಳ್ತಿದ್ರು.. ಅವ್ರು ಬರೆದಿರುವ ಯಾವುದೊ ಪುಸ್ತಕದ ಬಗ್ಗೆ ಕೇಳಿದ್ದೀನಿ(ಹೆಸರು ನೆನಪಾಗುತ್ತಿಲ್ಲ)..
ನಾನು ಬಿ.ಎಸ್ಸಿ.ನಲ್ಲಿ ಜೀವಶಾಸ್ತ್ರ ಆಯ್ದುಕೊಂಡಿಲ್ಲ,ಆದ್ದರಿಂದ ನನಗೆ ಅವುಗಳ ಅವಶ್ಯವಿಲ್ಲ ಎಂದೆನಿಸುತ್ತದೆ..
ಹೀಗೆ ಮತ್ತೆ ಮತ್ತೆ ಬರುತ್ತಿರಿ..

sunaath ಹೇಳಿದರು...

ಗುರು-ದೆಸೆ,
ನಿಮ್ಮ ಮನದ ಅಳಲು ನಿಮ್ಮ ಕವನದಲ್ಲಿ ಸಫಲವಾಗಿ ಅಭಿವ್ಯಕ್ತವಾಗಿದೆ. ಆದರೆ ತರುಣರಿಗೆ ಅಳಲು ಯಾಕಯ್ಯ? ನಲಿದಾಡಬೇಕಾದ ವಯಸ್ಸಿದು!

ಮನಸಿನಮನೆಯವನು ಹೇಳಿದರು...

sunaath,
ಧನ್ಯವಾದಗಳು..
ನೀವು ಹೇಳಿದ್ದು ಸರಿ,ನಲಿದಾಡಬೇಕಾದ ತರುಣ ವಯಸ್ಸಿದು,ಆದರೆ ಅತ್ಯುತ್ಸಾಹಿತನಾಗಿ ಕೆಲವು ಕಹಿಗಳನ್ನು ತಂದುಕೊಂಡಿದ್ದೇನೆ..

Unknown ಹೇಳಿದರು...

ತುಂಬಾನೇ ಚೆನ್ನಾಗಿ ಬರೆದಿದ್ದೀರಿ..
ನಿಮ್ಮ ಕಷ್ಟಗಳಿಗೆ ಹರನು ಆದಷ್ಟು ಬೇಗ ಸ್ಪಂದಿಸಲಿ..
ಹೀಗೆ ಬರೀತಾ ಇರಿ..

ಮನಸಿನಮನೆಯವನು ಹೇಳಿದರು...

ಗೆಳತಿ,
ಧನ್ಯವಾದಗಳು...

ಪ್ರವೀಣ್ ಭಟ್ ಹೇಳಿದರು...

ತುಂಬಾ ಚೆನ್ನಾಗಿದೆ...


ಪ್ರೀತಿ ಸ್ನೇಹ ಸೊದರತ್ವ ಸಾಯುತ್ತಿರುವ ಸಂದರ್ಭದಲ್ಲಿ .. ನಿಮ್ಮ ಬರಹ ತುಂಬಾ ಅರ್ಥ ಹೊಮ್ಮಿಸುತ್ತೆ

ಪ್ರವಿ

ಮನಸಿನಮನೆಯವನು ಹೇಳಿದರು...

ಪ್ರವೀಣ್ ಭಟ್-
ಧನ್ಯವಾದಗಳು..
ಇಲ್ಲಿ ನನ್ನ ಅನುಭವವನ್ನು ಕವಿತೆಯಾಗಿಸಿದ್ದೇನೆ..

Unknown ಹೇಳಿದರು...

--
ಕವಿತೆ ತುಂಬಾ ಚೆನ್ನಾಗಿದೆ..
ಕಷ್ಟದಲ್ಲಿರುವಾಗ ನಗುವವನೆ ನಿಜವಾದ ಮನುಷ್ಯ... ಆ ತರಹ ಕಷ್ಟಕ್ಕೆ ಎದರದೆ ನೀವು ಕೂಡ ಯಾವಾಗಲು ನಗುತಿರಿ..

--ಸಹನಾ.

ಮನಸಿನಮನೆಯವನು ಹೇಳಿದರು...

ಸಹನಾ,
ಧನ್ಯವಾದಗಳು..
ಕಷ್ಟಗಳ ಮೇಲೆ ಕಷ್ಟಗಳು ಬರುತ್ತಲೇ ಇದ್ದರೇ ನಗಲಾಗುವುದೇ..
ಪ್ರಯತ್ನಿಸುವೆ.

Manasa ಹೇಳಿದರು...

Shivanalli bedi/keLikondiruvadarindaa... banda kastagaLu manju gaddeyagi karaguvadralli sandehave illa :) ... good one well described :)

ಓ ಮನಸೇ, ನೀನೇಕೆ ಹೀಗೆ...? ಹೇಳಿದರು...

ರೌದ್ರಾವತಾರ ತಾಳಿ ರುದ್ರ ಶಿವನನ್ನು ಕರೆದು ನಿಮ್ಮ ನೋವನ್ನು ಅರುಹಿದ ರೀತಿ ತುಂಬಾ ಇಷ್ಟವಾಯ್ತು. ನಿಮ್ಮ ಕರೆ ಕೇಳಿ ಖಂಡಿತ ಪರಶಿವ ನಿಮಗೆ ಅಭಯ ನೀಡುತ್ತಾನೆ ಎಂಬ ಹಾರೈಕೆ ನಮ್ಮದು.

ಮನಸಿನಮನೆಯವನು ಹೇಳಿದರು...

Manasa,

ನನ್ನ 'ಮನಸಿನಮನೆ'ಗೆ ಸ್ವಾಗತ..
ದೇವರ ದಯಾನಿಧಿಯಿಂದ ನಿಮ್ಮ ಹಾರೈಕೆ ಫಲಿಸಿದರೆ ನಿಮ್ಮ ಬಾಯಿಗೆ ಸಕ್ಕರೆ ಉಂಟು...
ಏನಂತೀರಿ..
ಹೀಗೆ ಬರುತ್ತಿರಿ...

ಮನಸಿನಮನೆಯವನು ಹೇಳಿದರು...

ಓ ಮನಸೇ, ನೀನೇಕೆ ಹೀಗೆ...?,

ಧನ್ಯವಾದಗಳು..
ನಿಮ್ಮ ಬಾಯರಕೆಯಿಂದ ಹಾಗೆ ಆಗಲಿ..

Related Posts Plugin for WordPress, Blogger...