ನೆನಪಿನ ಕಾಣಿಕೆಯಲ್ಲಿ...



[ ಮೊದಲ ಲೇಖನದಲ್ಲೇ ತಿಳಿಸಿದಂತೆ 'ಜ್ಞಾನಮೂರ್ತಿ' ಯವರು ನನಗೆಅನಿರೀಕ್ಷಿತವಾಗಿ ಆರ್ಕುಟ್ನಲ್ಲಿ ಪರಿಚಯವಾದವರು.. ಕಾಲ ಕಳೆದಂತೆ ಆಪರಿಚಯ ನಮ್ಮಿಬ್ಬರ ನಡುವೆ ಗಾಢವಾದ ಸ್ನೇಹಕ್ಕೆ ಕಾರಣವಾಯಿತು,ಇಬ್ಬರುತುಂಬಾ ಆತ್ಮೀಯರಾದೆವು .. ಅವರ ಜನ್ಮದಿನದ ಸಂದರ್ಭದಲ್ಲಿ ಅವರು ನನಗೆಕಾಣಿಕೆ ಕೊಡುವೆನೆಂದು ಹೇಳಿ ಅವರ ಬ್ಲಾಗ್ ಲಿಂಕ್ ಕೊಟ್ಟಿದ್ದರು.. ಅದೇ ಪ್ರಥಮನಾನು ಬ್ಲಾಗ್ ನೋಡಿದ್ದು.. ನಂತರ ಬ್ಲಾಗ್ ಬಗ್ಗೆ ಸಂಪೂರ್ಣ ವಿವರಿಸಿ ನನ್ನನ್ನುಬ್ಲಾಗ್ ಮಾಡಲು ಪ್ರೇರೇಪಿಸಿದ್ದರು.. ಮೊದಮೊದಲು ನನಗೆ ಅದುಹಾಸ್ಯವೆನಿಸಿದರೂ ಬರುಬರುತ್ತಾ ನನಗೂ ಬರೆಯಬೇಕೆಂಬ ಆಸೆಮೊಳೆಯಿತು..ಅವರನ್ನು ಒಮ್ಮೆ ಭೇಟಿಯಾಗಿದ್ದಾಗ ಅವರು ನನಗೊಂದು ಕಾಣಿಕೆನೀಡಿದ್ದರು, ಮನೆಗೆ ಬಂದು ಅದನ್ನು ತೆರೆದಾಗಲೇ ತಿಳಿದಿದ್ದು ಅದು 'ಲೇಖನಿಯೆಂದು'.. ಅವರ ಲೇಖನಿಯಿಂದ ಹಾಗೂ ಅವರ ಮಾತಿನಿಂದ ಇನ್ನಷ್ಟುಪ್ರೇರೆಪಿತನಾದ ನಾನು ಅಂದೇ ಬರೆಯಲು ನಿರ್ಧರಿಸಿ ಆ ಲೇಖನಿಯ ಮೇಲೆಯೇನನ್ನ 'ಕೈಚಳಕ' ಪ್ರಯೋಗಿಸಿದೆ.. ಆಗ ಮೂಡಿಬಂದ 'ನೆನಪಿನ ಕಾಣಿಕೆಯಲ್ಲಿ' ಎಂಬ ಈ ಕವನವನ್ನು ಈಗ ನಿಮ್ಮ ಮುಂದಿಟ್ಟಿದ್ದೇನೆ..
ನನ್ನ ಮೊದಲ ಪ್ರಯೋಗದ ಬಗ್ಗೆ ನಿಮ್ಮ ಅನಿಸಿಕೆ ಹೇಗಿದೆ ಎಂದು ತಿಳಿಯುವ ಕುತೂಹಲದಲ್ಲಿದ್ದೇನೆ.. ]
...

ಬರೆಯಲೇ ಒಂದು ಲೇಖನವ
ನೀ ಕೊಟ್ಟ ಲೇಖನಿಯಲ್ಲಿ,
ಬರೆಯಲೇ ಒಂದು ಸಿಹಿಗವನವ
ನೀ ಕೊಟ್ಟ ಲೇಖನಿಯಲ್ಲಿ,
ಬರೆಯಲೇ ಒಂದು ಸವಿಗೀತೆಯ
ನೀ ಕೊಟ್ಟ ಲೇಖನಿಯಲ್ಲಿ,
ಬರೆಯಲೇ ನನ್ನ ಆತ್ಮಕಥೆಯ
ನೀ ಕೊಟ್ಟ ಲೇಖನಿಯಲ್ಲಿ,
ಬರೆಯಲೇ ನಿಮಗೊಂದು ಸಂದೇಶವ
ನೀ ಕೊಟ್ಟ ಲೇಖನಿಯಲ್ಲಿ,
ಆ ನೆನಪಿನ ಕಾಣಿಕೆಯಲ್ಲಿ..

ಪರೀಕ್ಷಾರಂಗ ಎಂಬ ರಣರಂಗದಿ
ಖಡ್ಗದಂತ ಈ ಲೇಖನಿಯ ಹರಿತದಿ
ಶ್ವೇತಪುಟದ ಮೇಲೆ ಶಾಯಿನೆತ್ತರ
ಎರಚಾಡಿ ಹೋರಾಡಲೇ
ನೀ ಕೊಟ್ಟ ಲೇಖನಿಯಲ್ಲಿ..

ಆ ಲೇಖನಿಯಲ್ಲಿ ತುಂಬಿಕೊಂಡಿದೆ
ಶಾಯಿಯೆಂಬ ಜೀವದ್ರವ್ಯ
ಆ ಜೀವದ್ರವ್ಯದ ಕಣಕಣದಲ್ಲಿದೆ
ನಮ್ಮಿಬ್ಬರ ಮಧುರಬಾಂಧವ್ಯ..
ಚಿರನೂತನ ಸವಿಸ್ನೇಹಬಾಂಧವ್ಯ..
ಆದ್ದರಿಂದ..
ಬರೆಯಲಾರೆನು ಗುರುವೇ ಈ ಲೇಖನಿಯಲ್ಲಿ
ನೀವು ಕೊಟ್ಟ ನೆನಪಿನ ಕಾಣಿಕೆಯಲ್ಲಿ..

ನೆನಪಿಡಿ ಗುರುವೇ...
ಅಂತರ್ಜಲ ಬತ್ತಿಹೋಗುವ ತನಕ
ಲೇಖನಿಯ ಬರಿದುಮಾಡದೇ
ಕಾಯ್ದುಕೊಳ್ಳುವೆ ಜೀವದ್ರವ್ಯವ
ಎಂದೆಂದಿಗೂ ಅಮರವಾದ
ನಮ್ಮಿಬ್ಬರ ಅನುಬಾಂಧವ್ಯವ..
ಬರೆಯದೆ ಈ ನೆನಪಿನ ಕಾಣಿಕೆಯಲ್ಲಿ..

~ . ~

26 ಕಾಮೆಂಟ್‌ಗಳು:

ದಿನಕರ ಮೊಗೇರ ಹೇಳಿದರು...

ಗುರು ದೆಸೆ..
ಚೆನ್ನಾಗಿದೆ...... ಬರೀತಾ ಇರಿ...... ಓದಲು ನಾವಿದ್ದೇನೆ......

ಸಾಗರದಾಚೆಯ ಇಂಚರ ಹೇಳಿದರು...

ಗುರು ದೆಸೆ,
ಬರೆಯುತ್ತಿರಿ
ನಾವಿದ್ದೇವೆ ನಿಮ್ಮೊಂದಿಗೆ

Snow White ಹೇಳಿದರು...

chennagide sir..heege bareyutta iri :)

ಮನಮುಕ್ತಾ ಹೇಳಿದರು...

ಚೆನ್ನಾಗಿದೆ..ಬರೆಯುತ್ತಿರಿ..ನೀವು ಇನ್ನೂ ಚೆನ್ನಾಗಿ ಬರೆಯಬಲ್ಲಿರಿ..
ನಮಸ್ತೆ.

ಜಲನಯನ ಹೇಳಿದರು...

ಗುರುದೆಶೆಯ ಮನಸಿನ ಮನೆಗೆ ಬಂದಾಗ ಅನಿಸಿದ್ದು..ವಾವ್...ಚಿಕ್ಕವಯಸ್ಸಿನಲ್ಲಿ ಚೊಕ್ಕ ಪ್ರದರ್ಶನ...ಚನ್ನಾಗಿದೆ ಪದ ಪ್ರಯೋಗ..ಮುಂದುವರೆಯಲಿ...ಅಂದಹಾಗೆ ನಾನು ನಿಮ್ಮ ವಿ.ಸಿ.ಫಾರಂ ನಲ್ಲಿ ಎರಡು ವರ್ಷ ಸಂಶೋಧನಾ ಸಹಾಯನಾಗಿ ಕೆಲಸಮಾಡಿದ್ದೇನೆ..ಹಾಗಾಗಿ ಮಂಡ್ಯದ ಭೂಮಿ ನನಗೆ ಮೊದಲ ತುತ್ತನ್ನು ಕೊಟ್ಟಭೂಮಿ...ನಮನ ಆ ಭೂಮಿಗೆ...

ದೀಪಸ್ಮಿತಾ ಹೇಳಿದರು...

ಗುರು, ಚೆನ್ನಾಗಿದೆ ಕವನ

ಸೀತಾರಾಮ. ಕೆ. / SITARAM.K ಹೇಳಿದರು...

ಲೇಖನಿಯ ಮೇಲಿನ ಲೇಖನ ಚೆನ್ನಾಗಿದೆ.
ಬರೆಯುತ್ತಾ ಇರಿ.

ಚುಕ್ಕಿಚಿತ್ತಾರ ಹೇಳಿದರು...

ಕವಿತೆ ಚನ್ನಾಗಿದೆ...
ಇನ್ನಷ್ಟು ಬರೆಯಿರಿ...
ಆಲ್ ದ ಬೆಸ್ಟ್...

Manasaare ಹೇಳಿದರು...

guru ,
Chennagi baritira, Naanu nimm haage nann dukh, novanna mariyoke, haagu nimmellar jothe nanage annisidanna hanchiloke blog ge bandiddu.

ಸುಮ ಹೇಳಿದರು...

nice :-)

shivu.k ಹೇಳಿದರು...

ನಿಮ್ಮ ಬ್ಲಾಗಿಗೆ ಬಂದಾಗಲೇ ನೀವು ಬ್ಲಾಗ್ ಪ್ರಾರಂಭಿಸಿದ ರೀತಿಯನ್ನು ತಿಳಿಸಿದ್ದೀರಿ..ನಿಮ್ಮ ಕವನ ಚೆನ್ನಾಗಿದೆ...
ಮುಂದುವರಿಸಿ. all the best.

ಚಿತ್ರಾ ಹೇಳಿದರು...

ಚೆನ್ನಾಗಿದೆ ಕವನ ! ಹೀಗೇ ಮುಂದುವರಿಯಲಿ ನಿಮ್ಮ ಸಾಹಿತ್ಯ ಯಾನ !

ವನಿತಾ / Vanitha ಹೇಳಿದರು...

gudluck..keep writing:)

ಮನಸಿನಮನೆಯವನು ಹೇಳಿದರು...

'ದಿನಕರ ಮೊಗೇರ..' ಅವ್ರೆ.,

ನೀವು ಹೀಗೆ ಮತ್ತೆ ಮತ್ತೆ ಬರುತ್ತಿದ್ದರೆ ಬರೆದೆ ಬರೆಯುವೆ...

ಮನಸಿನಮನೆಯವನು ಹೇಳಿದರು...

'ಸಾಗರದಾಚೆಯ ಇಂಚರ' ಅವ್ರೆ.,

ಸದಾಕಾಲ ಹೀಗೆ ನನ್ನೊಂದಿಗೆ ಇದ್ದು ಸಹಕರಿಸಿ...

ಮನಸಿನಮನೆಯವನು ಹೇಳಿದರು...

'Snow White' ಅವ್ರೆ.,

ಹೀಗೆ ನೀವು ಮತ್ತೆ ಮತ್ತೆ ಬರುತ್ತಿದ್ದರೆ.. ಬರೀತೀನಿ...

ಮನಸಿನಮನೆಯವನು ಹೇಳಿದರು...

'ಮನಮುಕ್ತಾ' ಅವ್ರೆ.,

ನಿಮ್ಮ ಹಾರೈಕೆಯಂತೆ ಆಗಲಿ...

ಮನಸಿನಮನೆಯವನು ಹೇಳಿದರು...

'ಜಲನಯನ' ಅವ್ರೆ.,

ನಿಮ್ಮಂತ ಹಿರಿಯರ ಆಶಿರ್ವಾದದಿಂದಲೇ ಹೀಗೆ ಬರೆಯಲು ಸಾಧ್ಯವಾಯಿತು..
ನಮ್ಮಣ್ಣ ಈಗ ವಿ.ಸಿ.ಫಾರ್ಮ್ ನಲ್ಲೆ ಓದ್ತಾ ಇದ್ದಾರೆ...

ಮನಸಿನಮನೆಯವನು ಹೇಳಿದರು...

'Deepasmitha' ಅವ್ರೆ.,

ಧನ್ಯವಾದಗಳು.. ಮತ್ತೆ ಮತ್ತೆ ಬರುತ್ತಿರಿ...

ಮನಸಿನಮನೆಯವನು ಹೇಳಿದರು...

'ಚುಕ್ಕಿಚಿತ್ತಾರ' ಅವ್ರೆ.,

ನನ್ನ 'ಮನಸಿನಮನೆ'ಗೆ ಸುಸ್ವಾಗತ..
ನನ್ನ ಆಸೆಯೂ ಬರೆಯುವುದೇ ಆಗಿದೆ..
ಧನ್ಯವಾದಗಳು..
ಮತ್ತೆ ಮತ್ತೆ ಬರುತ್ತಿರಿ...

ಮನಸಿನಮನೆಯವನು ಹೇಳಿದರು...

'Manasaare' ಅವ್ರೆ.,

ನನ್ನ 'ಮನಸಿನಮನೆ'ಗೆ ಸ್ವಾಗತ..
ಇಲ್ಲಿಗೆ ಹಲವರು ಭಾವನೆಗಳನ್ನು ಹಂಚಿಕೊಳ್ಳುವುದಕ್ಕಾಗಿಯೇ ಬರುತ್ತಾರೆ...
ನಿಮಗೆ ಎಂದೆಂದಿಗೂ ಮನಸಿನ ಕದ ತೆರೆದಿರುತ್ತದೆ...

ಮನಸಿನಮನೆಯವನು ಹೇಳಿದರು...

'ಸುಮ' ಅವ್ರೆ.,

ನನ್ನ 'ಮನಸಿನಮನೆ'ಗೆ ಸ್ವಾಗತ..
ಧನ್ಯವಾದಗಳು.. ಹೀಗೆಯೇ ಬರುತ್ತಿರಿ...

ಮನಸಿನಮನೆಯವನು ಹೇಳಿದರು...

'shivu' ಅವ್ರೆ.,

ನನ್ನ 'ಮನಸಿನಮನೆ'ಗೆ ಸ್ವಾಗತ..
ಧನ್ಯವಾದಗಳು.. ನೀವು ಹೀಗೆ ಬರುತ್ತಿದ್ದರೆ ಮುಂದುವರೆಯುತ್ತದೆ...

ಮನಸಿನಮನೆಯವನು ಹೇಳಿದರು...

'ಚಿತ್ರಾ' ಅವ್ರೆ.,

ನನ್ನ 'ಮನಸಿನಮನೆ'ಗೆ ಸ್ವಾಗತ..
ಧನ್ಯವಾದಗಳು..
ತಿಳಿದಿರಲಿ:ನನ್ನ ಸಾಹಿತ್ಯ ಯಾನ ಮುಂದುವರೆಯಲು ನೀವೂ ಸಹಕರಿಸಬೇಕು...

ಮನಸಿನಮನೆಯವನು ಹೇಳಿದರು...

'ವನಿತಾ/Vanitha' ಅವ್ರೆ.,

ನನ್ನ 'ಮನಸಿನಮನೆ'ಗೆ ಸ್ವಾಗತ..
ಧನ್ಯವಾದಗಳು..
ಮತ್ತೆ ಮತ್ತೆ ಬರುತ್ತಿರಿ...

ಮನಸಿನಮನೆಯವನು ಹೇಳಿದರು...

'ಸೀತಾರಾಮ. ಕೆ.' ಅವ್ರೆ.,

ಧನ್ಯವಾದಗಳು..
ಹೀಗೆ ಬರುತ್ತಿದ್ದರೆ ಬರೆಯುವೆ...

Related Posts Plugin for WordPress, Blogger...