ಆರಂಭದ ಮುನ್ನ...

ಜ್ಞಾನಮೂರ್ತಿ...

ಹೌದು ಅವ್ರೆ.

ನನ್ನ ಬದುಕು ಕಂಡ ಅನಿರೀಕ್ಷಿತ ತಿರುವುಗಳಲ್ಲಿ ಅನಿರೀಕ್ಷಿತವಾಗಿ ಪರಿಚಯವಾದವರು.,ನನ್ನ ಸಂಬಂಧಿ-ಮಿತ್ರರಿಂದಲೇ ನಾನು ದುಃಖಕ್ಕೀಡಾಗಿ ಜೀವನದ ಬಗ್ಗೆ ಬೇಸರಗೊಂಡಿದ್ದಾಗ 'ಸಂತೆಯೊಳಗೊಬ್ಬ ಸಂತ'ನಂತೆ ಸಿಕ್ಕಿ ಸಾಂತ್ವನ ಹೇಳಿದ ಆಪ್ತರು..

ಬ್ಲಾಗ್ ಎಂಬ ಸಾಗರದ ಹತ್ತಿರ ಕರೆದೊಯ್ದು,ಸಣ್ಣ-ಪುಟ್ಟ ದೋಣಿಗಳಿಂದ ಹಿಡಿದು ಬೃಹದಾಕಾರದ ನೌಕೆಗಳಿದ್ದ ಅಲ್ಲಿ ಅದಾಗಲೇ ಅಲ್ಲಿದ್ದ ಅವರ ಒಂದು ಪುಟ್ಟ ಹಡಗಿನಲ್ಲಿ ನೌಕಾಯಾನ ಮಾಡಿಸಿದರು... ಆ ಸಾಗರದ ಆಳ-ಅಗಲಗಳನ್ನು ನನಗೆ ವಿವರಿಸಿಕೊಟ್ಟು, ಆ ಸಾಗರದಿ ನನ್ನದೊಂದು ಪುಟ್ಟ ಹಾಯಿದೋಣಿ ಹಾಯ್ದುಬಿಡಲು ನನ್ನೊಂದಿಗೆ ಭಾಗಿಯಾದವರು.ನನಗೆ ತಿಳಿಯದೆ ನನ್ನಲ್ಲಿ ಅಡಕವಾಗಿದ್ದ ಪ್ರತಿಭೆಯನ್ನು ಬಡಿದೆಬ್ಬಿಸಿ ನನ್ನಲ್ಲಿ ಬರೆಯುವ ಉತ್ಸಾಹ ತುಂಬಿ,ನಾನೊಬ್ಬ ಬ್ಲಾಗಿಗನಾಗಲು ಕಾರಣರಾದವರು...


ನಾ ಕಂಡಂತೆ ಅವರು "ಬಿರುಗಾಳಿಯಲ್ಲಿ ಸಿಕ್ಕ 'ಹಡಗು' ''.

ಅದೇಕೋ ನಾನು ಬ್ಲಾಗಿಗೆ ಕಾಲಿಡುತ್ತಿದ್ದಂತೆ ನಾನಿಟ್ಟ ಹೆಜ್ಜೆಗಳು ಮರಳುಗಾಡಿನಲ್ಲಿ ಇಟ್ಟ ಅಂಬೆಗಾಲಿನ ಹೆಜ್ಜೆಯಂತೆ ಮರೆಯಾಗುತ್ತಾ, ಬ್ಲಾಗಿನಲ್ಲಿ ನಾ ಕಾಣುತ್ತಿದ್ದ ಸೋಲಿನ ಪ್ರಶ್ನೆಗೆ ಹಲವರ ಸಾಂತ್ವನ ಹಾಗೂ ನನ್ನ ವ್ಯರ್ಥಪ್ರಯತ್ನ ಉತ್ತರ ನೀಡಲೇ ಇಲ್ಲ...

ಜಾತಕವನ್ನು ನಂಬುವ ನಾನು ಈ ಸೋಲಿಗೆ ನನ್ನ ಜಾತಕದಲ್ಲಿ ಕಂಡುಬಂದ ''ರಾಹುದೆಸೆ"(ಕಳೆದ ಹದಿನೆಂಟು ವರ್ಷ ಕಾಡಿದ ವಿಷಘಳಿಗೆ) ಕಾರಣ ಎಂದುಕೊಂಡೆ.

ಮುಂದೊಂದು ದಿನ ಬ್ಲಾಗೆಂಬ ಸಾಗರದಲ್ಲಿ ನನ್ನ ಪುಟ್ಟ ದೋಣಿ ಕೇಂದ್ರಬಿಂದುವಾಗಿ ಅಲೆಯೆಬ್ಬಿಸಬಲ್ಲದು ಎಂಬ ನಿರೀಕ್ಷೆಯಲ್ಲಿ ಇಂದಿನಿಂದ ಆರಂಭವಾಗುವ "ಗುರುದೆಸೆ''ಯಲ್ಲಿ ಮತ್ತೊಮ್ಮೆ ಬ್ಲಾಗಿನತ್ತ ನನ್ನ ಪುಟ್ಟ ದೋಣಿಯನ್ನು ಪಾದಾರ್ಪಣೆ ಮಾಡಿಸುತ್ತಿದ್ದೇನೆ...

ಈ ನನ್ನ "ಮನಸಿನ ಮನೆ"ಯನ್ನು ಯಾವುದೇ ಬಿರುಗಾಳಿಯ ಹೊಡೆತಕ್ಕೆ ಸಿಲುಕದಂತೆ ಕಾಪಾಡಲು ತಾವೆಲ್ಲರೂ ಸಹಕರಿಸುತ್ತೀರೆಂದು ನಂಬಿದ್ದೇನೆ...

ನಮ್ಮ ನಾಡದೇವತೆ ಶ್ರೀ ಭುವನೇಶ್ವರಿಗೆ ನಮಿಸಿ, ಕುಲದೇವತೆ ಶ್ರೀ ವೆಂಕಟರಮಣಸ್ವಾಮಿಗೆ ಶರಣಾಗಿ, ಗ್ರಾಮದೇವತೆ ಶ್ರೀ ಪಟ್ಟಲದಮ್ಮನಿಗೆ ತಲೆಬಾಗಿ, ಮನೆದೇವತೆ ನಿರಾಭರಣ ಸುಂದರಿ ಚಾಲಮ್ಮನ ಪಾದಾರವಿಂದಗಳಿಗೆ ಎರಗಿ ಎಲ್ಲರ ಕೃಪೆ ಬೇಡುತ್ತಾ, ಸಮಸ್ತ ಬ್ಲಾಗಿಗರಿಗೂ.. ಎಲ್ಲ ಕನ್ನಡಿಗರಿಗೂ ವಂದಿಸುತ್ತಾ...ಜೊತೆಗೆ,


'ಅಪ್ಪಾಜಿ' ಇಲ್ಲದ ಹೊಸವರ್ಷದ ಸಂಭ್ರಮ ನಮಗೇಕೆ..
'ಕಂಬನಿಯ ಕುಯಿಲು'೩ ದಶಕಗಳ ಕಾಲ ಕನ್ನಡಾಭಿಮಾನಿಗಳ ಹೃದಯ ಸಿಂಹಾಸನವನ್ನು ಆಳಿ ಇತ್ತೀಚಿಗಷ್ಟೇ ಸಿಂಹಘರ್ಜನೆ ನಿಲ್ಲಿಸಿ ನಮ್ಮನ್ನು ಅಗಲಿದ ಭಾವಶಿಲ್ಪಿ 'ಡಾ.ವಿಷ್ಣುವರ್ಧನ' ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ...

ವಂದನೆಗಳು..

ಇಂತಿ ನಿಮ್ಮವ /-

22 ಕಾಮೆಂಟ್‌ಗಳು:

Putta ಹೇಳಿದರು...

congrats,

Deepasmitha ಹೇಳಿದರು...

ಬ್ಲ್ಲಾಗ್ ಲೋಕಕ್ಕೆ ಸ್ವಾಗತ. ನಿಮ್ಮ ಮನಸಿನ ಭಾವನೆಗಳನ್ನು ಇಲ್ಲಿ ನಿಸ್ಸಂಕೋಚವಾಗಿ ತೆರೆದಿಡಬಹುದು. ಒಳ್ಳೆಯ ಸ್ನೇಹಿತರು ಸಿಗುತ್ತಾರಿಲ್ಲಿ

ಶಿವಶಂಕರ ವಿಷ್ಣು ಯಳವತ್ತಿ ಹೇಳಿದರು...

hi guru..

hegidiya? exams hege maadide?

free madkondu phn maadu..

nan number gottalla.//

9663056504

ಮತ್ತೆ ಬ್ಲಾಗ್ ಲೋಕಕ್ಕೆ ಸ್ವಾಗತ
ಇಂತಿ ನಿಮ್ಮ ಪ್ರೀತಿಯ,

ಯಳವತ್ತಿ..

http://shivagadag.blogspot.com

Nisha ಹೇಳಿದರು...

welcome to the blog

ಸಾಗರದಾಚೆಯ ಇಂಚರ ಹೇಳಿದರು...

ಬ್ಲಾಗ್ ಪ್ರಪಂಚಕ್ಕೆ ಸ್ವಾಗತ
ನಿಮ್ಮಿಂದ ಉತ್ತಮ ಲೇಖನಗಳು ಹರಿದು ಬರಲಿ
ಸದಾ ನಿಮ್ಮ ಓದುಗರಾಗಿ ನಾವಿರುತ್ತೇವೆ

ಸೀತಾರಾಮ. ಕೆ. ಹೇಳಿದರು...

ಬ್ಲೊಗ್-ಲೋಕಕ್ಕೆ ಸ್ವಾಗತ. ನಿಮ್ಮಿ೦ದ ಉತ್ತಮ ಬರಹ ನೀರೀಕ್ಷಿಸುತ್ತಿದ್ದೆವೆ. ತಮ್ಮ ರಹುದೆಸೆ ಕಳೆದು ಗುರುದೆಸೆ ಪ್ರಾರ೦ಭವಾದದ್ದು ಕೇಳಿ ಸ೦ತೋಷವಾಯಿತು. ಮನದಲ್ಲಿನ ಅಶಾಭಾವ ಕರಗಿದರೆ ರಾಹುದೆಸೆ ಶುರುವಾಗುವದು. ಅದು ಕಳೆಯದ೦ತೆ ನಿರ೦ತರ ಅಶಾಭಾವದೊಡನೆ ಮುನ್ನುಗ್ಗುತ್ತಿದ್ದರೆ ರಹುದೆಸೆ ಕಳೆದು ಶುಕ್ರದೆಸೆ ಬೆ೦ಬತ್ತುವದು ಎ೦ದು ನ೦ಬಿದವ ನಾನು.
ಒಳ್ಳೆಯದಾಗಲಿ.

ಆನಂದ ಹೇಳಿದರು...

ಬ್ಲಾಗ್ ಲೋಕಕ್ಕೆ ಸ್ವಾಗತ.
ಅಂದಹಾಗೆ ರಾಹುದೆಸೆ ಅನ್ನುವ ಹೆಸರಲ್ಲಿ ಬರೆಯುತ್ತಿದ್ದುದು ನೀವೇನಾ?

ಗೌತಮ್ ಹೆಗಡೆ ಹೇಳಿದರು...

welcome:)

Snow White ಹೇಳಿದರು...

ನಿಮಗೆ ಸ್ವಾಗತ :)

ಗುರುದೆಸೆ !! ಹೇಳಿದರು...

putta ಅವರಿಗೆ,

ನನ್ನ 'ಮನಸಿನಮನೆ'ಗೆ ಸ್ವಾಗತ..

ಹೀಗೆಯೇ ಮತ್ತೆ ಮತ್ತೆ ಬರುತ್ತಿರಿ..

ಗುರುದೆಸೆ !! ಹೇಳಿದರು...

Deepasmitha ಅವ್ರೆ,

ನಿಮಗೂ ಕೂಡ ನನ್ನ ಮನಸಿನ ಮನೆಗೆ ಸ್ವಾಗತ ಸುಸ್ವಾಗತ.. ..

ನೀವು ಹೇಳಿದಂತೆ ಸ್ನೇಹಿತರೆಲ್ಲ ಸಿಗಲಿ..

ಹೀಗೆಯೇ ಮತ್ತೆ ಮತ್ತೆ ಬನ್ನಿ,ನಿಮಗಾಗಿ ನನ್ನ 'ಮನಸಿನಮನೆ' ಬಾಗಿಲು ಸದಾ ತೆರೆದಿರುತ್ತದೆ..

ಗುರುದೆಸೆ !! ಹೇಳಿದರು...

ಶಿವಶಂಕರ ವಿಷ್ಣು ಯಳವತ್ತಿ ಅವರಿಗೆ..,

ಧನ್ಯವಾದಗಳು..

ನಾನು ಚೆನ್ನಾಗಿದ್ದೀನಿ,ನೀವು ಚೆನ್ನಾಗಿದ್ದೀರಾ ಅಂದುಕೊಂಡಿದ್ದೇನೆ,..

ನಿಮ್ಮ ನಂ. ಗೊತ್ತಿರಲಿಲ್ಲ,ಇನ್ಮುಂದೆ ಕರೆ ಮಾಡ್ತೀನಿ ಬಿಡಿ.


ಹೀಗೆಯೇ ಮತ್ತೆ ಮತ್ತೆ ಬನ್ನಿ, ನಿಮಗಾಗಿ ನನ್ನ 'ಮನಸಿನಮನೆ' ಬಾಗಿಲು ಸದಾ ತೆರೆದಿರುತ್ತದೆ..

ಗುರುದೆಸೆ !! ಹೇಳಿದರು...

Nisha ಅವರಿಗೆ..,

ಧನ್ಯವಾದಗಳು..

ಹೀಗೆಯೇ ಮತ್ತೆ ಮತ್ತೆ ಬರುತ್ತಿರಿ..

ಗುರುದೆಸೆ !! ಹೇಳಿದರು...

'ಸಾಗರದಾಚೆಯ ಇಂಚರ' ಅವರಿಗೆ,

ಧನ್ಯವಾದಗಳು..


ನಿಮಗೂ ನನ್ನ 'ಮನಸಿನಮನೆ'ಗೆ ಸುಸ್ವಾಗತ..

ನೀವು ಸದಾ ಓದುವಿರಾದರೆ ಬರೆದೆ ಬರೆಯುವೆ..

ಗುರುದೆಸೆ !! ಹೇಳಿದರು...

'ಸೀತಾರಾಮ.ಕೆ.' ಅವರಿಗೆ,

ನಿಮ್ಮ ನಿರೀಕ್ಷೆ ಸುಳ್ಳಾಗದಂತೆ ನೋಡಿಕೊಳ್ಳುತ್ತೇನೆ...

ನೀವು ಹೇಳಿದಂತೆ ಆದಷ್ಟು ಬೇಗ ಶುಕ್ರದೆಸೆ ಬರಲಿ..

ಮತ್ತೆ ಮತ್ತೆ ಬರುತ್ತಿರಿ..

ಗುರುದೆಸೆ !! ಹೇಳಿದರು...

'ಆನಂದ' ಅವರಿಗೆ,

ನನ್ನ 'ಮನಸಿನಮನೆ'ಗೆ ಸ್ವಾಗತ..

ಹೌದು 'ರಾಹುದೆಸೆ' ಹೆಸರಲ್ಲಿ ಬರೆಯುತ್ತಿದ್ದುದು ನಾನೆ..

ಹೀಗೆ ಮತ್ತೆ ಮತ್ತೆ ಬರುತ್ತಿರಿ..

ಗುರುದೆಸೆ !! ಹೇಳಿದರು...

'ಗೌತಮ್ ಹೆಗಡೆ' ಅವ್ರೆ,

ನಿಮಗೂ ಕೂಡ ನನ್ನ 'ಮನಸಿನಮನೆ'ಗೆ ಸ್ವಾಗತ..

ಹೀಗೆ ಮತ್ತೆ ಮತ್ತೆ ಬರುತ್ತಿರಿ..

ಗುರುದೆಸೆ !! ಹೇಳಿದರು...

'Snow White' ಅವ್ರೆ,

ನಿಮಗೂ ಕೂಡ ನನ್ನ 'ಮನಸಿನಮನೆ'ಗೆ ಸ್ವಾಗತ..

ಹೀಗೆ ಮತ್ತೆ ಮತ್ತೆ ಬರುತ್ತಿರಿ..

ಸುಧೇಶ್ ಶೆಟ್ಟಿ ಹೇಳಿದರು...

ಇ೦ಟರೆಸ್ಟಿ೦ಗ್ ಆಗಿದೆ ನಿಮ್ಮ ಬ್ಲಾಗ್ :) ಲೇಖನಿಯ ಬಗೆಗಿನ ಕವನ ಇಷ್ಟ ಆಯಿತು... ಲೇಖನಿ ಒ೦ದು ಆತ್ಮೀಯ ವಸ್ತು ಅಲ್ವೇ....

ನಿಮ್ಮ ಮು೦ದಿನ ಬರಹಗಳ ನಿರೀಕ್ಷೆಯಲ್ಲಿ....

ಗುರು-ದೆಸೆ !! ಹೇಳಿದರು...

ಸುಧೇಶ್ ಶೆಟ್ಟಿ ಅವರಿಗೆ..,

ನನ್ನ 'ಮನಸಿನಮನೆ' ಸುಸ್ವಾಗತ..

ಹೀಗೆಯೇ ಮತ್ತೆ ಮತ್ತೆ ಬನ್ನಿ..

* ನಮನ * ಹೇಳಿದರು...

ಜ್ಞಾನಮೂರ್ತಿ!!1.ಅ೦ದರೆ ಯಾರು ಅ೦ತ ತಿಳಿಸ್ಬಹುದೆ ಸರ್?

ಗುರು-ದೆಸೆ !! ಹೇಳಿದರು...

'ನಮನ' ಅವ್ರೆ.,

ನಿಮಗೆ ನನ್ನ 'ಮನಸಿನಮನೆ'ಗೆ ಸ್ವಾಗತ..

ಖಂಡಿತವಾಗಿ ಇಷ್ಟರಲ್ಲೇ ಅವರ ಬಗ್ಗೆ ತಿಳಿಸುವೆ..
ನನಗೆ ಕರೆ ಮಾಡಿ:9686615660

Related Posts Plugin for WordPress, Blogger...