ಅಚ್ಚುಬೆಲ್ಲದ ಗಲ್ಲದವಳೇ..

!!ಜ್ಞಾನಾರ್ಪಣಮಸ್ತು!!

[ಮನದ ಮಲ್ಲಿಗೆಯ ನೆನೆದು ]


ಮಿನುಗುತಾರೆಗಳೆಲ್ಲವ ಕಣ್ಣಿಟ್ಟು ನೋಡಿದೆನು
ನಿನ್ನ ಕಣ್ ಬೆಳಕಿಗೆ ಸಮನಾದ ಹೊಂಬೆಳಕಿಲ್ಲ.. 
ನಿನ್ನ ಕಂಗಳಂತೆ ಹೊಳೆವ ಮಿನುಗುದೀಪ ಬೇರೊಂದಿಲ್ಲ..

ನೂರಾರು ಹೂಗಳ ಮನವಿಟ್ಟು ನೋಡಿದೆನು 
ನಿನ್ನ ತುಟಿಯಂತೆ ಹೂ ದಳಗಳೇ ಇಲ್ಲ..
ನಿನ್ನಾ ಹೂನಗೆಗೆ ಸಮನಾದ ಹೂ ಮತ್ತೊಂದಿಲ್ಲ.. 

ಅದೆಷ್ಟೋ ಸ್ವರಕೆ ಕಿವಿಗೊಟ್ಟೆ ನಾನು
ನಿನ್ನ ಕಾಲ್ಗೆಜ್ಜೆ ಹಾಡಿಗೆ ಸಾಟಿ ಇಲ್ಲ.. 
ನಿನ್ನಾ ನಗು ಮಾತಿಗಿಂತ ಸಂಗೀತ ಇನ್ನೊಂದಿಲ್ಲ.. 

ನಿನ್ನಾ ನಡುವ ಬಳುಕು
ಯಾವ ಬಳ್ಳಿಗೂ ಇಲ್ಲ.. 
ನಿನ್ನಲ್ಲಿನ ಆ ಸೆಳೆತ
ಯಾವ ಸೊಬಗಿಗೂ ಇಲ್ಲ.. 

ಅಚ್ಚುಬೆಲ್ಲಕ್ಕಿಂತ ರುಚಿಯೇನೋ ನಿನ್ನ ಗಲ್ಲ
ನಾನು ಕಚ್ಚಿ ನೋಡಿಲ್ಲ.. 
ಜೇನಿಗಿಂತ ಸವಿಯೇನೋ ನಿನ್ನಾ ತುಟಿಗಳು
ನಾ ಚಪ್ಪರಿಸಿಯೇ ಇಲ್ಲ..

ಮನಸಿನಮನೆಗೆ ದೀಪವಿಟ್ಟ ನನ್ನವಳೆ
ನಿನ್ನ ಪರಿಶುದ್ಧ ಹೃದಯಕಿದೋ ನನ್ನ ಅಕ್ಷರಪುಷ್ಪಾರ್ಚನೆ...


9 ಕಾಮೆಂಟ್‌ಗಳು:

Raviteja Shastri ಹೇಳಿದರು...

ಚೆನ್ನಾಗಿದೆ ಗುರು :)

sunaath ಹೇಳಿದರು...

ಅಚ್ಚುಬೆಲ್ಲದ ರುಚಿ ಹಾಗು ಜೇನಿನ ರುಚಿ ನಿಮ್ಮ ಅನುಭವಕ್ಕೆ ಬೇಗನೇ ಬರಲೆಂದು ಹಾರೈಸುತ್ತೇನೆ. ಕವನ ಮಧುರವಾಗಿದೆ.

Kalavathi Madhu ಹೇಳಿದರು...

chandada kavana

ಮನಸಿನಮನೆಯವನು ಹೇಳಿದರು...

Raviteja Shastri., ಧನ್ಯವಾದಗಳು

ಮನಸಿನಮನೆಯವನು ಹೇಳಿದರು...

sunaath.,
ಹಹಹ.. ಚಂದದ ಹಾರೈಕೆ.. ಧನ್ಯವಾದಗಳು.

ಮನಸಿನಮನೆಯವನು ಹೇಳಿದರು...

Kalavathi Madhu.,
ನನ್ನ 'ಮನಸಿನಮನೆ'ಗೆ ಸ್ವಾಗತ.. ಕವನದಮೆಚ್ಚುಗೆಗೆ ಧನ್ಯವಾದಗಳು.. ಹೀಗೆಯೇ ಬರುತ್ತಿರಿ.

ಅನಾಮಧೇಯ ಹೇಳಿದರು...

Nice..........................................................................

Sandhya Hegde ಹೇಳಿದರು...

ಮನಸಿನ ಮನೆಯಲ್ಲಿ ದೀಪ ಬೆಳಗಲಿ. ನಿರಂತರ ಅಕ್ಷರದಾರ್ಚನೆ ನಡೆಯಲಿ. ಚೆನ್ನಾಗಿದೆ............

kushi N ಹೇಳಿದರು...

Chennagide sir...

Related Posts Plugin for WordPress, Blogger...