ಕೂಗೊಮ್ಮೆ ಪ್ರಾಣಪಕ್ಷಿಯ!!

!!ಜ್ಞಾನಾರ್ಪಣಮಸ್ತು!!

~.~


ಹೇ ಭಗವಂತಾ..
ಹೊಲಿ ನನ್ನ ತುಟಿಗಳನು
ಒಣಮಾತು ಉದುರದಿರಲಿ..
ಮೂಕಮನಸು ನನಗಿರಲಿ..

ಕತ್ತಲಾಗಿಸು ನನ್ನೀ ನೋಟವ
ಕಳ್ಳನೋಟ ಇಣುಕದಿರಲಿ..
ಶೂನ್ಯ ನೋಟವೆ ನನಗಿರಲಿ..

ಕೊಟ್ಟು ಬಿಡೋ ಕಿವುಡುತನವ
ತೆಗಳಿಕೆಗಳು ಕಿವಿ ತಟ್ಟದಿರಲಿ..
ಹೊಗಳಿಕೆಗಳೂ ಮುಟ್ಟದಿರಲಿ..

ಕಟ್ಟಿಬಿಡು ಈ ತೋಳುಗಳ
ಆಸರೆಗೆ ಚಾಚದಿರಲಿ..
ಆಸೆಯ ಬಾಚಿ ಅಂಗಲಾಚದಿರಲಿ..

ನಿಷ್ಕ್ರಿಯಗೊಳಿಸು ನನ್ನ ನಡೆಯ
ಕಾಣದ ಕಡೆ ಹೆಜ್ಜೆ ಹೊರಡದಿರಲಿ..
ನೆಮ್ಮದಿ ಹರಸಿ ಸಾಗದಿರಲಿ..

ಕಲ್ಲಾಗಿಸೋ ಈ ಎದೆಯ
ಕಷ್ಟಗಳಿಗೆ ಕುಗ್ಗದಿರಲಿ..
ಮರುಗಿ ಕರಗದಿರಲಿ..

ಆರಿಸಿಬಿಡು ಹೃದಯದೀಪವ
ಪ್ರೀತಿ ಪ್ರೇಮಗಳು ಬೆಳಗದಿರಲಿ..
ಬಾಳೇ ಹೊಳೆಯದಿರಲಿ..

ಮುಚ್ಚಿಬಿಡೋ ಕಣ್ ಕೊಡವ
ಕಂಬನಿ ತುಂಬಿ ತುಳುಕದಿರಲಿ..
ನೋವು ಸೋರದಿರಲಿ..

ಹೇ ಭಗವಂತಾ..
ಕೂಗೊಮ್ಮೆ ಈ ಪ್ರಾಣಪಕ್ಷಿಯ
ಮಲಗಿ ಬದುಕ ಕನಸ ಕಾಣದಿರಲಿ..

ಹೇ ಭಗವಂತಾ...
ಕೂಗೊಮ್ಮೆ ಪ್ರಾಣಪಕ್ಷಿಯ!!

~-~


24 ಕಾಮೆಂಟ್‌ಗಳು:

sunaath ಹೇಳಿದರು...

ಆರ್ತ ಭಾವನೆಯ ಈ ಕವನವು ಸುಂದರವಾಗಿದೆ ಎಂದು ಹೊಗಳಲೆ ಅಥವಾ ಇಂತಹ ಭಾವನೆಗಳು ನಿಮ್ಮಲ್ಲಿ ಬಾರದಿರಲಿ ಎಂದು ಪ್ರಾರ್ಥಿಸಲೆ?

ದಿನಕರ ಮೊಗೇರ ಹೇಳಿದರು...

bhaavuka manada novina kavana....

vyaktapaDisida rIti tumbaa chennaagide........

ವಿಚಲಿತ... ಹೇಳಿದರು...

sunaath ಅವ್ರೆ,
ಇಂತ ಭಾವನೆಗಳು ನನ್ನಲ್ಲಿ ಬಂದು ಅವು ಸಾಲುಗಳ ರೂಪ ಪಡೆದು ನಿಮ್ಮ ಹೊಗಳಿಕೆಗೆ ಪಾತ್ರವಾಗಲಿ..
ಮೊದಲ ಪ್ರತಿಕ್ರಿಯೆಗೆ ಧನ್ಯವಾದಗಳು

ವಿಚಲಿತ... ಹೇಳಿದರು...

ದಿನಕರ ಮೊಗೇರ ಅವ್ರೆ,
ಭಾವುಕ ಮನದ ಅಳಲ ರೀತಿ ಮೆಚ್ಚಿದ್ದಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ ಹೇಳಿದರು...

tumbaa sundata ola manassina bhaavanegalu

adbhuta kavana

ವಸಂತ್ ಹೇಳಿದರು...

ಮನಸ್ಸಿನ ಭಾವನೆ ಮತ್ತು ತೊಳಲಾಟದ ವಿಸ್ತರಣೆ ಉತ್ತಮವಾಗಿದೆ...

ವಿಚಲಿತ... ಹೇಳಿದರು...

ಸಾಗರದಾಚೆಯ ಇಂಚರ ಅವ್ರೆ,
ಒಳ ಮನಸಿನ ಭಾವನೆಗಳ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಜಲನಯನ ಹೇಳಿದರು...

ಮನಸಿನ ಮನೆಯಲ್ಲಿ- ಮನೆಮಾಡಿ ಭಾವ ರೆಕ್ಕೆಗಳ ಬಡಿದು ಹೊರಬಂದ ಈ ಸುಂದರ ಕವನಹಕ್ಕಿಗೆ...ಜೈ..ಹೋ...
ಅದರಲ್ಲೂ ಅಂತಿಮ ಸಾಲುಗಳು,,,,
ಹೇ ಭಗವಂತಾ..
ಕೂಗೊಮ್ಮೆ ಈ ಪ್ರಾಣಪಕ್ಷಿಯ
ಮಲಗಿ ಬದುಕ ಕನಸ ಕಾಣದಿರಲಿ..
ಸುಂದರ,,,,,

ಮನದಾಳದಿಂದ............ ಹೇಳಿದರು...

ಮನಸಿನ ಮನೆಯಲ್ಲಿ ಭಾವನಾಲೋಕದ ಅನಿಸಿಕೆ,
ಸುಂದರ ಕವನ.............

ವಿಚಲಿತ... ಹೇಳಿದರು...

ವಸಂತ್ ಅವ್ರೆ,
ಮನದ ತೊಳಲಾಟ ಅರಿತಿದ್ದಕ್ಕೆ ಧನ್ಯವಾದಗಳು

ವಿಚಲಿತ... ಹೇಳಿದರು...

ಜಲನಯನ ಅವ್ರೆ,
ಮನದಾಳದ ಅಳಲಿನ ಸಾಲುಗಳ ಮೆಚ್ಚಿದ್ದಕ್ಕೆ ಧನ್ಯವಾದಗಳು

ವಿಚಲಿತ... ಹೇಳಿದರು...

ಮನದಾಳದಿಂದ ಅವ್ರೆ,
ಭಾವದನಿಸಿಕೆ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಚಿನ್ಮಯ ಭಟ್ ಹೇಳಿದರು...

ಕಣ್ಣಿಂದ ಎದೆಯೊಳಗೇ ಹೋಗುವ ಭಾವ ವಾಯು...
ಮುಂದುವರೆಯಲಿ ತಮ್ಮ ಭಾವಯಾನ..

ಬನ್ನಿ ನಮ್ಮನೆಗೂ
http://chinmaysbhat.blogspot.com/

ಇತಿ ನಿಮ್ಮನೆ ಹುಡುಗ,
ಚಿನ್ಮಯ ಭಟ್

ವಿಚಲಿತ... ಹೇಳಿದರು...

ಚಿನ್ಮಯ ಭಟ್ ಅವ್ರೆ,
ನಿಮ್ಮ ಹೊಸ ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.
ಖಂಡಿತ ನಿಮ್ಮ ಮನೆಗೆ ಬರುತ್ತೇನೆ

Shruthi Rao ಹೇಳಿದರು...

neevu nimma bhaavanegalannu vyakta padisida riti bahu hidisitu....aadare idu badukinalli baruva shoonyate, nyoonategalige hedari palaayanavaada maduttiruvuda anta nanna prashne....? novugalige spandisi....edurisi.....:)
keep writing..............:)

ಮೌನರಾಗ... ಹೇಳಿದರು...

ವಿಚಲಿತ..
ಅದೇನೋ ನಿಮ್ಮ ಕವನ ಬಹುವಾಗಿ ಮನಸಿಗೆ ಕಾಡಿತು...ಮತ್ತೇ ಮತ್ತೇ ಓದುವಂತೆ ಮಾಡುತ್ತಿದೆ...
ಪೂರ್ತಿಯಾಗಿ ಓದಿದ ಮೇಲೆ ಅದೇನೋ ಸಂತೋಷ.. ಖಾಲಿಯಾಗಿಸಿದ ಮನಸಿನ ಸಂತೋಷ ಅದು...
ಪ್ರತಿ ಸಾಲುಗಳು ಇಷ್ಟವಾಯಿತು..

prabhamani nagaraja ಹೇಳಿದರು...

ಬಸವಣ್ಣನವರ ವಚನವೊ೦ದು ನೆನಪಾಯ್ತು. ಸು೦ದರ, ನಿವೇದನಾತ್ಮಕ ಕವನ. ಅಭಿನ೦ದನೆಗಳು.

nenapina sanchy inda ಹೇಳಿದರು...

Guru!!!
why vishaada??!!!
malathi S

ಸೀತಾರಾಮ. ಕೆ. / SITARAM.K ಹೇಳಿದರು...

ಜೀವನದ ನೋವುಂಡ ತೀವ್ರ ಜರ್ಜರಿತ ಅಂತರ್ಯದ ಆರ್ತನಾದ ದೇವರನ್ನೂ ತಟ್ಟಿ ಬಿಡುವಂತಿದೆ. ಹಾಗೇನಾದರೂ ಆದಲ್ಲಿ ಕೂಗದಿರಲಿ ಅವನು ಪ್ರಾಣಪಕ್ಷಿಯ...ಪ್ರಾಣಪಕ್ಷಿಗೆ ಹೊಸ ಚೈತನ್ಯ ನೀಡಲಿ ಎಂದು ಹಾರೈಸುತ್ತಾ...

ವಿಚಲಿತ... ಹೇಳಿದರು...

Shruthi Rao.,

ನನ್ನ 'ಮನಸಿನಮನೆ'ಗೆ ಸ್ವಾಗತ..
ನಾನು ನಿಮ್ಮ ಮಾತಿನಂತೆಯೇ ಸಮಸ್ಯೆಗಳಿಗೆ ಸ್ಪಂದಿಸಲು ಸಾಕಷ್ಟು ಪ್ರಯತ್ನ ಪಡುತ್ತಿದ್ದರೂ ಕಷ್ಟವಾಗುತ್ತಿದೆ..
ದೇವರಿದ್ದಾನೆ.. ಮುಂದೆ ನೋಡೋಣ..
ಹೀಗೆಯೇ ಬರುತ್ತಿರಿ..

ವಿಚಲಿತ... ಹೇಳಿದರು...

prabhamani nagaraja.,

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು..

ವಿಚಲಿತ... ಹೇಳಿದರು...

nenapina sanchy inda.,

ಈ ವಿಷಾದಕ್ಕೆ ಕಾರಣ ನೂರಾರು..
'ಆಸೆ' ಎನ್ನಬಹುದೇನೋ..
ಅಭಿಪ್ರಾಯ ನೀಡಿದ್ದಕ್ಕೆ ಧನ್ಯವಾದಗಳು..

ವಿಚಲಿತ... ಹೇಳಿದರು...

ಸೀತಾರಾಮ. ಕೆ. / SITARAM.K.,

ನನ್ನ ಬರವಣಿಗೆಯ ಆಳವನ್ನು ಅರಿತಿದ್ದಕ್ಕೆ ಧನ್ಯವಾದಗಳು..
ನಿಮ್ಮ ಹಾರೈಕೆಯಂತೆ ಆಗಲಿ..
ಅಭಿಪ್ರಾಯ ನೀಡಿದ್ದಕ್ಕೆ ಧನ್ಯವಾದಗಳು..

Nivedita Hegde ಹೇಳಿದರು...

Chennagide..

Related Posts Plugin for WordPress, Blogger...