
ಇನ್ನೊಂದು ದಿವಸ ಮೂವರು ಯುವಕರು ಒಂದೇ ಬೈಕಿನಲ್ಲಿ ಬರುತ್ತಿರಲು ಟ್ರಾಫಿಕ್ ಪೋಲಿಸ್ ಕಣ್ಣಿಗೆ ಬಿದ್ದರು.. ಆ ಬೈಕಿಗೆ ಅಪ್ಪ-ಅಮ್ಮ(ಡಾಕ್ಯೂಮೆಂಟ್ಸ್ ) ಇಲ್ಲದಿರುವುದನ್ನು ತಿಳಿದ ಪೋಲಿಸ್ ಬಾಯಿ ಜೋರು ಮಾಡಿ ಕೂಗಾಡಲು ಶುರುಮಾಡಿದ.. ಸುಮಾರು ಹೊತ್ತಿನ ತನಕ ಮಾತಿನ ಚಕಮಕಿಯ ನಂತರ ಅವರಲ್ಲೊಬ್ಬ ಯುವಕ ಆ ಪೋಲಿಸ್ ಕೈಗೆ ೩೦೦/- ರೂಪಾಯಿ ಇಟ್ಟ.'ಆದ್ರೂ... ತಪ್ಪಲ್ವಾ' ಎಂದ ಪೋಲಿಸ್..'ಇರ್ಲಿ..ಇಟ್ಕೊಳ್ಳಿ.. ಮುಂದೆ ಸಿಗೋಣ ಸರ್..' ಅಂತ ಹೇಳಿ ಆ ಪೋಲಿಸ್ ಗೊಂದು ಸಿಗರೆಟ್ ಕೊಟ್ಟು ಬೈಕ್ ಏರಿ ಹೊರಟೇಬಿಟ್ಟ.!!
ಮತ್ತೊಂದು ದಿನ ಟ್ರಾಫಿಕ್ ಪೋಲಿಸ್ ಮಹಾಶಯ ಯಾವುದೋ ಟಿ.ವಿ.ಎಸ್ ಹಿಡಿದು ನಿಲ್ಲಿಸಿದ್ದ.. ಆ ಟಿ.ವಿ.ಎಸ್. ಮಾಲೀಕ ತನ್ನ ೫-೬ ವರ್ಷದ ಮಗನನ್ನು,ಹೆಂಡತಿಯ ಜೊತೆ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಿದ್ದ.. ಅವನು ರಸ್ತೆ 'ಒನ್ ವೇ' ಆಗಿರೋದ್ನ ತಿಳಿಯದೆ ಬೈಕನ್ನು ಆರಸ್ತೆಯಲ್ಲಿ ಓಡಿಸಲು ಮುಂದಾಗಿದ್ದ ಅಷ್ಟೇ! ಅಷ್ಟಕ್ಕೇ ಹಿಡಿದು ಏನೇನೋ ಕೇಳಿ ಪಾಪ ಗಾಡಿನ ನಿಲ್ಲಿಸಿಕೊಂಡಿದ್ದ ಆ ಪೋಲಿಸ್. ಆ ಟಿ.ವಿ.ಎಸ್. ಗಾಡಿಯವನನ್ನು ನೋಡ್ತಾ ಇದ್ರೆ ಅವನೊಬ್ಬ ಏನೂ ಅರಿಯದ ಪಕ್ಕ ಹಳ್ಳಿಗುಗ್ಗು ತರಹ ಕಾಣುತ್ತಿದ್ದ. ಅವನ,ಅವನ ಫ್ಯಾಮಿಲಿಯ ವೇಷ-ಭೂಷಣ ನೋಡಿದ್ರೆ ಗೊತ್ತಾಗುತ್ತೆ ಅವನು ಕಡುಬಡವ ಅಂತ.ಅವನ ಹೆಂಡತಿ 'ಅದೇನೋ ನಂಗ್ ಗೊತ್ತಗಕ್ಕಿಲ್ಲ ಕಣಪ್ಪ.. ತಪ್ಪಾಯ್ತು ಬುಟ್ಬುಡಪ್ಪ.. ಆಸ್ಪತ್ರೆಗೆ ಹೋಗ್ಬೇಕು..' ಎಂದು ಎಷ್ಟು ಅಂಗಲಾಚಿದರೂ ಪ್ರಯೋಜನ ಆಗುತ್ತಿಲ್ಲ.
ಈ ಪ್ರಸಂಗಗಳನ್ನು ನೋಡಿ ಏನಂತೀರ..?
ಈ ಪ್ರಸಂಗಗಳನ್ನು ನೋಡಿ ಏನಂತೀರ..?
2.ಅದೊಂದು ಕಾಲೇಜು.. ಎಲ್ಲ ಕಾಲೇಜುಗಳಂತೆ ಅಲ್ಲೂ ಮೊಬೈಲ್ ಫೋನುಗಳ ನಿಷೇಧವಿದ್ದರೂ ಸೈಲೆಂಟ್ ಮೋಡ್ ನಲ್ಲಿ ಎಷ್ಟೋ ಮೊಬೈಲ್ ಫೋನುಗಳಿದ್ದವು..
ಈಗಿನ ಕೆಲವು ಹುಡುಗರು ಹುಡುಗಿಯರನ್ನು ಆಕರ್ಷಣೆ ಮಾಡೋದಕ್ಕೆ ಸ್ವಲ್ಪ ಜಾಸ್ತಿ ಸೌಂಡ್ ಬಾರೋ ಮೊಬೈಲ್ ಫೋನುಗಳನ್ನು ತಕೊಂಡು ಜೋರಾಗಿ ಹಾಡು ಹಾಕ್ತಾರೆ..
ಹಾಗೆಯೇ ಒಂದು ದಿನ ಬೆಳ್ಳಂಬೆಳಿಗ್ಗೆನೆ ೯ ಕ್ಕೆ ಕಾಲೇಜಿಗೆ ಬಂದ ಹುಡುಗನೊಬ್ಬ ಪಾಪ ಪೇಪರ್ ರೀಡಿಂಗ್ ಮಾಡೋಕೆ ಆ ಕಾಲೇಜ್ ನಲ್ಲಿ ಪೇಪರ್ ರೂಂ ನೆ ತೆಗೆಯೋದು ತುಂಬಾ ಅಪರೂಪ ಆದ್ದರಿಂದ ಒಂದು ಹುಡುಗ ಜೋರಾಗಿ ಹಾಡು ಹಾಕಿ ಕೂತಿದ್ದಾನೆ.. ಹಿಂದಿನಿಂದ ಒಬ್ಬ ಉಪನ್ಯಾಸಕರು ಬರುತ್ತಿರೋದ್ನ ಗಮನಿಸಿಲ್ಲ.. ಆ ಉಪನ್ಯಾಸಕರು ಬಂದವರೇ ಅವನಿಂದ ಮೊಬೈಲ್ ಕಸಿದುಕೊಂಡು ಹೊರಟೆಬಿಟ್ರು.. ಆ ಹುಡ್ಗ ಎಷ್ಟು ಬೇಡಿದರೂ ಉಪಯೋಗ ಆಗ್ಲಿಲ್ಲ..
ಅದೆ ಕಾಲೇಜಿನಲ್ಲಿ ಒಂದು ದಿನ ಭೌತಶಾಸ್ತ್ರ ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳೆಲ್ಲ ಗುಂಪುಗುಂಪಾಗಿ ತಮ್ಮ ತಮ್ಮ ಎಕ್ಷ್ ಪರಿಮೆಂಟ್(ಪ್ರಯೋಗ) ಮಾಡ್ತಿದಾರೆ.. ಅಲ್ಲೇ ಇಬ್ಬರು ಉಪನ್ಯಾಸಕರು ಮಾತುಕತೆ ನಡೆಸುತ್ತಿದ್ದಾರೆ..ಒಂದು 'ಸುಂದರ' ಹುಡುಗಿಯ ಜನರಲ್ ಮೋಡ್ ನಲ್ಲೆ ಮೊಬೈಲ್ ಫೋನ್ 'ಹುಡುಗರು ಬೇಕು..' ಎಂದು ಹಾಡುತ್ತ ರಿಂಗಣಿಸಿತು.. ಆಕೆ ತಕ್ಷಣ ರಿಸೀವ್ ಮಾಡಿ ಮಾತನಾಡೋಕೆ ಶುರುಮಾಡಿದಳು.. ಪಾಪ ಆ ಎಕ್ಷ್ಪರಿಮೆಂಟ್ ಮಾಡ್ತಿದ್ದವರಿಂದ ಸ್ವಲ್ಪ ಡಿಸ್ಟರ್ಬ್ ಆಗಿರಬೇಕು.. ಫೋನು ಎತ್ತುಕೊಂಡು ಸೈಡಿಗೆ ಹೋಗಿ ಮೂಲೆಯಲ್ಲಿ ನಿಂತ್ಕೊಂಡು ಗೋಡೆಗೆ ಮುಖ ಮಾಡಿ ನಗು ನಗುತ್ತ ಮಾತನಾಡೋಕೆ ಶುರುಮಾಡಿದಳು..
ಒಂದೈದು ನಿಮಿಷದ ನಂತರ ಉಪನ್ಯಾಸಕರೊಬ್ಬರು ಅಲ್ಲೇ ಇದ್ದ ಒಂದು ಗುಂಪಿಗೆ ಪ್ರಯೋಗದ ಬಗ್ಗೆ ಸ್ವಲ್ಪ ವಿವರಣೆ ನೀಡಿ ಅಲ್ಲೇ ಅಡ್ಡಾಡುತ್ತಿದ್ದಾರೆ.. ಅವರಿಗೆ ಆ 'ಮಾತೆ' ಕಾಣಿಸುತ್ತಿದ್ದಾಳೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.. ಸುಮಾರು ೨೦ ನಿಮಿಷ ಮಾತಾಡಿ ಸುಸ್ತಾದ ಆ ಮಾತೆ ಪ್ರಯೋಗ ಮಾಡ್ತಿದ್ದ ಅವರ ಗುಂಪಿನೊಡನೆ ಬೆರೆತುಕೊಂಡಳು..
ಇದರ ಬಗ್ಗೆ ಏನು ಹೇಳಬಹುದು..?
3.ಒಂದು ತಾಲೋಕ್ ಆಫೀಸ್..ಬೆಳಿಗ್ಗೆ ೧೦ ಗಂಟೆ, ಇನ್ ಕಂ ಸರ್ಟಿಫಿಕೇಟ್ ಪಡೆಯಲು ಜನರೆಲ್ಲಾ ಸಾಲಾಗಿ ಕಿಟಕಿ ಬಾಗಿಲ ಬಳಿ ನಿಂತಿದ್ದಾರೆ..
ಒಬ್ಬಾತ ಬಂದ., ಸಾಲು ನೋಡಿ ನೇರವಾಗಿ ಆಫೀಸ್ ಒಳಗೆ ಹೋದವನೇ ೧೫ ರೂಪಾಯಿ ಕೊಟ್ಟು ಪಡೆಯಬೇಕಿದ್ದ ಸರ್ಟಿಫಿಕೇಟ್ಗೆ ೧೫೦ ಕೊಟ್ಟ. ತಕ್ಷಣ ಕ್ರಿಯಾಶೀಲನಾದ ಸರ್ಟಿಫಿಕೇಟ್ ವಿತರಕ ಎಲ್ಲೆಲ್ಲೋ ತಡಕಾಡಿದ.. ಆದರೆ ಆವ್ಯಕ್ತಿ ಇದಕ್ಕೆ ಮೊದಲು ಅಪ್ಲೈ ಮಾಡೇ ಇರ್ಲಿಲ್ಲ.. ಆದರಾಗಲೀ ಎಂದು ಅವರನ್ನು ಕುಳ್ಳಿರಿಸಿ ೧೦ ನಿಮಿಷದಲ್ಲಿ ರೆಡಿ ಮಾಡಿ ಸರ್ಟಿಫಿಕೇಟ್ ಕೊಟ್ಟುಕಳುಹಿಸಿದ.. ಅಷ್ಟೊತ್ತಿಗೆ ೧ ಗಂಟೆ ಆಯ್ತು.. ಕಿಟಕಿ ಬಾಗಿಲು ಮುಚ್ಚಿ ನಡೆದ ವಿತರಕ ಮತ್ತೆ ಬಾಗಿಲು ತೆರೆದಿದ್ದು ನಾಲ್ಕು ಘಂಟೆಗೆ.. ಈ ಮೂರು ಘಂಟೆ ಅವನಿಗಿದ್ದುದು ಊಟ ಮಾಡೋ ಕೆಲಸ..ಹದಿನೈದು ದಿನದ ಹಿಂದೆಯೇ ಅಪ್ಲೈ ಮಾಡಿ ಕಾದು ಕೂತಿದ್ದ ಜನರಲ್ಲಿ ಕೆಲವರು ಸಾಲು ಬಿಟ್ಟು ಹೊರಟುಹೋಗಿದ್ದರು.. ಅವರಿಗೂ ಹೊಟ್ಟೆ ಇದೆಯೆಂದು ನನ್ನ ಅನಿಸಿಕೆ.
ಇದರ ಬಗ್ಗೆ ನಿಮ್ಮ ಅಭಿಪ್ರಾಯ?
ಒಬ್ಬಾತ ಬಂದ., ಸಾಲು ನೋಡಿ ನೇರವಾಗಿ ಆಫೀಸ್ ಒಳಗೆ ಹೋದವನೇ ೧೫ ರೂಪಾಯಿ ಕೊಟ್ಟು ಪಡೆಯಬೇಕಿದ್ದ ಸರ್ಟಿಫಿಕೇಟ್ಗೆ ೧೫೦ ಕೊಟ್ಟ. ತಕ್ಷಣ ಕ್ರಿಯಾಶೀಲನಾದ ಸರ್ಟಿಫಿಕೇಟ್ ವಿತರಕ ಎಲ್ಲೆಲ್ಲೋ ತಡಕಾಡಿದ.. ಆದರೆ ಆವ್ಯಕ್ತಿ ಇದಕ್ಕೆ ಮೊದಲು ಅಪ್ಲೈ ಮಾಡೇ ಇರ್ಲಿಲ್ಲ.. ಆದರಾಗಲೀ ಎಂದು ಅವರನ್ನು ಕುಳ್ಳಿರಿಸಿ ೧೦ ನಿಮಿಷದಲ್ಲಿ ರೆಡಿ ಮಾಡಿ ಸರ್ಟಿಫಿಕೇಟ್ ಕೊಟ್ಟುಕಳುಹಿಸಿದ.. ಅಷ್ಟೊತ್ತಿಗೆ ೧ ಗಂಟೆ ಆಯ್ತು.. ಕಿಟಕಿ ಬಾಗಿಲು ಮುಚ್ಚಿ ನಡೆದ ವಿತರಕ ಮತ್ತೆ ಬಾಗಿಲು ತೆರೆದಿದ್ದು ನಾಲ್ಕು ಘಂಟೆಗೆ.. ಈ ಮೂರು ಘಂಟೆ ಅವನಿಗಿದ್ದುದು ಊಟ ಮಾಡೋ ಕೆಲಸ..ಹದಿನೈದು ದಿನದ ಹಿಂದೆಯೇ ಅಪ್ಲೈ ಮಾಡಿ ಕಾದು ಕೂತಿದ್ದ ಜನರಲ್ಲಿ ಕೆಲವರು ಸಾಲು ಬಿಟ್ಟು ಹೊರಟುಹೋಗಿದ್ದರು.. ಅವರಿಗೂ ಹೊಟ್ಟೆ ಇದೆಯೆಂದು ನನ್ನ ಅನಿಸಿಕೆ.
ಇದರ ಬಗ್ಗೆ ನಿಮ್ಮ ಅಭಿಪ್ರಾಯ?
ಏನಾದರೂ ಹೊಸದಾಗಿ ಹೇಳಿದ್ನ..?
)()()()()()()()()()()()()()()()()()(
~.~
29 ಕಾಮೆಂಟ್ಗಳು:
ಗುರು
ಚೆನ್ನಾಗಿದೆ ನೀವು ಬರೆದ ಸಿಲ್ಲಿ ವಿಷಯ (ನೀವೇ ಹೇಳಿದ ಹಾಗೇ) ಚೆನ್ನಾಗಿತ್ತು..ಓದಿ ಅಚ್ಚರಿ ,ಬೇಜಾರಾಯ್ತು... ಸತ್ಯವಾದ ವಿಷಯವನ್ನು ಹೇಳಿದ್ದಿರ.ಈಗ ಪ್ರಪಂಚದಲ್ಲಿ ನಡೆಯುತ್ತಿರುವುದೇ ಇಂಥ ಘಟನೆಗಳು..ಮಾನವೀಯತೆ ,ನ್ಯಾಯಕ್ಕೆ ಬೆಲೆನೇ ಇಲ್ಲ ಎಲ್ಲಾ ದುಡ್ಡಿಗೆ ಮಹತ್ವ..
ಗುರು,
ಒಂದು ಕತೆ ನೆನಪಾಗುತ್ತೆ. ಸ್ವಾತಂತ್ರ್ಯ ಹೋರಾಟಗಾರನಾದಂತಹ ಒಬ್ಬನಿಗೆ ರೇಲವೇ ರಿಜರ್ವೇಶನ್ ಸಿಕ್ಕಿರೋದಿಲ್ಲ. ಅವನ ಮೊಮ್ಮಗಳು ತಾನೇ ಹೋಗಿ ರಿಜರ್ವೇಶನ್ ದೊರಕಿಸಿಕೊಂಡು ಬರುತ್ತಾಳೆ. ಆತ ಆಶ್ಚರ್ಯ ವ್ಯಕ್ತಪಡಿಸಿದಾಗ ಆಕೆ ಹೇಳಿದ್ದು ಹೀಗೆ:
"ಅಜ್ಜಾ ನೀವು ಮಹಾತ್ಮಾ ಗಾಂಧಿ ಕಾಲದವರು;ನಾನು ಸೋನಿಯಾ ಗಾಂಧಿ ಕಾಲದವಳು!"
ಕಾಲಾಯ ತಸ್ಮೈ ನಮಃ!
ಗುರು...ವಾಸ್ತವ ಇದು..ಅದರಲ್ಲೂ ತಿಂಗಳ ಕಡೆಯ ವಾರ ಕಾಮನ್ನು...ಇದು.ವ್ಯವಸ್ಥೆಯ ಒಂದು ಅವಿಭಾಜ್ಯ ಅಂಗ ಆಗ್ತಿದೆ...
guru..
nagna satya vanna heliddira...
nimma 3ne ideyalla yestu bejar agutte andre, bejara gutte ri... alli barorella namma halli makkale agirtare.. anekarige estu mukya iratade andre adanna gamanane madolla... bari himse kodtare ri... duddu kodade gatine illa...
nanu saha ee himseyanna anubavisiddene...
ಗುರು
ನಿಮ್ಮ ಈ ಬರಹದಲ್ಲಿ ಅಡಗಿರುವುದು ನಗ್ನ ಸತ್ಯ, ಅದು ವಾಸ್ತವ, ನಿಮ್ಮ ಬರಹದಲ್ಲಿ ಉತ್ರ್ಪೇಕ್ಷೆ ಕಾಣಲಿಲ್ಲ. it is realistic
Shashi jois.,
ತಕ್ಷಣ ಪ್ರತಿಕ್ರಿಯೆಗೆ ಧನ್ಯವಾದಗಳು..
ಹೀಗೆಯೇ ಬರುತ್ತಿರಿ..
sunaath,
ಹೌದೌದು 'ಕಾಲಾಯ ತಸ್ಮೈ ನಮಃ'.
ಪ್ರತಿಕ್ರಿಯೆಗೆ ಧನ್ಯವಾದಗಳು..
ಜಲನಯನ,
ಹೌದು.. ವ್ಯವಸ್ತೆಯೇ ಬಗ್ಗೆ ನಾವು ಏನೂ ಮಾಡಲಾಗದಂತಾಗಿದೆ..
ಪ್ರತಿಕ್ರಿಯೆಗೆ ಧನ್ಯವಾದಗಳು..
ಹಳ್ಳಿ ಹುಡುಗ ತರುಣ್,
ಮೊದಲನೆಯದಾಗಿ ನನ್ನ 'ಮನಸಿನಮನೆ'ಗೆ ಸುಸ್ವಾಗತ.
ಹಳ್ಳಿಯವರಾದ ನಾವೆಲ್ಲಾ ಕೊನೆಯ ಹಿಂಸೆ ಅನುಭವಿಸದೆ ವಿಧಿ ಇಲ್ಲ ಬಿಡಿ..
ಹೀಗೆಯೇ ಬರುತ್ತಿರಿ..
PARAANJAPE K.N. ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು....
ಗುರು ಅವರೆ,
ನಿಜ.. ಈಗ ಎಲ್ಲಾ ಕಡೆ ನಡೆಯುತ್ತಿರುವ ವಿಚಾರ.. ಸರಿಯಾಗಿಯೇ ಬರೆದಿದ್ದೀರಿ.ಕೈಯಲ್ಲಿ ಶಕ್ತಿ,(power)ದುಡ್ಡು ಇದ್ದವರಿಗೆ ಅವರು ಸರಿಯಾಗಿ ಇಲ್ಲದಿದ್ದರೂ ಕೆಲಸಗಳೆಲ್ಲಾ ನಿರಾಯಾಸವಾಗಿ ನಡೆದುಬಿಡುತ್ತವೆ.
ಗುರು ಅವರೇ,
ನಮ್ಮ ಸುತ್ತಮುತ್ತ ನಡೆಯುತ್ತಿರುವ ವಾಸ್ತವಾ೦ಶಗಳನ್ನೇ ಆಯ್ದು ಬರೆದಿದ್ದೀರಿ. ಇದನ್ನು ಸರಿಪಡಿಸುವುದು ಹೇಗೆ ಎನ್ನುವುದರ ಬಗ್ಗೆ ಚಿ೦ತಿಸಿ ಕಾರ್ಯ ಪ್ರವೃತ್ತರಾಗುವುದು ಇ೦ದಿನ ತುರ್ತಾಗಿದೆ.
ವಾಸ್ತವವನ್ನು ಸರಿಯಾಗಿ ಹೇಳಿದ್ದೀರಿ.ಇದು" ಸಿಲ್ಲಿ "ಯಲ್ಲ.
ಮನಸಿನ ಮನೆಯನ್ನು ಬಣ್ಣಗಳಲ್ಲಿ ಚೆನ್ನಾಗಿ ಸಿ೦ಗರಸಿದ್ದೀರಿ ಗುರು ಅವರೆ. ವಾಸ್ತವಿಕತೆಯ ಚಿತ್ರಣವನ್ನು ಸೊಗಸಾಗಿ ನಿರೂಪಿಸಿದ್ದೀರಿ. ಜೀವನದ ಮೌಲ್ಯಗಳನ್ನು ಭೂತಕನ್ನಡಿ ಹಾಕಿ ನೋಡಿದರೂ ಸಿಗುವುದು ವಿರಳ..!
ಶುಭಾಶಯಗಳು
ಅನ೦ತ್
ವಿಷಾದಕರ.. ಆದರೆ ಸತ್ಯ.
ಉತ್ತಮ ಲೇಖನ.
kahi vaasthava idhu guru.... yellarige inthaha anubhavagaLu aagiye aagiruttade!
ವ್ಯವಸ್ಥೆಗೆ ಬೇಸರ ಆಗತ್ತೆ.ಆದ್ರೆ "ದುಡ್ಡೇ ತಾನೇ ದೊಡ್ಡಪ್ಪ"ಚೆನ್ನಾಗಿದೆ ಸರ್ ಲೇಖನ
ಕಾಲಕ್ಕೆ ತಕ್ಕಂತೆ, ಕಾಲ ಕೆಟ್ಟೋಯ್ತು, ಇನ್ನು ಹೀಗೆ ಏನೇನೋ ಹೇಳಿ ಮುಗಿಸುವ ನಗ್ನ ಸತ್ಯಗಳು ಸಿಲ್ಲಿಯಲ್ಲ.
ಮನಮುಕ್ತಾ ,
ಧನ್ಯವಾದಗಳು..
prabhamani nagaraja.,
ಧನ್ಯವಾದಗಳು..
kusu Muliyala ..,
ನನ್ನ 'ಮನಸಿನಮನೆ'ಗೆ ಸ್ವಾಗತ...
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..
ಹೀಗೆಯೇ ಬರುತ್ತಿರಿ..
ವಸಂತ್ .,
ಧನ್ಯವಾದಗಳು..
ಅನಂತರಾಜ್..,
ಧನ್ಯವಾದಗಳು..
shravana..,
ನನ್ನ 'ಮನಸಿನಮನೆ'ಗೆ ಸ್ವಾಗತ...
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..
ಹೀಗೆಯೇ ಬರುತ್ತಿರಿ..
ಸುಧೇಶ್ ಶೆಟ್ಟಿ .,
ಧನ್ಯವಾದಗಳು..
ಕಲರವ.,
ನನ್ನ 'ಮನಸಿನಮನೆ'ಗೆ ಸ್ವಾಗತ...
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..
ಹೀಗೆಯೇ ಬರುತ್ತಿರಿ..
ಸೀತಾರಾಮ. ಕೆ. / SITARAM.K .,
ಧನ್ಯವಾದಗಳು..
ha ha ha tumba chennagide saar..
Pradeeep Rao.,
ಧನ್ಯವಾದಗಳು..
ಕಾಮೆಂಟ್ ಪೋಸ್ಟ್ ಮಾಡಿ