ನಾನು ಬ್ಲಾಗ್ ಸಾಗರ ನೋಡಿ ಆಸೆಯಿಂದ ಚಡಪಡಿಸುವಷ್ಟರಲ್ಲೇ ಆ ಸಾಗರದಲ್ಲಿ ಈಜುತ್ತಿದ್ದೆ... ಈಜುತ್ತಾ ಈಜುತ್ತಾ ಬೇಸರವಾಯ್ತು.. ಜೊತೆಗಿದ್ದ ಒಂದು ಜೀವ ಕೂಡ ಈಜುವಿಕೆ ಸಾಕೆನಿಸಿ ದಡ ಸೇರಿತ್ತು.. ಬ್ಲಾಗ್ ನನಗೆ ಬೇಸರವಾಗಿ ಸಹಕಾರವಿಲ್ಲದೆ ಬರೆಯುವುದನ್ನೇ ನಿಲ್ಲಿಸಬೇಕು ಎಂದುಕೊಂಡೆ.. ಆದರೆ ಅದಕ್ಕೆ ಮನಸ್ಸು ಆಸ್ಪದ ಮಾಡಿಕೊಡಲಿಲ್ಲ..ಏನು ಬರೆಯಲಿ,ಏಕೆ ಬರೆಯಲಿ,ಸಹಕಾರ ಸಿಗುವುದೇ.. ಇನ್ನು ಮುಂತಾದ ಪ್ರಶ್ನೆಗಳಿಗೆ ಮನಸ್ಸು ನೀಡಿದ ಉತ್ತರವೇ ಈಗ ನಿಮ್ಮ ಮುಂದಿರುವ ಈ... 'ಮನಸಿನ ಮನೆ'ಯ ಕನ್ನಡಿ..
.-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-.
ಒತ್ತರಿಸಿ ಬರುವ ನಿನ್ನ ದುಃಖದ ಸ್ವರ
ನೀ ಬರೆಯಲೆಂದೇ ಬಂದ ಓಂ ಕಾರ.!
ಒಡೆದುಹೋದ ಕನ್ನಡಿ
ನೀ ಬರೆವ ಬರಹಕೆ ಮುನ್ನುಡಿ..!
ಅಳಿದುಳಿದ ನೆನಪುಗಳಿಗೆ
ಬಳಿದುಳಿದ ಬಣ್ಣ ತುಂಬು..!
ಬರೆಯಲಾಗದೆಂಬ ನಿನ್ನ ನಾಚಿಕೆ
ಬರೆಯಲು ನಿನಗೆ ಸಿಕ್ಕ ಶೀರ್ಷಿಕೆ..!
ಒಮ್ಮೆ ನೆನೆದು ದೇವರನ್ನು
ಹಿಡಿ ನೀ ಲೇಖನಿಯನ್ನು..!
ದೇವರ ಕಣ್ಣಿನ ತೇಜಸ್ಸು
ನಿನಗೆ ನೀಡುವುದು ಹುಮ್ಮಸ್ಸು..!
ನೊಂದ ನಿನ್ನ ಒಂಟಿಪಯಣದ ಸುಸ್ತು
ಬರೆಯಲು ಸಿಕ್ಕ ವಿಷಯವಸ್ತು..!
ಸುಳಿದು ಅಳಿದ ಪಠ್ಯಗಳು
ಬರಹವ ರಂಜಿಸಲು ನಾಟ್ಯಗಳು..!
ನಿನ್ನ ಕಾಡುವ ಹೆಜ್ಜೆಸದ್ದು
ಆ ನಾಟ್ಯಕೆ ಗೆಜ್ಜೆಸದ್ದು..!
ವಿರಹದ ಹೃದಯದ ಕೂಗು
ನಿನ್ನ ಕಾವ್ಯಕೆ ಮೌನರಾಗ..!
ನಿನ್ನ ಕ್ಷಣಿಕ ಮೌನಗಳು
ನಿನಗೆ ಸಿಗುವ ವಿರಾಮಗಳು..!
ನಿನ್ನ ತೋಯಿಸಿದ ಜೀವಗಳು
ಬರೆವ ಬರಹದ ಪಾತ್ರಗಳು..!
ಕಾಣದೆ ನಿನ್ನ ಸಂತೈಸುವ ಭಾವುಕರು
ನಿನ್ನ ಬರಹದ ಪಾಲಕರು..!
.-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-.
.-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-..-.
31 ಕಾಮೆಂಟ್ಗಳು:
@ Guru-Dese,
ನಿಮ್ಮ ಭಾವಯಾನ ಲಹರಿ ಚೆನ್ನಾಗಿದೆ, ಹಳೆಯ ಬರಹಗಳನ್ನು ಓದಿದ್ದೇನೆ ಆದರೆ ಕಾಮೆಂಟ್ ಹಾಕಲು ಬಿಡುವು ದೊರೆತಿರಲಿಲ್ಲ. ಅದರಲ್ಲೂ ಕವನ ಸಾಹಿತ್ಯ ಚೆನ್ನ ಚಿನ್ನ. ಒಂದಿಷ್ಟು ಆಸಕ್ತಿದಾಯಕ ವಿಚಾರಗಳು ಮತ್ತು ಸಂವೇದನೆಯ ವಿಚಾರಗಳೂ ಬರಹದಲ್ಲಿ ಬಂದರೆ ಅದು ಇನ್ನೂ ಆಪ್ತವಾಗಬಹುದೇನೋ ಪ್ರಯತ್ನಿಸಿ.
ಉತ್ತಮ ಪ್ರಯತ್ನ. ಕವನದ ಆಶಯ ಹಾಗೂ ಅರ್ಥ ಎರಡೂ ಚೆನ್ನಾಗಿದೆ. ಪದ ಪ್ರಯೋಗ ಉಪಮೆಗಳೂ ಮೆಚ್ಚುಗೆಯಾದವು. ಬರವಣಿಗೆ ನಿಲ್ಲದಿರಲಿ.
nice & keep writing.
ಸಹಕಾರವಿಲ್ಲವೆನಬೇಡಿ. ನಮ್ಮ ಸಹಕಾರವಿದ್ದೇವಿರುತ್ತೆ.
ಗುರು-ದೆಸೆ
ಕವನದ ಭಾವ ಇಷ್ಟವಾಯಿತು
ಸುಂದರ ಪದಗಳಲ್ಲಿ ಒಳ್ಳೆಯ ಕವನ ಬರೆದಿದ್ದಕ್ಕೆ ಅಭಿನಂದನೆಗಳು
ನಿಮ್ಮ ಮನಸಿನ ಮನೆ ತುಂಬಾ ಸುಂದರವಾಗಿದೆ ! ನನನ್ ಅಹ್ವಾನಿಸಿದಕ್ಕೆ ಧನ್ಯವಾದಗಳು ಹಾಗೆ ನಿಮ್ಮ ಈ ಕವನ ತುಂಬಾ ಇಷ್ಟ ಆಯ್ತು !
ಗುರುದೆಸೆಯವರೆ,
ಕವನವನ್ನು ಇಷ್ಟು ಚೆನ್ನಾಗಿ ಬರೆದಿದ್ದೀರಿ. ಮತ್ತೆ ಸಂಕೋಚ ಯಾಕೆ? ಇದೇ ತರಹ ಒಳ್ಳೆ ಸಾಹಿತ್ಯ ನೀಡುತ್ತಿರಿ.
chennagide nimma kavana..heege bareyutta iri :)
Tumbaa Chennagide...Nimma ulida kavanagalannu odta iddini....Very Nice....
ಚೆನ್ನಾಗಿದೆ ಕವನ. ನೀವು ಕವನಗಳನ್ನೇ ಇನ್ನಷ್ಟು ಬರೆದರೆ ಸೊಗಸಾಗಿರುತ್ತದೆ ಎಂದು ನನ್ನ ಅನಿಸಿಕೆ. ..ಬರೆಯುತ್ತಿರಿ
Hi Gurudese...
wov estu chennagi .. kavanada saaligu.. jeevanada galigegu.. holisiddeera..
tumba chennagide.. tumba bareyuttiri..
Pravi
ತುಂಬಾ ಚೆನ್ನಾಗಿ ಇದೆ, ಕವನ,,, ಇಷ್ಟ ಆಯಿತು... ಹೀಗೆ ಮುಂದುವರಿಸಿ......
Nimma prayatna chennagide... sahakaara athava nimage visibility sigalikke andukondu bareyabedi... nimma baravanigeyannu innashtu mattashtu improve maado nittinalli naditha iri...sahakaara taanaage baruttade... honestly nanna blog ge itteechegashte pratikriyegalu siguttirodu.. 2 varshagalaytu anna blog shuru maadi.. adare besara illa :-) Keep writing and for your own self.. you will enjoy ur work.. good luck :-)
ಗುರುದೆಸೆಯವರೆ...
ಚೆನ್ನಾಗಿ ಬರೆದಿದ್ದೀರಿ...
ಅಭಿನಂದನೆಗಳು..
ಅಲ್ಲ ಗುರು, ಬರವಣಿಗೆ ಬಗ್ಗೆ ಇಷ್ಟು ಬೇಗ ಬೇಸರ, ನಿರಾಸೆ ಏಕೆ? ಬರಹಗಳಿಗೆ ಓದುಗರು, ವಿಮರ್ಶಕರು ಇದ್ದೇ ಇರುತ್ತಾರೆ. ನಿಮ್ಮ ಪ್ರತಿಭೆಯನ್ನು ಹೊರ ಹಾಕಲು ಇದು ಒಳ್ಳೆ ವೇದಿಕೆ. ಹದಿನೆಂಟನೆಯ ವಯಸ್ಸಿಗೇ ನಿಮ್ಮಲ್ಲಿ ಒಳ್ಳೆ ಪ್ರತಿಭೆ, ಪ್ರಬುದ್ಧತೆ ಇದೆ. ಇದನ್ನು ನೀವು ಖಂಡಿತ ಬೆಳೆಸಬೇಕು
hi gurugale ,,,
nimma bagge yen helbeko antha gothagthilla yakendr.....
nimma kavithe yen atha nange artha agalilla guruprasad gowda...
inthi nimma prethiya
TG
'ಅರಕಲಗೂಡುಜಯಕುಮಾರ್ ' ಅವ್ರೆ..,
ಈಗ ತಾನೆ ಬ್ಲಾಗ್ ಆರಂಭಿಸಿದ್ದೇನೆ,ಮುಂದೆ ಆಸಕ್ತಿದಾಯಕ & ಸಂವೇದನೆ ಬರಹಗಳನ್ನು ಬರೆಯುತ್ತೇನೆ..
ಹೀಗೆ ನಿಮ್ಮ ಸಹಕಾರವಿರಲಿ..
'ತೇಜಸ್ವಿನಿ ಹೆಗಡೆ-' ಅವ್ರೆ..,
ನನ್ನ 'ಮನಸಿನಮನೆ'ಗೆ ಸ್ವಾಗತ.
ನಿಮ್ಮ ಮಾತಿಗೆ ಧನ್ಯವಾದಗಳು..
ನಿಮ್ಮ ಸಹಕಾರವಿರಲು ಬರವಣಿಗೆ ನಿಲ್ಲುವುದೇ..
'ಸೀತಾರಾಮ. ಕೆ.' ಅವ್ರೆ..,
ಧನ್ಯವಾದಗಳು..
ಇಲ್ಲಿಯವರೆಗೂ ಸಹಕಾರವಿರಲಿಲ್ಲ..
ಮತ್ತೆ ಮತ್ತೆ ಬರುತ್ತಿರಿ.
'ಸಾಗರದಾಚೆಯ ಇಂಚರ' ಅವ್ರೆ..,
ಧನ್ಯವಾದಗಳು..
ಹೀಗೆಯೇ ಬರುತ್ತಿರಿ.
'doddamanimanju' ಅವ್ರೆ..,
ಸ್ವಾಗತ..
ನನ್ನ ಕರೆಗೆ ಓಗೊಟ್ಟು ಬಂದಿದ್ದಕ್ಕೆ ಧನ್ಯವಾದಗಳು....
ಹೀಗೆಯೇ ಬರುತ್ತಿರಿ.
'sunaath' ಅವ್ರೆ..,
'ಮನಸಿನಮನೆ'ಗೆ ಸ್ವಾಗತ..
ಎಷ್ಟೋ ಚಂದದ ಬ್ಲಾಗಿಗರ ಬರಹಗಳನ್ನು ನೋಡಿದ್ದೇನೆ, ಅವರ ನಡುವೆ ನನ್ನದನ್ನು ಓದುವರೆ ಎಂಬ ಸಂಕೋಚವಿತ್ತು...
ಮತ್ತೆ ಮತ್ತೆ ಬನ್ನಿ.
ಹೀಗೆಯೇ ಬರುತ್ತಿರಿ.
'Snow White' ಅವ್ರೆ..,
ಧನ್ಯವಾದಗಳು..
ಬರೆಯುತ್ತೇನೆ,ಓದಲು ನೀವು ಬರುತ್ತಿರಿ.
'ashokkodlady' ಅವ್ರೆ..,
ನನ್ನ 'ಮನಸಿನಮನೆ'ಗೆ ಸ್ವಾಗತ.
ಧನ್ಯವಾದಗಳು..
ಹೀಗೆಯೇ ಬರುತ್ತಿರಿ.
'Subrahmanya Bhat' ಅವ್ರೆ..,
ಈಗ ತಾನೇ ಬ್ಲಾಗ್ ಆರಂಭಿಸಿದ್ದೀನಲ್ಲವೇ., ಮುಂದೆ ಬರೆಯುತ್ತೇನೆ..
ಧನ್ಯವಾದಗಳು..
ಹೀಗೆಯೇ ಬರುತ್ತಿರಿ.
'ಪ್ರವೀಣ್ ಭಟ್' ಅವ್ರೆ..,
ಧನ್ಯವಾದಗಳು..
ಬರೆಯುತ್ತೇನೆ, ಜೊತೆಗೆ ನಿಮ್ಮ ಸಹಕಾರವೂ ಇರಲಿ.
'ಶಿವಶಂಕರ ವಿಷ್ಣು ಯಳವತ್ತಿ' ಅವ್ರೆ..,
ಧನ್ಯವಾದಗಳು..
ನಿಮ್ಮ ಸಹಕಾರ ಹೀಗೆಯೇ ಇರಲಿ...
'Guru's world' ಅವ್ರೆ..,
'ಮನಸಿನಮನೆ'ಗೆ ಸ್ವಾಗತ..
ಧನ್ಯವಾದಗಳು..
ನಿಮ್ಮ ಸಹಕಾರ ಇರಲು ಬರೆಯದೆ ಇರೆನು.
'Ramesha' ಅವ್ರೆ..,
ನಿಮ್ಮ ಮಾತು ಮುದ ನೀಡಿತು,ನೀವು ಹೇಳಿದಂತೆಯೇ ಆಗಲಿ.
ಧನ್ಯವಾದಗಳು..
'ಸಿಮೆಂಟು ಮರಳಿನ ಮಧ್ಯೆ' ಅವ್ರೆ..,
ನಿಮ್ಮ ಮಾತಿಗೆ ಧನ್ಯವಾಗಳು..
ಹೀಗೆಯೇ ಭೇಟಿ ನೀಡುತ್ತಿರಿ.
'Deepasmitha' ಅವ್ರೆ..,
ಎಷ್ಟೋ ಬ್ಲಾಗ್ ನೋಡಿದ್ದೇನೆ, ಅವುಗಳ ಮಧ್ಯೆ ನನ್ನ ಬ್ಲಾಗ್ ಕಾಣುವುದೇ ಎಂಬ ಹಿಂಜರಿಕೆ ಇದೆ..
ನನ್ನ ಪ್ರತಿಭೆಗೆ ನನಗಿಂತ ನಿಮ್ಮ ಪ್ರೋತ್ಸಾಹ,ಸಹಕಾರ ಹೆಚ್ಚಾಗಿ ಬೇಕಾಗಿದೆ.
ಧನ್ಯವಾದಗಳು..
ಆಚಾರ್ಯರಿಗೆ ನನ್ನ 'ಮನಸಿನಮನೆ'ಗೆ ಹೃತ್ಪೂರ್ವಕ ಸುಸ್ವಾಗತ..
ಬರೆಯುವ ಬಗ್ಗೆ ಬೇಸರಗೊಂಡು ಬರೆಯುವುದನ್ನು ನಿಲ್ಲಿಸಿದ್ದ ನಿಮ್ಮೀ ಶಿಷ್ಯನ ಮನಸ್ಸಿಗೆ ಮತ್ತೆ ಸ್ಫೂರ್ತಿ ತುಂಬಿ ಲೇಖನಿ ಹಿಡಿಸಿದ ಸಾಲುಗಳನ್ನು ಹೆಕ್ಕಿ ಹೆಕ್ಕಿ ಕವನವಾಗಿಸಿದ್ದೇನೆ..
ನಿಮ್ಮ ಭೇಟಿಯಿಂದ 'ಮನಸಿನಮನೆ'ಗೆ ಹೊಸಬೆಳಕು ಬಂದಂತಾಗಿದೆ.
ಕಾಮೆಂಟ್ ಪೋಸ್ಟ್ ಮಾಡಿ