ಪ್ರಾಣದೇವತೆ ನೀನು..

!!ಜ್ಞಾನಾರ್ಪಣಮಸ್ತು!!

[ ಪ್ರೇಮಿಗಳ ದಿನದಂದು ನನ್ನ ಸಾಲುಗಳು ನನ್ನ ಮನದನ್ನೆಗೆ ಅರ್ಪಣೆ..]

~.~

ನನ್ನ ಕಂಗಳ ನೋಟ ನೀನು
ನನ್ನ ಕಿವಿಗಳ ಆಲಿಕೆ ನೀನು
ನನ್ನ ಕೊರಳ ದನಿ ನೀನು
ನನ್ನ ತುಟಿಗಳ ಮೌನ ನೀನು
ನನ್ನ ಕಾಲ್ಗಳ ನಡೆ ನೀನು
ನನ್ನ ಅಂಗೈಗಳ ಆಸರೆ ನೀನು
ನನ್ನ ನಿದಿರೆಯ ಕನಸು ನೀನು
ನನ್ನ ಕನಸಿನ ಕಲ್ಪನೆ ನೀನು
ನನ್ನ ಲೇಖನಿಯ ಅಕ್ಷರ ನೀನು
ನನ್ನ ಮೆದುಳಿನ ಅರಿವು ನೀನು
ನನ್ನುಸಿರ ಚಲನೆ ನೀನು
ನನ್ನ ನೆತ್ತರ ಬಿಸಿ ನೀನು
ನನ್ನ ಹೃದಯದ ಬಡಿತ ನೀನು
ನನ್ನ ನರನಾಡಿಗಳ ಮಿಡಿತ ನೀನು
ನನ್ನ ಮನದಮನೆಯದೀಪ ನೀನು
ನನ್ನ ದೇಹಕೆ ಪ್ರಾಣ ನೀನು
ಪ್ರಾಣದೇವತೆ ನೀನು
~.~

14 ಕಾಮೆಂಟ್‌ಗಳು:

R Shobharani ಹೇಳಿದರು...

kavana tumba chennagide

e kavana kelida pranadevateya
adrushtavante

Gold13 ಹೇಳಿದರು...

nice lines.
Swarna

sunaath ಹೇಳಿದರು...

ವಾಹ್!ಪ್ರೇಮಿಗೆ ಇದಕ್ಕೂ ಹೆಚ್ಚು ಏನು ಹೇಳಬಹುದು?

ವಿಚಲಿತ... ಹೇಳಿದರು...

R Shobharani,
ನನ್ನ ಮನಸಿನಮನೆಗೆ ಸ್ವಾಗತ
ಮೊದಲ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು
ನಿಜವಾಗಿ ಹೇಳಬೇಕೆಂದರೆ ಅವಳನ್ನ ಪಡೆಯೋಕೆ ನಾನು ಅದೃಷ್ಟ ಮಾಡಿರಬೇಕು..
ಹೀಗೆ ಬರುತ್ತಿರಿ

ವಿಚಲಿತ... ಹೇಳಿದರು...

ಸುವರ್ಣ ಅವ್ರೆ,
ಧನ್ಯವಾದಗಳು

ವಿಚಲಿತ... ಹೇಳಿದರು...

ಸುನಾಥ್ ಅವ್ರೆ,
ಇನ್ನೂ ಹೇಳಬೇಕಿತ್ತೇನೊ ಅನಿಸುತ್ತೆ,
ಧನ್ಯವಾದಗಳು

ಮನದಾಳದಿಂದ............ ಹೇಳಿದರು...

ನೀನೆ ನೀನೆ
ನನಗೆಲ್ಲಾ ನೀನೆ.........

ಪ್ರೇಮಿಗಳ ದಿನಕ್ಕೆ ಚಂದದ ಕವನ.

ಸೀತಾರಾಮ. ಕೆ. / SITARAM.K ಹೇಳಿದರು...

ಏನು ಹೇಳದೆ ಕಣ್ಣು ಕಣ್ಣಲ್ಲಿ ನೆಟ್ಟರೆ ಎಲ್ಲ ವೇದ್ಯವಾಗುತ್ತೆ...

Chandru ಹೇಳಿದರು...

chennagide

ವಿಚಲಿತ... ಹೇಳಿದರು...

ಮನದಾಳದಿಂದ ಹೇಳಿದವರೆ,ಧನ್ಯವಾದಗಳು

ವಿಚಲಿತ... ಹೇಳಿದರು...

ಸೀತಾರಾಮರೆ,
ಹೌದು ಪ್ರೇಮಿಗಳ ಕಂಗಳ ಮಾತು ಅಕ್ಷರಗಳಷ್ಟೆ ಪರಿಣಾಮಕಾರಿ,
ಧನ್ಯವಾದಗಳು

ವಿಚಲಿತ... ಹೇಳಿದರು...

ಚಂದ್ರು ಅವ್ರೆ,
ಧನ್ಯವಾದಗಳು

Ashok.V.Shetty, Kodlady ಹೇಳಿದರು...

ಸುಂದರ ಕವನ .....ಪ್ರೇಯಸಿ ಗೆ ಇದಕ್ಕಿಂತ ಹೆಚ್ಚಾಗಿ ಏನು ಹೇಳಬಹುದು ???? ಇಷ್ಟೊಂದು ಅಗಾಧವಾಗಿ ಪ್ರೀತಿಸುವ ನಿಮ್ಮನ್ನು ಪಡೆದಾಕೆ ಧನ್ಯಳು....ಒಳ್ಳೆಯದಾಗಲಿ....

ವಿಚಲಿತ... ಹೇಳಿದರು...

ಅಶೋಕ್ ಅವ್ರೆ,
ಅವಳನ್ನು ಪಡೆದರೆ ನಾನೇ ಅದೃಷ್ಟವಂತ

Related Posts Plugin for WordPress, Blogger...