ಜೈ ಗಣೇಶ..

[ಈ ವರ್ಷ ನಮ್ಮೂರಿನಲ್ಲಿ ನಡೆದ ಗಣೇಶೋತ್ಸವ ಕುರಿತು ಈ ಲೇಖನ.. ]ನೋಡಿ ನೋಡಿ ಐಸ
ಗಣಪನ್ ನೋಡಿ ಐಸ
ಅವನ್ ಕಿರೀಟ ನೋಡಿ ಐಸ
ಅವನ್ ತಲೆ ನೋಡಿ ಐಸ
ಅವನ್ ಹಣೆ ನೋಡಿ ಐಸ
ಅವನ್ ಹುಬ್ಬು ನೋಡಿ ಐಸ
ಅವನ್ ಕಣ್ಣು ನೋಡಿ ಐಸ
ಅವನ್ ಕಿವಿ ನೋಡಿ ಐಸ
ಅವನ್ ಸೊಂಡ್ಳು ನೋಡಿ ಐಸ
ಅವನ್ ದಂತ ನೋಡಿ ಐಸ
ಅವನ್ ಸರ ನೋಡಿ ಐಸ
ಅವನ್ ಹೊಟ್ಟೆ ನೋಡಿ ಐಸ
ಅವನ್ ಹಾವ್ ನೋಡಿ ಐಸ
ಅವನ್ ಕೈ ನೋಡಿ ಐಸ
ಅವನ್ ಕಾಲು ನೋಡಿ ಐಸ
ಅವನ್ ಇಲಿ ನೋಡಿ ಐಸ

ಗೌರಮ್ಮನ್ ನೋಡಿ ಐಸ
ಅವಳ್ ಹೂ ನೋಡಿ ಐಸ
ಅವಳ್ ಕಣ್ ನೋಡಿ ಐಸ
ಅವಳ್ ಮುಖ ನೋಡಿ ಐಸ
ಅವಳ್ ಮೂಗ್ಬೆಟ್ ನೋಡಿ ಐಸ
ಅವಳ್ ವಾಲೆ ನೋಡಿ ಐಸ
ಅವಳ್ ಜುಮಕಿ ನೋಡಿ ಐಸ
ಅವಳ್ ಸರ ನೋಡಿ ಐಸ

ಹೀಗೆ ಘೋಷಣೆಗಳು ಮೊಳಗುತ್ತಲೇ ಇದ್ದವು..

ನಮ್ಮ "ಎಲೆಚಾಕನಹಳ್ಳಿ ಶ್ರೀ ಪಟ್ಟಲದಮ್ಮ ಗೆಳೆಯರ ಬಳಗ"ದ ಯುವಕರ ಗಣಪತಿ ಹಬ್ಬ ಉತ್ಸಾಹ ನೋಡ್ಬೇಕು..
ಸ್ವಲ್ಪ ಹೆಚ್ಚೇ ಎನ್ನುವಷ್ಟು ಪುಂಡಾಟಿಕೆಗಳಿಗೆ ಹೆಸ್ರಾದ ಈ ನಮ್ ಯುವಕರ ಬಳಗ ಪ್ರತಿ ವರ್ಷ ಗಣಪನನ್ನು ಕೂರಿಸಿ ಆಚರಣೆ ಮಾಡುವುದನ್ನು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ..
ಈ ವರ್ಷ ಗಣೇಶನ ಹಬ್ಬದ ರಂಗೇ ಈ ಬಳಗದಲ್ಲಿ ಇರಲಿಲ್ಲ.. ಗಣೇಶನನ್ನು ಕೂರಿಸುವ ಯೋಚ್ನೆ ಯಾರೂ ಮಾಡಿರ್ಲಿಲ್ಲ..
ಹಬ್ಬಕ್ಕೆ ಇನ್ನೆರಡು ದಿನ ಇರುವಾಗ ಯಾರೋ ಒಬ್ಬ ಈ ವಿಷಯ ಪ್ರಸ್ತಾಪ ಮಾಡಿದಾಗ ಎಲ್ಲರೂ ಕೂರಿಸುವುದಾಗಿ ನಿರ್ಧರಿಸಿ ಸುಮಾರು ೩೦ ಜನರ ಪಟ್ಟಿ ಹಾಕಿ ತಲಾ ೩೦೦ ರೂಪಾಯಿ ನಿಗದಿ ಮಾಡಲಾಗಿತ್ತು.. ಅಂತೆಯೇ ಮಾರನೆಯ ದಿನ ತೆಂಗಿನಗರಿಗಳನ್ನು ಹೆಣೆದು ಚಪ್ಪರಕ್ಕೆ ಕೆಲವರು ಸಿದ್ದತೆ ಮಾಡಿಕೊಂಡರು ಅಷ್ಟೇ.. ಮತ್ತೆ ಆ ವಿಚಾರವೇ ಇಲ್ಲ.. ಎಲ್ಲ ತಣ್ಣಗಾಯಿತು.. ಹಬ್ಬಕ್ಕೆ ಇನ್ನೊಂದು ದಿನ ಬಾಕಿ ಉಳಿದಿದ್ದರೂ ೧೦೦೦ ರೂಪಾಯಿ ಕೂಡ ಸಂಗ್ರಹ ಆಗಿರಲಿಲ್ಲ.. ಹೆಣೆದ ಗರಿಗಳನ್ನು ಬಿಟ್ಟರೆ ಏನೂ ರೆಡಿ ಆಗಿರಲಿಲ್ಲ.. ಒಬ್ಬ ಹುಡುಗನೂ ಪತ್ತೆ ಇಲ್ಲ..
ರಾತ್ರಿ ಆಯ್ತು.."ಈ ಐಕ್ಳು ಗಣಪತಿ ಕುಂಡ್ರಿಸವ.. ಅದಾಗು ಮಾತ..?" ಎಂಬ ಮಾತುಗಳನ್ನು ಕೇರಿ ಜನರೆಲ್ಲಾ ಮಾತಾಡಿಕೊಳ್ಳುತ್ತಿದ್ದರು.. ಊರಿನ ಬೇರೆ ಕಡೆಯೆಲ್ಲ ಗಣಪತಿ ಮಂಟಪ ರೆಡಿ ಮಾಡಿ ತಂದ್ ಕೂರ್ಸೋದ್ ಒಂದ್ ಬಾಕಿ ಇತ್ತು.. ಆದ್ರೆ ಇಲ್ಲಿ ಇನ್ನು ಏನು ಆಗೇ ಇಲ್ಲ.. ಕುಂಡ್ರಿಸ್ತಿವಿ ಅಂತ ಗ್ಯಾರಂಟಿನೂ ಇಲ್ಲ.

ರಾತ್ರಿ ಒಂಬತ್ತು ಗಂಟೆ ಆದಂತೆ ಎಲ್ಲೋ ಒಬ್ಬೊಬ್ಬರು ಹುಡುಗರು ಅಡ್ಡಕ್ಕೆ ಬರತೊಡಗಿದರು.. ಅಲ್ಲಿ ಇಲ್ಲ ನೀಲಗಿರಿ ಗಳ ಹಂಬ್ರಿಸಿ ತಂದ್ರು.. ಹುಡುಗರು ಬರಬರುತ್ತ ಹೆಚ್ಚಾದ್ರು.. ಗರಿ,ತಾಟು,ಗಳ,ಎಲ್ಲಾನು ಹಂಬ್ರಿಸ್ಕಂಡು ತರೋ ಹೊತ್ಗೆ ರಾತ್ರಿ ಹತ್ ಘಂಟೆ ಆಗಿ ಊರ್ ಜನ್ವೆಲ್ಲ ಮಲಗಿದ್ರು.. ಎಲ್ರೂ ಒಂದೊಂದ್ ಕೆಲ್ಸ ಕೈಗೆತ್ಕೊಂಡು ಮಂಟಪ ರೆಡಿ ಮಾಡೋಕೆ ಶುರು ಮಾಡಿದ್ವು.. ಕೆಲವ್ರು ಆಗ್ಲೇ ತತ್ ಆಗಿದ್ರಿಂದ ಅವ್ರ್ ಗಲಾಟೆಗೆ ಬೀದಿನಾಯಿಗಳು ಅರ್ಚ್ತಾ ಇದ್ವು..

ಚಪ್ರ ಹಾಕೋಕೆ ಎನ್ಬೇಕೋ ಅದ್ನ ಕದ್ದಾದ್ರು ಸರಿ ಅಲ್ಲಿ ಇಲ್ಲಿ ಹೊಂಚಾಕೊಂಡ್ ಬಂದು ರಾತ್ರಿ ೨ ಗಂಟೆ ಹೊತ್ಗೆ ಚಪ್ರ ಫುಲ್ ರೆಡಿ ಮಾಡಿ ಎಲ್ರು ನಾಳೆ ದುಡ್ ಕೊಟ್ಬಿಡಿ ಅಂತ ಹೇಳಿ ನಾಳೆ ಆಗ್ಬೇಕಾದ ಕೆಲ್ಸ ತಿಳ್ಸಿ ಮನೆಗ್ಹೋಗಿ ಮಲ್ಕೊಂಡೊ.
ಬೆಳಿಗ್ಗೆ ಎದ್ ನೋಡಿದ ಜನ್ವೆಲ್ಲ "ಅಲಾಲೆ ಅದ್ಯಾವಾಗ್ ಚಪ್ರ ಹಾಕುದ್ರು.." ಅಂತ ಆಶ್ಚರ್ಯ ಪಡೊಹಂಗೆ ರಾತ್ರೋ ರಾತ್ರಿ ಚಪ್ರ ರೆಡಿ ಮಾಡಿದ್ದೋ. ಹಬ್ಬದ ದಿನ ಆದ್ರೂ ಇನ್ನು ಪೂರ್ತಿ ದುಡ್ ಬಂದಿಲ್ಲ..
ಸಾಯಂಕಾಲ ೩ ಗಂಟೆಗಂಟ ಬಾಳೆಕಂಬ,ಕಬ್ಬುನ್ ಗರಿ, ಮಾವುನ್ ಸೊಪ್ಪು.. ಎಲ್ಲಾನು ತಂದ್ ಚಪ್ರದ ಕೆಲ್ಸ ಫುಲ್ ಮಾಡಿದ್ವಿ.ಮಂಡ್ಯದಿಂದ ಒಬ್ಬ " ಬೇಗ್ ಬರ್ರುಲಾ.. ಈ ವರ್ಷ ಗಣಪತಿ ಕಡ್ಮೆ ಅವೆ.. ಬೇಗ್ ಬರ್ದಿದ್ರೆ ಚೆನಾಗಿರೋದ್ ಸಿಗುಕಿಲ್ಲ.. ತೀರೋಗುಕ್ ಮುಂಚಿಯೇ ಬೇಗ ಬನ್ರುಲ.." ಅಂತ ಫೋನ್ ಹಾಕಿದ್ದ..

ನಾವುನು ಗಣಪತಿ ತರೋಕ್ ಆಗೋವಷ್ಟು ದುಡ್ ಕಿತ್ಕಂದು ಮಂಡಿಕ್ ಹೋಗಿ ಗಣಪತಿ ಕಡ್ಮೆ ಇದ್ದುದ್ರಿಂದ ಯಾವ್ದೋ ಒಂದ್ ಗಣಪತಿನ ತಂದೆಬಿಟ್ವಿ..

ಗಣಪತಿ ಚಪ್ರುತಕ್ಕೆ ಮೈಕು,ಪೆಂಡಾಲ್.. ಅದು ಇದು ಅಂತ ತರೋಹೊತ್ಗೆ ೭ ಗಂಟೆ ಆಗೇ ಹೋಯ್ತು..
ಇದ್ದ ಒಂದೈದಾರ್ ಆಳ್ಗೊಳೆ ಸೇರ್ಕೊಂಡು ಹೆಂಗೋ ಅತಗೆ ಗಣಪತಿನ ಕೂರ್ಸಿ ಜೈ ಅಂದೇ ಬಿಟ್ವಿ.. ಮೈಕ್ಸೆಟ್ ಸರ್ಯಾಗ್ ವರ್ಕ್ ಆಗದೆ ಇದ್ದುದ್ಕೆ ಯಾರ್ ಮನೆಲೋ ಅತಗೆ ಹೋಂ ತಿಯೇಟ್ರು ತಂದು ಹಾಕ್ದೊ.

ಇನ್ಮೇಲೆ ಇರುದು ಕೆಲ್ಸ..
ದಿನ ಪೂಜೆ ಮಾಡ್ಸುದು,ಗಣಪತಿ ಕಾಯ್ಕೊಳುದು,ಬುಡು ದಿನ ಜೋರಾಗ್ ಮಾಡುದು.. ಹೀಗೆ ಬೇಜಾನ್ ಕೆಲ್ಸ ಐಕ್ಳು ತಲೆ ಮ್ಯಾಲಿತ್ತು.. ಇನ್ನು ಸುಮಾರ್ ಜನ್ರು ದುಡ್ನೆ ಕೊಟ್ಟಿರ್ಲಿಲ್ಲ.. ರಾಜಧಾನಿಗೆ ಹೋಗಿ ಸೇರ್ಕಂಡಿದ್ದ ಸ್ವಲ್ಪ್ ಹುಡುಗ್ರು ಪತ್ತೇನೆ ಇರ್ಲಿಲ್ಲ.. ಹೇಗೋ ಮಾಡಿ ಒಂಬತ್ ದಿನುಕೆ ಬುಟ್ ಬುಡುದು ಅಂತ ನಿರ್ಧಾರ ಮಾಡಿದ್ವಿ.. ಭಾನ್ವಾರ ಸಿಗೋದ್ರಿಂದ ಬೆಂಗಳೂರ್ ಹುಡುಗ್ರು ಬತ್ತಾರೆ ಅಂತ ನಮ್ ಲೆಕ್ಕಾಚಾರ.
ಗಣಪತಿ ಹತ್ರ ನೋಡ್ಕೋಕೆ ಯಾರೋ ಪತ್ತೇನೆ ಇರ್ತಿರ್ಲಿಲ್ಲ,ರಾತ್ರೆ ೭ ಗಂಟೆಗೆ ಪೂಜೆಗೆ ಸರ್ಯಾಗಿ ಬಂದ್ಬುಡುರು.. ಪ್ರಸಾದಕ್ಕೆ.,
ಎಲ್ರೂ ಅದು ಇದು ತಿಂದು ಸ್ನಾನ ಮಾಡ್ದೆ ಇರ್ತುದ್ರಿಂದ ಪೂಜೆ ಮಾಡುಕೆ ಯಾರ್ನದ್ರು ಹುಡ್ಕಿ ಕರಿಬೇಕಿತ್ತು.. ಹೇಗೋ ಒಂಬತ್ ದಿನ ಆಯ್ತಾ ಬತ್ತು,ಗಣಪತಿ ಕುಂಡ್ರಿಸ್ರುಲ ನೋಡ್ಕಮ ಅಂತ ಹೇಳಿದ್ದೊರ್ ಯಾರೂ ಪತ್ತೇನೆ ಇಲ್ಲ.. ಇನ್ನು ಬರ್ಬೇಕಾದ್ ದುಡ್ಡು ಸರ್ಯಾಗ್ ಬಂದಿಲ್ಲ..
ಕಳೆದ ಭಾನ್ವಾರ ಬುಡುಕೆ ಎಲ್ಲ ರೆಡಿ ಮಾಡ್ದೊ,ಊರಲಿ ಕೆಲವ್ರು ದೊಡ್ಡೋರ್ ಹತ್ರ ಒಂದ್ಅಷ್ಟ್ ದುಡ್ ಈಸ್ಕಂಡು ಪುಳಿಹೊಗ್ರೆ,ಬುಗ್ರಿಕಾಳು,ಪಂಚಾಮೃತ ಮಾಡ್ಸುಕೆ ಹೇಳಿದ್ದೊ.
ಈ ಸಲ ಸೌಂಡ್ ಸಿಸ್ಟಂ ತಂದು ಜೋರಾಗಿ ಮಾಡ್ಮ ಅಂತ ಅಂದ್ಕೊಂಡಿದ್ದೊ.. ದುಡ್ಡ್ ಹೇಗೋ ರೆಡಿ ಮಾಡ್ದೊ,ಆದ್ರೆ ಡಕ್ ಗಳು ಸಿಗಲೇ ಇಲ್ಲ.. ಹೇಗೋ ಸ್ವಲ್ಪ್ ಜನ ಸೇರ್ಕಂಡು ಅಡ್ಗೆಗೆ ರೆಡಿ ಮಾಡ್ ಕೊಟ್ವಿ.. ಅಡ್ಗೆ ಮಾಡೋಕೆ ಒಂದಿಬ್ರು ದೊಡ್ದೊರ್ಗೆ ಎಣ್ಣೆ ಹಾಕ್ಸಿ ಬಿಟ್ಟಿದ್ವಿ.. ಎಣ್ಣೆ ಪಾರ್ಟಿ ಅದೆ ಬನ್ರುಲ ಅಂದಿದ್ರೆ ಸಾಕು ತಕ್ಷಣವೇ ಬತ್ತಿದ್ದ ಬೆಂಗಳೂರ್ ನಲ್ಲಿದ್ದ ನಮ್ಮೂರ ಹುಡುಗ್ರು ಗಣಪತಿ ಹಬ್ಬಕ್ಕೆ ಬನ್ರಿ ಅಂದಿದ್ರೆ ಕಾಸಿಲ್ಲ ಬರುಕಿಲ್ಲ ಅಂದಿದ್ರು.. ಆಮೇಲೆ ಬೋದ್ ಹೇಳಿದ್ಮೇಲೆ ಬತ್ತಿವಿ ಅಂತ ಹೇಳಿದ್ರು.. ಇವತ್ ಹೆಂಗರ ಮಾಡಿ ಡಕ್ ತತ್ತಿವಿ ಅಂತ ಹೋಗಿದ್ದೊರು ರಾತ್ರಿ ಆಯ್ತಾ ಬತ್ತಿದ್ರು ಪತ್ತನೆ ಇಲ್ಲ.. ಸಾಯಂಕಾಲ ಆಯ್ತಿದ್ದಂಗೆ ಜನಾನೋ ಜನ.. ಸುತ್ತ ಹಸಿರು.. ಗಣಪತಿಗೆ ಪೂಜೆ ಮಾಡಿ ಟ್ರಾಕ್ಟರ್ ಗೆ ಕುಂಡ್ರಿಸಿ ಡಕ್ ತರುಕ್ ಹೋಗಿದ್ದೊರ್ನ ಕಾಯ್ತಾ ಕೂತಿದ್ವಿ.. ಅಷ್ಟೊತ್ಗೆ ಆಲೆ ಬಣ್ಣ ಏರ್ಚ್ಕಂಡು ಹುಡುಗ್ರೆಲ್ಲ ಗುರ್ತೆ ಹಿಡಿಕಾಗ್ದಂಗೆ ಆಗಿದ್ರು.. ತಮಟೆಗಳು ಅದಾಗಲೇ ಬಂದಿದ್ದೋ.. ಬೆಂಗಳೂರ್ ಹುಡುಗ್ರು ಅಷ್ಟೊತ್ಗೆ ಸಾವ್ರಾರುಪಾಯಿ ಕೊಟ್ಟು ಪಟಾಕಿ ತಕಂದು ಬಂದ್ರು.. ಪಟಾಕಿನು ಸಿಡ್ಸಿ ಪೂಜೆ ಮಾಡಿ ಎಲ್ರುಗೂ ಪ್ರಸಾದ ಕೊಟ್ಟು ರೆಡಿಯಾಗ್ ಕುತ್ಕಂಡೊ..ಯಾಕೋ ಡಕ್ ತರುಕ್ಹೊದೊರು ಇವತ್ ಬರಿಕಿಲ್ಲ ಅನ್ನಿಸ್ತು.. ರಾತ್ರೆ ಆಯ್ತಾ ಲೇಟ್ ಆಗ್ತಿತ್ತು..
ಸರಿ ಅವ್ರ್ ಬರುದಾದ್ರೆ ಆಮೇಲ್ ಬರ್ಲಿ ಅನ್ಕಂಡು ಹೊರಡೋಕೆ ಶುರು ಮಾಡ್ದೊ.. ಎಲ್ಲ ಹುಡುಗ್ರು ಕೈಲಿ-ಮೈಲಿ ಬಣ್ಣ.. ಪಟಾಕಿಗಳು.. ತಮಟೆ-ಕುಣಿತ.. ಸೂಪರ್ರಾಗಿತ್ತು..
ಇದೆ ಫಸ್ಟ್ ಟೈಮ್ ನಾನೂ ಈ ಸಂಭ್ರಮದಲ್ಲಿ ಭಾಗವಹಿಸಿದ್ದೆ..
ಸ್ವಲ್ಪ ದೂರ ಹೋದಂತೆ ಕೆಲವ್ರು ಎಣ್ಣೆ ಬಿಟ್ಕಂಡು ಕುಣಿಕೆ ಟೈಟ್ ಆಗ್ಬುಟ್ರು.. ಊರಲ್ಲಿ ಅರ್ಧ ಮೆರವಣಿಗೆ ಬತ್ತಿದ್ದಂಗೆ ಡಕ್ ಸಿಗ್ಲಿಲ್ಲ ಅನ್ಕಂಡು ಅವರು ವಾಪಸ್ ಬಂದು ಕುಣಿಕೆ ಸೇರ್ಕಂಡರು.. ಊರಿಗೆ ನಮ್ದೆ ದೊಡ್ ಗಣಪತಿ ಆದ್ದ್ರಿಂದ ಜೋರು ಸ್ವಲ್ಪ್ ಜಾಸ್ತಿನೆ ಇತ್ತು..ನಮ ಕೇರಿ ಹುಡುಗ್ರು ಅನ್ಮೇಲೆ ಊರ್ಗೆಲ್ಲ ಗೊತ್ತಿತ್ತು ಹೇಗೆ ಅಂತ.
ಕೆಲವು ಕಡೆ ಪಟಾಕಿ ಹೊಡಿಬೇಡಿ ಅಂತ ಕೆಲವ್ರು ಹೇಳಿದ್ರು ಜಗ್ಳಾನೆ ಮಾಡ್ಕಂಡು ಪಟಾಕಿ ಹೊಡ್ದು ಮತ್ತೊಮ್ಮೆ ನಮ್ ಪುಂಡಾಟಿಕೆ ತೋರ್ಸೇಬಿಟ್ವಿ.. ಊರಲೆಲ್ಲ ಮೆರವಣಿಗೆ ಹಾಕಿ ಬಟ್ಟೆ ಬಿಚ್ಕಂಡು ಇಚ್ಛೆ ಬಂದಂಗೆ ಹುಚ್ರು ಅನ್ನೋ ಹಾಗೆ ಕುಣ್ಕಂದು ಎಣ್ಣೆ ಹಾಕಿದ್ ಬಾಯಲ್ಲೇ ಘೋಷಣೆ ಹಾಕಂಡು ಜೋರಾಗಿ ಪಟಾಕಿ ಹೊಡ್ಕಂದು ಅರಚಾಡ್ಕಂಡು ಸಖತ್ ಜೋರಾಗಿ ಊರಿಗೆಲ್ಲ ನಮ್ ಏರಿಯಾದ ಪವರ್ ತೋರ್ಸ್ದೋ..
ಪಕ್ಕದೂರಿನ (ವಿಶ್ವೇಶ್ವರಯ್ಯ ನಾಲೆ) ಕಾವ್ಲಿಗೆ ಬುಡ್ಬೇಕಿತ್ತು..
ನಾವು ಕುಣ್ಕಂದು ಊರ್ ಬಿಟ್ಟಾಗ ಅದಾಗ್ಲೆ ೧೦ ಗಂಟೆ,ಅಷ್ಟೊತ್ಗೆ ಕೆಲವ್ರ್ ಮುಕ ಮೂತಿ ನೋಡಕ್ ಆಗ್ದಂಗೆ ಬಣ್ಣ ಆಗಿತ್ತು.. ಮೈಮೇಲ್ ಇರಬೇಕಾದ್ ಅಂಗಿ ಸೊಂಟದಲ್ಲಿತ್ತು.. ತಮಟೆ ಸದ್ ಕೇಳ್ತಾ ಕುಣಿತಿದ್ರೆ ಪಕ್ಕ್ದೊರು ಬಂದ್ ಕುಣಿಬೇಕು ಅನ್ನೋಹಾಗಿತ್ತು.. ಒಂದ್ಅಷ್ಟ್ ಜನ ಎಣ್ಣೆ ಪಾರ್ಟಿಗಳು ಅದೆಷ್ಟ್ ಸಲ ಬಿದ್ ಒದ್ದಾಡಿದ್ರೋ..
ಟ್ರಾಕ್ಟರ್ ನಲ್ಲಿ ಗಣೇಶ,ಇನ್ನೊಂದ್ ಟಾಟ ಏಸ್ ನಲ್ಲಿ ಅರೆಬೆತ್ಲೆ ಹುಡುಗ್ರು, ಪಕ್ದೂರ್ಗೆ ಹೋದಾಗ ಆ ಊರ್ ಜನ್ವೆಲ್ಲ ಮಲಗಿ ಕತ್ಲೆ ಗುವ್ ಅಂತಿತ್ತು.. ಕಾವ್ಲಿ ಹತ್ರ ಹೋದಾಗ ೧೧ ಗಂಟೆ..
ಕಾವ್ಲಿಗೆ ಕುಡ್ದೊರ್ ನೆಗುದ್ಬುಡ್ತಾರೆ ಅಂತ ಒಬ್ಬನ್ನ ಕಾವ್ಲು ಕಾಯಿಕೆ ನಿಲ್ಲಿಸ್ದೋ.. ನೆಟ್ಟಗಿರೋ ಐದಾರ್ ಜನ ಸೇರ್ಕಂಡು ಪೂಜೆ ಮಾಡಿ ನಿಧಾನಕ್ಕೆ,ಹುಷಾರಾಗಿ ಗಣೇಶನ ಕಾವ್ಲಿಗೆ ಮುಳ್ಗಿಸಿ ಕೈಮುಗ್ದು ಮನೆಗೆ ಬಂದಾಗ ಅದಾಗ್ಲೆ ೧೨.೩೦..
ಆಗ ಎಲ್ರೂ ಊಟ ಮಾಡಿ ಎಲ್ಬೇಕೋ ಅಲ್ಲೇ ಬಿದ್ಕಂಡ್ವಿ.. ಬೆಂಗಳೂರ್ ಹುಡುಗ್ರು ಬೆಳ್ಗೆ ಡ್ಯೂಟಿಗೆ ಹೋಗ್ಬೇಕು ಅಂತೇಳಿ ಬಂದಿದ್ ಕಾರ್ನಲ್ಲೇ ಆಗ್ಲೇ ಹೊರಟ್ರು..
ಮಾರನೆ ದಿನ ಚಪ್ರನ ಎಲ್ಲಾನು ಬಿಚ್ಚಿ ಏನೇನು ವಾಪಸ್ ಮಾಡ್ಬೇಕು ಅದ್ನ ವಾಪಸ್ ಮಾಡಿ ಈ ವರ್ಷದ ಗಣೇಶನ ಹಬ್ಬನ ಮುಗಿಸಿದ್ವಿ..
ಈ ವರ್ಷದ ಕಥೆ ನೋಡಿದ್ರೆ ಮುಂದ್ಲ್ ವರ್ಷ ಕೂರಿಸ್ಬಾರ್ದು ಅಂತ ಅಂದ್ಕಂಡಿವಿ.. ನೋಡೋಣ..ಗಣೇಶ ಎಲ್ರುಗೂ ಒಳ್ಳೇದ್ ಮಾಡ್ಲಿ..

"ಜೈ ಏಕದಂತ.."


~.~

24 ಕಾಮೆಂಟ್‌ಗಳು:

ಮನದಾಳದಿಂದ............ ಹೇಳಿದರು...

ಅನುಭವ ಹಂಚಿಕೊಂದಿದ್ದೀರಾ, ಧನ್ಯವಾದಗಳು........
ಆದರೆ ನಮಗೆಈ ತರದ ಆಚರಣೆ ಬೆಕಾ? ಮರ್ಯಾದೆ ಬಿತ್ತು ಮಾಡುವ ಪೂಜೆ ದೆವರಿಗೆ ಇಷ್ಟವಾ?

sunaath ಹೇಳಿದರು...

ಗೌಡರೆ,
ಗಣೇಶ ನಿಮಗೆ ಒಲಿದಿದ್ದಾನೆ. ಅವನ ಕೈ ನೀವು ಬಿಡಬೇಡಿ. ನಿಮ್ಮ ಕೈಯನ್ನು ಆತನೂ ಬಿಡೋದಿಲ್ಲ.

ashokkodlady ಹೇಳಿದರು...

chennagide....

ಜಲನಯನ ಹೇಳಿದರು...

ಗುರುಪ್ರಸಾದ್ ನಿಮ್ಮ ನೆನಪುಗಳು ನಮ್ಮ ನೆನಪುಗಳ ಮನನಕ್ಕೆ ಕಾರಣವಾದದ್ದು ನಿಜ...ಚನ್ನಾಗಿದೆ...

PARAANJAPE K.N. ಹೇಳಿದರು...

ಗುರುಪ್ರಸಾದ್,
ಬಹಳ ದಿನಗಳಿ೦ದ ನಿಮ್ಮ ಬ್ಲಾಗಿಗೆ ಬರಲಾಗಿಲ್ಲ, ಇ೦ದು ಬ೦ದೆ, ಗಣಪನ ಹಬ್ಬದ ಬಗ್ಗೆ ಚೆನ್ನಾಗಿ ಬರೆದಿದ್ದೀರಿ., ಉತ್ಸವ-ಆಚರಣೆ ಗಳು ಯಾಕೆ ಹೀಗಾಗುತ್ತಿವೆ ಎ೦ಬುದನ್ನು ಚಿ೦ತಿಸಬೇಕಾಗಿದೆ.

Subrahmanya ಹೇಳಿದರು...

ಗಣೇಶನಿಗೆ ನನ್ನದೂ ಜೈ !. ಬರಹ ಓದಿದೆ..ನಂಬಿದವರನ್ನ ಗಣೇಶ ಕೈ ಬಿಡೊಲ್ಲ ಅಲ್ಲವೆ ?

Shashi jois ಹೇಳಿದರು...

ಗುರು
ಲೇಖನ ಚೆನ್ನಾಗಿದೆ..
ನಂಬಿದವರನ್ನು ದೇವರು ಎಂದಿಗೂ ಕೈ ಬಿಡಲ್ಲ ರೀ.

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ನಾವು ಆಚರಣೆಯ ಹೆಸರಿನಲ್ಲಿ ಏನೆಲ್ಲಾ ಮಾಡುತ್ತೇವೆ...
ಬೇಸರವಾಗುತ್ತದೆ...

ಬಹಳ ಚಂದವಾಗಿ ಬರೆಯುತ್ತೀರಿ... ಅಭಿನಂದನೆಗಳು...

SATISH N GOWDA ಹೇಳಿದರು...

nice ...... writing supeer

ಗೌತಮ್ ಹೆಗಡೆ ಹೇಳಿದರು...

ಮಜವಾಗಿದೆ :)

shivu.k ಹೇಳಿದರು...

ಗಣೇಶನ ಆಚರಣೆಯ ವಿವರಣೆ ಚೆನ್ನಾಗಿದೆ.

ಸೀತಾರಾಮ. ಕೆ. / SITARAM.K ಹೇಳಿದರು...

ತುಂಬಾ ಚೆನ್ನಾಗಿ ಅನುಭವ ಹೇಳಿ ಕೊಂಡಿದ್ದಿರಾ...
ದುಡ್ಡು ಕೇಳೋ ಹುಡುಗರಿಗೆ ಗದುರಿ ಅಭ್ಯಾಸ ಇಟ್ಟು. ಅವರ ಪಡಿಪಾಟಲು ಮತ್ತು ಸಂಕಲ್ಪ ಹೇಗಿರುತ್ತೆ ಅಂಥಾ ನಿಮ್ಮ ಲೇಖನದಿಂದ ಗೊತ್ತಾಯಿತು. ಜೈ ಗಣಪತಿ ಬಪ್ಪಾ!

- ಕತ್ತಲೆ ಮನೆ... ಹೇಳಿದರು...

ಮನದಾಳದಿಂದ............,

ಈ ರೀತಿ ಆಚರಣೆ ತಪ್ಪು.. ಎಂದು ಹೇಳಬಹುದು..
ಪ್ರತಿಕ್ರಿಯೆಗೆ ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

sunaath,

ಗಣಪ ನಂಗೆ ಒಲಿದಿದ್ದಾನೆಯೇ.. ನನಗಂತೂ ತಿಳಿಯದು..
ಪ್ರತಿಕ್ರಿಯೆಗೆ ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

ashokkodlady.,

ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

ಜಲನಯನ ,

ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

PARAANJAPE K.N..,

ಪರವಾಗಿಲ್ಲ ಬಿಡಿ .. ಬಿಡುವಾದಾಗ ಬನ್ನಿ..
ನಿಮ್ಮ ಮಾತಿನ ಬಗ್ಗೆ ಚಿಂತಿಸಬೇಕಾದ್ದೆ..
ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

Subrahmanya.,

ಹೌದೌದು..
ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

Shashi jois.,

ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

ಸಿಮೆಂಟು ಮರಳಿನ ಮಧ್ಯೆ .,


ಹೌದು ತಪ್ಪೆನಿಸುತ್ತದೆ..
ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

SATISH N GOWDA .,

ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

ಗೌತಮ್ ಹೆಗಡೆ.,

ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

shivu.k.,

ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

ಸೀತಾರಾಮ. ಕೆ. / SITARAM.K.,

ನನ್ನ ಬರಹ ಸಾರ್ಥಕವಾಯ್ತು...,

ಧನ್ಯವಾದಗಳು...

Related Posts Plugin for WordPress, Blogger...