"ಆಚಾರ್ಯ ದೇವೋಭವ!!"

ನನ್ನ ಕಲಿಕಾ ಜೀವನದಲ್ಲಿ 'ಗುರು' ಎಂಬ ಪಟ್ಟವನ್ನೇರಿದ್ದವರ ಸವಿ ನೆನಪಿನಲ್ಲಿ ಮೂಡಿಬಂದ ಲೇಖನ..]" ಗುರುಬ್ರಹ್ಮ ಗುರುವಿಷ್ಣು ಗುರುಮಹೇಶ್ವರ ಗುರುಸಾಕ್ಷಾತ್ ಪರಬ್ರಹ್ಮ ತತ್ಮೈಶ್ರೀ ಗುರುವೇ ನಮಃ ": ಈ ಸಾಲುಗಳನ್ನು ನಾನೂ ಸಂಪೂರ್ಣವಾಗಿ ಅರಿತುಕೊಂಡಿಲ್ಲವೆಂದೆನಿಸುತ್ತದೆ..
'ತಾಯಿಯೇ ಮೊದಲ ಗುರು' ಎಂಬುದರ ಬಗ್ಗೆಯೂ ನಂಗೆ ಅರಿವಿಲ್ಲ.. ತಂದೆ ನನಗೆ ಗುರುವಾಗಿದ್ದು ಅಕ್ಷರಶಃ ಸತ್ಯ..
'...ಕಾಲ(ಅನುಭವ)ವೇ ನನ್ನ ಗುರು...' ಎಂದೆನಿಸುತ್ತದೆ..

ನಾನು ಮೊದಲಬಾರಿಗೆ ಶಿಶುವಿಹಾರ ಸೇರಿದಾಗ ಅಲ್ಲಿನ ಶಿಕ್ಷಕಿ ಕಂಡರೆ ಭಯವಿತ್ತು..
ನಮ್ಮೂರಿನಲ್ಲಿ ಒಂದೇ ಕಾಂಪೌಂಡಿನ ಒಳಗಡೆ ಶಿಶುವಿಹಾರ,ಪ್ರಾಥಮಿಕ ಶಾಲೆ,ಆಸ್ಪತ್ರೆ... ಎಲ್ಲವೂ ಸೇರಿದ್ದವು..
ನಾನು ಶಿಶುವಿಹಾರದಲ್ಲಿದ್ದಾಗ ಅಲ್ಲಿ ಆಗೊಮ್ಮೆ ಈಗೊಮ್ಮೆ ಕಾಣುತಿದ್ದ ಶಾಲಾ ಶಿಕ್ಷಕರನ್ನು ಕಂಡರೆ ತುಂಬಾ ಭಯ-ಭಕ್ತಿ ಇತ್ತು..
ಶಿಶುವಿಹಾರದಲ್ಲಿ ಸಣ್ಣ -ಪುಟ್ಟ ಆಟಗಳನ್ನು ಕಲಿತು ಶಾಲೆಗೇ ಸೇರಿದ್ದು ಆಯಿತು..

ನಾನು ಪ್ರಾಥಮಿಕಶಾಲೆಯಲ್ಲಿ''ಬೋರಲಿಂಗಯ್ಯ,ಎನ್.ಬೆಟ್ಟಯ್ಯ,ಲಕ್ಷ್ಮಿನಾರಾಯಣಪ್ಪ,ಪುಷ್ಪಮಂಜುಳಾಬಾಯಿ ,ಅನಂತಕುಮಾರ್,ಪ್ರೇಮ,ಅನುಸೂಯ,ಪಾರ್ವತಿ,ಎನ್.ಮಲ್ಲಿಕಾರ್ಜುನ್,ಸರಸ್ವತಿ..' ಹೀಗೆ ತುಸುದೊಡ್ಡದೇ ಎನಿಸುವ ಶಿಕ್ಷಕ/ಕಿ ವೃಂದವನ್ನು ಕಂಡಿದ್ದೇನೆ..
ಬೋರಲಿಂಗಯ್ಯ ನಾನು ಶಾಲೆ ಸೇರಿದಾಗ ನಮ್ಮ ಶಾಲೆಯ ಮುಖ್ಯಶಿಕ್ಷಕರಾಗಿದ್ದರು..,ಅವರು ನಮ್ಮೂರಿನಲ್ಲಿಯೇ ಉಳಿಯುತ್ತಿದ್ದರು ಎಂದು ನೆನಪು,ಅವರಿದ್ದಾಗ ನಮ್ಮ ಶಾಲೆಯಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಿದ್ದವು..
ಎನ್.ಬೆಟ್ಟಯ್ಯ ಅವರು ನನ್ನ ತಾಯಿಗೂ ಶಿಕ್ಷಕರಾಗಿದ್ದರಂತೆ.. ಅವರು ಬಹುಪಾಲು ನನ್ನೂರಿನ ಜನರಿಗೆಲ್ಲ ಮೆಚ್ಚಿನ ಶಿಕ್ಷಕರು..
ಬೋರಲಿಂಗಯ್ಯ ಅವರ ವರ್ಗಾವಣೆ ನಂತರ ಎನ್.ಮಲ್ಲಿಕಾರ್ಜುನ್ ಅವರು ಬಂದಿದ್ದು ಅವರು ಒಂದು ರೀತಿಯ ತುಸು ವಿಶೇಷ ವ್ಯಕ್ತಿ..
'ಅನಂತಕುಮಾರ್ ಅವರು ಕನ್ನಡ ಅಕ್ಷರಗಳನ್ನು ಮುದ್ದಾಗಿ ಬರೆಯುವುದರಲ್ಲಿ ಅವರಿಗೆ ಅವರೇ ಸಾಟಿ..'
ನಾನು ಐದನೆಯ ತರಗತಿಗೆ ಬಂದಾಗ ಎನ್.ಬೆಟ್ಟಯ್ಯ ಅವರ ವರ್ಗಾವಣೆ ಯಾಗಿತ್ತು.. ಅವರು ವರ್ಗಾವಣೆಯಾಗುವ ಹಿಂದಿನ ದಿನ ತರಗತಿಗೆ ಬಂದು ಭಾವುಕರಾಗಿ ಈ ಶಾಲೆಯ ಅವರ ಋಣದ ಬಗ್ಗೆ ಮಾತಾಡುತ್ತಿದ್ದರು.. ಅದು ಅಷ್ಟಾಗಿ ನನಗೆ ತಿಳಿಯುತ್ತಿರಲಿಲ್ಲ..ನಾನು ಆರನೆಯ ತರಗತಿಗೆ ಬಂದಾಗ ಪುಷ್ಪಮಂಜುಳಾಬಾಯಿ ಅವರ ವರ್ಗಾವಣೆಯೂ ಆಯಿತು..
ಇನ್ನು ಲಕ್ಷ್ಮಿನಾರಾಯಣಪ್ಪ ಮಾಸ್ತರರು ಎಂದರೆ ಎಲ್ಲರಿಗೂ ಭಯ.. ಅವರ ಹೊಡೆತ ತಾಳಲಾರದೆ ಕೆಲವರು ಶಾಲೆ ಬಿಟ್ಟಿದ್ದಾರೆ ಎಂಬುದು ಮತ್ತೊಂದು ವಿಚಾರ.. ಅವರು ರೂಲರ್ ಹಿಡಿದು ಆವರಣದಲ್ಲಿ ನಿಂತಾಗ ಎಲ್ಲರೂ ಬಾಯಿಮೇಲೆ ಬೆರಳಿಟ್ಟು ಸದ್ದುಗದ್ದಲವೆಲ್ಲ ಅಡಗಿ ಮೌನ ಆವರಿಸುತ್ತಿತ್ತು.. ಅವರು ವರ್ಗಾವಣೆ ಆಗಿ ಒಮ್ಮೊಮ್ಮೆ ಕಾಣಸಿಗುತ್ತಾರೆ..
ಎನ್.ಮಲ್ಲಿಕಾರ್ಜುನ್ ಅವ್ರ ವಿಷಯದಲ್ಲಿ ಎಲ್ಲರಿಗೂ ಬೇಸರ ಇತ್ತು ಎಂದೆನಿಸುತ್ತಿತ್ತು.. ಅವರ ಕಾರ್ಯವೈಖರಿ ಸರಿಯಿಲ್ಲ ಎಂದು ಅಪವಾದಿಸಿ ಅವರನ್ನು ವರ್ಗಾವಣೆ ಮಾಡಿಸಿ ಅವರ ಜಾಗಕ್ಕೆ ಹಿಂದೊಮ್ಮೆ ಇದ್ದ ಎನ್.ಬೆಟ್ಟಯ್ಯ ಅವರನ್ನೇ ತರುವುದಾಗಿ ಘೋಷಿಸಿದ್ದ ನಮ್ಮೂರ ನಾಯಕರು ಅವರ ಮಾತಿನಂತೆ ಗೆದ್ದಿದ್ದರು.. ಅವರಂತೆಯೇ ಎನ್.ಬೆಟ್ಟಯ್ಯ ಅವರು ಬಂದ ಮೇಲೆ ನಮ್ಮ ಶಾಲೆಗೇ ಹೊಸಕಳೆ ಬಂದಿತ್ತು.. ಶಾಲೆಯ ಅಭಿವೃದ್ಧಿಗಾಗಿ ಬಹಳ ಶ್ರಮಿಸುತ್ತ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದರವರು..
ಇತ್ತೀಚಿಗೆ ಅವರಿಗೆ ಪಾರ್ಶ್ವವಾಯು ಬಡಿದು ವಿಧಿ ತನ್ನ ಕ್ರೂರತೆಯನ್ನು ಮೆರೆದಿದೆ.. ಅವರನ್ನು ಈಗಲೂ ಶಾಲೆಗೇ ಕರೆತರಲಾಗುತ್ತಿದೆ.. ಸಮಯಸಾಧಕ,ಬಿರುಸಿನ ನಡಿಗೆಯ ಆ ದಿವ್ಯಜ್ಯೋತಿ,ಕೈಯಲ್ಲಿ ಕೋಲನ್ನು ಹಿಡಿದು ಗದರಿಸಿ ಬುದ್ದಿ ಹೇಳುತ್ತಿದ್ದ ಅವರು,ಇಂದು ಊರುಗೋಲನ್ನು ನೆಲಕ್ಕೂರಿ ಒಬ್ಬನ ಸಹಾಯದಿಂದ ಕುಂಟುತ್ತ ಕೃಶದೇಹಿಗಳಾಗಿ ಶಾಲೆಯ ಆವರಣದಲ್ಲಿ ಕಂಡೊಡನೆ ಕಣ್ಣುಗಳು ತೇವವಾಗಿ ಮನ ಮರುಗುವುದೆಕೋ..

ಅವರು ಹಿಂದೊಮ್ಮೆ ಅವರ ದೂರವಾಣಿಗೆ 'ಏನಾಗಲಿ ಮುಂದೆ ಸಾಗು ನೀ' ಹಾಡನ್ನು ಹಲೋಟ್ಯೂನಾಗಿ ಹಾಕಿಸಿದ್ದುದು ನೆನಪಾಗುತ್ತದೆ.. ಅವರ ಈ ಸ್ಥಿತಿಗೆ ಎಲ್ಲರೂ ಮರುಗುತ್ತ ದೇವರಿಗೆ ಹಿಡಿಶಾಪ ಹಾಕುವುದುಂಟು..ನಾನು ಪ್ರಾಥಮಿಕ ಶಾಲೆಯಲ್ಲಿ ಜಾಣನಾಗಿದ್ದು ಒಳ್ಳೆ ಹೆಸರು ಪಡೆದಿದ್ದೆ ಎನಿಸುತ್ತದೆ..

ನಾನು ಪ್ರಾಥಮಿಕ ಶಾಲೆ ಮುಗಿಸುವಷ್ಟರಲ್ಲಿ ನಮ್ಮೂರಿನಲ್ಲಿಯೇ ಪ್ರೌಢಶಾಲೆ ಆರಂಭವಾಗಿತ್ತು.. ಪ್ರೌಢಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ ನಾನೂ ಓದಿದ ಶಿಶುವಿಹಾರ,ನಾನು ಆಟವಾಡಿದ ಜಾರುಗುಪ್ಪೆ ಮಣ್ಣಾಗಿ.. ಈಗ ಬರೀ ನೆನಪಾಗಿವೆ.. ಆಸ್ಪತ್ರೆ ಪ್ರೌಢಶಾಲಾ ಶಿಕ್ಷಕರ ಕೊಠಡಿಯಾಯಿತು..
ಅಂತೂ-ಇಂತೂ ಪ್ರೌಢಶಾಲೆ ಸೇರಿಯೂ ಆಯಿತು..
ಪ್ರೌಢಶಾಲೆಯಲ್ಲಿ 'ಮಂಜುನಾಥ್,ಮೂರ್ತಿ,ಮಹಮ್ಮದ್ ಖುರೇಶ್,ಕುಮಾರ್,ಯೋಗಾನರಸಿಂಹ,ಪುಷ್ಪಲತ,ಸುಧಾ,ನಾಗಾರಾಜ್.. 'ಇವರೆಲ್ಲರನ್ನು ಕಂಡಿದ್ದೇನೆ..
ಪುಷ್ಪಲತ ಅವರು ನಾನು ಓದುತ್ತಿದ್ದಾಗ ಮುಖ್ಯಶಿಕ್ಷಕಿಯಾಗಿದ್ದರು.. ಈಗ ವರ್ಗಾವಣೆಯಾಗಿದ್ದರಂತೆ..
ಮಂಜುನಾಥ ಅವರು ಕನ್ನಡ ಭೋಧನೆ ಮಾಡುತ್ತಿದ್ದರು.. ಜೊತೆಗೆ ಎಲ್ಲ ಸಭೆ-ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಭಾಷಣಕಾರರನ್ನಾಗಿ ಮಾಡುತ್ತಿದ್ದರು.. ನಾನು ಇಂದು ಪ್ರತಿ ಸಭೆ-ಸಮಾರಂಭಗಳಲ್ಲಿ ಯಾವುದೇ ಅಂಜಿಕೆಯಿಲ್ಲದೆ,ಎದೆಗುಂದದೆ ಧೈರ್ಯವಾಗಿ ಮಾತನಾಡುತ್ತೆನೆಂದರೆ ಆ ಪ್ರತಿಭೆ ಹೊರಹೊಮ್ಮಲು ಅವರದು ಬಹುಪಾಲು..ನಾನಷ್ಟೇ ಅಲ್ಲ ನಮ್ಮ ಶಾಲೆಯಲ್ಲಿ ಓದಿದ ಎಷ್ಟೋ ವಿಧ್ಯಾರ್ಥಿಗಳು ಭಾಷಣಕಾರರಾಗಲು ಅವರೇ ಪ್ರಮುಖರು..
ಅವರಿಗೆ ನಾನೆಂದೆಂದಿಗೂ ಕೃತಜ್ಞನಾಗಿದ್ದೇನೆ...
ಮೂರ್ತಿ ಅವರು ಇಂಗ್ಲಿಷ್ ಹಾಗೂ ರಸಾಯನಶಾಸ್ತ್ರ ಪಾಠ ಮಾಡುತ್ತಿದ್ದರು.. ಅವರು ನಾಸ್ತಿಕರಂತೆ ಮಾತನಾಡುತ್ತಿದ್ದರು..
ಮಹಮ್ಮದ್ ಖುರೇಶ್ ಅವರು ಹಿಂದಿ ವಿಷಯ ತೆಗೆದುಕೊಂಡಿದ್ದರು.. ಅವರು ತುಂಬಾ ತಾಳ್ಮೆ ಹೊಂದಿದ್ದರು,ಆದರೆ ಅವರ ತಾಳ್ಮೆ ಪರೀಕ್ಷೆ ಮಾಡಿದಲ್ಲಿ ಅವರ ಇನ್ನೊಂದು ಮುಖ ದಿಗ್ದರ್ಶನವಾಗುತ್ತಿತ್ತು.. ಅವರು ಸ್ನೇಹಿತರಂತೆ ಬೆರೆಯುತ್ತಿದ್ದರು.. ಅವರನ್ನು ನಾನು ತುಂಬಾ ವಿಧೇಯತೆಯಿಂದ ಕಾಣಲು ಪ್ರಯತ್ನಿಸುತ್ತಿದ್ದೆ.. ಅಕ್ಷರಗಳನ್ನು ವಿಶಿಷ್ಟವಾಗಿ ಬರೆಯುವುದರಲ್ಲಿ ಅವರು ಪರಿಣಿತರು.. ಈಗ ಅವರೂ ವರ್ಗಾವಣೆಯಾಗಿದ್ದಾರೆ..
ಕುಮಾರ್ ಅವರು ಗಣಿತ ವಿಷಯದವರಾಗಿದ್ದು ಪಾಠ ಅಚ್ಚುಕಟ್ಟಾಗಿ ಮಾಡುವುದರಲ್ಲಿ ಅವರ ಬಗ್ಗೆ ಇನ್ನೊಂದು ಮಾತಿಲ್ಲ..
ಯೋಗಾನರಸಿಂಹ ಅವರು ಭೌತಶಾಸ್ತ್ರ ಪಾಠ ಹೇಳುತ್ತಿದ್ದು ತುಂಬಾ ಹಾಸ್ಯಪ್ರಿಯರು..
ಸುಧಾ ಅವರು ವಿಶೇಷ ಶಿಕ್ಷಕಿಯಾಗಿದ್ದು ಅವರು ಮಾಡುತ್ತಿದ್ದ ವಿಶೇಷ ತರಗತಿಗಳಿಂದ ನನ್ನ ಬಹುಗುಣಗಳು ಸಹಪಾಠಿಗಳಿಗೆ ತಿಳಿದವು.. ಸಾಮಾಜಿಕವಾಗಿ ಮುಕ್ತವಾಗಿ ಚರ್ಚೆ ಮಾಡುತ್ತಿದ್ದರಾ ಸಮಾಜ ವಿಷಯದ ಶಿಕ್ಷಕಿ..
ನಾಗರಾಜ್ ಅವರು ದೈಹಿಕ ಶಿಕ್ಷಕರಾಗಿದ್ದು ಅವರೇ ಒಂದು ವಿಶೇಷ..
ಈ ಗುರುವೃಂದದ ನಡುವೆ ಕೆಂಪಮ್ಮ ಎಂಬುದೊಂದು ಮುಖ್ಯಪಾತ್ರ.. ಅವರು ಯಾವುದೇ ವಿಷಯದ ಶಿಕ್ಷಕಿಯಲ್ಲದಿದ್ದರೂ ಕೆಲವು ವಿದ್ಯಾರ್ಥಿಗಳು ಕೆಂಪಮ್ಮ ಅವರನ್ನು ಬಿಟ್ಟು ಮತ್ಯಾರನ್ನು ಸೌಜನ್ಯದಿಂದ ಕಾಣುವುದಿಲ್ಲ ಎಂಬುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ..
ನಾನು ಪ್ರೌಢಶಾಲೆಯಲ್ಲಿ ಹೆಚ್ಚು ಸಮಯವನ್ನು ಆಟದ ಮೈದಾನದಲ್ಲೇ ಕಳೆದುದರಿಂದ ಅವರೆಲ್ಲರನ್ನು ಹೆಚ್ಚಾಗಿ ತಾಳೆ ಹಾಕುವುದು ತಿಳಿದಿಲ್ಲ..
ಪ್ರೌಢವಯಸ್ಕನಲ್ಲವೇ.. ತೀಟೆ,ತಕರಾರು,ತರಲೆ,.. ಎಲ್ಲ ಗುಣಗಳಿಂದ ಕಾಣಿಸಿಕೊಂಡೆ. ಇಲ್ಲಿನ ಶಿಕ್ಷಕರು ನನಗೆ 'ಅಹಂಕಾರಿ' ಎಂಬ ಪಟ್ಟ ಕೊಟ್ಟಿದ್ದು ನನ್ನ ಜನ್ಮಜರ ಮೂಲಕ ಹಲವು ದಿನಗಳ ನಂತರ ಗೊತ್ತಾಯಿತು..
ನನ್ನವರಾದ ಕೆಲವರ ನಾಮಬಲದಿಂದ ನನ್ನೆಲ್ಲ ತಪ್ಪುಗಳನ್ನು ಈ ಶಿಕ್ಷಕರು ಮನ್ನಿಸಿದ್ದರು ಎಂದು ಭಾವಿಸುತ್ತೇನೆ..
ನಾನು ಇಲ್ಲಿ ಹಲವಾರು ವಿವಾದಗಳನ್ನು ಸೃಷ್ಟಿಸಿಕೊಂಡಿದ್ದರೂ 'ನಾನು ನನಗೆ ತಿಳಿದಂತೆ ನನ್ನ ಆತ್ಮಸಾಕ್ಷಿಯಾಗಿ ಯಾವ ಶಿಕ್ಷಕರ ವಿಷಯದಲ್ಲೂ ತಪ್ಪೆಸಗಿಲ್ಲ ಎಂದು ಪ್ರಮಾಣ ಮಾಡುತ್ತೇನೆ.. ಪರೋಕ್ಷವಾಗಿ ನನ್ನ ಬಗ್ಗೆ ತಪ್ಪು ತಿಳಿದಿದ್ದರೆ ಅದಕ್ಕೆ ಕಾರಣ ನನಗೆ ತಿಳಿದಿಲ್ಲ.."ಈಗಲೂ ಆಗಿನ ಕೆಲವು ಶಿಕ್ಷಕರು ಕಣ್ಮುಂದೆ ಕಂಡಾಗ ನಮಸ್ಕರಿಸುವುದು ನಮಸ್ಕರಿಸಲೆಬೇಕಂತಲ್ಲ///

ಏನೇ ಇರಲಿ ನನ್ನ ಜೀವನದಲ್ಲಿ ಗುರು ಪಟ್ಟವನ್ನೇರಿದ್ದ ಎಲ್ಲರಿಗೂ ನಾನು ಚಿರಋಣಿ..
ಸೂಚನೆ:ಈ ಮೇಲ್ಕಂಡ ಕೆಲವು ಶಿಕ್ಷಕರ ನಡುವಿನ ಒಡನಾಟದಲ್ಲಿ ನಡೆದ ಕೆಲವು ಅಹಿತಕರ ಘಟನೆಗಳನ್ನು ಇಲ್ಲಿ ಈಗ ಪ್ರದರ್ಶನ ಮಾಡುವುದು ಸರಿಯಿಲ್ಲ ಎಂದು ಮರೆಮಾಚಲಾಗಿದೆ..


~-~

18 ಕಾಮೆಂಟ್‌ಗಳು:

ಸೀತಾರಾಮ. ಕೆ. / SITARAM.K ಹೇಳಿದರು...

ಮನದಾಳದಿಂದ ಬರೆದಿದ್ದೀರಿ...
ಒಳ್ಳೆಯದಾಗಲಿ..

ಸೀತಾರಾಮ. ಕೆ. / SITARAM.K ಹೇಳಿದರು...

ಕೃತಜ್ಞ -ಕೃತಘ್ನ ವಾಗಿದೆ.ತಿದ್ದಿ.

ಸಾಗರದಾಚೆಯ ಇಂಚರ ಹೇಳಿದರು...

ಗುರು ವನ್ನು ಮರೆಯಲಾದೀತೇ?

ನಿಮ್ಮ ಮಾತು ಸತ್ಯಾ

ಸುಂದರ ಬರಹ

sunaath ಹೇಳಿದರು...

ಗುರುಗಳು ಮನದಾಳದಿಂದ ಮರೆಯಾಗಲು ಸಾಧ್ಯವಿಲ್ಲ ಎನ್ನುವದನ್ನು ಚೆನ್ನಾಗಿ ನಿರೂಪಿಸಿದ್ದೀರಿ.

ಮನಮುಕ್ತಾ ಹೇಳಿದರು...

ಗುರುಗಳನ್ನು ನೆನೆಯುತ್ತಾ ಬರೆದ ಬರಹ ಚೆನ್ನಾಗಿದೆ. ಶುಭವಾಗಲಿ.

ashokkodlady ಹೇಳಿದರು...

Chennagide..gurugalannu neneyutta bared baravanige sundaravagide...dhanyavadagalu...

ವಿ.ಆರ್.ಭಟ್ ಹೇಳಿದರು...

ತಪ್ಪುಗಳು ಸಾಕಷ್ಟಿವೆ, ದಯವಿಟ್ಟು ತಿದ್ದಿಕೊಳ್ಳಿ, ಸಂಸ್ಕೃತದ ಶ್ಲೋಕಗಳನ್ನು ಬಳಸುವಾಗ ಬಹಳ ಎಚ್ಚರಿಕೆಯಿರಲಿ, ಅಲ್ಲಿ ತಪ್ಪಾದರೆ ಅರ್ಥ ಅನರ್ಥವಾಗುತ್ತದೆಯಲ್ಲದೇ ಮಾತೃ ಸ್ವರೂಪಿಯಾದ ದೇವನಾಗರೀ ಭಾಷೆಗೆ ನಾವು ಅಪಚಾರಮಾಡಿದಂತಾಗುತ್ತದೆ! ಬರಹ ಶಿಕ್ಷಕರ ಬಗ್ಗೆ ತಮಗೆ ಇರುವ ಗೌರವವನ್ನು ತೋರಿಸುತ್ತದೆ,ಇನ್ನೂ ಒಳ್ಳೆಯ ಕೃತಿಗಳು ಬರಲಿ, ನಿಮಗೆ ಶುಭಕೋರುತ್ತೇನೆ.

ಸುಧೇಶ್ ಶೆಟ್ಟಿ ಹೇಳಿದರು...

ಇದ್ದದ್ದನ್ನು ಇದ್ದ ಹಾಗೆ ಚೆನ್ನಾಗಿ ಬರೆದಿದ್ದೀರಿ...

nimmolagobba ಹೇಳಿದರು...

ನನ್ನ ಜಿಲ್ಲೆಯ ಮತ್ತೊಬ್ಬ ಗೆಳೆಯನ ಬ್ಲಾಗಿಗೆ ಭೇಟಿ ನೀಡಲು ಸಂತಸವಾಗಿದೆ.ನಿಮ್ಮಲ್ಲಿ ಕಾಮೆಂಟ್ ಬರೆದಿರುವ ನನ್ನ ಸ್ನೇಹಿತರು ಬಹಳ ಮೆದಾವಿಗಳು. ಬರೆಯುವಾಗ ಆದಷ್ಟೂ ಎಚ್ಚರ ವಹಿಸಿ. ನಿಮ್ಮ ಲೇಖನ ಚೆನ್ನಾಗಿದೆ. ಮಂಡ್ಯ ಜಿಲ್ಲೆಯ ಬಗ್ಗೆ ಬಹಳಷ್ಟು ಮಾಹಿತಿ ನಿಮ್ಮಿಂದ ಹೊರಬರಲಿ.ಗುರುವಿನ ಬಗ್ಗೆ ನಿಮ್ಮ ಗೌರವ ಮೆಚ್ಚತಕ್ಕದ್ದು.ನಿಮಗೆ ಶುಭವಾಗಲಿ.

- ಕತ್ತಲೆ ಮನೆ... ಹೇಳಿದರು...

ಸೀತಾರಾಮ. ಕೆ. / SITARAM.K ,

ತಪ್ಪುಗಳನ್ನು ತಿದ್ದಿ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

ಸಾಗರದಾಚೆಯ ಇಂಚರ,

ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

sunaath,

ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

ಮನಮುಕ್ತಾ ,

ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

ashokkodlady,

ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

ವಿ.ಆರ್.ಭಟ್,

ಚಿಕ್ಕವರ ತಪ್ಪಿಗೆ ಮನ್ನಿಸಬೇಕು..
ತಪ್ಪನ್ನು ಗುರುತಿಸಿ ಹೇಳಿದ್ದಕ್ಕೆ ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

ಸುಧೇಶ್ ಶೆಟ್ಟಿ ,

ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

nimmolagobba,

ನನ್ನ "ಮನಸಿನಮನೆ'ಗೆ ಸ್ವಾಗತ..
ನನಗೂ ನಮ್ಮ ಜಿಲ್ಲೆಯ ಬ್ಲಾಗಿಗರನ್ನು ಕಂಡು ಸಂತೋಷವಾಯಿತು..
ಹೀಗೆಯೇ ಬರುತ್ತಿರಿ..

ತೇಜಸ್ವಿನಿ ಹೆಗಡೆ ಹೇಳಿದರು...

ಉತ್ತಮ ಬರಹ. ಕಹಿ ನೆನಪುಗಳನ್ನು ಮರೆವಿನಂಚಿಗೆ ಎಳೆದರೇ ಬದುಕು ಸಹನೀಯವಾಗುವುದು. ಹಿಂದೆ ಗುರು ಮುಂದೆ ಗುರಿ ಇದ್ದರೆ ಎಲ್ಲವೂ ಸುಗಮ ಎಂದಿದ್ದಾರೆ ಹಿರಿಯರು. ಆದರೆ ಹಿಂದಿರುವ ಗುರು ಹಾಗೂ ನಮ್ಮ ಮುಂದಿರುವ ಗುರಿ ಎರಡೂ ನಮ್ಮಗೆ ಒಳಿತುಂಟು ಮಾಡುವಂತಿರಬೇಕಷ್ಟೇ. ನಿಮ್ಮ ಗುರುವಂದನೆ ನಿಮ್ಮಲ್ಲಿ ಒಳ್ಳೆಯ ಭಾವಗಳನ್ನಷ್ಟೇ ಹುಟ್ಟುಹಾಕಲಿ.

Related Posts Plugin for WordPress, Blogger...