ಬಣ್ಣಬಣ್ಣದ ನೆನಪನಾಲೆ..

[ಇದೀಗ ನಿಮ್ಮ ಮುಂದಿಟ್ಟಿರುವ ಲೇಖನ ಒಂದು ವರ್ಷದ ಹಿಂದೆ ನನ್ನ ಹಳೆ 'ಬ್ಲಾಗ್' ನಲ್ಲಿ ಪ್ರಕಟಿಸಿದ್ದು., ಸರಿಯಾದ ಪ್ರತಿಕ್ರಿಯೆಗಳು ಸಿಗದೇ ಹೋದುದರಿಂದ, ಈ ಒಂದು ವರ್ಷದ ನೆನಪುಗಳನ್ನೂ ಬೆರೆಸಿ ಈಗ ಮತ್ತೆ ನಿಮ್ಮ ಮುಂದಿಡುತ್ತಿದ್ದೇನೆ..]ಅಮ್ಮ ದೃಷ್ಟಿ ತೆಗೆಯುವಾಗ ಸುಡುವ ಬಟ್ಟೆಯು ಹಾಯತಪ್ಪಿ ಕಾಲಮೇಲೆ ಬಿದ್ದು ಗಾಯ ಆಗಿರೋದು,ಅಪ್ಪ ಕೈ ಹಿಡಿದು ಬರೆಸುತ್ತಿದ್ದುದು,ನಾನು ಓದುತ್ತಿದ್ದ ಶಿಶುವಿಹಾರದ ಟೀಚರ್ ಕಂಡ ಕೂಡಲೇ ಅಡಗಿ ಕೂರುತ್ತಿದ್ದುದು,ಮನೆಮುಂದೆ ಕೂರುತ್ತಿದ್ದ ಹಿರಿಯರಿಗೆಲ್ಲ ಲಾರಿ ತಂದು ಹಾಯಿಸುವೆನೆಂದು ಬೆದರಿಕೆ ಹಾಕುತ್ತಿದ್ದುದು, ತಿಳಿಯದೆ ನಾಣ್ಯ ನುಂಗಿದ್ದು.....

ಅಪ್ಪ ಅವರು ಕೆಲಸ ಮಾಡುವ ಶಾಲೆಗೆ ಕರೆದುಕೊಂಡು ಹೋದಾಗ ಅಲ್ಲಿಯ ಪ್ರಾಂಶುಪಾಲರು ನನ್ನ ಪ್ರತಿಭೆ ಮೆಚ್ಚಿ ೫೦೦/- ರೂ. ಕೊಟ್ಟಿದ್ದು,ಯಾರೋ ಆಹಾರದಲ್ಲಿ ಮದ್ದು ಬೆರೆಸಿ ಕೊಟ್ಟು ಆರೋಗ್ಯ ಹದಗೆಟ್ಟಿದ್ದು,.....

ಪ್ರಾಥಮಿಕ ಶಾಲೆಗೆ ಸೇರಿದ್ದು,ಪ್ರತಿಭಾವಂತನೆಂದು ಹೆಸರು ಗಳಿಸಿದ್ದು,ಎಲ್ಲ ಮಾಸ್ತರರನ್ನು ಹಚ್ಚಿಕೊಂಡಿದ್ದು,ಗೋಲಿ ಆಡಿದ್ದು,ಚಿತ್ರನಟಿಯರನ್ನು ಪ್ರೀತಿಸಿದ್ದು,ಅಕ್ಕನ ಮಗಳನ್ನು ಮುದ್ದಾಡಿದ್ದು,.....

ಹೈಸ್ಕೂಲಿಗೆ ಸೇರಿದ್ದು,ಪೋಲಿ ಹುಡುಗರ ಸಹವಾಸ ಸೇರಿದ್ದು, ಜೊತೆಗೆ ವ್ಯವಸಾಯದ ಬೆನ್ನಿಗೆ ಬಿದ್ದಿದ್ದು,ರಜಾದಿನದಲ್ಲಿ ಆಡು ಮೇಯಿಸಲು ಹೋದಾಗ ಈಜು ಹೊಡೆಯುತ್ತಿದ್ದುದು,ರೈಲ್ವೆ ಹಳಿಯಲ್ಲಿ ಕಬ್ಬಿ ಣ ಹಾಯುತ್ತಿದ್ದುದು,ಇಸ್ಪೀಟ್ ಆಟ ಆಡುತ್ತಿದುದು,ಮುಂಜಾನೆಯೇ ಎದ್ದು ಹೊಲಕ್ಕೆ ನೀರು ಹಾಯಿಸುತ್ತಿದ್ದುದು.....

ಶಾಲೆಯಲ್ಲಿ ಮಾಸ್ತರರನ್ನು ರೇಗಿಸಿದ್ದು,ಬೆಂಚಿನ ಮೇಲೆ ಕೆತ್ತಿದ್ದು,ಅಹಂಕಾರಿ ಎಂಬ ಪಟ್ಟ ಪಡೆದಿದ್ದುದು,ಪ್ರತಿ ಸಭೆ ಸಮಾರಂಭದಲ್ಲೂ ಭಾಷಣ ಮಾಡುತ್ತಿದ್ದುದು,ಓದದಿದ್ದರೂ ಅಂಕ ಪಡೆಯುವ ಸಾಮರ್ಥ್ಯ ಪಡೆದು ಭೇಷ್ ಎನಿಸಿಕೊಂಡಿದ್ದುದು.....

ಒಂದು ಹುಡುಗಿಗೆ ಆಕೆಯ ಸ್ನೇಹಿತೆಯ ಮೂಲಕ ಪ್ರಪೋಸ್ ಮಾಡಿ ಒಪ್ಪಿ ಸಿ ಪ್ರೀತಿ ಮಾಡಿದ್ದು,ಪ್ರತಿದಿನ ಪ್ರೇಮಪತ್ರ ಕೊಡುತ್ತಿದ್ದುದು, ನಾನು ಇನ್ನೊಬ್ಬಳನ್ನು ಪ್ರೀತಿಸುವ ವಿಷಯ ತಿಳಿದು ಆಕೆ ಮುನಿಸಿಕೊಳ್ಳುತ್ತಿದ್ದುದು..
ಮತ್ತೆ ಮತ್ತೆ ಜಗಳ ಅಡಿ ಒಂದಾಗುತ್ತಿದ್ದುದು,ಪ್ರೇಮದ ಕಾಣಿಕೆ ನೀಡುತ್ತಿದ್ದುದು.....

ಮೊದಲ ಬಾರಿಗೆ ಸೆಕ್ಸ್ ಬುಕ್ ಓದಿದ್ದು,ಹಸ್ತಮೈಥುನ ಮಾಡಿಕೊಂಡದ್ದು,ಲೈಂಗಿಕತೆಯ ಬಗ್ಗೆ ತಲೆಕೆಡಿಸಿಕೊಂಡು ಹೆಚ್ಚು ಹಾಳಾಗಿದ್ದುದು,ಓದೋದು ಬಿಟ್ಟರೂ ಉತ್ತಮ ಅಂಕವನ್ನೇ ಪಡೆದುಕೊಂ ಡದ್ದು.....

ಅನಿರೀಕ್ಷಿತವಾಗಿ ನಗರಕ್ಕೆ ಬಂದು ನೆಲೆಸಿ ಚೆನ್ನಾಗಿ ಓದಬೇಕೆಂಬ ಹಂಬಲದಿಂದ ಕಾಲೇಜು ಸೇರಿ ಓದುತ್ತಿದ್ದುದು, ಮೊದಮೊದಲು ಅಪರಿಚಿತರ ನಡುವೆಯೇ ಸಾಗಿದ್ದುದು,ಮುಗ್ದನಾಗಿ ಶ್ರಮಪಟ್ಟು ಓದಿ ಕಾಲೇಜಿನವರಿಂದ ಶಹಬ್ಬಾಸ್ ಗಿರಿ ಪಡೆದಿದ್ದುದು,ನಾನಾಯ್ತು ನನ್ನ ಪುಸ್ತಕ ಆಯ್ತು ಎಂದು ಇದ್ದುದು,ಹಲವಾರು ಕನಸು ಕಂಡಿದ್ದುದು, ಕಾಲೇಜಿನವರು ಅತ್ಯುತ್ತಮ ದ ರ್ಜೆಯಲ್ಲಿ ತೇರ್ಗಡೆ ಆಗುವ ವಿದ್ಯಾರ್ಥಿ ಪಟ್ಟಿಯಲ್ಲಿ ನಾನು ಒಬ್ಬನಾದದ್ದು.....

ಮೀಸೆ ಚಿಗುರಿದ್ದು, ಕಾಲಕ್ರಮೇಣ ಹುಡುಗರ ಸಹವಾಸ ಸೇರಿದ್ದು, ಹಳೆ ಚಾಳಿ ಮುಂದುವರೆಸಿದ್ದು,ಕಾಲೇಜಿನಲ್ಲಿ ಉಪನ್ಯಾಸಕರನ್ನು ರೇಗಿಸಿದ್ದು,ಹುಡುಗಿಯರ ಹಿಂದೆ ಅಲೆದಿದ್ದುದು, ಓದುವುದು ಕಡಿಮೆ ಮಾಡಿ ಹಾಳಾಗಿದ್ದುದು.. ಆದ್ರೂ ಉತ್ತಮ ಅಂಕವನ್ನೇ ಪಡೆದಿದ್ದುದು.....

'ರಾಹುದೆಸೆ'ಯ ಪರಿಣಾಮ ಹೆಚ್ಚಾದದ್ದು..,ಕೆಲವು ದೇವರುಗಳೆಲ್ಲ ಮುನಿಸಿಕೊಂಡದ್ದು..

ಮೊದಲಬಾರಿಗೆ ಬ್ಲೂ ಫಿಲಂ ನೋಡಿದ್ದು, ಮತ್ತೆ ಮತ್ತೆ ನೋಡಬೇಕೆನಿಸಿ ಕಾಲೇಜು ನಿಲ್ಲಿಸಿ ನೋಡಿದ್ದು, ಅಂತರ್ಜಾಲಕ್ಕೆ ಕಾಲಿಟ್ಟಿದ್ದುದು, ಬ್ಲಾಗ್ ಪರಿಚಯ ಆಗಿ ಬ್ಲಾಗ್ ಬರೆದುದು, ಸ್ನೇಹಿತರ ಜೊತೆಗೂ ಡಿ ಕಾಲೇಜಿಗೆ ಬಂಕ್ ಹಾಕಿ ಫಿಲಂ ಗೆ ಹೋಗಿದ್ದುದು, ಮನೆ ಪಾಠಗಳಲ್ಲಿ ಓದುವುದಕ್ಕಿಂತ ಹೆಚ್ಚು ಆಟ ಆಡಿದ್ದು, ಬೈಕ್ ಏರಿ ಹುಡುಗಿಯರನ್ನು ಚುಡಾಯಿಸಿ ಪೋಲೀಸರ ಕಣ್ತಪ್ಪಿಸಿ ಓಡಿದ್ದುದು, ಹಲವಾರು ಗಲಾಟೆಗಳಲ್ಲಿ ಪಾಲುಗೊಂಡದ್ದು, ಮಂಡ್ಯ ಪೋಲಿಗಳಲ್ಲಿ ಒಬ್ಬನಾಗಿ ಗುರುತಿಸಿಕೊಂಡಿದ್ದು..

ಅದ್ದೂರಿ ಆಗಿದ್ದ ಜೀವನ ಹಾಳಾಗಿದ್ದು, ಓದು ಬಿಟ್ಟು ನಪಾಸು ಆಗುವೆನೆಂ ದು ನಂಬಿದ್ದರೂ ದೇವರ ದಯೆಯಿಂದ ಉತ್ತಮ ಅಂಕ ಪಡೆದಿದ್ದು.....

ಕಡಿಮೆ ಅಂಕ ತೆಗೆದಿದ್ದಕ್ಕೆ ಮನೆಯವರಿಂದ ,ಕಾಲೇಜಿನವರಿಂದ ಬೈಸಿಕೊಂಡದ್ದು.. ಪಶ್ಚಾತ್ತಾಪ ಪಟ್ಟಿದ್ದು,ತಪ್ಪುಗಳು ಅರಿವಾದದ್ದು.....
ಹೊಸಕನಸು ಹೊತ್ತಿ ಈಗ ತಾನೇ ಡಿಗ್ರಿ ಸೇರಿ ಹೊಸ ಜೀವನ ಪ್ರಾರಂಭಿಸಿದ್ದು...

ಇಂತ ಹಲವಾರು ಹನಿಹನಿ ನೆನಪುಗಳು ಇನ್ನು ನನ್ನ ಕಣ್ಣೆದುರಲ್ಲೇ ಇರುವಾಗ, ಹಿರಿಯರ ಮುಂದೆ ಬಾಲಕ ಎಂದು ಇರುವಾಗ ನನಗೆ ಕಳೆದ ೨೦೦೯ರ ಜುಲೈ ೨೯ ಕ್ಕೆ ಆಗಲೇ ಹದಿನೆಂಟು ವರ್ಷಗಳಾದ ಸಂಭ್ರಮ.....

ಆಗಲೇ ದೊಡ್ದವನಾದೆನ ಎಂಬ ಕುತೂಹಲ, ಜವಾಬ್ದಾರಿಗಳು ಶುರುವಾಗುವುವೇನೋ ಎಂಬ ಕಾತಾಳ.....

ಹಲವಾರು ಕನಸು ಕಾಣುತ್ತ ಹದಿನೆಂಟರ ಹರೆಯದಲ್ಲಿ ಬಿಸಿನೆತ್ತರ ದೇಹವನ್ನು ಹಿಡಿತದಲ್ಲಿಟ್ಟು, ಇನ್ನು ಮುಂದೆಯಾದರೂ ಹೊಸ ಜೀವನ ಪ್ರಾರಂಭಿಸೋಣ ಎಂದುಕೊಂಡು ನವಚೈತನ್ಯದಲ್ಲಿ ನವಘಳಿಗೆಗೆ ಕಾಲಿಡುತ್ತಿರುವ ನನಗೆ ಭಗವಂತನಾದಿಯಾಗಿ ತಮ್ಮೆಲ್ಲರ ಆಶಿರ್ವಾದ ಬೇಡಿ ಮುಂದೆ ನಡೆದಿದ್ದು..

**

ಪ್ರಥಮ ಡಿಗ್ರಿಯಲ್ಲಿ ಕಾಲೇಜಿನ ಪಾಠಕ್ಕಿಂತ ಜೀವನದ ಪಾಠವನ್ನೇ ಹೆಚ್ಚು ಕಲಿತು ಎರಡನೇ ಡಿಗ್ರಿಗೆ ಬಂದಿರುವುದು..
ಹೊಸ ಬ್ಲಾಗ್ ಸೃಷ್ಟಿಸಿ ಬ್ಲಾಗಿಗನಾಗಿ ಚಿಗುರುತ್ತ ಇರೋದು..
ಎಲ್ಲ ವಿದ್ಯಾರ್ಥಿಗಳಿಗೂ ನಾನೊಬ್ಬನೇ ಸರ್.ಸಿ.ವಿ.ರಾಮನ್ ವಿದ್ಯಾರ್ಥಿ ವೇತನ ಪಡೆದು ಖುಷಿ ಪಟ್ಟಿದ್ದು..
ನನ್ನ ಆಪ್ತರೊಬ್ಬರ ಜೊತೆ ಒಂದು ದಿನ ಪ್ರವಾಸ ಹೋಗಿದ್ದು.. ಅದು ನನ್ನ ಜೀವನದ ಅಮೃತಘಳಿಗೆ .

ನನ್ನ ಪ್ರೇಮದ ದೀವಿಗೆಗೆ ಕಾಮದಜ್ವಾಲೆ ಸೋಕಿ ಆರಿಹೋದದ್ದು..

ಸ್ತ್ರೀ ವ್ಯಾಮೋಹಕ್ಕೆ ಬಲಿಯಾಗುತ್ತಿರುವ ಮನಸನ್ನು ನಿಯಂತ್ರಿಸಲು ಎಣಗಾಡುತ್ತಿರುವುದು..
ಜೊತೆಗೆ ಯಾರೊಂದಿಗೂ ಹೊಂದಾಣಿಕೆ ಇಲ್ಲದೆ ಜೀವನದಲ್ಲಿ ಸಮರಸ ಇಲ್ಲದೆ ಇರುವುದು..

ಸ್ವಂತ ನಿರ್ಧಾರ (ಯಾರಿಗೂ ಇಷ್ಟವಿಲ್ಲದ)ದಿಂದ ಎಲ್ಲರ ವಿಶ್ವಾಸ ಕಳೆದುಕೊಂಡ ನನ್ನನ್ನು ಮತ್ತೆ ನಾನೇ ಸ್ಥಾಪಿಸಿಕೊಳ್ಳಲು ಶ್ರಮಿಸುತ್ತಿರುವುದು..


ಯಾರಿಗೂ ಬೇಡವಾಗಿರುವ ನನಗೆ ಕೆಲವೊಮ್ಮೆ ಲೋಕವೇ ಬೇಡವೆನಿಸಿದರೂ ಕೆಲವು ಕನಸುಗಳನ್ನು ನನಸಾಗಿಸಲು ಇನ್ನು ಬದುಕಿರೋದು!!

ಈ ಎಲ್ಲ ಬಣ್ಣಬಣ್ಣದ ನೆನಪುಗಳ ಜೊತೆಗೆ ಬಣ್ಣಬಣ್ಣದ ಕನಸುಗಳನ್ನು ತುಂಬಿಕೊಂಡು ಮುಂದೆ ಹೋಗುತ್ತಿರುವ ನನಗೆ ನಿಮ್ಮ ಆಶೀರ್ವಾದ ಸದಾ ಇರಲಿ..~.~


39 ಕಾಮೆಂಟ್‌ಗಳು:

sunaath ಹೇಳಿದರು...

ನಿಮ್ಮ ನೆನಪುಗಳನ್ನು ಮುಚ್ಚುಮರೆಯಿಲ್ಲದೆ ಹೇಳಿದ್ದೀರಿ. ಇದಕ್ಕಾಗಿ ನಿಮ್ಮನ್ನು ಮೆಚ್ಚಲೇಬೇಕು. ಆದರೆ, ಬಾಳು ಹಾಳು ಮಾಡುವಂತಹ ವ್ಯಸನಗಳಿಗೆ ಬಲಿ ಬೀಳಬೇಡಿರಿ ಎಂದು ಬೇಡಿಕೊಳ್ಳುತ್ತೇನೆ. ನೀವು ಪ್ರತಿಭಾಶಾಲಿಗಳಾಗಿದ್ದೀರಿ. ನಿಮ್ಮ ಜೀವನ ಯಶಸ್ವಿಯಾಗಲಿ, ಸಮಾಜಕ್ಕೂ ಸಹ ಉಪಯುಕ್ತವಾಗಲಿ.

ashokkodlady ಹೇಳಿದರು...

ಗೆಳೆಯ,
ಮೊದಲಾಗಿ ನಿಮ್ಮ ಪ್ರಾಮಾಣಿಕತೆ ನಂಗೆ ತುಂಬಾ ಹಿಡಿಸಿತು.ಸತ್ಯ ತುಂಬಾ ಕಹಿಯಾಗಿರುತ್ತೆ. ನೀವು ನಿಮ್ಮೆಲ್ಲಾ ಸತ್ಯವನ್ನು ಎಲ್ಲರ ಮುಂದೆ ಹೀಗೆ ಬಿಡಿಸಿಟ್ಟಿದ್ದು, ನಿಮ್ಮ ಧೈರ್ಯಕ್ಕೆ ಮೆಚ್ಚಲೇಬೇಕು. ನಿಮ್ಮ ಈ ಲೇಖನ ಓದಿ ನೀವು ತುಂಬಾ ಪ್ರತಿಭಾವಂತರು ಅಂತ ತಿಳಿಯಿತು..ಹಾಗೆಯೇ ಸಂಗ ದೋಷದಿಂದ ಸ್ವಲ್ಪ ಕೆಟ್ಟ ಹವ್ಯಾಸಗಳನ್ನು ಬೆಳೆಸಿಕೊಂಡು ಅಡ್ಡ ದಾರಿ ಹಿಡಿದಿರಿ ಅಂತ ತಿಳಿಯಿತು..ಇನ್ನು ಕಾಲ ಮಿಂಚಿಲ್ಲ. ಇನ್ನು ತುಂಬಾ ಎಳೆಯ ಪ್ರಾಯದವರು. ಇನ್ನು ನಿಮ್ಮ ಜೀವನದಲ್ಲಿ ಸಾಧಿಸಬೇಕಾದದ್ದು ತುಂಬಾ ಇದೆ. ಎಲ್ಲವನ್ನು ಮರೆತು ನಿಮ್ಮ ಮುಂದಿನ ಜೀವನದ ಬಗ್ಗೆ ಯೋಚಿಸಿ. ಉತ್ತಮ ಮಿತ್ರರ ಸಹವಾಸ ಮಾಡಿ. ಕೆಟ್ಟ ಹವ್ಯಾಸಗಳನ್ನೆಲ್ಲ ಬಿಟ್ಟುಬಿಡಿ. ಹೊಸ ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ದೇವರು ನಿಮಗೆ ಒಳ್ಳೇದು ಮಾಡಲಿ.

ನಾಳೆ ನಿಮ್ಮ ಹುಟ್ಟಿದ ದಿವಸ ಅಂತ ತಿಳೀತು. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ಸಾಗರದಾಚೆಯ ಇಂಚರ ಹೇಳಿದರು...

ನಿಮ್ಮ ನೆನಪುಗಳ ಬುತ್ತಿ ತುಂಬಾ ಇಷ್ಟವಾಯಿತು
ನೆನಪುಗಳೇ ಹಾಗೆ
ಬಿಟ್ಟೆನೆಂದರೂ ಬಿಡದು

ಸೀತಾರಾಮ. ಕೆ. / SITARAM.K ಹೇಳಿದರು...

ಮುಚ್ಚುಮರೆಯಿಲ್ಲದೆ ತಮ್ಮ ನೆನಪಿನ ಬುತ್ತಿ ಬಿಚ್ಚಿದ್ದು ಇಷ್ಟವಾಯಿತು. ವ್ಯಸನಗಳ ನಡುವೆ ಪ್ರತಿಭೆ ನರಳದಿರಲಿ. ತಮ್ಮ ಬರವಣಿಗೆ ಮುಂದುವರೆಯಲಿ. ಪ್ರತಿಭೆ ಸರಿಯಾದ ದಿಶೆಯಲ್ಲಿ ಹರಡಿ ನೂರ್ಮಡಿಯಾಗಲಿ. ವ್ಯಸನಗಳಿಂದ ದೂರವಿರಿ.

ಸೀತಾರಾಮ. ಕೆ. / SITARAM.K ಹೇಳಿದರು...

ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಸಂತಸದ ದಿನ ನೂರಾರಾಗಿ ಮರಳಲಿ.

Subrahmanya ಹೇಳಿದರು...

ಸತ್ಯವಾಗಿ, ನಿಮ್ಮ ವಯಸ್ಸಿನಲ್ಲಿ ಬರೆಯುವ ಗಂಧವೇ ನನಗೆ ಗೊತ್ತಿರಲಿಲ್ಲ. ಒಂದಷ್ಟು ಒದುತ್ತಿದ್ದೆನಷ್ಟೆ. ಒಳ್ಳೇಯ ಬರವಣಿಗೆ ಮತ್ತು ಶೈಲಿ ನಿಮ್ಮಲ್ಲಿದೆ. ನೆನಪುಗಳನ್ನು ಮೆಲುಕುಹಾಕುವುದು ಮತ್ತು ಹಂಚಿಕೊಳ್ಳುವುದು ಒಳ್ಳೆಯದೆ. ನಿಮ್ಮ ನೇರನುಡಿಗಳು ಇಷ್ಟವಾಯಿತು. ಮೇಲಿನ ಕಮೆಂಟುಗಳಲ್ಲಿ ಹಿರಿಯರು ಹೇಳಿರುವುದನ್ನು ಅನುಸರಿಸಿ ಎಂದು ವಿನಂತಿಸುತ್ತೇನೆ.

ಶುಭಾಶಯಗಳು.

shivu.k ಹೇಳಿದರು...

ನಿಮ್ಮ ಬಾಲ್ಯದ ನೆನಪುಗಳ ಸರಮಾಲೆ ತುಂಬಾ ಚೆನ್ನಾಗಿದೆ. ವ್ಯಸನಗಳಿಗೆ ಸಿಕ್ಕಿಕೊಳ್ಳದೇ ಪ್ರತಿಭೆಯನ್ನು ಸಾಣೆ ಹಿಡಿಯಿರಿ..all the best!

ವನಿತಾ / Vanitha ಹೇಳಿದರು...

ಜೀವನಕ್ಕೆ ಎಲ್ಲವೂ ಬೇಕು, ಆದರೆ ಯಾವುದೂ ಅತಿಯಾಗಬಾರದು ಅಷ್ಟೇ.ಈಗ ಎಷ್ಟೊಂದು ಹಿರಿಯ ಬ್ಲಾಗ್ ಮಿತ್ರರ ಆತ್ಮಿಯರಾಗಿದ್ದೀರಿ..ಸೊ ನಿಮ್ಮ ಬರವಣಿಗೆಯನ್ನು ಮುಂದುವರಿಸಿ..Keep up the good work.
All the best:)
Birthday wishes in advance:-)

ದಿನಕರ ಮೊಗೇರ.. ಹೇಳಿದರು...

ನಿಮ್ಮ ಬಿಚ್ಚು ಮನಸಿನ ನುಡಿಗಳಿಗೆ ನನ್ನ ಮೆಚ್ಚುಗೆ..... ಕೆಟ್ಟ ಚಟಗ ಮೇಲೆ ನಿಮ್ಮ ಒಳ್ಳೆ ಬರವಣಿಗೆ, ಉತ್ತಮ ವಿದ್ಯೆ ಮೇಲುಗೈ ಸಾಧಿಸಲಿ......

ಮನದಾಳದಿಂದ............ ಹೇಳಿದರು...

ಬಾಲ್ಯದ ನೆನಪುಗಳನ್ನು ಮುಚ್ಚುಮರೆಯಿಲ್ಲದೆ ಹೇಳಿಕೊಂಡಿದ್ದೀರ.......
ಮೆಚ್ಚಲೇಬೇಕು.
ಯಾವುದೂ ಅತಿಯಾಗಬಾರದು, ಹರೆಯದ ಈ ಸಮಯದಲ್ಲಿ ಮನಸ್ಸಿನ ನಿಯಂತ್ರಣ ಅತಿ ಮುಖ್ಯ, ಹಲವರು ಕವಲು ದಾರಿಗಳು ನಿಮಗೀಗ ಎದುರಾಗುತ್ತವೆ, ಉತ್ತಮ ಮಾರ್ಗವನ್ನೇ ಆಯ್ದುಕೊಂಡು ಜೀವನ ರೂಪಿಸಿಕೊಳ್ಳುವುದು ಮುಖ್ಯ.
ಹಾಸನದ ಬಾಳು ನಿಮ್ಮದಾಗಲಿ.............

ಸಾಗರಿ.. ಹೇಳಿದರು...

ಬದುಕು ಬಂಗಾರವಾಗಲಿ, ಬಾದದಂತೆ ಇಟ್ಟುಕೊಳ್ಳಿ ಬೆಲೆಬಾಳುವ ನೆನಪನ್ನು

ಮನಸು ಹೇಳಿದರು...

chennagide lekhana.... nimage shubhavaagali

ಮನಮುಕ್ತಾ ಹೇಳಿದರು...

ಹಳೆಯದೆಲ್ಲವ ಮರೆತು..ಹೊಸತನವ ಬೆಳೆಸಿಕೊಳ್ಳುವ ನಿಮ್ಮ ಭಾವನೆ, ಅದಕ್ಕೆ ಒಳ್ಳೆಯ ಮಾರ್ಗದರ್ಶನ..ಭಗವ೦ತನ ಕೃಪೆ.. ಇವುಗಳಿ೦ದ ನಿಮ್ಮ ಜೀವನ ಯಶಸ್ವಿಗೊಳ್ಳಲಿ..
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

shridhar ಹೇಳಿದರು...

ಮುಚ್ಚುಮರೆ ಇಲ್ಲದೆಯೆ ..ನಿನ್ನ ಮುಂದೆಲ್ಲವನೂ ....
ಅನ್ನುತ್ತಾ ನಿಮ್ಮ ನೆನಪುಗಳನ್ನು , ಕನಸುಗಳನ್ನು ಬಿಚ್ಚಿಟ್ಟಿದ್ದೀರಿ ..
ಚೆನ್ನಾಗಿದೆ .. ಒಳ್ಳೆಯ ಬರಹ .

SATISH N GOWDA ಹೇಳಿದರು...

ಸರ್ ನಾನು ನಿಮ್ಮ ಬ್ಲಾಗಿಗೆ ಇದೆ ಮೊದಲ ಬೇಟಿ ನೀಡಿದ್ದೇನೆ . ತುಂಬಾ ಚನ್ನಾಗಿ ಮೂಡಿಬಂದಿವೆ ನಿಮ್ಮ ಎಲ್ಲಾ article ಗಳು . ಎಲ್ಲವನ್ನು ಓದಲು ಸಮಯದ ಕೊರತೆ ಇದೆ . ಬಿಡುವು ಮಾಡಿಕೊಂಡು ಖಂಡಿತ ಓದಲು ಪ್ರಯತ್ನ ಪಡುತ್ತೇನೆ .ಬಿಡುವು ಮಾಡಿಕೊಂಡು ನೀವೂ ಒಮ್ಮೆ ನನ್ನವಳಲೋಕಕ್ಕೆ ಬನ್ನಿ ನಾನು ನಿಮ್ಮನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ
ನನ್ನ ಬ್ಲಾಗ್
www.nannavalaloka.blogspot.com
ನನ್ನ ಜಮೇಲ್
satishgowdagowda@gmail.com

ಜಲನಯನ ಹೇಳಿದರು...

ಸತ್ಯ ಮತ್ತು ಮನದ ಮಾತನ್ನು ಮುಂದಿಡುವವರು ಜೀವನದ ಅರ್ಧ ಯುದ್ಧವನ್ನು ಗೆದ್ದಂತೆ...ಆ ಗೆಲುವಿನ ಕಲೆ ಬೆಳೆಸಿಕೊಳ್ಳುತ್ತಿರುವುದು ಸಂತಸದ ಸಂಗತಿ...ನಿನ್ನ (ತಮ್ಮಂದಿರ ಸಾಲಿಗೆ ಸೇರಿಸಿಕೊಳ್ಳುತ್ತಿದ್ದೇನೆ...) ಭವಿತ ಸುಗಮ ಮತ್ತು ಸುಲಲಿತವಾಗಲಿ..ಹಾರೈಕೆ...

ವಿ.ಆರ್.ಭಟ್ ಹೇಳಿದರು...

sunaath mattu sitaramara abhipraayave nanadoo koda!

Soumya. B ಹೇಳಿದರು...

ನಿಮ್ಮ ನೆನಪಿನ ಸರಮಾಲೆಗಳಿಗೆ ಧನ್ಯವಾದಗಳು. ನಿನ್ನೆ ಎಂಬುದ ಮರೆತು ಹೊಸ ಬದುಕಿನ ಬೆಳಕಿನೆಡೆಗೆ ಬನ್ನಿ. ನಿಮಗಾಗಿ ಅದ್ಭುತ ಮುಂಜಾವೊಂದು ಕಾದಿರುತ್ತದೆ. ಒಳಿತಾಗಲೆಂದು ದೇವರಲ್ಲಿ ಪ್ರಾರ್ಥಿಸುವ ...

Manasa ಹೇಳಿದರು...

muchu mareyillade
bichhitta nimma jeevanada butti chenaagi mudi bandide :)

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ಮರೆವು ನಮಗೊಂದು "ವರ"

ಕೆಟ್ಟದ್ದನ್ನು ಮರೆತು...
ಸಿಹಿನೆನಪುಗಳನ್ನು ಉಳಿಸಿಕೊಂಡು ಹೋಗೋಣ ಅಲ್ಲವೆ?

ನಿಮ್ಮ ಬರವಣಿಗೆ ಚೆನ್ನಾಗಿದೆ...

- ಕತ್ತಲೆ ಮನೆ... ಹೇಳಿದರು...

sunaath,

ನಿಮ್ಮ ಮುಂದಲ್ಲದೆ ಇನ್ಯಾರ ಮುಂದೆ ಮನಬಿಚ್ಚಿ ಹೇಳಿಕೊಳ್ಳಲಿ..
ನಿಮ್ಮ ಹಿತನುಡಿಗಳಿಗೆ ಧನ್ಯವಾದಗಳು..
ಖಂಡಿತ ಸಮಾಜಕ್ಕೆ ಉಪಯೋಗವಾಗಬೇಕೆಂಬುದು ನನ್ನ ಆಸೆ..

- ಕತ್ತಲೆ ಮನೆ... ಹೇಳಿದರು...

ashokkodlady ,
ಈ ಪ್ರಾಮಾಣಿಕತೆ ನನಗೆ ಒಮ್ಮೊಮ್ಮೆ ಅಪಾಯ ತಂದಿದೆ..
ಆದರೂ ದೈರ್ಯ ಕಳೆಗುಂದಿಲ್ಲ..
ನಿಮ್ಮ ಹಿತನುಡಿಗಳಿಗೆ ಧನ್ಯವಾದಗಳು..
ನೀವು ಹೇಳಿದಂತೆ ಸ್ನೇಹಿತರ ದೋಷವೇ ನನ್ನನ್ನು ಹೆಚ್ಚು ಕಾಡಿದೆ..

- ಕತ್ತಲೆ ಮನೆ... ಹೇಳಿದರು...

ಸಾಗರದಾಚೆಯ ಇಂಚರ ,

ನನಗೆ ನೆನಪುಗಳೇ ಆಸ್ತಿ..
ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

ಸೀತಾರಾಮ. ಕೆ. / SITARAM.K,

ನಿಮ್ಮ ಮಾತುಗಳಿಗೆ ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

Subrahmanya ,

ನನಗೆ ಅಷ್ಟೇನೂ ಗಂಧವಿಲ್ಲ ಬಿಡಿ..
ಇರುವ ಪ್ರತಿಭೆಯೇ ಮುಂದೆ ಬರಲು ಒಬ್ಬ ಪುಣ್ಯಾತ್ಮ ಕಾರಣ..
ನಿಮ್ಮ ಮಾತಿಗೆ ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

shivu.k ,

ನಿಮ್ಮ ಮಾತಂತೆ ಆಗಲಿ..
ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

ವನಿತಾ / Vanitha ,

ಹೌದೌದು..
ಯಾವುದು ಅತಿಯಾಗಬಾರದು..
ಆತಿಯಾದರೆ ಏನಾಗುತ್ತೆ ಎಂಬ ಅನುಭವ ಆಗಿದೆ ಬಿಡಿ..
ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

ದಿನಕರ ಮೊಗೇರ.. ,

ನಿಮ್ಮ ಹಾರೈಕೆ ಫಲಿಸಿದರಷ್ಟೇ ಸಾಕು..
ಧನ್ಯವಾದಗಳು/..

- ಕತ್ತಲೆ ಮನೆ... ಹೇಳಿದರು...

ಮನದಾಳದಿಂದ............ ,

ನಾನೂ ಮನಸಿನ ನಿಯಂತ್ರಣಕ್ಕಾಗಿ ಶ್ರಮಿಸುತ್ತಿದ್ದೇನೆ..
ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

ಸಾಗರಿ.. ,

ನಾನೂ ಏನೇ ಆಗಲಿ ಬಂಗಾರಕ್ಕಿಂತ ಹೆಚ್ಚೇ ಜೋಪಾನ ಮಾಡುವೆ..
ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

ಮನಸು ,

ನನ್ನ ಮನಸಿನಮನೆ'ಗೆ ಸ್ವಾಗತ..
ಹೀಗೆ ಬರುತ್ತಿರಿ..
ನಿಮ್ಮ ಮಾತುಗಳಿಗೆ ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

ಮನಮುಕ್ತಾ,

ಭಗವಂತನ ಕೃಪೆ ಬೇಕೇಬೇಕು..
ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

shridhar ,

ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

SATISH N GOWDA ,

ಮೊದಲಿಗೆ ನನ್ನ 'ಮನಸಿನಮನೆ'ಗೆ ಸ್ವಾಗತ..
ಬಿಡುವು ಮಾಡಿಕೊಂಡು ಓದಿರಿ ಪರವಾಗಿಲ್ಲ..
ನಿಮ್ಮವಳ ಲೋಕಕ್ಕೆ ಖಂಡಿತ ಬರುತ್ತಿರುತ್ತೇನೆ..
ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

ಜಲನಯನ ,

ನಿಮ್ಮವರ ಸಾಲಿಗೆ ಸೇರಿಸಿಕೊಂದಿದ್ದಕ್ಕೆ ತುಂಬಾ ಸಂತೋಷವಾಯಿತು..
ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

ವಿ.ಆರ್.ಭಟ್,

ಧನ್ಯವಾದಗಳು..
ಹೀಗೆಯೇ ಬರುತ್ತಿರಿ..

- ಕತ್ತಲೆ ಮನೆ... ಹೇಳಿದರು...

Soumya. B ,

ಮೊದಲಿಗೆ ನನ್ನ 'ಮನಸಿನಮನೆ'ಗೆ ಸುಸ್ವಾಗತ..
ನಾನೂ ಕೂಡ ಕತ್ತಲ ಸರಿಸಿ ಬರುವ ಹಂಬಲದಲ್ಲಿ ಹೆಜ್ಜೆ ಹಾಕುತ್ತಿದ್ದೇನೆ..
ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

Manasa,

ಧನ್ಯವಾದಗಳು..

- ಕತ್ತಲೆ ಮನೆ... ಹೇಳಿದರು...

ಸಿಮೆಂಟು ಮರಳಿನ ಮಧ್ಯೆ ,

ನಿಮ್ಮ ಮಾತು ನಿಜ..
ಆದರೆ ನೆನಪುಗಳು ಮರೆಯಲು ಸಾಧ್ಯವಾಗುತ್ತಿಲ್ಲ..
ಪ್ರಯತ್ನಿಸುತ್ತೇನೆ..
ಧನ್ಯವಾದಗಳು..

Related Posts Plugin for WordPress, Blogger...