ಶೂ-ಷೋ !!

[ನನ್ನ ಬ್ಲಾಗಿನಲ್ಲಿ ಲೇಖನಗಳಡಿಯಲ್ಲಿ ಇಲ್ಲಿಯವರೆಗೂ ಅನುಭವಮಾಲಿಕೆಗಳನ್ನೇ ಪೋಸ್ಟ್ ಮಾಡಿದ್ದೇನೆ..ಅಂತೆಯೇ ಇದೀಗ ಒಂದು ವಿಭಿನ್ನ ಅನುಭವದ ಪ್ರಸಂಗದ ಬಗ್ಗೆ ಬರೆದು ನಿಮ್ಮ ಮುಂದಿಟ್ಟಿದ್ದೇನೆ..]

..ಎಂದಿನಂತೆ ಬಸ್ಸಿನಲ್ಲಿ ಊರಿಗೆ ಹೋಗುತ್ತಿರಬೇಕಾದರೆ ವಿಶ್ವೇಶ್ವರಯ್ಯ ಪಾರ್ಕ್ ಹತ್ತಿರ ಸ್ಟಾಪ್ ಕೊಟ್ಟಾಗ ಹಾಗೆ ಸುಮ್ಮನೆ ಪಾರ್ಕ್ ಕಡೆ ಗಮನಹರಿಸಿದಾಗ ನನಗೊಂದು ಆಶ್ಚರ್ಯ ಕಾದಿತ್ತು..ಅಲ್ಲಿ ನೂರಾರು ಜನರು ಜಮಾಯಿಸಿದ್ದರು... ಅಲ್ಲಿ ಟಿಬೆಟ್ ನವರು ಶೂ ಪ್ರದರ್ಶನ & ಮಾರಾಟ ಮಾಡ್ತಾ ಇದ್ರು ಅಂತ ತಿಳೀತು... ನಂಗೆ ಅಲ್ಲಿದ್ದ ಜನರನ್ನು ನೋಡಿ, ..ಮಂಡ್ಯದಲ್ಲಿ ಶೂ ತಕೊಳ್ಳೋಕೆ ಇಷ್ಟೊಂದು ಜನಾನ ? ಅದೂ ಕೂಡ ಜೊತೆಗೆ ಮುದುಕರು ಮತ್ತು ಮೋಟರು ಬೇರೆ.. ನಂಗೆ ತುಂಬಾನೇ ಸೋಜಿಗ ಉಂಟಾಯ್ತು...
ಅದಾದ ಸುಮಾರು ದಿನಗಳ ನಂತರ ನಮ್ಮ ಕಾಲೇಜಿನ ಮುಂದೆಯೇ ಅಷ್ಟು ಜನರು ಜಮಾಯಿಸಿದ್ದರು,ಹತ್ತಿರ ಹೋಗಿ ನೋಡಿದರೆ ಅದೇ ಟಿಬೆಟಿಯನ್ನರು ನಮ್ಮ ಕಾಲೇಜಿನ ಮುಂದೆ ಶೂ ಮಾರಾಟ ಮಳಿಗೆ ಹಾಕೊಂಡಿದ್ದರು..
ಆ ಟಿಬೆಟಿಯನ್ನರಲ್ಲಿ ಸುಮಾರು ನಾಲ್ವರು ಹೆಂಗಸರು (ಅವರಲ್ಲಿ ಇಬ್ಬರು ೨೦-೨೨ರ ವಯಸ್ಸಿನವರು,ಒಬ್ಬಾಕೆ ೧೭-೧೮ರ ಹರೆಯದಾಕೆ ಜೊತೆಗೆ ಒಬ್ಬಳು ೩೫-೪೦ ರ ವಯಸ್ಕ ಹೆಂಗಸು ) ಮೂವರು ಗಂಡಸರು (ಎಲ್ಲರೂ ೨೫-೩೦ ರ ಪ್ರಾಯದವರು..)ಆ ಹೆಂಗಸರೆಲ್ಲ ತೆಳುವಾದ ಅವರ ಅಳತೆಗೆ ತುಂಬಾ ದೊಡ್ದದೆನಿಸುವ ಮೇಲುಡುಗೆ ,ಜೊತೆಗೆ ಚರ್ಮಕ್ಕೆ ಅಂಟಿದಂತಿದ್ದ ಜೀನ್ಸ್ ಪ್ಯಾಂಟ್ ತೊಟ್ಟಿದ್ದರು.. ಅವರ ಹಾಕಿದ್ದ ಬಟ್ಟೆಯಲ್ಲೇ ಅವರ ಎದೆಯ,ನಡುವಿನ,ನಿತಂಬಗಳ ಸುತ್ತಳತೆ ಸಿಗುವಂತಿತ್ತು..
ಅವರು ಶೂ ತೋರಿಸಲು ಬಗ್ಗಿದಾಗ ಅವರು ಯಾವುದೇ ಮೇಲಿನ ಒಳಉಡುಪು ಧರಿಸಿರಲಿಲ್ಲ ಎಂದು ತಿಳಿಯಿತು..
ಆಗ ತಿಳಿಯಿತು ಇಷ್ಟು ಜನರೇಕೆ ಬರುತ್ತಿದ್ದಾರೆಂದು!
ಹಲವರು ಬೇಕಂತಲೇ ಅದಾದ ಮೇಲೆ ಇದು,ಇದಾದ ಮೇಲೆ ಅದು ತೋರಿಸಿ ಎಂದು ಅವರನ್ನು ಬಗ್ಗುವಂತೆ ಮಾಡಿ ಕೇವಲ ನೋಡುತ್ತಿದ್ದರೆ ಹೊರತು ಯಾರೂ ಕೈಯಲ್ಲಿ ಹಿಡಿದು ಹೋಗುತ್ತಿರಲಿಲ್ಲ 'ಶೂಗಳನ್ನ !!
ನಾವೂ ಹರೆಯದವರೇ ಆದ್ದರಿಂದ ಅವರ ಎದೆಯೆಡೆಗೆ ಬೀರಿದ ದೃಷ್ಟಿ 'ಬೇರತ್ತ' ಸಾಗಲೇ ಇಲ್ಲ..
[...ಸೆನ್ಸಾರ್..]

ಅಲ್ಲಿದ್ದ ಹದಿಹರೆಯದವಳು ಹಿಂದೆ ತಿರುಗಿದಾಗ ಕಾಣುತ್ತಿದ್ದ ಅವಳ ನಡುವಿನ ದೃಶ್ಯ ಅಲ್ಲಿದ್ದವರೆಲ್ಲರ ನಿದ್ದೆಗೆಡಿಸಿದ್ದಂತು ನಿಜ.!
ನಮ್ಮ ಕಾಲೇಜು ಮುಖ್ಯರಸ್ತೆಯಲ್ಲೇ ಇದ್ದುದ್ದರಿಂದ ಕೆಲವರು ವಾಹನಗಳನ್ನು ನಿಲ್ಲಿಸಿ ಶೂ-ಷೋ ನೋಡಲು ಮುಂದಾಗುತ್ತಿದ್ದರು..
ಅವರು ಅಲ್ಲಿ ಮಳಿಗೆ ಹಾಕಿದ್ದ ಮೂರು ದಿನವಂತೂ ಕಾಲೇಜಿನ ಹುಡುಗರಿಗಂತೂ ಕಣ್ಣು ಗುಳಿ ಬೀಳುವಂಥ ದೃಶ್ಯಗಳು..ಅದೂ ಅಲ್ಲದೆ ಡಿಗ್ರೀ ಕಾಲೇಜು ಬೇರೆ ! ಇನ್ನು ಕೇಳಬೇಕೆ..!/
ಅಂತೂ-ಇಂತೂ ಅಲ್ಲಿ ಶೂಗಳು ಪರವಾಗಿಲ್ಲ ಎನ್ನುವಂತೆ ಖಾಲಿಯಾದವು..
ಕೊಳ್ಳುವವರಿಗೆ ಉತ್ತಮ ಶೂ-ಗಳು,ನೋಡುವವರಿಗೆ ಉತ್ತಮ ಷೋ-ಗಳು ಅಲ್ಲಿ ದೊರೆತವು..
ಕೊನೆಯದಾಗಿ ನನಗೆ..
ಆ ಮಾನಿನಿಯರು ಶೂ ಮಾರಾಟವಾಗಲೆಂದು ಷೋ ಮಾಡಿದರೋ ಅಥವಾ ಅವರ ಉಡುಗೆಯೇ ಹಾಗೋ ಅಥವಾ ಇಂಥ ದೃಶ್ಯಗಳು ಸ್ವಲ್ಪ ಕಡಿಮೆ ಎನಿಸುವಂಥ ಮಂಡ್ಯದಲ್ಲಿ ಅಪರೂಪಕ್ಕೆ ಕಂಡುಬಂದದ್ದರಿಂದ ಜನರು ಹೀಗೆ ಮುಗಿಬಿದ್ದಿದ್ದರೋ ಅಥವಾ ನೋಡುಗರ ದೃಷ್ಟಿಯೇ ಹಾಗೋ... ಇನ್ನೂ ಹಲವಾರು ಪ್ರಶ್ನೆಗಳು ನನ್ನ ಕಣ್ಮುಂದೆ ಬರಹತ್ತಿದ್ದವು..
ಜನ ಏನೆಲ್ಲಾ ಮಾಡ್ತಾರಪ..
ಏನ ಜನ್ಗಳಪ..ಇವ್ರು..!!
ಜನರು ಹೀಗೂ ಇರ್ತಾರ..: ಅಂತ ಯಾರ್ಗೆ ಹೇಳೋಣ. ನೋಡಿದೋರ್ಗ,ತೋರಿಸಿದೋರ್ಗ..!?
ಅವ್ರು ಮಾರಾಟಕ್ಕೆ (ಶೂ) ಹಾಗೆ ಮಾಡ್ತಾ ಇರಬಹುದು.. ಆದ್ರೆ ನಮ್ಮಲ್ಲಿ ಕೆಲವರು ಮಾರಾಟಕ್ಕೆ(ಶೂನಲ್ಲ) ಮಾಡ್ತಾರ ?

~-~

10 ಕಾಮೆಂಟ್‌ಗಳು:

ಸೀತಾರಾಮ. ಕೆ. / SITARAM.K ಹೇಳಿದರು...

ನೋಡುಗರಿದ್ದಾರೆ೦ದು ತೋರಿಸುತ್ತಾರೋ?
ತೋರಿಸುವವರಿದ್ದಾರೆ೦ದು ನೋಡುತ್ತಾರೋ?
ನೋಡುವವರ ಮತ್ತು ತೋರಿಸುವವರ ಈ ಜಾತ್ರೆಯಲ್ಲಿ ಸ್ವಲ್ಪ ಕೊಳ್ಳೋ ಆಟವು ತೋರಿಸಿದವರಿಗೆ ಹೊಟ್ಟೆ ತು೦ಬಿಸಿದ್ದು ಮತ್ತು ಕೊಳ್ಳುವವರಿಗೆ ಶೂ-ದೊ೦ದಿಗೆ ಶೋ ಅನ್ನು ಪುಕ್ಕಟ್ಟೆ ಕೊಟ್ಟದ್ದ೦ತೂ ನಿಜ. ಸರ್ವವೂ ಜ್ಞಾನಾರ್ಪಣಮಸ್ತು!!!
ಜೈ ಹೋ!

Subrahmanya ಹೇಳಿದರು...

hahaha...ಸರಿಯಾಗಿ ಹೇಳಿದ್ದಾರೆ ಸೀತಾರಾಮ್ ಸರ್. ನೀವು ಸರಿಯಾಗಿಯೇ ಬರೆದಿದ್ದಿರಿ.

Manasa ಹೇಳಿದರು...

shoe maarata plus avar show hudugara naraLata :)

ಜಲನಯನ ಹೇಳಿದರು...

ಗುರು, ಮಾರ್ಕೆಟಿಂಗ್ ಗೆ ಹಲವು ತಂತ್ರಗಳನ್ನ ಬಳಸೋದು ನೋಡಿದ್ದೇವೆ ಆದ್ರೆ ಆ ಬಡಪಾಯಿಗಳ ಸಹಜ ಸಮಸ್ಯೆ ಬರೀ ಸಮಸ್ಯೆಯಾಗಿಯೇ ಉಳಿಯುತ್ತೆ...ಆನ್ನೋದಂತೂ ದುರಂತವೇ ಸರಿ...

!! ಜ್ಞಾನಾರ್ಪಣಾಮಸ್ತು !! ಹೇಳಿದರು...

ಸೀತಾರಾಮ. ಕೆ. / SITARAM.K, ಅವ್ರೆ.,

ಹೌದೌದು.. ನಿಮ್ಮ ಅಭಿಪ್ರಾಯ ನನ್ನ ಬರಹದ ಸಂಪೂರ್ಣ ಸಾರದಂತಿದೆ..
ಧನ್ಯವಾದಗಳು..

!! ಜ್ಞಾನಾರ್ಪಣಾಮಸ್ತು !! ಹೇಳಿದರು...

Subrahmanya ಅವ್ರೆ.,

ಹೌದು ಸೀತಾರಾಂ ಅವ್ರು ಅದ್ಭುತವಾಗಿಯೇ ಹೇಳಿದ್ದಾರೆ..
ಧನ್ಯವಾದಗಳು..

!! ಜ್ಞಾನಾರ್ಪಣಾಮಸ್ತು !! ಹೇಳಿದರು...

Manasa ಅವ್ರೆ.,

ಹ ಹ ಹ..
ಚೆನ್ನಾಗಿಯೇ ಹೇಳಿದ್ದೀರಿ..
ನಮ್ಮ ನರಳಾಟ ಇತ್ತು ಬಿಡಿ..

!! ಜ್ಞಾನಾರ್ಪಣಾಮಸ್ತು !! ಹೇಳಿದರು...

ಜಲನಯನ ಅವ್ರೆ.,

ಹೌದು ಸರ್..
ನಿಮ್ಮ ಮಾತಿನಲ್ಲಿ ವೈಚಾರಿಕತೆ ಇದೆ..

Snow White ಹೇಳಿದರು...

:)

!! ಜ್ಞಾನಾರ್ಪಣಾಮಸ್ತು !! ಹೇಳಿದರು...

Snow white.,

ಎಷ್ಟೋ ದಿನಗಳ ಮೇಲೆ ಬಂದಿದ್ದೀರಿ..
ಧನ್ಯವಾದ.

Related Posts Plugin for WordPress, Blogger...