ಬೇವುಂಡು ಬೆಲ್ಲದ ತುಣುಕಿಗಾಗಿ..


[ಸೂಚನೆ:ಹಿಂದೆ ನಾ ಬರೆದಿದ್ದ "ಇದು ನನ್ನಾ.. ಕಥೆ" ಸ್ವಲ್ಪ ದೊಡ್ದದೆನಿಸಿ ಹಲವರು ಇನ್ಮುಂದೆ ಸ್ವಲ್ಪ ಚಿಕ್ಕದಾಗಿರಲಿ ಎಂಬುದಾಗಿ ಅಭಿಪ್ರಾಯ ತಿಳಿಸಿದ್ದರು,ಅಂತೆಯೇ ಸಾಧ್ಯವಾದಷ್ಟು ಚಿಕ್ಕದಾಗಿ ಮಾಡಿದರೂ ಈ ಬರಹ ತುಸು ದೊಡ್ದದೆನಿಸುತ್ತಿದೆ.. ಎಲ್ಲರೂ ಸಹಕರಿಸಿರಿ..]


''ಈ ಬಾಳು ಬೇವು-ಬೆಲ್ಲ
ಎಲ್ಲಾನೂ ಸವಿಲೇಬೇಕು..''ಕಳೆದ ಸಂವತ್ಸರದ ಸಿಹಿ-ಕಹಿ ಅನುಭವಗಳನ್ನು ಮೆಲುಕು ಹಾಕುತ್ತ ಹೊಸ ಸಂವತ್ಸರಕ್ಕೆ ಕಾಲಿಡುತ್ತಿರುವ ನನ್ನೆಲ್ಲ ಬಾಂಧವರಿಗೂ "ಹೊಸ ವರ್ಷ ಯುಗಾದಿ ಹಬ್ಬದ ಹಾರ್ದಿಕ ಶುಭ ಆಶಯಗಳು..
"ಬದುಕಿನಲ್ಲಿ ಕಷ್ಟ-ಸುಖಗಳು ಸಹಜ.., ಕಷ್ಟದ ದಾರಿ ಬಂದಾಗ ಮುಂದೆ ಸುಖದ ದಾರಿ ಇದ್ದೇ ಇರುತ್ತದೆ,ಆದರೆ ಆ ಸುಖದ ಹಂತ ತಲುಪಲು ತಾಳ್ಮೆಯಿಂದ ಕಷ್ಟದ ದಾರಿಯನ್ನು ಸವೆಸಲೇಬೇಕು..
ಕಳೆದೆರಡು ವರ್ಷಗಳು ಜೀವನದ ಮೆಟ್ಟಿಲೇರುವ ದಾರಿಯಲ್ಲಿ ನನ್ನನ್ನು ಹೆಚ್ಚಾಗಿಯೇ ಬೀಳಿಸಿವೆ.. ಆ ಕಹಿ ಅನುಭವಗಳನ್ನು ನಿಮ್ಮ ಮುಂದಲ್ಲದೆ ಇನ್ಯಾರ ಮುಂದೆ ಹಂಚಿಕೊಳ್ಳಲಿ ಹೇಳಿ.

2008 ರಲ್ಲಿ ಅನಿರೀಕ್ಷಿತ ತಿರುವು ಕಂಡ ನನ್ನ ಜೀವನ..:ಹಳ್ಳಿಯಲ್ಲಿ ಹೊಲ-ಗದ್ದೆ ಕೆಲಸ ಮಾಡ್ಕೊಂಡು ಎಸ್.ಎಸ್.ಎಲ್.ಸಿ. ಮುಗಿಸಿದ ನಾನು, ನಮ್ಮೂರಿನಲ್ಲೇ ಆಗಲೇ ಓದುತ್ತಿದ್ದವರಂತೆಯೇ ದಿನಾಗಲೂ ಬಸ್ಸಿನಲ್ಲಿ ಊರಿಗೂ-ನಗರದ ಕಾಲೇಜಿಗೂ ಪ್ರಯಾಣಿಸುತ್ತ ಕಾಲೇಜು ಶಿಕ್ಷಣ ಮುಗಿಸುತ್ತೇನೆ ಎಂದುಕೊಂಡಿದ್ದೆ...
ಆದರೆ,ನನ್ನ ಜನ್ಮಜರು ನಮಗೆ(ನನ್ನ ಒಡಹುಟ್ಟಿದವರನ್ನು ಸೇರಿಸಿಕೊಂಡು) ಉಜ್ವಲ ಭವಿಷ್ಯ ರೂಪಿಸಿಕೊಡುವ ಉದ್ದೇಶದಿಂದ ಪಟ್ಟಣಕ್ಕೆ ಬಂದು ಜೊತೆಯಲ್ಲೇ ಇದ್ದುಕೊಂಡು ಓದಿಸಬೇಕೆಂಬ ದಿಢೀರ್ ನಿರ್ಧಾರ ಕೈಗೊಂಡರು.. ಅಂತೆಯೇ ಪಟ್ಟಣದಲ್ಲಿ ವಾಸ ಆರಂಭವಾಯಿತು.. ಬವಳಿಕೆ ಕಡಿಮೆ ಇದ್ದು,ವ್ಯವಹಾರಿಕ ಜೀವನದಲ್ಲಿ ತುಸು ದಡ್ದನೆ ಆಗಿದ್ದ ನನಗೆ ಹೊಸ ಸ್ಥಳ,ಹೊಸ ಜನರು, ಹೊಸ ಜೀವನದ ಹೊಂದಾಣಿಕೆ ಮೊದಮೊದಲು ಕಷ್ಟವೆನಿಸಿದರೂ ನಂತರದಲ್ಲಿ ಹೊಂದಿಕೊಂಡಿತು.. ಯಾರ ಪರಿಚಯವಿಲ್ಲದ ನಾನು ಕಾಲೇಜು-ಮನೆ-ಪಾಠ-ಓದು ಇಷ್ಟರಲ್ಲೇ ಅರ್ಧ ವರ್ಷ ಕಳೆದೆ,ನಂತರದಲ್ಲಿ ಹುಡುಗರ ಸ್ನೇಹವಾಯಿತು.
ಕಾಲೇಜು ಅಂದಮೇಲೆ ಹುಡುಗರ ಸಂಘ ಇರುತ್ತದೆ ಅಲ್ಲವೇ, ಅದೂ ಅಲ್ಲದೆ ನಗರದಲ್ಲಿ ಬೇರೆ ಇದ್ದೇನಲ್ಲ ,ಹುಡುಗರ ಸಹವಾಸ ತುಸು ಹೆಚ್ಚೇ ಆಯಿತು..
ಗುರುವೃತ್ತಿಗೆ ಅನರ್ಹರಾದ ಗುರು ಎನಿಸಿಕೊಂಡಿದ್ದವರನ್ನೇ ಚಿಕ್ಕಂದಿನಿಂದಲೂ ನೋಡುತ್ತಿದ್ದ ನನಗೆ ಇಲ್ಲಿಯೂ ಅದೇ ಪುನರಾವರ್ತನೆ ಆದರೂ ಒಬ್ಬ ಶ್ರೇಷ್ಠ ಗುರುಗಳು ನನಗೆ ದೊರೆತಿದ್ದು ನನ್ನ ಪುಣ್ಯವೇ ಸರಿ., ಅವರಿಂದ ಜ್ಞಾನಬುತ್ತಿ ಸಂಪಾದಿಸುವುದರ ಜೊತೆಗೆ ಜೀವನಕ್ಕೆ ಅವಶ್ಯಕವಾದ ಸಂಸ್ಕಾರ,ನಡತೆ.. ಮುಂತಾದ ಅಂಶಗಳನ್ನು ಕಲಿತ ನಾನು ಅವರ ಮಾರ್ಗದರ್ಶನ ಅನುಸರಿಸಲು ಶ್ರಮಿಸಿ,ಸೋತು,ಶ್ರಮಿಸುತ್ತಿದ್ದೇನೆ... ನಾನು ಈಗ ತುಸುವಾದರೂ ಮುಂದೆ ಬಂದಿದ್ದೇನೆ ಎಂದರೆ ಅವರ ಮಾರ್ಗದರ್ಶನವೇ ಕಾರಣ ಎಂದರೆ ತಪ್ಪಿಲ್ಲ..
ನೋಡಲು ಸಣ್ಣವನಾದರೂ ಮಾತಿನಲ್ಲಿ ಮಾತ್ರ ಯಾರಿಗೂ ಸೋಲಲಿಚ್ಚಿಸದಿದ್ದ ನನ್ನ ಪುಂಡ ಪ್ರದರ್ಶನ ಒಮ್ಮೆ ಕಾಲೇಜಿನ ಅಧ್ಯಾಪಕರ ಮುಂದೆಯೂ ನಡೆದಿದ್ದರಿಂದ ನನಗೆ ಪುಂಡರ ಸಹವಾಸವು ಹೆಚ್ಚಿತು,ಪುಂಡರ ಸಹವಾಸ ನನ್ನ ಓದಿಗೆ ತೊಂದರೆಯೇನಾಗಿರಲಿಲ್ಲ....
ಇವೆಲ್ಲದರ ನಡುವೆ ಮೊದಲ ವರ್ಷದ ನನ್ನ ಫಲಿತಾಂಶ ಎಲ್ಲರ ನಿರೀಕ್ಷೆಯನ್ನೂ ಮೀರಿತ್ತು...
ಜೀವನದಲ್ಲಿ ಎರಡನೇ ವರ್ಷದ ಪಿ.ಯು. ಮುಖ್ಯ ಘಟ್ಟ ಎಂಬ ನನ್ನ ಗುರುಗಳ ಮಾತು ನನ್ನನ್ನು ಪದೇ ಪದೇ ಎಚ್ಚರಿಸುತ್ತಿದ್ದ ಫಲವಾಗಿ ಎರಡನೇ ವರ್ಷದ ಪಿ.ಯು. ಆರಂಭದಲ್ಲಿ ನನ್ನ ಗುರಿಯನ್ನು ಸಾಧಿಸಲು ನಾನು ಪಡುತ್ತಿದ್ದ ಶ್ರಮ ನನ್ನ ಕೈಯಲ್ಲಿ ದಾಖಲೆ ಬರೆಸುವಷ್ಟು ಶರವೇಗದಲ್ಲಿತ್ತು.., ಅದರ ಪರಿಣಾಮವಾಗಿ ನನಗೆ ಎಲ್ಲ ಕಡೆಯಿಂದಲೂ ಪ್ರಶಂಸೆಗಳೂ ಬರುತ್ತಾ ನನ್ನಲ್ಲಿ ಇನ್ನಷ್ಟು ಉತ್ಸಾಹ ತುಂಬುತ್ತಿದ್ದವು..

ಆರಂಭವಾಯ್ತು ಕೆಟ್ಟ ಘಳಿಗೆ..:ಹೀಗಿದ್ದಾಗ ಒಂದು ದಿನ ಗೆಳೆಯನ ಮನೆಯಲ್ಲಿ, ನನ್ನ ಜೀವನದಲ್ಲಿಯೇ ಮೊದಲಬಾರಿಗೆ,(ಅಲ್ಲಿಯವರೆಗೂ ಕೇವಲ ಕೇಳಿದ್ದೆ,ಓದಿದ್ದೆ) ನೋಡಿದ ಅಶ್ಲೀಲ ಸಿನಿಮಾ ಚಿಕ್ಕಂದಿನಿಂದ ನನಗಿದ್ದ ಲೈಂಗಿಕತೆಯ ಆಸಕ್ತಿಯನ್ನು ಹೆಚ್ಚುವಂತೆ ಮಾಡಿ ನನ್ನ ಮನಸನ್ನು ಸ್ಥಿಮಿತ ಕಳೆದುಕೊಳ್ಳುವಂತೆ ಮಾಡಿತು.. ಒಂದೆರಡು ದಿನ ಕಾಮಾಂಧನಾಗಿ ಅವನ ಹತ್ತಿರವಿದ್ದ ಎಲ್ಲ ಅಶ್ಲೀಲ ಸಿನಿಮಾಗಳನ್ನು ವೀಕ್ಷಿಸಿದ ನಾನು, ಅಷ್ಟೇ ಬೇಗ ಅದರ ಕಡೆ ಗಮನ ಬಿಟ್ಟು ಓದಿನ ಕಡೆಗೆ ಹೆಚ್ಚಾಗಿ ಗಮನ ಹರಿಸಲು ಮುಂದಾದೆ..
ನನ್ನಲಿ ಚಟವಿತ್ತು,ಹಣವಿತ್ತು. ನನ್ನ ಗೆಳೆಯನೊಬ್ಬನ ಹತ್ತಿರ ಚಟವಿತ್ತು, ಹಣವಿರಲಿಲ್ಲ..ಹಾಗಾಗಿ ನನ್ನಿಂದ ಹಣ ಖರ್ಚು ಮಾಡಿಸಿ ಅವನೂ ತನ್ನಾಸೆ ತೀರಿಸಿಕೊಳ್ಳುವ ಉದ್ದೇಶವಿಟ್ಟುಕೊಂಡು ನನ್ನನ್ನು ಸೈಬರ್ ಲೋಕಕ್ಕೆ ಪರಿಚಯಿಸಿದ್ದ..(ಅವನು ಹಾಗೆ ಮೊದಲೇ ಯೋಜನೆ ಹಾಕಿದ್ದನೆಂದು ಇತ್ತೀಚಿಗೆ ತಿಳಿಯಿತು/),ಅಲ್ಲಿಯವರೆಗೆ ನನಗೆ ಅಂತರ್ಜಾಲದ ಬಗ್ಗೆ ಸ್ವಲ್ಪವೂ ತಿಳಿದಿರಲಿಲ್ಲ... ನಂತರದಲ್ಲಿ ನನಗೆ ಅಂತರ್ಜಾಲದ ಬಗ್ಗೆ ಒಲವು ಮೂಡಿತು...
ದುರುದ್ದೇಶದಿಂದ ಸೈಬರ್ ಲೋಕಕ್ಕೆ ಕಾಲಿರಿಸಿದ್ದ ನಾನು ಕ್ರಮೇಣ ಆರ್ಕುಟ್ ಕಡೆ ಮುಖ ಮಾಡಿದೆ... ಮೊದಲ ವರ್ಷದಿಂದ ಅಂದಿನ ದಿನದ ಓದು ಮುಗಿಸಿ ಒಂಟಿಯಾಗಿ ಕೂತು ಚಿಂತನೆ ನಡೆಸುವುದನ್ನು ಅಭ್ಯಾಸ ಮಾಡಿಕೊಂಡಿದ್ದ ನನಗೆ ಆ ಸಮಯದಲ್ಲಿ ಬೇಸರ ಕಳೆಯಲು ಆರ್ಕುಟ್ ಜೊತೆಯಾಯಿತು... ಆದರೆ ಅದರ ಸೆಳೆತ ಆರ್ಕುಟ್ ಲೋಕ ನನ್ನನ್ನು ವಶಪಡಿಸಿಕೊಳ್ಳುವಂತೆ ಮಾಡಿತು.. ಆರ್ಕುಟ್ ವ್ಯಸನಾಸಕ್ತನಾದ ನಾನು ಕ್ಲಾಸ್ಗೆ,ಮನೆಪಾಠಕ್ಕೆ ಚಕ್ಕರ್,ನೋಟ್ಸ್ ಇನ್ ಕಂಪ್ಲೀಟ್, ಟೆಸ್ಟ್ ಗೆ ಆಬ್ಸೆಂಟ್.. ಹೀಗೆ ತಪ್ಪುಗಳ ಸರಣಿಯನ್ನೇ ಶುರು ಮಾಡಿದೆ.. ಪರಿಣಾಮವಾಗಿ ನನ್ನ ಇಷ್ಟ ಗುರುಗಳಿಂದಲೇ ಬೈಗುಳ, ನನ್ನ ಮೇಲೆ ಭರವಸೆ ಇಟ್ಟಿದ್ದ ಕಾಲೇಜು ಅಧ್ಯಾಪಕ ವೃಂದರ ಹೀಯಾಳಿಕೆ, ಮನೆಯವರ ಚುಚ್ಚುಮಾತುಗಳು,ಜೊತೆಗೆ ಬದಲಾದ ಸ್ನೇಹಿತರ ನಡೆ-ನುಡಿ.... ನನ್ನ ಮನಸನ್ನು ಛಿದ್ರಗೊಳಿಸಿದವು... ನನಗೆ ಓದುವುದರ ಬಗ್ಗೆ ಆಸಕ್ತಿ ಹೊರಟೆ ಹೋಯಿತು.. ಎಷ್ಟೇ ಪ್ರಯತ್ನ ಮಾಡಿದರೂ ಓದುವುದರ ಬಗ್ಗೆ ಒಲವು ಮೂಡಿಸಿಕೊಳ್ಳಲಾಗದೆ ಹಣೆಯಲ್ಲಿ ಬರೆದಂತಾಗುತ್ತದೆ ಎಂಬ ನಿರ್ಧಾರವನ್ನು ಮನದಲ್ಲಿ ಆಳವಾಗಿ ತುಂಬಿಕೊಂಡೆ...
ಇದರ ನಡುವೆ ಶಾಂತಿಗೆಂದು ಆರ್ಕುಟ್ ಅನ್ನೇ ಸಂಗಾತಿಯಾಗಿ ಸ್ವೀಕರಿಸಿ ಹೆಚ್ಚು ಕಾಲ ಅಂತರ್ಜಾಲವನ್ನೇ ತಬ್ಬಿ ಕೂರುತ್ತಿದ್ದ ನನಗೆ ಜ್ಞಾನಮೂರ್ತಿ ಎಂಬ ಭಾವಜೀವಿಯೊಬ್ಬರು ನನಗೆ ಆರ್ಕುಟ್ ಮೂಲಕ ಪರಿಚಯವಾದರು..., ಬ್ಲಾಗ್ ಲೋಕಕ್ಕೆ ಪರಿಚಯಿಸಿ ನನ್ನನ್ನು ಒಬ್ಬ ಬ್ಲಾಗಿಗನನ್ನಾಗಿ ಮಾಡಿದರು.. ಅವರ ಮುಂದೆ ಎಲ್ಲವನ್ನೂ ಹೇಳಿಕೊಂಡೆ.., ಯಾರ ಮಾತು ಹಿಡಿಸದಿದ್ದ ನನಗೆ ಅದೇಕೋ ಅವರ ಮಾತು ಹಿಡಿಸತೊಡಗಿದವು.. ಅವರೂ ಸ್ವಲ್ಪ ಬುಧ್ಧಿಮಾತು ಹೇಳಿದರು, ಸಮಾಧಾನ ಮಾಡಿ ಮತ್ತೆ ಹುರುಪು ತುಂಬುವ ಪ್ರಯತ್ನ ಮಾಡಿದರು.. ಅವರ ಮಾತಿಗೆ ಬೆಲೆಕೊಟ್ಟು ಕಷ್ಟಪಟ್ಟು ಓದಲು ಅನುವಾದೆ..
ಆದರೆ ಸಮಯ ಕಳೆದುಹೋಗಿತ್ತು!
ಜ್ಞಾನಮೂರ್ತಿಯವರು ಸಿಕ್ಕಿದ್ದು,ಅವರ ಸಹಕಾರದಿಂದ ಬ್ಲಾಗಿಗನಾಗಿದ್ದು,ಬ್ಲಾಗಿಗನಾಗಿ ನೀವೆಲ್ಲರೂ ಸಿಕ್ಕಿದ್ದು.. ಇವೇ ಅಂತರ್ಜಾಲದಿಂದ ನನಗಾದ ಉಪಯೋಗಗಳು ..

ಇವೆಲ್ಲದರ ನಡುವೆ ೫೦-೬೦% ನಿರೀಕ್ಷೆ ಮಾಡಿದ್ದ ನನಗೆ ೭೦% ಫಲಿತಾಂಶ ಬಂದು ಆಶ್ಚರ್ಯ ಹಾಗೂ ಸೋಜಿಗವನ್ನು ಉಂಟುಮಾಡಿತು.. ಪ್ರಯತ್ನವೇ ಇಲ್ಲದೆ ಬಂದ ನನ್ನ ಫಲಿತಾಂಶ ನನ್ನದಲ್ಲ ಎಂದು ಇಂದಿಗೂ ಅನಿಸುತ್ತಿದೆ.. ಎಲ್ಲಾ ದೈವೇಚ್ಛೆ ಎಂದುಕೊಂಡೆ..
ನಂತರದಲ್ಲಿ ಇಂಜಿನಿಯರ್ ಓದಬೇಕೆನ್ನುವ ಎಲ್ಲರ ಮಾತನ್ನು ತಿರಸ್ಕರಿಸಿ ಬಿ.ಎಸ್ಸಿ. ಆರಿಸಿಕೊಂಡಿದ್ದು ನನಗೆ ಮನೆಯಲ್ಲಿ,ಊರಲ್ಲಿ,ಸುತ್ತಮುತ್ತಲಲ್ಲಿ,.. ಎಲ್ಲೂ ಗೌರವ ಇಲ್ಲದಂತೆ ಮಾಡಿತು.
ಸುತ್ತಮುತ್ತಲಲ್ಲಿ ನನಗೆಂದೆ ಇದ್ದ ಸ್ಥಾನಮಾನ ಕಳೆದು ಹೋಗಿ,ಒಂಟಿಯೆನಿಸಿ ನನ್ನದೇ ಲೋಕ ಸೃಷ್ಟಿಸಿಕೊಂಡೆ. ಯಾವುದಾದರೊಂದು ಕೆಲಸ ಸೇರಿಬಿಡಬೇಕು ಎಂದುಕೊಂಡು ಇತ್ತೀಚಿಗೆ ಒಂದು ಕೆಲಸಕ್ಕೆ ಅರ್ಜಿ ಹಾಕಿ ತಿರಸ್ಕೃತವಾದ ನನಗೆ ಇತ್ತೀಚಿಗೆ ಜೀವನದ ತಪ್ಪುಗಳು ಅರಿವಾಗತೊಡಗಿವೆ..


ಕಾಲವು ನನಗೆ ಸರಿಯಾಗೇ ಉತ್ತರ ನೀಡಿದ್ದು ನಾ ಮಾಡಿದ ತಪ್ಪುಗಳಿಗೆ ಪಶ್ಚಾತ್ತಾಪ ಪಡುತ್ತಿದ್ದೇನೆ...
ಮುಂದಾದರೂ ಚೆನ್ನಾಗಿ ಓದಿ ನನ್ನ ಸ್ಥಾನಮಾನಗಳನ್ನು ದೊರಕಿಸಿಕೊಳ್ಳಬೇಕೆಂದು ನಿರ್ಧರಿಸಿ ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ.. ಹಲವಾರು ಕುರುಡು ಕನಸು ಕಾಣುತ್ತಿದ್ದ ನನಗೆ ಈಗ ಕಣ್ಣ ಮುಂದಿರುವುದು ಡಿಗ್ರಿಯಲ್ಲಿ ರಾಂಕ್ ಪಡೆಯಬೇಕು,ಜೊತೆಗೆ ಬ್ಲಾಗಿನಲ್ಲಿ ಒಳ್ಳೆ ಹೆಸರು ಮಾಡಬೇಕು ಎಂಬ ಆಸೆ.. ಅದೇ ನಿಟ್ಟಿನಲ್ಲಿ ಶ್ರಮಿಸುತ್ತಿರುವ ನನಗೆ ಕೆಲವು ಒಡಕುಗಳು ಎದುರಾಗುತ್ತಿವೆ,ಒಂದು ದಿನ ನಾ ಅಂದುಕೊಂಡಂತೆ ನಡೆದರೆ ಮುಂದಿನ ಐದಾರು ದಿನಗಳು ವ್ಯರ್ಥವಾಗುತ್ತಿವೆ,ಮನಸ್ಸು ಸರಿಯಿಲ್ಲವಾಗಿದೆ..
ಯಾಕೋ ದೈವಶಕ್ತಿ ದೂರ ಉಳಿದು ನನ್ನ ಸಾಮರ್ಥ್ಯ ಪರೀಕ್ಷಿಸಲು ಮುಂದಾಗಿದೆ ಎನಿಸುತ್ತಿದೆ..
ಆದರೂ ಛಲಬಿಡದೆ ಪ್ರಯತ್ನಿಸುತ್ತಾ ಕನಸನ್ನು ಸಾಕಾರಗೊಳಿಸುವ ಕುಸುರಿ ಕೆಲಸ ನಡೆಸುತ್ತಿದ್ದೇನೆ..
ಹೇಗೋ ಆಗಿದ್ದು ಆಗಿಹೋಯ್ತು, ಮುಂದಿನ ವರ್ಷಗಳಲ್ಲಾದರೂ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ..
ಹೀಗೆ ಜೀವನದಲ್ಲಿ ಇಲ್ಲಿಯವರೆಗೂ ಕಹಿಯನ್ನೇ ಉಂಡು ಮುಂದೆ ಸಿಹಿ ತಿನ್ನುವ ತವಕದಲ್ಲಿದ್ದೇನೆ..


ಆದರೂ,ಯಾವುದೇ ಕೆಲಸವಾದರೂ ನಮ್ಮ ಶ್ರಮ ಎಷ್ಟೇ ಇದ್ದರೂ ದೈವಾನುಗ್ರಹವೂ ಬೇಕಲ್ಲವೇ ಕಾದುನೋಡೋಣ..
~ . ~

26 ಕಾಮೆಂಟ್‌ಗಳು:

shivu.k ಹೇಳಿದರು...

ಗುರು ದೆಸೆ,

ನಿಮ್ಮ ಲೇಖನ ಓದಿದೆ. ನೀವಂದುಕೊಂಡಂತೆ ಬೇವಿನಂತ ಕಹಿ ಘಟನೆಗಳು ಏನು ಸಂಭವಿಸಿಲ್ಲ. ಘಟಿಸಿರುವಂತವನ್ನು ಎದುರಿಸಿದ್ದೀರಿ. ಬೇವಿದ್ದ ಮೇಲೆ ಬೆಲ್ಲವಿರಲೇ ಬೇಕು. ಸಿಹಿಯೂ ಸಿಗುತ್ತದೆ. ಜೀವನದಲ್ಲಿ ಶ್ರಮಪಟ್ಟರೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಮತ್ತೆ ಒಳ್ಳೇ ಬ್ಲಾಗಿಂಗ್ ಮಾಡುವುದಕ್ಕೋಸ್ಕರ ತಲೆ ಬಿಸಿ ಮಾಡಿಕೊಳ್ಳಬೇಡಿ. ಹೊಸದರ ಹಿಂದೆ ಬಿದ್ದಾಗ ಸಹಜವಾಗಿ ವಿಚಾರಗಳು ಸಿಗುತ್ತವೆ. ನಿಮ್ಮ ಬ್ಲಾಗಿಂಗ್ ವಿಭಿನ್ನವಾಗಿದ್ದಲ್ಲಿ ಅದು ನಿಜಕ್ಕೂ ಯಶಸ್ಸು ಗಳಿಸುತ್ತದೆ. ಒಳ್ಳೆಯದಾಗಲಿ...
ನಿಮಗೂ ಯುಗಾದಿ ಹಬ್ಬದ ಶುಭಾಶಯಗಳು.

ಸಾಗರದಾಚೆಯ ಇಂಚರ ಹೇಳಿದರು...

Guru-dese

ಹೊಸವರುಷದ ಶುಭಾಶಯಗಳು

ಗುರು-ದೆಸೆ !! ಹೇಳಿದರು...

'shivu.k' ಅವರಿಗೆ ಧನ್ಯವಾದಗಳು..

ನಾನು ಶ್ರಮ ಪಡುತ್ತಲೇ ಇದ್ದೇನೆ,ನಿಮ್ಮ ಮಾತಿನಂತೆ ತಕ್ಕ ಪ್ರತಿಫಲ ಸಿಗಬೇಕಷ್ಟೆ..!
ನಾನು ಕೂಡ ವಿಭಿನ್ನವಾಗಿ ಬರೆಯುವ ಬಗ್ಗೆ ಆಲೋಚನೆ ಮಾಡುತ್ತಿದ್ದೇನೆ.., ಆದರೆ ನಿಮ್ಮ ಸಹಕಾರವೂ ಇದ್ದರೇ ತಾನೆ ಯಶಸ್ಸು ಸಾಧ್ಯ..

ಗುರು-ದೆಸೆ !! ಹೇಳಿದರು...

'ಸಾಗರದಾಚೆಯ ಇಂಚರ' ಅವರಿಗೂ ಹೊಸ ವರ್ಷದ ಶುಭಕಾಮನೆಗಳು....

Subrahmanya Bhat ಹೇಳಿದರು...

...All the best. ಹೀಗೆ ಬರೆಯುತ್ತಿರಿ.

Manasaare ಹೇಳಿದರು...

ಗುರು ಅವರೇ ,
ಮೊದಲು ನಿಮಗೆ ತಡವಾದ್ ಯುಗಾದಿ ಹಬ್ಬದ ಶುಭಾಶಯಗಳು . ನೀವು ಇನ್ನು ಜೀವನದ ಕಹಿಯನ್ನ ನೋಡಿಲ್ಲ , ಆದ್ದರಿಂದಲೇ ನಿಮಗೆ ಈ ಚಿಕ್ಕ್ ಚಿಕ್ಕ್ ವಿಷಯಗಳೆಲ್ಲ ಕೆಟ್ಟ ಗಳಿಗೆ , ಕಹಿ ಅನ್ನಿಸ್ತ ಇವೆ .
ನಿಮಗೆ ಜೀವನ ಇನ್ನು ಆರಂಭ ಆಗಬೇಕಾಗಿದೆ , ಇನ್ನು ಜೀವನದ ಆಸಲಿ ಕಹಿ ಸತ್ಯಗಳು ಎದುರಾದಾಗಲೇ ನಿಮಗೆ ಇವೆಲ್ಲ ಎಷ್ಟು ಸಿಲ್ಲಿ ವಿಷಯಗಳು ಅನ್ನಿಸಬಹುದು . ಯಾoಕೆಂದರೆ ನಾನು ನಿಮ್ಮ ಹಾಗೆಯೇ ಚಿಕ್ಕ್ ಚಿಕ್ಕ್ ವಿಷಯಗಳಿಗೆಲ್ಲ ನನ್ನ ಜೀವನದ ಕಹಿ ಘಟನೆಗಳು ಅಂದ್ಕೊಳ್ತಾ ಇದ್ದೆ , ಆದ್ರೆ ನಿಜ ಜೀವನದ ಕಹಿ ಅನುಭವ ಆದಮೇಲೆಏ ಅರ್ಥ ಆಯಿತು ಅವೆಲ್ಲ ಏನು ಅಲ್ಲ ಅಂತ . ಬ್ಲಾಗ್ ಒಂದೇ ನಿಮ್ಮ ಜೀವನದ ಗುರಿ ಅಂದ್ಕೋಬೇಡಿ . ಇದು ಬರಿ ನಿಮ್ಮ ಸೈಡ್ ಹವ್ಯಸವಾಗಿರಲಿ , ಜೀವನದ ಮೊದಲ ಗುರಿ ನಿಮ್ಮ ಡಿಗ್ರಿನಲ್ಲಿ ಒಳ್ಳೆ ಮಾರ್ಕ್ಸ್ ತೆಗಿಯೋದಾಗಿರಲಿ . ಅದು ನಿಮ್ಮ ಮುಂದಿನ ಭವಿಷ್ಯಕ್ಕೆ ಬೇಕಾಗಿರೋ ಮುಖ್ಯ ಅಂಶ .

ನಿಮ್ಮ ಮುಂದಿನ ಭವಿಷ್ಯದ ಚೆನ್ನಾಗಿರಲಿ

ಮನಸಾರೆ

ದಿನಕರ ಮೊಗೇರ.. ಹೇಳಿದರು...

ಗುರು ಅವರೇ,
ಮನಸಾರೆ ಮೇಡಂ, ಶಿವೂ ಸರ್ ಹೇಳಿದ್ದು ನೂರಷ್ಟು ಸತ್ಯ.... ಈಗಿನ ಕಷ್ಟ ಏನೂ ಅಲ್ಲ, ಇನ್ನ ಮುಂದಿದೆ ಕಷ್ಟ ಇನ್ನೂ ದೊಡ್ಡದು ಎಂದು ಈಗಲೇ prepare ಆಗಿ.... ಬ್ಲಾಗ್ ಬರೆಯೋದು ಹವ್ಯಾಸ ಆಗಿರಲಿ..... ಬೇಗ ಡಿಗ್ರೀ ಮುಗಿಸಿ, ಕೆಲಸ ಹುಡುಕಿ.... ನಮ್ಮಲ್ಲೇ ಯಾರಾದರು ನಿಮಗೆ ಕೆಲಸ ಕೊಡಿಸಲು ಸಹಾಯ ಮಾಡಬಹುದು.... ಮೊದಲು ಓದು ಮುಗಿಸಿ..... ಹಿಂದಿನ ಎಲ್ಲಾ ಕೆಟ್ಟ ವಿಷಯ ಮರೆತು ಮುಂದಿನ ಬಗ್ಗೆ ಯೋಚಿಸಿ..... ''ಆಗೋದೆಲ್ಲಾ ಒಳ್ಳೆಯದ್ದಕ್ಕೆ, ಆಗಿದ್ದೆಲ್ಲಾ ಒಳ್ಳೆಯದ್ದಕ್ಕೆ '' ಎನ್ನುವ policy ಅಳವಡಿಸಿಕೊಳ್ಳಿ..... ಉಗಾದಿ ನಿಮಗೆ ಒಳ್ಳೆಯದುಮಾಡಲಿ.....

ಜಲನಯನ ಹೇಳಿದರು...

ಅಯ್ಯೋ ಗುರು..ನಿಮ್ಮ ದೆಸೆ ಚನ್ನಗಿಯೇ ಆರಂಭವಾಗಿದೆ ರೀ...ಇಲ್ಲೇ ನೋಡಿ...ಎಷ್ಟೊಂದು ಹಿತಚಿಂತನೆ ಮಾಡುವ ಸ್ನೇಹಿತರು ಹಿರಿಯರು ನಿಮೆಗ್ ಸಿಕ್ಕಿದ್ದಾರೆ ನಿಮಗೆ ಬ್ಲಾಗಿನ ಮೂಲಕ...ಇದೂ ಒಂದು ನಿಮ್ಮ ಸಾಧನೆಯೇ ಅಲ್ಲವೇ...ಹೌದು..ನಿಮ್ಮ ಈ ಘಟ್ಟ...ವಿಷಯ ಪ್ರಮುಖ್ಯತೆಯನ್ನು ಗುರುತಿಸಿ ನಡೆವುದು..ಭವಿಷ್ಯಕ್ಕೆ ವಿದ್ಯಾಭ್ಯಾಸ ಮುಖ್ಯ..ಹಾಗ್ಗಗಿ ಈಗ ಎಲ್ಲದಕ್ಕೂ ಪ್ರಮುಖ ನಿಮ್ಮ education..ಇಲ್ಲಿ ನಿಮ್ಮ ಎಲ್ಲ ಶಕ್ತಿ ಕೆಂದ್ರೀಕೃತವಾಗಲಿ...ನಿಮಗೆ ಶುಭವಾಗಲಿ...

ಗುರು-ದೆಸೆ !! ಹೇಳಿದರು...

' Subrahmanya Bhat' ಅವರಿಗೆ ಧನ್ಯವಾದಗಳು..

ಗುರು-ದೆಸೆ !! ಹೇಳಿದರು...

'Manasaare' ಅವರಿಗೆ ಧನ್ಯವಾದಗಳು..

ನಿಮ್ಮ ತಿಳುವಳಿಕೆಯ ಮಾತುಗಳು ಹಿತವೆನಿಸುತ್ತವೆ..
ನೀವು ಅಂದಂತೆ ಇರಲಿ.. ಕಾದು ನೋಡೋಣ..
ಮತ್ತೆ ಮತ್ತೆ ಬರುತ್ತಿರಿ.

ಗುರು-ದೆಸೆ !! ಹೇಳಿದರು...

'ದಿನಕರ ಮೊಗೇರ..' ಅವರಿಗೆ ಧನ್ಯವಾದಗಳು..

ಹೌದು ನನಗೂ ಅವರ ಮಾತುಗಳು ಹಿಡಿಸಿವೆ..
"ಆಗೋದೆಲ್ಲ ಒಳ್ಳೆಯದಕ್ಕೆ.." ಎಂದೇ ಬದುಕಬೇಕಾಗಿದೆ.
ಮತ್ತೆ ಮತ್ತೆ ಬರುತ್ತಿರಿ.

ಗುರು-ದೆಸೆ !! ಹೇಳಿದರು...

'ಜಲನಯನ' ಅವರಿಗೆ ಧನ್ಯವಾದಗಳು..

ಹೌದು.. ನಿಮ್ಮಂತಹವರು ಸಿಕ್ಕಿದ್ದೇ ಪುಣ್ಯ..,ಅಂತೆಯೇ ಸಹಕಾರವಿದೆ.
ಮತ್ತೆ ಮತ್ತೆ ಬರುತ್ತಿರಿ.

ದಿವ್ಯಶ್ರೀ.. ಹೇಳಿದರು...

..,
ಈ ಉಗಾದಿಯಿಂದ ಕಹಿಯೆಲ್ಲ ಹೋಗಿ ನಿನ್ನ ಬಾಳಲ್ಲಿ ಯಾವಾಗಲು ಸಿಹಿ ತುಂಬಿರಲಿ..
ನೀನಂದುಕೊಂಡಂತೆ ಗೆಲುವು ನಿನ್ನದಾಗಿರಲಿ.. ನಿನ್ನ ಬಾಳು ಇನ್ಮೇಲೆ ಹಚ್ಚ ಹಸಿರಾಗಿರಲಿ ಎಂದು ಹಾರೈಸುವ-
ನಿನ್ನ ಗೆಳತಿ.

ದಿವ್ಯಶ್ರೀ.. ಹೇಳಿದರು...

Hi..I'm Sahana.
Nanu divya's friend.
Nimma blog nodide,tumba chennagide..
Manasalli chala idre en bekaadru madabahudu,Manassannu constantagi itkolli neevu nijavagloo nim guri muttitteeri.
All the best yout FUTURE.

ಗುರು-ದೆಸೆ !! ಹೇಳಿದರು...

ಹೃದಯದ ಗೆಳತಿ "ದಿವ್ಯಶ್ರೀ"ಗೆ ನನ್ನ 'ಮನಸಿನಮನೆ'ಗೆ ತುಂಬುಹೃದಯದ ಸ್ವಾಗತ..
ನಿನ್ನ ದಿವ್ಯದರ್ಶನದಿಂದ ಮನಸಿನರಮನೆಗೆ ದಿವ್ಯದೀವಿಗೆ ಬಂದು ಹೊಸಬೆಳಕು ಮೂಡುತಿದೆ..
ನಿನ್ನ ಮನದ ಮಾತುಗಳಿಗೆ ಧನ್ಯ.
ದಿವ್ಯದೀವಿಗೆಯೇ ಹೀಗೆ ಬೆಳಗುತಿರು...

ಗುರು-ದೆಸೆ !! ಹೇಳಿದರು...

ಗೆಳತಿಯ ಗೆಳತಿ ಸಹನಾ'ಗೂ ಧನ್ಯವಾದಗಳು..

ನಿಮ್ಮ ಹಿತವಚನಗಳಿಗೆ ಧನ್ಯ.
ಮತ್ತೆ ಮತ್ತೆ ಬರುತ್ತಿರಿ..

ತೇಜಸ್ವಿನಿ ಹೆಗಡೆ ಹೇಳಿದರು...

ಗುರು-ದೆಸೆ,

ಧನಾತ್ಮಕ ಚಿಂತನೆ, ದೃಢ ನಿರ್ಧಾರ, ಆತ್ಮವಿಶ್ವಾಸ ಹಾಗೂ ಬದುಕಿನ ಬಗ್ಗೆ ಆರೋಗ್ಯಕರ ಆಸಕ್ತಿಯಿದ್ದರೆ ದೈವಾನುಗ್ರಹ ಖಂಡಿತ ನಮಗೆ ಒಲಿಯುತ್ತದೆ. ಬದುಕೆಂದರೆ ಎಲ್ಲಾ ದೆಸೆಗಳ ಮಿಶ್ರಣ. ಕಷ್ಟ ಬಂದಾಗ ಹತಾಶರಾಗದೇ, ಸುಖ ಬಂದಾಗ ಆಲಸಿಗಳಾಗದೇ ಉತ್ತಮ ಗುರಿಯನ್ನು ಮುಂದಿಟ್ಟುಕೊಂಡು ಮುನ್ನೆಡೆದರೆ ಎಲ್ಲಾ ದೆಸೆಗಳೂ ಗುರು ದೆಸೆಗಳೇ :)

ಹೊಸ ವರುಷದಲ್ಲಿ ನೀವು ಮತ್ತಷ್ಟು ಜವಾಬ್ದಾರಿಯುತವಾಗಿ ಯೋಚಿಸುವಂತೆ, ಕಾರ್ಯಪ್ರವೃರತ್ತರಾಗುವಂತೆ ನಿಮ್ಮ ಮನಸಿನ ತುಂಬಾ ಸುವಿಚಾರಗಳೇ ತುಂಬಲೆಂದು ಹಾರೈಸುವೆ.

ಬೇಸರವೇ ?ಬೇಸರವೇ ? ಹೇಳಿದರು...

ಸ್ನೇಹಿತನೇ ನನ್ನ ಜೀವನದ ಕಥೆಯು ಅದೇ ಆಗಿದೆ."ಗುರಿ ಯಿಲ್ಲದ ಜೀವನ ಬ್ರೇಕ್ ಇಲ್ಲದ ವಾಹನ" ಓದುವ ವಯಸಿನಲ್ಲಿ ದಾರಿ ತಪ್ಪಿ ಈಗ ಪಡಬಾರದ ಕಷ್ಟ ಪಟ್ಟು ಜೀವನವನ್ನು ನಡೆಸುತ್ತಿದ್ದೇವೆ..ಆದಷ್ಟು ನೀವು ಬೇಗ ನಿಮ್ಮ ತಪ್ಪನ್ನು ತಿದ್ದಿಕೊಂಡಿದ್ದಿರಿ..ಕಾಲ ಮಿಂಚಿಲ್ಲ ಮುಂದೆ ಏನಾದರು ಸಾಧನೆ ಮಾಡುತ್ತೇನೆಂಬ ಛಲವಿದ್ದರೆ ಸಾಕು.
ಇನ್ನು ನಿಮ್ಮ ಬರವಣಿಗೆಯನ್ನು ನೋಡಿದರೆ ನೀವು ಒಬ್ಬ ಪರಿಪೂರ್ಣ ಲೇಖಕರಾಗುವಲ್ಲಿ ಸಂದೇಹವಿಲ್ಲ ನಿಮ್ಮದು ನೇರ ಬರವಣಿಗೆ, ಮನಸಿಗೆ ಅನ್ನಿಸಿದ್ದನ್ನು ನೇರವಾಗಿ ಹೇಳಿದ್ದಿರಿ ಅದು ನನಗೆ ಇಷ್ಟವಾಯಿತು...ಇದೇ ರೀತಿ ನಿಮ್ಮ ಲೇಖನಗಳು ಮುಂದುವರೆಯಲಿ ಹಾಗೆ ನಿಮ್ಮ ಜೀವನ ಸುಂದರ ನೌಕೆ ಯಂತೆ ಯಾವುದೇ ಅಡೆತಡೆ ಯಿಲ್ಲದೆ ಮುನ್ನುಗಲಿ ಎಂದು ಮನ ತುಂಬಿ ಹಾರೈಸುವೆ..
-ಹೇಮಂತ್

Shashi jois ಹೇಳಿದರು...

ನಿಮಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ನಿಮ್ಮ ಕಹಿ ಅನುಭವವನ್ನು ನಮ್ಮೆಲ್ಲರ ಬಳಿ ಹಂಚಿಕೊಂಡಿದ್ದು ಸಂತೋಷ.
ಮಾನವ ತಪ್ಪು ಮಾಡೋದು ಸಹಜ ಆದರೆ ಮಾಡಿದ ತಪ್ಪನ್ನು ಪುನಃ ಮಾಡಬಾರದು..ಒಂದು ಮಾತು ಉಂಟಲ್ಲ "ಜನಕ್ಕೆ ಅಂಜ ದಿದ್ದರು ಮನಕ್ಕೆ ಅಂಜು" ಅನ್ನುವ ಹಾಗೇ ನಮ್ಮ ನೆರಳಿಗೆ ನಾವೇ ಹೆದರಬೇಕಲ್ಲ?ನಿಮ್ಮ ಜೀವನದ ಗುರಿ ಮತ್ತು ಕನಸು ನೆರವೇರಲಿ ಅಂತ ನನ್ನ ಹಾರೈಕೆ.
ನಿಮ್ಮ ಬ್ಲಾಗ್ ಬಗ್ಗೆ ಯೆಳವತ್ತಿ ಹೇಳಿದ್ದರು ಓದಿದ್ದೆ ಕೂಡ ಚೆನ್ನಾಗಿ ಬರೆಯುತ್ತಿರಿ.

ಸಾಗರಿ.. ಹೇಳಿದರು...

ಗುರು ದೆಸೆ ಅವರೇ,,
ವಿದ್ಯಾರ್ಥಿ ಜೀವನ ಮತ್ತೆ ಬೇಕೆಂದರೆ ಮತ್ತೆ ಪುನಃ ಪುನಃ ಸಿಗಲ್ಲ. ಕಲಿಯುವವ ಎಂದಿಗೂ ವಿದ್ಯಾರ್ಥಿಯೇ ಅದು ಬೇರೆ ಮಾತು. ಆದರೆ ಓದಿ ಜೀವನದಲ್ಲಿ ಸಾಧಿಸುವುದು ಬೇಕಷ್ಟಿರುತ್ತದೆ. ಬ್ಲಾಗಿಗರೆಲ್ಲ ಬ್ಲಾಗನ್ನೇ ಜೀವನ ಮಾಡಿಕೊಂಡವರಲ್ಲ. ಅವರೂ ವೃತ್ತಿನಿರತರೇ, ಅವರವರ ಕೆಲಸದಲ್ಲಿ ಮಗ್ನರೇ. ಓದು ನಮ್ಮಲ್ಲಿ ಆತ್ಮಸ್ಥೈರ್ಯ ತುಂಬತ್ತೆ, ಪ್ರಾಯದಲ್ಲಿ ಸಾಧಿಸುವ ಹುಮ್ಮಸ್ಸು ಮತ್ತು ಹಾದಿ ತಪ್ಪುವ ಛಾನ್ಸ್ ಹೆಚ್ಚು. ಆಯ್ಕೆ ನಮಗೆ ಬಿಟ್ಟಿದ್ದು. ನಮ್ಮ ನಮ್ಮ ನಿಲುವಿಗೆ ನಾವು ಬದ್ಧರಾಗಿರಬೇಕು ಅಷ್ಟೇ. ಒಳ್ಳೆಯದಾಗಲಿ.

ಗುರು-ದೆಸೆ !! ಹೇಳಿದರು...

'ತೇಜಸ್ವಿನಿ ಹೆಗಡೆ' ಅವರಿಗೆ ಧನ್ಯವಾದಗಳು..

ದೃಢಸಂಕಲ್ಪ ಇದೆ.. ಆದರೆ ಆತ್ಮವಿಶ್ವಾಸದ ಕೊರತೆಯಿದೆ.. ಆದಷ್ಟು ಧನಾತ್ಮಕ ಚಿಂತನೆ ಮಾಡಲು ಪ್ರಯತ್ನಿಸುತ್ತಿದ್ದೇನೆ..
ನಿಮ್ಮ ಹಿತವಚನಗಳಿಗೆ ಮತ್ತೊಮ್ಮೆ ಧನ್ಯವಾದಗಳು..

ಗುರು-ದೆಸೆ !! ಹೇಳಿದರು...

' ಬೇಸರವೇ ?ಬೇಸರವೇ ?'ಅವರಿಗೆ ನನ್ನ "ಮನಸಿನಮನೆ"ಗೆ ಸ್ವಾಗತ..

ಹೆಚ್ಚು ಜನರ ಕಥೆಯೂ ಇದೇ ಎಂದು ತಿಳಿದಿದ್ದರೂ ನಾನು ಹಾಗಾದೆನಲ್ಲ ಎಂಬ ಅಂಜಿಕೆಯಿದೆ..
ಕೆಲವರು ಮೆಚ್ಚದ ನನ್ನ ನೇರನುಡಿಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು..

ಮತ್ತೆ ಮತ್ತೆ ಬನ್ನಿ..

ಗುರು-ದೆಸೆ !! ಹೇಳಿದರು...

'Shashi jois' ಅವರಿಗೆ ನನ್ನ "ಮನಸಿನಮನೆ"ಗೆ ಸ್ವಾಗತ..

ನಿಮ್ಮ ಮಾತು ಸತ್ಯವಾದುದು.. ನಿಮ್ಮ ಮಾತಿಗೆ ಧನ್ಯವಾದಗಳು..
ನನ್ನ ಗುರಿ, ಕನಸು ನೇರವಾಗಿದೆ,ನಿಮ್ಮ ಸಹಕಾರವೂ ಇರಲಿ..

ಮತ್ತೆ ಮತ್ತೆ ಬನ್ನಿ..

ಗುರು-ದೆಸೆ !! ಹೇಳಿದರು...

'ಸಾಗರಿ..' ಅವರಿಗೆ ನನ್ನ "ಮನಸಿನಮನೆ"ಗೆ ಸ್ವಾಗತ..

ವಿದ್ಯಾರ್ಥಿ ಜೀವನದ ಬಗೆಗಿನ ಮಾತು ಹತ್ತಿರವಾದುದು.. ಧನ್ಯವಾದಗಳು.
ಅವರು ಒಳ್ಳೆಯದನ್ನೇ ಆಯ್ಕೆ ಮಾಡಿದರೂ ಆ ಆಯ್ಕೆ ಬದಲಾಗದಿರಲೂ ಮನಸನ್ನು ಸ್ಥಿಮಿತದ್ದಲ್ಲಿ ಇಟ್ಟುಕೊಳ್ಳಬೇಕು..ಅದಕ್ಕಾಗಿ ತುಂಬಾ ಶ್ರಮ ಅಗತ್ಯ..

ಮತ್ತೆ ಮತ್ತೆ ಬನ್ನಿ..

PARAANJAPE K.N. ಹೇಳಿದರು...

ನಿಮ್ಮ ಬ್ಲಾಗ್ ಮನೆಗೆ ಮೊದಲೇ ಬ೦ದಿದ್ದೆ. ಪ್ರತಿಕ್ರಿಯಿಸಲು ಆಗಿರಲಿಲ್ಲ. ಚೆನ್ನಾಗಿದೆ ಬರಹ, ಮು೦ದುವರಿಸಿ, ಶುಭವಾಗಲಿ.

ಗುರು-ದೆಸೆ !! ಹೇಳಿದರು...

'PARAANJAPE K.N.' ಅವರ ಮಾತಿಗೆ ಧನ್ಯವಾದಗಳು..

Related Posts Plugin for WordPress, Blogger...