ನನ್ನಲ್ಲಿ ನೀನು..


!!ಜ್ಞಾನಾರ್ಪಣಮಸ್ತು!! 
[ನನ್ನ ಮನದನ್ನೆ ನನ್ನೆದೆಯಲಿಳಿದು ಗುನುಗಿದ ಗೀತೆ.. ]
 
~.~

ನನ್ನ ಮನಸಿನಮನೆಯ ಹೊಂಬೆಳಕಲೂ
ನಿನ್ನ ನಗುಮೊಗದ ಹೊಳಪಿದೆ..
ನನ್ನೆದೆಯಂಗಳದ ಚಿತ್ತಾರ
ನೀನೆ ಇಟ್ಟ ರಂಗೋಲಿ..
ಎದೆಕೋಗಿಲೆ ನನ್ನದಾದರೂ
ಹಾಡಿನ ದನಿ ನಿನ್ನದಲ್ಲವೇ..
ನನ್ನದೇ ಹೃದಯಸಾಮ್ರಾಜ್ಯ
ಸಿಂಹಾಸನವೇರಿ ಆಳುವವಳವಳು ನೀನೆ..
ನಾ ಇಡುವ ಹೆಜ್ಜೆ
ನೀ ತೋರಿದ ಹಾದಿ..
ನನ್ನದೇ ಆದರೂ ಉತ್ಸಾಹ
ನಿನ್ನದೇ ತಾನೆ ಪ್ರೋತ್ಸಾಹ..
ಕಂಗಳಿಗೆ ನಾನು ಒಡೆಯ
ಕನಸಿಗೆ ನೀನೇ ಒಡತಿ..
ನನ್ನೆದೆ ಹೊತ್ತ ಭಾರ
ನೀ ಹೊರಿಸಿದ ವಿರಹದ ಮೂಟೆ..

ನೀ ಮೌನವಾದರೆ
ನನ್ನೆದೆಯಲಿ ಬರಗಾಲ..
ನೀ ಕಣ್ಣೀರಿಟ್ಟರೆ
ನನ್ನೆದೆಯಾಳದಲಿ ಪ್ರವಾಹ..


ಹುಟ್ಟುಹಬ್ಬದ ಶುಭಕಾಮನೆ ನಿನಗೆ
ನಗುತಿರು ಚಿರಕಾಲ ಒಲವೇ..
ಸುರಿಯುತಿರಲಿ ಮಂಜು
ಸುಳಿಯದಿರಲಿ ನಂಜು.
 ~-~

Related Posts Plugin for WordPress, Blogger...