ನೋಡು ಬಾ ಗೆಳತಿ..

!! ಜ್ಞಾನಾರ್ಪಣಮಸ್ತು !!
 
~.~
 
ನೋಡು ಬಾ ಗೆಳತಿ..
ಕಂಗಳಿಗೆ ಕತ್ತಲೆಯೇ ಕಾಣುತಿದೆ
ನಿನ್ನ ಮೊಗದ ಬೆಳಕ ತೋರು ಬಾ..
ತುಟಿಗಳಿವು ಸವಿಯನೆ ಮರೆತಿವೆ
ಮುತ್ತಿಟ್ಟು ಸವಿ ತಿಳಿಸು ಬಾ..
ಕಿವಿಗಳಿವು ಆಲಿಸದೆ ಮಲಗಿವೆ
ಸಿಹಿಯಾಗಿ ಕಚ್ಚಿ ಎಚ್ಚರಗೊಳಿಸು ಬಾ..


ನೋಡು ಬಾ ಗೆಳತಿ..
ಕಾಲಕೀಲುಗಳು ಚಲನೆ ಮರೆತಿವೆ
ಕೈ ಹಿಡಿದು ನಡೆಸು ಬಾ..
ನನ್ನೆದೆವೀಣೆ ಮೌನವಾಗಿದೆ
ನಿನ್ನ ಬೆರಳು ಸೋಕಿಸು ಬಾ..
ಮನದಂಗಳದ ಹೂಗಳು ಮಂಕಾಗಿವೆ
ನಿನ್ನ ನಗು ತೋರಿ ಅರಳಿಸು ಬಾ..


ನೋಡು ಬಾ ಗೆಳತಿ..
ಒಂಟಿತನದ ಗೂಡು ತೆರೆಯುವ
ಬಿಗಿದಪ್ಪಿ ಬಾಗಿಲು ಮುಚ್ಚು ಬಾ..
ವಿರಹದ ಜ್ವಾಲೆ ಸುಡುವ ಮುನ್ನ
ಚುಂಬಿಸಿ ದೀಪ ಆರಿಸು ಬಾ..
ನಿದಿರೆಯಲಿ ಸವಿಗನಸೆ ಇಲ್ಲ
ನಿದ್ದೆಗೆಡಿಸಿ ಕಣ್ಣ ಚುಂಬಿಸು ಬಾ..
 
~-~
Related Posts Plugin for WordPress, Blogger...