ಜ್ಞಾನದೀವಿಗೆ ಬೆಳಗುತಿರಲು..ನೂರೆಂಟು ನೋವ ಅಂಧಕಾರದೊಳಗೆ


ನೋವ ಮರೆಸಿ ಮಾತೊಂದು ಮೊಳಗುತಿರಲು


ದಿವ್ಯದೀವಿಗೆಯು ಆರಿಹೋಗಿರಲು


ಜ್ಞಾನದೀವಿಗೆಯು ಬೆಳಗುತಿರಲು


ಕತ್ತಲ ನುಂಗಿ ಬೆಳೆಯುತಿರಲು


ಮೂಕಮನಸು ಹೂಂಕರಿಸುತಿದೆ
ಗುರಿಯತ್ತ ನೆಟ್ಟಿರುವ ನೋಟದೊಳಗೆ


ನಿದಿರೆಯ ಮಂಪರು ಕಣ್ಣು ಕುಕ್ಕುತಿರಲು


ಕನಸಿಗೆ ಗಾಂಪರು ಬುದ್ಧಿ ಹೇಳಿರಲು


ಮುಗಿದ ಕೈಗಳು ಮುಗಿಯುತಲೇ ಇರಲು


ಬಾಯಿ ಮಂತ್ರವ ಜಪಿಸುತಲೇ ಇರಲು


ಮನಸು ಬೆತ್ತಲೆಯಾಗಿ ಓಡುತಿದೆ..
ಕತ್ತಲ ಮನಸಿನಮನೆಯೊಳಗೆ


ಗೆಲುವೆಂಬುದು ನೆರಳಾಗಿರಲು


ಕುರುಡುಮನ ಬೆಳಕಿಗೆ ಬಾರದಿರಲು


ನೆರಳಂತಿರುವ ಗೆಲುವ ಕಾಣದಿರಲು


ಗಗನತಾರೆಯ ಕೀಳಲೆತ್ನಿಸುತ್ತಿರಲು


ಕಾಣದ ಕೈ ಶೋಧಿಸುತ್ತಲೇ ಇದೆ..
ದಿವ್ಯದೀವಿಗೆಯು ಕತ್ತಲ ನೆಟ್ಟಿದೆ


ಜ್ಞಾನದೀವಿಗೆಯು ಬೆಳಕ ನೆಟ್ಟಿದೆ
..-..-..-..-..-..-..-..-..-..-..-..-..-..-..-..-..-..-..-..-..-..-..

ಆರ್ಕುಟ್ : http://www.orkut.co.in/Main#Profile?rl=fpp&uid=4606487278641111312,

~.~


31 comments:

ಸೀತಾರಾಮ. ಕೆ. / SITARAM.K said...

ತಮ್ಮ ಕವನ ಚೆನ್ನಾಗಿ ಮೂಡಿದೆ. ಎರಡನೆಯ ನುಡಿ ತೀವ್ರ ಅರ್ಥಗರ್ಭಿತವಾಗಿದೆ. ಒತ್ತಾಯದಲ್ಲಿ ಗುರಿಗಾಗಿ ಹೆಣಗುತ್ತಿರುವವನ -ನಿದಿರೆ ಎಳೆಯುತ್ತಿದೆ, ಮನಸ್ಸ ಮಂಕು ಕವಿದಿದೆ ಆದರೆ ಮಂತ್ರಕ್ಕೆ ಮಾವ ಉದುರಿಸುವ ತಂತ್ರ ಮುಂದುವರೆದಿದೆ ಆದರೆ ಮನವೆಲ್ಲೋ ನಗ್ನವಾಗಿ ಓದಿದೆ. ವೈರುದ್ಧ್ಯದ ಜೀವನ ಒತ್ತಾಯಕ್ಕೆ ನಡೆಸುವವರ ಕೈಗನ್ನಡಿಯಂತಿದೆ ತಮ್ಮ ನುಡಿ.
ಆದರೆ ಮೊದಲ ನುಡಿಯಲ್ಲಿನ್ನ ಕೈ-ದೀವಿಗೆ ಆರಿರಲು-ಜ್ಞಾನ ದೀವಿಗೆ ಬೆಳಗಿರಲು ಸ್ವಲ್ಪ್ ಸಂಕೀರ್ಣವೆನಿಸಿತು.
ಕೊನೆಯ ಸಾಲಿನ ಆಓನ್ತರ್ಯವು ಅದ್ಭುತವಾಗಿದೆ ವೈರುದ್ಧ್ಯದ ಜೀವನಕ್ಕೆ.
ಕತ್ತಲ ಮನಸಿನ ಮನ ಬೆಳಕಾಗಲಿ!
ನೆರಳ೦ತಿರುವ ಗೆಲುವು ಹೆಗಲೆರಲಿ.
ಹಾ ಕತ್ತಲಲ್ಲಿರುವವರಿಗೆ ನೆರಳಿನ ಕಾಡಾಟವಿಲ್ಲ-ನೆರಳೇ ಇಲ್ಲ. ಬೆಳಕಿನಲ್ಲ್ಲಿರುವವರಿಗೆ ನೆರಳಿನ ಭಯ ಅಲ್ಲವೇ!
ಅಂದರೆ ಬೆಳಕಿಗೆ ಒಡ್ಡಿಕೊಂಡವನಿಗೆ ನೆರಳಿನ ಭಯ,. ಬೆಳಕಿನೆಡೆಗೆ ಪಯಣ ಮಾಡಿದರೆ ನೆರಳು ಹಿಂದೆ, ಬೆಳಕಿಗೆ ವಿಮುಖ ಮಾಡಿ ನಡೆದರೆ ನೆರಳು ಮುಂದೆ., ಬೆಳಕು ತಲೆಯ ಮೇಲಿದ್ದರೆ ನೆರಳು ಕಾಲಲ್ಲಿ!
ನೆರಳನ್ನು ಹಿ೦ಬಾಲಿಸಬೇಕೆ? ನೆರಳು ನನ್ನನ್ನು ಹಿ೦ಬಾಲಿಸಬೇಕೆ? ಅಥವಾ ನೆರಳು ಕಾಲಲ್ಲೇ ಇರಬೇಕೆ? ಆಯ್ಕೆ ನಮ್ಮದು.

ಚಿಂತನಕ್ಕೀಡು ಮಾಡಿತು ತಮ್ಮ ಕವನ.

ತಮ್ಮ ಬ್ಲಾಗ್-ನ ಹೊಸ ಅಂಕಣಗಳು ಚೆನ್ನಾಗಿವೆ.
ಒಂದೆರಡು ಸಾಲಿನಲ್ಲಿ ತುಂಬಾ ಇಷ್ಟವಾಯಿತು.

sunaath said...

ಮನವನ್ನು ಸ್ಥಿರವಾಗಿ ಇಟ್ಟುಕೊಂಡು ಗುರಿಯತ್ತ ನಡೆಯಿರಿ. ತನಗೆ ತಾನೇ ಬೆಳಕು ಎನ್ನುವ ಬುದ್ಧನ ಉಕ್ತಿಯಂತೆ, ನಮ್ಮ ಅಂತರಂಗದಲ್ಲಿಯೇ ಬೆಳಕು ನೀಡುವ ದೀಪವಿದೆ.

ನೀವು ಬರೆದದ್ದು ಚೆನ್ನಾಗಿ ಬಂದಿವೆ. ಶುಭಾಶಯಗಳು.

Subrahmanya said...

ಬಹಳ ಅರ್ಥಗರ್ಭಿತವಾಗಿ ಬಂದಿದೆ ನಿಮ್ಮ ಕವನ. ಕವನಕ್ಕಿಂತ ಮುಂಚೆ ಮತ್ತು ನಂತರದ ಒಂದು ಸಾಲಿನ ವಿಚಾರವೂ ಚೆನ್ನಾಗಿದೆ. ನಾನಂತೂ ನಿಮ್ಮೊಂದಿಗಿದ್ದೇನೆ. ಬರೆಯಿರಿ.

ಅನಂತರಾಜ್ said...

ದಿವ್ಯದೀವಿಗೆಯು ಕತ್ತಲ ನೆಟ್ಟಿದೆ
ಜ್ಞಾನದೀವಿಗೆಯು ಬೆಳಕ ನೆಟ್ಟಿದೆ
..ಸಾಲುಗಳು ಇಷ್ಟವಾದುವು..
ಜೀವನದಲ್ಲಿ ಒ೦ದು ಗುರಿಯನ್ನು ಮುಟ್ಟುವ ನಿರ೦ತರ ಪ್ರಯತ್ನ ನಿಮ್ಮದಾಗಲಿ.

ಶುಭಾಶಯಗಳು
ಅನ೦ತ್

SATISH N GOWDA said...

ಅದ್ಬುತವಾದ ಸಾಲುಗಳು ....

ಸಾಗರದಾಚೆಯ ಇಂಚರ said...

sundara kavana

mattu vichaara

ದಿವ್ಯಶ್ರೀ.. said...

Gnana deevigeyannu mundittu nimma guriyannu adashtu bega talupi. kavana tumba arta poornavagide tumba chennagide.

- ಕತ್ತಲೆ ಮನೆ... said...

ಸೀತಾರಾಮ. ಕೆ. / SITARAM.K ,

ಧನ್ಯವಾದಗಳು..
ನನ್ನೀ ಕವನದಲ್ಲಿರುವ ಎರಡು ದೀವಿಗೆಗಳು ನನ್ನ ಜೀವನದಲ್ಲಿ ಕಂಡ ದೀವಿಗೆಗಳು..
ದಿವ್ಯದೀವಿಗೆಯಂತಿದ್ದ ನನ್ನ ಗೆಳತಿ ನನ್ನಿಂದ ದೂರವಾದ್ದರಿಂದ ದಿವ್ಯದೀವಿಗೆ ಕತ್ತಲ ನೆಟ್ಟಿದೆ ಎಂದು ಹೇಳಲಾಗಿದೆ..
ಜ್ಞಾನದೀವಿಗೆಯಂತಿರುವ ನನ್ನ ಆತ್ಮೀಯರೊಬ್ಬರು ಇನ್ನು ನನ್ನ ಕತ್ತಲಮನವನ್ನು ಬೆಳಗುತ್ತಿರುವ ಪರಿಣಾಮವಾಗಿ ಜ್ಞಾನದೀವಿಗೆ ಬೆಳಕ ನೆಟ್ಟಿದೆ ಎಂದು ಬಳಸಲಾಗಿದೆ..

- ಕತ್ತಲೆ ಮನೆ... said...

sunaath,

ಅದೇ ನಿಟ್ಟಿನಲ್ಲಿ ನನ್ನ ನಡಿಗೆ..
ಧನ್ಯವಾದಗಳು..

- ಕತ್ತಲೆ ಮನೆ... said...

Subrahmanya,

ಧನ್ಯವಾದಗಳು..
ನನಗೆ ನಿಮ್ಮ ಸಹಕಾರವೇ ಬೇಕಾಗಿರುವುದು..

- ಕತ್ತಲೆ ಮನೆ... said...

ಅನಂತರಾಜ್,

ಮೇಲಿನವನ ಸಹಕಾರವಿದ್ದಲ್ಲಿ ಪ್ರಯತ್ನ ನಡೆಯದೆ ಇರುವುದೇ..
ಧನ್ಯವಾದಗಳು..

- ಕತ್ತಲೆ ಮನೆ... said...

SATISH N GOWDA ,

ಧನ್ಯವಾದಗಳು..

- ಕತ್ತಲೆ ಮನೆ... said...

ಸಾಗರದಾಚೆಯ ಇಂಚರ ,

ಧನ್ಯವಾದಗಳು..

- ಕತ್ತಲೆ ಮನೆ... said...

ದಿವ್ಯಶ್ರೀ.. ,

ದಿವ್ಯದೀವಿಗೆ ಇಲ್ಲದಿರಲು ಜ್ಞಾನದೀವಿಗೆಯನ್ನೇ ಮುಂದಿಟ್ಟುಕೊಂಡು ಮುಂದೆ ಸಾಗಬೇಕಲ್ಲವೇ..

ashokkodlady said...

adbhuta saalugalu...artapurna kavana....

Raghu said...

ನಿಮ್ಮ ಕವನ ಒಳ್ಳೆಯ ವಿಚಾರಗಳನ್ನು ಹೊಂದಿದೆ..
ಹೀಗೆ ಬರೆಯುತ್ತಿರಿ.. ನಿಮ್ಮ ಕನಸು ದಿನ ದಿನ ನನಸಾಗಲಿ..
ನಿಮ್ಮವ,
ರಾಘು.

prabhamani nagaraja said...

ಉತ್ತಮ ಕವನ ನೀಡಿದ್ದಕ್ಕಾಗಿ ಧನ್ಯವಾದಗಳು. ನಮ್ಮ 'ಋಣಾತ್ಮಕ' ಅ೦ಶ ಗಳನ್ನೇ ದೊಡ್ಡದಾಗಿಸಿಕೊ೦ಡಾಗ 'ಧನಾತ್ಮಕತೆ' ಮಸುಕಾಗುತ್ತದೆ. ಅಲ್ಲವೇ?

ವಸಂತ್ said...

ಕವನ ತುಂಬಾ ಚೆನ್ನಾಗಿದೆ, ಜ್ಞಾನವೇ ಬೆಳಕು, ಅದು ಎಲ್ಲರಲ್ಲು ಇರುತ್ತದೆ. ಆದರೆ ಅದನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳುವವರ ಸಂಖ್ಯೆ ತುಂಬಾ ಕಡಿಮೆಯೆನ್ನಬಹುದು. ಜ್ಞಾನದ ಕೈ ಗನ್ನಡಿ ಹಿಡಿದು ಪಯಣ ಬೆಳೆಸಿದ್ದೀರ. ನಿಮಗೆ ಶುಭವಾಗಲೆಂದು ಹರಸುವೆ ಧನ್ಯವಾದಗಳು.

ವಸಂತ್

Snow White said...

nimmma kavana tumba ista aithu :)tumba chennagide nimma vichaara :)

Suma

- ಕತ್ತಲೆ ಮನೆ... said...

ashokkodlady,

ಧನ್ಯವಾದಗಳು..

- ಕತ್ತಲೆ ಮನೆ... said...

Raghu,

ಧನ್ಯವಾದಗಳು..

- ಕತ್ತಲೆ ಮನೆ... said...

prabhamani nagaraja .,

ಹೌದೌದು ನಿಮ್ಮ ಮಾತು ನಿಜ..

ಧನ್ಯವಾದಗಳು..

- ಕತ್ತಲೆ ಮನೆ... said...

ವಸಂತ್ ,

ಇಲ್ಲಿ 'ಜ್ಞಾನ...' ಅಂದ್ರೆ ನನ್ನ ಆಪ್ತರೊಬ್ಬರ ನಾಮಧೇಯ..
ಧನ್ಯವಾದಗಳು..

- ಕತ್ತಲೆ ಮನೆ... said...

Snow White ..,

ಧನ್ಯವಾದಗಳು..

ಮನಮುಕ್ತಾ said...

ಅರ್ಥವತ್ತಾದ ಚೆ೦ದದ ಕವನ..ತು೦ಬಾ ಚೆನ್ನಾಗಿ ಬರೆಯುತ್ತೀರಿ
ಮತ್ತಷ್ಟು ಬರಹಗಳು ಬರುತ್ತಿರಲಿ.

ವಿ.ಆರ್.ಭಟ್ said...

Nice !

ಭಾಶೇ said...

I do visit your blog and have read your posts. Haven't left any comments yet!

Thanks a lot for visiting my blog regularly.

- ಕತ್ತಲೆ ಮನೆ... said...

ಮನಮುಕ್ತಾ .,

ಧನ್ಯವಾದಗಳು..

- ಕತ್ತಲೆ ಮನೆ... said...

ವಿ.ಆರ್.ಭಟ್ .,

ಧನ್ಯವಾದಗಳು..

- ಕತ್ತಲೆ ಮನೆ... said...

ಭಾಶೇ .,

ನನ್ನ ಬ್ಲಾಗ್ ಓದಿ ಪ್ರತಿಕ್ರಿಯಿಸಿದ ಪ್ರತಿಯೊಬ್ಬರ ಪ್ರತಿಬರಹಗಳನ್ನು ಓದಿ ಪ್ರತಿಕ್ರಿಯೆ ನೀಡುವುದು ನನ್ನ ರೂಢಿ..
ಧನ್ಯವಾದಗಳು..

ಕಲರವ said...

ಸಮಸ್ಯೆಯ ಮುಂದೆ ನಾವು ದೊಡ್ಡವರಾದಾಗ,ಸಮಸ್ಯೆ ಚಿಕ್ಕದಾಗುವುದು,ಕವನ ಭಾವನಾತ್ಮಕವಾಗಿದೆ.ಅಭಿನಂದನೆಗಳು.

Related Posts Plugin for WordPress, Blogger...